Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ನಂಬುತ್ತೀರೋ ಬಿಡುತ್ತೀರೋ, ಇದು ಹೂವುಗಳಲ್ಲ, ಹಣ್ಣುಗಳು!
ನಾವು ಜೀವಿಸುತ್ತಿರುವ ಈ ಭೂಮಿ ಸುಂದರವಾದ ಜಗತ್ತು. ನೋಡುವ ಕಣ್ಣುಗಳು ಬೇಕಷ್ಟೇ. ನಮ್ಮ ಪರಿಸರ ಸ್ವಚ್ಛ ಮತ್ತು ಚೊಕ್ಕಟವಾಗಿದ್ದಷ್ಟೂ ನೋಡಲು ಇನ್ನಷ್ಟು ಸುಂದರವಾಗಿರುತ್ತದೆ. ಆದರೆ ಜಗತ್ತಿನಲ್ಲಿ ಹಲವು ವಸ್ತುಗಳು ಮತ್ತು ವ್ಯಕ್ತಿಗಳು ನೋಡಲು ಸುಂದರವಾಗುವುದಿಲ್ಲ. ಆದರೆ ಇದರ ಗುಣ ಅಥವಾ ವ್ಯಕ್ತಿಗಳ ವ್ಯಕ್ತಿತ್ವವನ್ನು ಅರಿತ ಬಳಿಕ ಅವರು ಸುಂದರರಾಗಿಯೇ ಕಾಣುತ್ತಾರೆ.
ಈ ಲೇಖನದಲ್ಲಿ ವಿಚಿತ್ರವಾಗಿ ಕಾಣುವ ಹಣ್ಣುಗಳನ್ನು ಉಲ್ಲೇಖಿಸಲಾಗಿದೆ. ಇವು ನೋಡಲು ಅತಿ ವಿಚಿತ್ರವಾಗಿ ಕಂಡರೂ ಇವು ನಿಜವಾದ ಹಣ್ಣುಗಳೇ ಆಗಿವೆ. ಇವು ವರ್ಣರಂಜಿತ ಮತ್ತು ಅದ್ವಿತೀಯವೂ ಆಗಿವೆ. ಇವುಗಳಲ್ಲಿ ಕೆಲವನ್ನು ಆಹಾರವಾಗಿ ಸೇವಿಸಬಹುದಾದರೆ ಉಳಿದವು ಕೇವಲ ಔಷಧೀಯ ಬಳಕೆಗಾಗಿಯೇ ಉಪಯೋಗಿಸಲ್ಪಡುತ್ತವೆ. ಬನ್ನಿ, ವಿಚಿತ್ರವಾಗಿ ಕಾಣುವ ಈ ಹಣ್ಣುಗಳ ಬಗ್ಗೆ ಮತ್ತು ಇವುಗಳ ಔಷಧೀಯ ಗುಣಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಅರಿಯೋಣ..

ರಾಂಬುಟನ್
ಸಾಮಾನ್ಯವಾಗಿ ಉಷ್ಣವಲಯದ ಕಾಡುಗಳಲ್ಲಿ ಬೆಳೆಯುವ ಈ ಹಣ್ಣು ಇಂಡೋನೀಶಿಯಾದಲ್ಲಿ ಮೊದಲು ಬೆಳೆದಿದ್ದು ಬಳಿಕ ವಿಶ್ವದ ಇತರ ಭಾಗಗಳಿಗೂ ಹರಡಿತು. ಇದೊಂದು ಕೆಂಪು ಬಣ್ಣದ ಚಿಕ್ಕ ಹಣ್ಣಾಗಿದ್ದು ಮೈತುಂಬಾ ಕೂದಲುಗಳಂತಿರುವ ಭಾಗಗಳನ್ನು ಹೊಂದಿದೆ. ಇದನ್ನು ನೋಡಲು ಕೊಂಚ ವಿಚಿತ್ರ ಮತ್ತು ಮೊದಲಬಾರಿ ಮುಟ್ಟಲು ಅಸಹ್ಯಕರವಾಗಿ ಕಂಡರೂ ಇದರ ಹುಳಿಮಿಶ್ರಿತ ಸಿಹಿ ರುಚಿ ಮಾತ್ರ ಎಲ್ಲರ ಮನಗೆಲ್ಲುತ್ತದೆ.
Image courtesy

ಅಕ್ಕೀ (Ackee)
ಹಣ್ಣಾಗಿ ಬಿರಿದ ಬಳಿಕ ಹೊರಗಿಣುಕುವ ಮೂರು ಕಪ್ಪು ಬಣ್ಣದ ಬೀಜಗಳು ಯಾರೋ ದುರುಗುಟ್ಟಿದಂತೆ ನೋಡುವಂತೆ ಕಾಣುವ ಈ ಹಣ್ಣು ಮೊದಲ ನೋಟಕ್ಕೆ ಹೆದರಿಕೆ ಹುಟ್ಟಿಸುತ್ತದೆ. ಆದರೆ ಇದರ ರುಚಿ ನಮ್ಮ ಗೋಡಂಬಿಯಂತೆಯೇ ಇದ್ದು ಹಲವು ಔಷಧೀಯ ಗುಣಗಳನ್ನೂ ಹೊಂದಿದೆ. ವಿಚಿತ್ರವೆಂದರೆ ಈ ಹಣ್ಣು ಮರದಲ್ಲಿಯೇ ಹಣ್ಣಾಗಿ ಬಿರಿದ ಬಳಿಕವೇ ಕೊಯ್ದರೆ ಮಾತ್ರ ರುಚಿಯಾಗಿರುತ್ತದೆಯೇ ಹೊರತು ಬಿರಿಯುವ ಮುನ್ನ ಕೊಯ್ದು ತಿಂದರೆ ಒಗರಾಗಿರುತ್ತದೆ.
Image courtesy

ಬುದ್ಧನ ಕೈ (Buddha's Hand)
ಹಳದಿ ಬಣ್ಣದ ಆಕ್ಟೋಪಸ್ ನಂತೆ ಕಾಣುವ ಈ ಹಣ್ಣು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಇದರ ಬೆರಳಿನಂತೆ ಕಾಣುವ ಭಾಗಗಳು ಕೊಂಚ ದೂರದಿಂದ ಮನುಷ್ಯರ ಬೆರಳಿನಂತೆಯೇ ಕಾಣುತ್ತದೆ. ಇದೇ ಕಾರಣಕ್ಕೆ ಇದನು ಬೆರಳಿರುವ ಮಾದಳ ("fingered citron") ಎಂದೂ ಕರೆಯಲಾಗುತ್ತದೆ. ಪ್ರಥಮವಾಗಿ ಜಪಾನ್‌ನಲ್ಲಿ ಕಂಡುಬಂದ ಈ ಹಣ್ಣನ್ನು ಅಲ್ಲಿನವರು ಬುಸ್ಷುಕಾನ್ (busshukan) ಅಥವಾ ಬುದ್ಧನ ಕೈ ಎಂದು ಕರೆದರು. ಈ ಹಣ್ಣನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ಸುಗಂಧದ್ರವ್ಯ ಮತ್ತು ಔಷಧಿಗಾಗಿ ಹೆಚ್ಚಿನ ಬಳಕೆಯಾಗುತ್ತದೆ.
Image courtesy

ಅಗ್ವಾಜೆ (Aguaje)
ಮಹಿಳೆಯರ ಪಾಲಿನ ಪವಾಡದ ಹಣ್ಣು ಎಂದೇ ಹೆಚ್ಚು ಪರಿಗಣಿತವಾಗಿರುವ ಈ ಅದ್ಭುತ ಹಣ್ಣನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ಎಣ್ಣೆ, ಜಾಮ್ ಮತ್ತು ಐಸ್ ಕ್ರೀಮ್ ತಯಾರಿಸಲೇ ಹೆಚ್ಚಿನ ಬಳಕೆಯಾಗುತ್ತದೆ. ಕಂದು ಬಣ್ಣದ ಹುರುಪೆಗಳಿರುವ ಸಿಪ್ಪೆ ಸುಲಿದಾಗ ಅಪ್ಪಟ ಚಿನ್ನದ ಬಣ್ಣದ ತಿರುಳಿರುವ ಈ ಹಣ್ಣಿನಲ್ಲಿ ಕ್ಯಾರೆಟ್ಟಿನಲ್ಲಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ವಿಟಮಿನ್ ಎ ಇದೆ. ಇದರಲ್ಲಿರುವ phytoestrogens ಎಂಬ ಪೋಷಕಾಂಶ ನಿಸರ್ಗವೇ ತಯಾರಿಸಿದ ಈಸ್ಟ್ರೋಜೆನ್ ಆಗಿದೆ. ಈ ಈಸ್ಟ್ರೋಜೆನ್ ಮಹಿಳೆಯರಲ್ಲಿ ಸ್ರವಿಸುವ ಹಾರ್ಮೋನು ಆಗಿದ್ದು ಈ ಹಣ್ಣಿನ ಸೇವನೆಯ ಮೂಲಕ ಮಹಿಳೆಯರ ಆರೋಗ್ಯ ವೃದ್ಧಿಸುತ್ತದೆ.
Image courtesy

ರೋಮಾನೆಸ್ಕೋ ಬ್ರೋಕೋಲಿ (Romanesco Broccoli)
ಹೂಕೋಸಿನ ಜಾತಿಗೆ ಸೇರಿದ ಈ ಫಲ ನೋಡಲು ತರಕಾರಿಯಂತೆ ಕಂಡರೂ ವಾಸ್ತವವಾಗಿ ಇದು ಒಂದು ಹಣ್ಣೇ ಆಗಿದೆ. ಇಟಲಿ ಮೂಲಕ ಈ ಹಣ್ಣು ಹಾಗಲಕಾಯಿಯನ್ನು ತಿರುಚಿ ಕೋನಾಕೃತಿಯಲ್ಲಿರುವಂತೆ ಕಾಣುವ ಈ ಫಲ ಮೊದಲ ಬಾರಿ ನೋಡಿದವರಿಗೆ ವಿಚಿತ್ರವಾಗಿ ಕಾಣುತ್ತದೆ. ಆದರೆ ಇದರ ರುಚಿ ಹೆಚ್ಚಿನವರಿಗೆ ಹಿಡಿಸುವುದಿಲ್ಲ. ಇದೇ ಕಾರಣಕ್ಕೆ ಕೆಲವು ಖಾದ್ಯಗಳಲ್ಲಿ ಮಾತ್ರ ಇದನ್ನು ಬಳಸಲಾಗುತ್ತದೆ.
Image courtesy

ಪಂಡಾನುಸ್
ಒಂದು ಅನಾನಾಸ್ ಹಣ್ಣಿನ ಅಂಚುಗಳೆಲ್ಲಾ ಒಳಗೆಳೆದುಕೊಂಡು ಕುಗ್ಗಿದಂತೆ ಕಾಣುವ ಈ ಹಣ್ಣು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಹಸಿಯಾಗಿ ತಿನ್ನುವ ಮೂಲಕ ಬಾಯಿಯ ಹಲವು ತೊಂದರೆಗಳು ನಿವಾರಣೆಯಾಗುತ್ತವೆ. ಸಾಮಾನ್ಯವಾಗಿ ಈ ಹಣ್ಣನ್ನು ಕೇಕ್ ತಯಾರಿಸಲು ಹೆಚ್ಚಾಗಿ ಉಪಯೋಗಿಸಲಾಗುತ್ತದೆ.
Image courtesy

ಮ್ಯಾಂಗೋಸ್ಟೀನ್
ಮಿಡಿಯಾಗಿದ್ದಾಗ ಆವರಿಸಿದ್ದ ಕವಚವನ್ನು ನಾಲ್ಕು ತುಂಡುಗಳನ್ನಾಗಿ ವಿಭಜಿಸಿ ಹೊರನುಗ್ಗಿ ಬೆಳೆದ ಕೆಂಪು ಹಣ್ಣಿನಂತೆ ಕಾಣುವ ಮ್ಯಾಂಗೋಸ್ಟೀನ್ ಕತ್ತರಿಸಿದಾಗ ಒಳಗೆ ಬಿಳಿಯ ಬಣ್ಣದ ಕಿತ್ತಳೆಯಂತಯ ತೊಳೆಗಳನ್ನು ಹೊಂದಿರುತ್ತದೆ. ಇದರ ಹೊರಭಾಗವೂ ಉತ್ತಮ ಪ್ರಮಾಣದ ರಸವನ್ನು ಹೊಂದಿದ್ದರೂ ಒಳಗಣ ತೊಳೆಗಳಲ್ಲಿ ನೀರಿನ ಪ್ರಮಾಣ ಅತಿ ಹೆಚ್ಚಾಗಿದೆ. ಇದು ಹಾಗೇ ತಿನ್ನಲೂ ರುಚಿಯಾಗಿದ್ದು ಹಲವು ಅಡುಗೆ ಮತ್ತು ಸಿಹಿತಿಂಡಿಗಳ ತಯಾರಿಕೆಯಲ್ಲೂ ಬಳಸಲ್ಪಡುತ್ತದೆ. ಆಹಾರದ ಹೊರತಾಗಿ ಇದರ ತಿರುಳಿನ ರಸವನ್ನು ಚರ್ಮೋದ್ಯೋಗದಲ್ಲಿ ಚರ್ಮವನ್ನು ಮೃದುಗೊಳಿಸಲು ಚೀನಾದಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ.
Image courtesy

ಗ್ಯಾಕ್ (Gac)
ಒಂದು ಹೆಬ್ಬಲಸಿನ ಹಣ್ಣನ್ನು ಕುಗ್ಗಿಸಿ ಚಿಕ್ಕ ಮೊಟ್ಟೆಯ ಗಾತ್ರದಷ್ಟು ಚಿಕ್ಕದಾಗಿಸಿ ಕಿತ್ತಳೆ ಬಣ್ಣ ಹಚ್ಚಿದರೆ ಹೇಗಿರುತ್ತದೆ ಎಂಬ ಪ್ರಶ್ನೆಗೆ ನಿಮ್ಮ ಕಲ್ಪನೆಯಲ್ಲಿ ಮೂಡಿದ ರೂಪವೇ ಗ್ಯಾಕ್ ಹಣ್ಣು. ಆಗ್ನೇಯ ದೇಶಗಳಾದ ವಿಯೆಟ್ನಾಮ್, ದಕ್ಷಿಣ ಚೀನಾ, ಆಗ್ನೇಯ ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ವರ್ಷದ ಕೇವಲ ಎರಡು ತಿಂಗಳು ಮಾತ್ರ ಫಲನೀಡುತ್ತದೆ. ಇದರೊಳಗಿನ ತಿರುಳು ಮತ್ತು ಗಟ್ಟಿಯಾದ ಬೀಜಗಳು ಹುಳಿಯಾದ ರುಚಿ ಹೊಂದಿದ್ದರೂ ಇದರ ಔಷಧೀಯ ಗುಣಗಳಿಂದಾಗಿ ಹೆಚ್ಚು ಜನಪ್ರಿಯವಾಗಿದೆ. ಈ ಹಣ್ಣಿನ ಲಭ್ಯತೆಯ ಸಮಯದಲ್ಲಿಯೇ ಆಗಮಿಸುವ ಹಬ್ಬದ ಕಾರಣ ವಿಯೆಟ್ನಾಂ ದೇಶದಲ್ಲಿ ಕ್ಸೋಯಿ ಗ್ಯಾಕ್ ಎಂಬ ವಿಶಿಷ್ಟ ಖಾದ್ಯವನ್ನು ತಯಾರಿಸಲಾಗುತ್ತದೆ.
Image courtesy

ಫೈಸಾಲಿಸ್ (Physalis)
ಈರುಳ್ಳಿ ಸಿಪ್ಪೆಗಳಂತಹ ಒಣ ಸಿಪ್ಪಿಗಳಿಂದ ಆವೃತವಾದ ಪುಟ್ಟ ಟೊಮೇಟೊ ಹಣ್ಣಿನಂತಿರುವ ಫೈಸಾಲಿಸ್ ರುಚಿಯಲ್ಲಿ ಸ್ಟ್ರಾಬೆರಿಯನ್ನು ಹೋಲುತ್ತದೆ. ಇದನ್ನು ಕತ್ತರಿಸಿದಾಗ ಒಳಗೆ ಕೂದಲುಗಳಂತಿರುವ ತಿರುಳು ಮತ್ತು ಮೃದುವಾಗಿರುವ ಬೀಜಗಳು ಹುಳಿಮಿಶ್ರಿತ ಸಿಹಿ ರುಚಿ ಹೊಂದಿವೆ.
Image courtesy

ಮಾರ್ಕುಟ್ ಲೈಮ್ (Markut Lime)
ಒಂದು ವೇಳೆ ಲಿಂಬೆಹಣ್ಣಿಗೆ ಕಜ್ಜಿರೋಗ ಬಂದರೆ ಹೇಗಿರುತ್ತದೆಯೋ ಹಾಗೇ ಇರುವ ಹಸಿರು ಬಣ್ಣದ ಈ ಹಣ್ಣು ಲಿಂಬೆಯ ಜಾತಿಗೇ ಸೇರಿದ್ದು ಅಪ್ಪಟ ಹುಳಿಯಾದ ರುಚಿ ಹೊಂದಿದೆ. ವಿಚಿತ್ರ ಎಂದರೆ ಇದರ ಮೂಲದೇಶವಾದ ಥಾಯ್ಲೆಂಡಿನಲ್ಲಿ ಈ ಹಣ್ಣಿಗಿಂತ ಇದರ ಎಲೆಗಳನ್ನೇ ಹೆಚ್ಚು ಬಳಸಲಾಗುತ್ತದೆ. ಮುಳ್ಳಿನ ಗಿಡದ ಎಲೆಗಳನ್ನು ಹಸಿಯಾಗಿಯೂ ಒಣಗಿಸಿ ಪುಡಿಮಾಡಿಯೂ ಉಪಯೋಗಿಸಲಾಗುತ್ತದೆ. ಇದಕ್ಕೆ ಕಾಫಿರ್ ಲೈಮ್ ಎಂಬ ಇನ್ನೊಂದು ಹೆಸರೂ ಇದ್ದು ಈ ಪದದ ಅರ್ಥ ಬೇರೆಯೇ ಆಗುವುದರಿಂದ ಮಾರ್ಕುಟ್ ಲೈಮ್ ಎಂಬ ಹೆಸರನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಈ ಹಣ್ಣಿನ ರಸದ ಬಳಕೆಯಿಂದ ತಲೆಯ ಹೇನು ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
Image courtesy



Click it and Unblock the Notifications











