For Quick Alerts
ALLOW NOTIFICATIONS  
For Daily Alerts

  ಅಚ್ಚರಿ ಜಗತ್ತು: ರೋಸ್ಟ್ ಚಿಕನ್‌ನಲ್ಲಿಯೂ ಮಾದಕ ದ್ರವ್ಯ ಸಾಗಾಟ!

  By Manu
  |

  ಮಾದಕ ವ್ಯಸನಕ್ಕೆ ಒಳಗಾದರೆ ಮತ್ತೆ ಅದರಿಂದ ಹೊರಬರಬೇಕಾದರೆ ಪ್ರಾಣವನ್ನೇ ಪಣಕ್ಕಿಡಬೇಕಾಗುತ್ತದೆ. ಸುಲಭದಲ್ಲಿ ಮಾದಕ ದ್ರವ್ಯಗಳ ವ್ಯಸನಗಳು ದೂರವಾಗುವುದಿಲ್ಲ. ವ್ಯಸನಿಗಳನ್ನು ಅದರಿಂದ ದೂರವಿಟ್ಟರೆ ಬೇರೆ ಏನಾದರೂ ಅನಾಹುತ ಮಾಡಿಕೊಂಡರೂ ಅಚ್ಚರಿಯಿಲ್ಲ. ಇಂತಹ ಸಮಯದಲ್ಲಿ ಅವರನ್ನು ಚಟ ಬಿಡಿಸುವ ಕೇಂದ್ರಗಳಿಗೆ ಸೇರಿಸಬೇಕಾಗುತ್ತದೆ.  ಜಗತ್ತಿನ ಪ್ರಾಣಾಂತಿಕ ಮಾದಕ ದ್ರವ್ಯಗಳ ಬಗ್ಗೆ ಗೊತ್ತೇ?

  ಆದರೆ ನಾವಿಲ್ಲಿ ಹೇಳಲು ಹೊರಟಿರುವುದು ಮಾದಕ ವ್ಯಸನಿಗಳು ಮಾದಕ ದ್ರವ್ಯಗಳನ್ನು ಯಾವ್ಯಾವ ವಸ್ತುಗಳಲ್ಲಿ ಅಡಗಿಸಿಡಬಲ್ಲರು ಎನ್ನುವ ಬಗ್ಗೆ. ಮಾದಕ ದ್ರವ್ಯ ಸಾಗಣಿಗೆ ಯಾವ್ಯಾವ ಮಾರ್ಗವನ್ನು ಬಳಸುತ್ತಾರೆ ಮತ್ತು ಅದನ್ನು ಅಡಗಿಸಿಡುವ ಮಾರ್ಗ ಹೊಳೆಯುವುದಾದರೂ ಹೇಗೆ ಎಂದು ನಿಮಗೆ ಇದನ್ನು ಓದಿ ಅಚ್ಚರಿಯಾಗಬಹುದು. ಮಕ್ಕಳ ಲಾಲಿಪಾಪ್‍‌ನಿಂದ ಹಿಡಿದು ಕೃತಕ ಸ್ತನದಲ್ಲಿ ಮಾದಕ ದ್ರವ್ಯಗಳನ್ನು ಅಡಗಿಸಿಟ್ಟಿದ್ದಾರೆ..... ಬನ್ನಿ ಮಾದಕ ದ್ರವ್ಯಗಳನ್ನು ಸಾಗಾಟ ಮಾಡಲು ಯಾವೆಲ್ಲಾ ವಸ್ತುಗಳನ್ನು ಯಾವ ರೀತಿ ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಬಗ್ಗೆ ತಿಳಿದುಕೊಳ್ಳುವ.....

  ರೋಸ್ಟ್ ಮಾಡಿದ ಚಿಕನ್

  ರೋಸ್ಟ್ ಮಾಡಿದ ಚಿಕನ್

  ಜೈಲಿನ ಒಳಗೆ ಮರಿಜುನಾವನ್ನು ಸಾಗಿಸಲು ಇದು ಒಳ್ಳೆಯ ವಿಧಾನ. ಜೈಲಿನಲ್ಲಿ ಕೈದಿಯನ್ನು ಭೇಟಿಯಾಗಲು ಬಂದಿದ್ದಾತ ರೋಸ್ಟ್ ಮಾಡಿದ ಚಿಕನ್ ತಂದಿದ್ದ. ಆದರೆ ಪೊಲೀಸರು ಇದನ್ನು ಸರಿಯಾಗಿ ಪರಿಶೀಲನೆ ಮಾಡಿದಾಗ ರೋಸ್ಟ್ ಮಾಡಿದ ಚಿಕನ್ ಗೆ ಮರಿಜುನಾ ಹಾಕಿರುವುದನ್ನು ಕಂಡರು. ವಿಶೇಷ ಉಡುಗೊರೆ ತಂದಿದ್ದ ವ್ಯಕ್ತಿಯನ್ನು ಕೂಡ ಬಂಧಿಸಲಾಯಿತು.

  ಮರದ ಕುದುರೆ

  ಮರದ ಕುದುರೆ

  ಕ್ಯಾಲಿಫೋರ್ನಿಯಾದ ಕಾಲೆಕ್ಸಿಕೊದ ಗಡಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಗಡಿ ದಾಟಲು ಬಂದಾಗ ಆತನನ್ನು ಬಂಧಿಸಲಾಯಿತು. ಆತನಿಂದ ಪರಿಶೀಲಿಸಿದಾಗ ಆತನಲ್ಲಿ ಎರಡು ಮರದ ಕುದುರೆಗಳು ಪತ್ತೆಯಾಗಿದೆ. ಪೊಲೀಸ್ ನಾಯಿಗಳು ಮಾದಕ ದ್ರವ್ಯ ಇರುವ ಸುಳಿವು ನೀಡಿದ ಬಳಿಕ ಆತನನ್ನು ಪರಿಶೀಲನೆ ನಡೆಸಲಾಯಿತು. 29 ಪೌಂಡ್ ತೂಕದ 10 ಕೊಕೇನ್ ಪ್ಯಾಕ್ ಗಳು ಆತನಿಂದ ವಶಪಡಿಸಿ ಕೊಳ್ಳಲಾಯಿತು. Image courtesy

  ಸ್ತನದಲ್ಲಿ....

  ಸ್ತನದಲ್ಲಿ....

  ವೆನಜುಲಾದ ಮಹಿಳೆಯೊಬ್ಬಳು ಕೃತಕ ಸ್ತನದೊಳಗೆ ಸುಮಾರು 1.7 ಕೆ.ಜಿ. ಕೊಕೇನ್ ಇಟ್ಟುಕೊಂಡು ಪ್ರಯಾಣಿಸುತ್ತಿದ್ದಾಗ ಮ್ಯಾಡ್ರಿಡ್ ವಿಮಾನ ನಿಲ್ದಾಣದಲ್ಲಿ ಬಂಧಿಸಲ್ಪಟ್ಟಳು. ಕೊಲಂಬಿಯಾದಿಂದ ಬಂದ ಆಕೆಯ ಸ್ತನದ ಬಗ್ಗೆ ಅಧಿಕಾರಿಗಳಿಗೆ ಏನೋ ಸಂಶಯ ಉಂಟಾಯಿತು. ಇದನ್ನು ಮಹಿಳಾ ಅಧಿಕಾರಿಗಳು ಪರಿಶೀಲಿಸಿದಾಗ ಆಕೆ ಕೊಕೇನ್ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. Image courtesy

  ಕೃತಕ ಕಾಲು

  ಕೃತಕ ಕಾಲು

  40 ಹರೆಯದ ವ್ಯಕ್ತಿಯೊಬ್ಬ ತನ್ನ ಕೃತಕ ಕಾಲುಗಳಲ್ಲಿ ಮಾದಕ ದ್ರವ್ಯಗಳನ್ನು ಇಟ್ಟುಕೊಂಡು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲ್ಪಟ್ಟಿದ್ದಾನೆ. ಆತ ತನ್ನ ಗೆಳತಿಗೆ ಹಲ್ಲೆಗೈಯುತ್ತಿದ್ದಾಗ ಬಂಧಿಸಲ್ಪಟ್ಟಿದ್ದಾನೆ. Image courtesy

  ಮಕ್ಕಳ ಲಾಲಿಪಾಪ್

  ಮಕ್ಕಳ ಲಾಲಿಪಾಪ್

  ಸೂಟ್ ಕೇಸ್ ಒಂದರಲ್ಲಿ ಮಕ್ಕಳ ಲಾಲಿಪಾಪ್ ನಲ್ಲಿದ್ದ ಸುಮಾರು 200,000 ಪೌಂಡ್ ಮೊತ್ತದ ಮಾದಕ ದ್ರವ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪರೀಕ್ಷಿಸಿದಾಗ ಇದು ಅತ್ಯಂತ ಶುದ್ಧ ಕೊಕೇನ್ ಆಗಿದ್ದು, ಸುಮಾರು ನಾಲ್ಕು ಕೆ.ಜಿ.ಯಷ್ಟಿತ್ತು. Image courtesy

  ಚಾಕಲೇಟ್

  ಚಾಕಲೇಟ್

  ಅಮೆರಿಕಾದ ಕಸ್ಟಮ್ ಅಧಿಕಾರಿಗಳು ಚಾಕಲೇಟ್ ಐಸಿಂಗ್ ನ್ನು ಎಕ್ಸ್ ರೇ ಮೂಲಕ ಪರಿಶೀಲಿಸಿದಾಗ ಸುಮಾರು 2.5 ಪೌಂಡಿನಷ್ಟು ಹೆರಾಯಿನ್ ಪತ್ತೆಯಾಗಿದೆ. ಇದು ಮಾದಕ ದ್ರವ್ಯವನ್ನು ಕಳ್ಳಸಾಗಾಟ ಮಾಡಲು ಬಳಸಿದಂತಹ ಅತ್ಯಂತ ವಿಚಿತ್ರ ವಿಧಾನ. Image courtesy

   

  English summary

  Strangest Ways People Have Tried Smuggling Drugs

  People who are addicted to drugs find ways to get their stuff. Finding unique ways to smuggle the actual stuff is something that one should notice. Here, in this article, we've shared information on some of the weirdest places where people have hidden drugs and have smuggled them. These are the people who have come up with the most bizarre and uncanny ways to hide drugs.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more