Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೋಳಿಗಳ ಬಗ್ಗೆ ನೀವು ಕೇಳರಿಯದ ಸತ್ಯ ಸಂಗತಿಗಳು
ಕೋಳಿಮಾಂಸ ಎಂದರೆ ವಿಶ್ವದಲ್ಲಿಯೇ ಅತಿ ಹೆಚ್ಚಾಗಿ ಸೇವಿಸಲ್ಪಡುವ ಮಾಂಸ. ಹಿಂದೆ ಮಾಂಸ ಮತ್ತು ಮೊಟ್ಟೆಗಾಗಿ ಮನೆಗೆ ಸಾಕಾಗುವಷ್ಟು ಕೋಳಿಗಳನ್ನು ಸಾಕಿಕೊಳ್ಳುತ್ತಿದ್ದರು. ಆದರೆ ಇಂದು ಈ ಕೆಲಸವನ್ನು ಕುಕ್ಕುಟ ಉದ್ಯಮಗಳು ಮಾಡುತ್ತಿವೆ. ಲಾಭವೇ ಮುಖ್ಯವಾಗಿರುವಾಗ ಕೋಳಿಯನ್ನು ಹಿಂದಿನಂತೆ ಬಯಲಿನಲ್ಲಿ ಸಾಕಿ ಮಾರುವುದು ಅಸಾಧ್ಯವಾದ ಮಾತು. ಇಂದು ಈ ಉದ್ಯಮ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಮಾಂಸಕ್ಕಾಗಿಯೇ ಬೇರೆ, ಮೊಟ್ಟೆಗಾಗಿಯೇ ಬೇರೆ ಕೋಳಿಗಳನ್ನು ಕೃತಕವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಲಕ್ಷಾಂತರ ಕೋಳಿಗಳನ್ನು ಗೂಡುಗಳಲ್ಲಿ ಹಾಕಿ ಕೃತಕ ಆಹಾರ, ರಾಸಾಯನಿಕ ಆಧಾರಿತ ಔಷಧಿ, ಹಾರ್ಮೋನುಗಳನ್ನು ತಿನ್ನಿಸಿ ಅತಿ ಕಡಿಮೆ ಖರ್ಚಿನಲ್ಲಿ ಅತಿ ಹೆಚ್ಚು ಮಾಂಸ ಬೆಳೆಯುವಂತೆ ತನ್ಮೂಲಕ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಲಾಭ ಬರುವಂತೆ ನೋಡಿಕೊಳ್ಳಲಾಗುತ್ತದೆ. ಫಾರಂ ಕೋಳಿಗಳ ಮಾಂಸ ವಿಷದಷ್ಟೇ ಅಪಾಯಕಾರಿ...!
ಆದರೆ ಈ ಲಾಭದ ಹಿಂದೆ ಆಗುತ್ತಿರುವ ಕ್ರೂರ ಹಿಂಸೆಯನ್ನು ಮಾತ್ರ ಯಾರೂ ಗಮನಿಸುತ್ತಿಲ್ಲ. ಕೋಳಿಯನ್ನು ಕೇಳಿ ಮಸಾಲೆ ಅರೆಯುತ್ತಾರೆಯೇ ಎಂಬುದೊಂದು ಗಾದೆ. ಕೋಳಿಯನ್ನು ಕುಯ್ಯುವಾಗ ಕೋಳಿ ಬರೆಯ ಕೆಲವು ಸೆಕೆಂಡುಗಳ ಕಾಲ ನೋವು ಅನುಭವಿಸುತ್ತದೆ.
ಆದರೆ ಮೊಟ್ಟೆಯೊಡೆದು ಮರಿಯಾದ ಬಳಿಕ ದೊಡ್ಡದಾಗುವವರೆಗೂ ಕೋಳಿ ಫಾರಮ್ಮುಗಳಲ್ಲಿ ಇವು ಅನುಭವಿಸುವ ಯಾತನೆಯನ್ನು ಮಾತ್ರ ನೋಡಲಾಗದು. ಅಂದಹಾಗೆ ಕೋಳಿಗಳನ್ನು ನಿಕೃಷ್ಟವೆಂದು ಭಾವಿಸಲಾಗದು. ಇತರ ಹಕ್ಕಿ ಮತ್ತು ಪ್ರಾಣಿಗಳಿಗೆ ಹೋಲಿಸಿದರೆ ಕೋಳಿಗಳಲ್ಲಿಯೂ ಕೆಲವು ವೈಶಿಷ್ಟ್ಯಗಳಿವೆ. ಬನ್ನಿ, ಈ ಅಚ್ಚರಿಯ ಮಾಹಿತಿಗಳನ್ನು ಈಗ ನೋಡೋಣ.....

ವಾಸ್ತವ #1
ಕೋಳಿಗಳು ತಮ್ಮ ನಡುವೆ ಇರುವ ಇತರ ನೂರಾದರೂ ಕೋಳಿಗಳನ್ನು ಮುಖ ನೋಡಿ ಗುರುತಿಸಬಲ್ಲವು. ಅಂದರೆ ಕೋಳಿಗಳು ಆನೆಗಿಂತಲೂ ಹೆಚ್ಚಿನ ಸ್ಮರಣಾ ಶಕ್ತಿ ಹೊಂದಿದೆ ಎಂದಾಯ್ತು.

ವಾಸ್ತವ #2
ಕೋಳಿಗಳು ಮನುಷ್ಯರಂತೆ ದೃಶ್ಯವನ್ನು ಬಣ್ಣದಲ್ಲಿ ನೋಡಬಲ್ಲವು. ಬೆಕ್ಕು, ನಾಯಿಗಳಿಗೂ ಈ ಭಾಗ್ಯವಿಲ್ಲ. ಇವು ಕೇವಲ ಕಪ್ಪು ಬಿಳಿಪು ಮಾತ್ರ ನೋಡಬೇಕು.

ವಾಸ್ತವ #3
ತಾವು ಏನು ನೋಡಿದೆವು, ನೀವು ಏನು ಮಾಡಬೇಕು ಎಂಬ ಮಾಹಿತಿಯನ್ನು ಕೋಳಿಗಳು ತಮ್ಮ ಒಟ್ಟು ಇಪ್ಪತ್ತನ್ನಾಲ್ಕು ವಿಧದ ಧ್ವನಿಗಳಿಂದ ಇತರರಿಗೆ ಎಚ್ಚರಿಗೆ ನೀಡುವ ಮೂಲಕ ವಿನಿಮಯ ಮಾಡಿಕೊಳ್ಳುತ್ತವೆ.

ವಾಸ್ತವ #3
ವಿಶೇಷವಾಗಿ ಸುತ್ತಮುತ್ತ ಯಾವುದಾದರೂ ವೈರಿ ಇದ್ದರೆ ಎಲ್ಲಿದೆ, ಇದರ ವಿರುದ್ದ ದಿಕ್ಕು ಯಾವುದು ಮೊದಲಾದವುಗಳನ್ನು ಕೊ ಕ್ಕೊ ಕ್ಕೋ ಮೂಲಕ ತಿಳಿಸುತ್ತವೆ.

ವಾಸ್ತವ #4
ಕೋಳಿಗಳೂ ನೋವು ಅನುಭವಿಸುತ್ತವೆ. ಕೋಳಿ ಫಾರಮ್ಮುಗಳಲ್ಲಿ ಚಿಕನ್ ಫೀಡ್ ದುಬಾರಿಯಾದ ಕಾರಣ, ಇವು ಕೋಳಿಗಳು ತಿನ್ನುವಾಗಿ ಚೆಲ್ಲಿ ವ್ಯರ್ಥವಾಗುವುದನ್ನು ತಪ್ಪಿಸಲು ಮೇಲಿನ ಕೊಕ್ಕನ್ನು ಕೆಂಪಗೆ ಬಿಸಿಯಾದ ಮತ್ತು ಹರಿತವಾದ ಬ್ಲೇಡಿನಿಂದ ಅರ್ಧ ತುಂಡು ಮಾಡಲಾಗುತ್ತದೆ.

ವಾಸ್ತವ #4
ಆಗ ಕೋಳಿ ಅತೀವವಾದ ನೋವನ್ನು ಅನುಭವಿಸುತ್ತದೆ. ಏಕೆಂದರೆ ನಮ್ಮ ಮೂಗಿನಲ್ಲಿರುವಂತೆ ಕೋಳಿಗಳ ಕೊಕ್ಕು ಸಹಾ ಅತೀವ ಸಂವೇದನಾಶೀಲವಾಗಿದ್ದು ಹೆಚ್ಚು ನರಾಗ್ರಗಳನ್ನು ಹೊಂದಿವೆ.

ವಾಸ್ತವ #5
ತಮ್ಮ ಮಕ್ಕಳನ್ನು ದೊಡ್ಡವಾಗುವ ತನಕ ಕೋಳಿಗಳು, ವಿಶೇಷವಾಗಿ ತಾಯಿ ಕೋಳಿ ಬಹಳ ಕಕ್ಕುಲತೆಯಿಂದ ಕಾಪಾಡುತ್ತದೆ. ಈ ವಾತ್ಯಲ್ಯವನ್ನು ಸರೀಸೃಪ ಮೊದಲಾದ ಜೀವಿಗಳಲ್ಲಿ ಕಾಣಲು ಸಾಧ್ಯವಿಲ್ಲ. ತಮ್ಮ ಮರಿಗಳನ್ನು ಕಸಿಯಲು ಬರುವ ಯಾವುದೇ ಪ್ರಾಣಿಯ ವಿರುದ್ಧ ತಾಯಿಕೋಳಿ ಪ್ರಾಣದ ಹಂಗು ತೊರೆದು ಹೋರಾಡುತ್ತದೆ.

ವಾಸ್ತವ #6
ತಮ್ಮ ಸ್ನೇಹಿತರೊಂದಿಗೆ ಆಡುವುದು, ಓಡುವುದು, ಬಿಸಿಲುಕಾಯಿಸುವುದು ಮೊದಲಾದವುಗಳೆಲ್ಲಾ ಕೋಳಿಗಳಿಗೂ ಇಷ್ಟ. ಆದರೆ ಇದಕ್ಕೆ ಆಡುವವರು ತಮಗೆ ಅಪಾಯಕಾರಿಯಲ್ಲವೆಂದು ಇವುಗಳಿಗೆ ಮನದಟ್ಟಾಗಬೇಕಾಗುತ್ತದೆ. ಒಮ್ಮೆ ಇವುಗಳ ಮನಸ್ಸನ್ನು ಗೆದ್ದರೆ, ನಿಮ್ಮ ಕೈಯಿಂದಲೇ ಕಾಳುಗಳನ್ನು ತಿನ್ನುವಷ್ಟು ಸಲಿಗೆ ಬೆಳೆಸಿಕೊಳ್ಳುತ್ತವೆ. ಆದರೆ ಫಾರಮ್ಮುಗಳಲ್ಲಿ ಒಂದು ಹಾಳೆ ಕಾಗದಕ್ಕಿಂದಲೂ ಕಡಿಮೆ ಜಾಗದಲ್ಲಿ ಕೋಳಿಗಳನ್ನು ಕೂಡಿ ಹಾಕಲಾಗಿರುತ್ತದೆ.

ವಾಸ್ತವ #7
ಕಾಡುಗಳಲ್ಲಿ ಇಂದಿಗೂ ಕೋಳಿಗಳ ಇನ್ನೊಂದು ಪ್ರಬೇಧವಿದೆ. ಕಾಡುಕೋಳಿ ಎಂದೇ ಕರೆಯಲ್ಪಡುವ ಈ ಕೋಳಿಗಳು ಒಂದು ವರ್ಷಕ್ಕೆ ಕೇವಲ ಹತ್ತರಿಂದ ಹದಿನೈದು ಮೊಟ್ಟೆಗಳನ್ನಿಡುತ್ತವೆ. ಆದರೆ ಮೊಟ್ಟೆ ಇಡಲೆಂದೇ ಕೃತಕವಾಗಿ ಹಾರ್ಮೋನುಗಳನ್ನು ತಿನ್ನಿಸಿರುವ ಫಾರಮ್ಮು ಕೋಳಿಗಳು (ಇವುಗಳಿಗೆ ಲೇಯರ್ಸ್ ಎಂದು ಕರೆಯುತ್ತಾರೆ)

ವಾಸ್ತವ #7
ಹುಂಜದ ಸಂಪರ್ಕವಿಲ್ಲದೇ ದಿನಕ್ಕೊಂದು ಮೊಟ್ಟೆಯನ್ನು ವರ್ಷವಿಡೀ ಇಡುತ್ತದೆ. ಗಂಡಿನ ಸಂಪರ್ಕವಿಲ್ಲದೇ ಹೊರಬರುವ ಈ ಮೊಟ್ಟೆಗಳಿಂದ ಮರಿಯಾಗಲು ಸಾಧ್ಯವೇ ಇಲ್ಲ. ಇದಕ್ಕೇ ಇವುಗಳನ್ನು ೧೦೦% ಸಸ್ಯಾಹಾರಿ ಮೊಟ್ಟೆಗಳು ಎಂದು ಕರೆಯಲಾಗುತ್ತದೆ. ಹೀಗೆ ಮೊಟ್ಟೆಯಿಡುವ ಕಾರ್ಖಾನೆಯಾದ ಕೋಳಿ ಒಂದೆರಡು ವರ್ಷದಲ್ಲಿಯೇ ಶಿಥಿಲವಾಗಿ ಹೋಗುತ್ತದೆ.



Click it and Unblock the Notifications
