Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಚ್ಚರಿಯ ಈ ಮಾಹಿತಿಗಳನ್ನು ಈಗ ವಿಜ್ಞಾನವೂ ಪ್ರಮಾಣೀಕರಿಸಿದೆ
ಜಗತ್ತಿನಲ್ಲಿ ಎಷ್ಟೋ ವಿಷಯಗಳನ್ನು ನಾವು ಗಾಢವಾಗಿ ನಂಬಿಕೊಳ್ಳುತ್ತಾ ಬಂದಿದ್ದು ಇದಕ್ಕೆ ವೈಜ್ಞಾನಿಕ ತಳಹದಿ ಇರುವುದಿಲ್ಲ. ಎಷ್ಟೋ ವರ್ಷಗಳ ಬಳಿಕ ವಿಜ್ಞಾನ ಇದನ್ನು ಪುರಾವೆಗೊಳಿಸಿದ ಬಳಿಕ ಈ ನಂಬಿಕೆಗಳು ಇನ್ನಷ್ಟು ಬಲಗೊಳ್ಳುತ್ತವೆ. ಇನ್ನೂ ಕೆಲವು ಮಾಹಿತಿಗಳು ಕೇಳಲಿಕ್ಕೆ ನಂಬಲಿಕ್ಕೇ ಆಗದಂತಿದ್ದವು ಪುರಾವೆ ಸಹಿತ ನಿರೂಪಿಸಿದ ಬಳಿಕ ಹೌದಲ್ಲಾ ಎಂಬ ಉದ್ಗಾರ ಹೊರಡುತ್ತದೆ. ವಿಜ್ಞಾನದ ಪ್ರಗತಿಯಿಂದಾಗಿ ಇಂದು ನಾಗರೀಕತೆ ಎಷ್ಟೋ ಮುಂದುವರೆದಿದ್ದು ಹೊಸನೀರು ಹಳೆಯ ನೀರನ್ನು ತೊಡೆದು ಹೋಗುವಂತೆ ಹಳೆಯ ನಂಬಿಕೆಗಳನ್ನೂ ಕಿತ್ತು ಹಾಕುತ್ತಿದೆ.
ಉದಾಹರಣೆಗೆ ಸೂರ್ಯನ ಪರಿಧಿಯಿಂದ ಹೊರಡುವ ಬೆಳಕಿನ ಕಿರಣದ ಮೂಲವಾದ ಫೋಟಾನ್ ಎಂಬ ಕಣ ಸೂರ್ಯನಿಂದ ಭೂಮಿಗೆ ತಲುಪಲು ಎಂಟು ನಿಮಿಷ ತೆಗೆದುಕೊಂಡರೆ ಅದೇ ಕಣ ಸೂರ್ಯನ ಕೇಂದ್ರದಿಂದ ಅದರ ಪರಿಧಿಯವರೆಗೆ ಬರಲು ನಲವತ್ತು ಸಾವಿರ ವರ್ಷಗಳನ್ನು ತೆಗೆದುಕೊಂಡಿರುತ್ತದೆ. ಮಾನವರ ಮತ್ತು ಸಸ್ತನಿಗಳ ಕೂದಲು ಮತ್ತು ಉಗುರುಗಳು ಸತ್ತ ಬಳಿಕವೂ ಕೊಂಚ ಬೆಳೆಯುತ್ತವೆ. ಬನ್ನಿ, ಇಂತಹ ಕೆಲವು ಅಚ್ಚರಿಯ, ಆದರೆ ಇಂದು ವಿಜ್ಞಾನ ಪ್ರಮಾಣಿಸಿರುವ ಮಾಹಿತಿಗಳನ್ನು ನೋಡೋಣ..

ಮಾಹಿತಿ 1
ವೃತ್ತಿಪರ ಬಂದೂಕುಧಾರಿಗಳು ಅಥವಾ ಶೂಟರ್ ಗಳ ಕ್ಷಮತೆ ಮದ್ಯಪಾನದಿಂದ ಹೆಚ್ಚುತ್ತದೆ. ಕೇಳಿ ಅಚ್ಚರಿಯಾಯಿತೇ? ಯಾವುದೇ ಕ್ರೀಡೆಯಲ್ಲಿ ಮದ್ಯ ಸಹಿತ ಇನ್ನಾವುದೇ ಉದ್ದೀಪನಗೊಳಿಸುವ ಔಷಧಿಗಳಿಗೆ ಅನುಮತಿಯಿಲ್ಲ. ಕಂಡುಬಂದಿದ್ದು ಗೊತ್ತಾದರೆ ಅವರನ್ನು ಆ ವೃತ್ತಿಯಿಂದಲೇ ಉಚ್ಛಾಟಿಸಲೂಬಹುದು. ಆದರೆ ವೈಜ್ಞಾನಿಕವಾಗಿ ಕಂಡಾಗ ಶೂಟರ್ ಗಳಿಗೆ ತಮ್ಮ ಮನಸ್ಸನ್ನು ಒಂದೇ ಗುರಿಯತ್ತ ಕೇಂದ್ರೀಕರಿಸಲು ಅಪಾರವಾದ ಮನೋಬಲದ ಅಗತ್ಯವಿದೆ. ಕೊಂಚ ಮದ್ಯವನ್ನು ಸೇವಿಸಿದರೆ ಅವರ ನರವ್ಯವಸ್ಥೆ ಆ ಹೊತ್ತಿಗೆ ಕೊಂಚವೇ ನಿರಾಳಗೊಂಡು ಈ ಏಕಾಗ್ರತೆ ಸಾಧಿಸಲು ಸಾಧ್ಯವಾಗುವುದರಿಂದ ಉತ್ತಮವಾಗಿ ಗುರಿ ಹಿಡಿಯಲು ಸಾಧ್ಯ.

ಮಾಹಿತಿ 2
ಅಶ್ಲೀಲ ಚಿತ್ರ ನೋಡಿದ ಪುರುಷರು ಬಳಿಕ ಹೆಚ್ಚು ತೂಕ ಎತ್ತಲು ಸಮರ್ಥರಿರುತ್ತಾರೆ ಎಂದು ಒಂದು ಸಂಶೋಧನೆ ತಿಳಿಸುತ್ತದೆ. ಏಕೆಂದರೆ ದೇಹದಲ್ಲಿ ಉದ್ರೇಕದ ಮೂಲಕ ಸ್ರವಿಸಲಾದ ಟೆಸ್ಟೋಸ್ಟಿರೋನ್ ಹಾರ್ಮೋನುಗಳು ಸ್ನಾಯುಗಳ ಬಲವನ್ನೂ ಹೆಚ್ಚಿಸಿ ಹೆಚ್ಚಿನ ತೂಕ ಎತ್ತಲು ನೆರವಾಗುತ್ತವೆ.

ಮಾಹಿತಿ 3
ಹೆಚ್ಚಿನ ವಿಶ್ರಾಂತಿ ತೂಕ ಹೆಚ್ಚಳಕ್ಕೆ ಕಾರಣ. ಕೆಲವು ಸಂಶೋಧನೆಗಳ ಪ್ರಕಾರ ಮನೆಯಲ್ಲಿ ಚಟುವಟಿಕೆಯಿಲ್ಲದೇ ಸುಮ್ಮನೇ ಕುಳಿತಿದ್ದರೆ ಕೊಬ್ಬಿನ ಕಣಗಳು ದ್ವಿಗುಣಗೊಳ್ಳುತ್ತಾ ಹೋಗಿ ಸ್ಥೂಲಕಾಯ ಆವರಿಸುತ್ತದೆ.

ಮಾಹಿತಿ 4
ಈ ಮಾಹಿತಿ ಅಚ್ಚರಿಗಿಂತಲೂ ಹೆಚ್ಚಾಗಿ ನಗು ಬರಿಸಿದರೂ ವೈಜ್ಞಾನಿಕವಾಗಿ ನಿರೂಪಿಸಲ್ಪಟ್ಟಿದೆ. ಅಶ್ಲೀಲ ಚಿತ್ರಗಳಲ್ಲಿ ನಟಿಸುವ ಮಹಿಳೆಯರು ಇತರರಿಗೆ ಹೋಲಿಸಿದರೆ ಜೀವನದಲ್ಲಿ ಹೆಚ್ಚಿನ ಉತ್ಸಾಹ ಮತ್ತು ಹೆಚ್ಚಿನ ಸ್ವಾಭಿಮಾನ ಹೊಂದಿರುತ್ತಾರೆ.

ಮಾಹಿತಿ 5
ಇನ್ನೊಂದು ಮಾಹಿತಿಯ ಪ್ರಕಾರ ರಷ್ಯಾದಲ್ಲಿ 22%ರಷ್ಟು ಜನರು ಐವತ್ತು ವಯಸ್ಸಿಗೂ ತಮ್ಮ ಇಹಲೋಕದ ಪ್ರಯಾಣವನ್ನು ಮುಗಿಸುತ್ತಾರೆ. ಇದಕ್ಕೆ ಅತಿಹೆಚ್ಚಿನ ವೋಡ್ಕಾ ಕಾರಣವಿರಬಹುದು ಎಂದು ತರ್ಕಿಸಲಾಗಿದೆ.

ಮಾಹಿತಿ 6
ನಮ್ಮ ದೇಹದಲ್ಲಿ ನಮ್ಮ ಸ್ವಂತ ಜೀವಕೋಶಗಳಿಗಿಂತಲೂ ಹೆಚ್ಚು ಸಂಖ್ಯೆಯ ಬ್ಯಾಕ್ಟೀರಿಯಾಗಳಣನ್ನು ಹೊಂದಿದ್ದೇವೆ. ಇವು ಮಿಲಿಯಾಂತರ ಸಂಖ್ಯೆಯಲ್ಲಿದ್ದು ಇದರಿಂದ ಹೊರಬರಲು ಸಾಧ್ಯವಿಲ್ಲ.

ಮಾಹಿತಿ 7
ತೂಕ ಹೆಚ್ಚುತ್ತದೆಎಂದು ಏಕಾಏಕಿ ಕಡಿಮೆ ತಿನ್ನಲು ತೊಡಗಿದಾಗ ನಮ್ಮ ದೇಹ ಮುಂದಿನ ದಿನಗಳಲ್ಲಿ ಆಹಾರದ ಆಭಾವ ಎದುರಾಗಲಿದೆ ಎಂಬ ಸೂಚನೆಯನ್ನು ಪಡೆದು ನಾಳೆಗಾಗಿ ಹೆಚ್ಚಿನ ಕೊಬ್ಬನ್ನು ಶೇಖರಿಸಿಡಲು ತೊಡಗುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.



Click it and Unblock the Notifications
