For Quick Alerts
ALLOW NOTIFICATIONS  
For Daily Alerts

  ಅರೆರೆ, ಸಿಕ್ಕಿ ಬೀಳಲು ಇವರಿಗೆ ಹೊಗೆಗೂಡೇ ಬೇಕಾಗಿತ್ತೇ?

  By Arshad
  |

  ನಮ್ಮ ಸುತ್ತಮುತ್ತ ಕೆಲವು ವಿನೋದದ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹದ್ದನ್ನು ಕಂಡಾಗ ಇವನ್ನು ಸೆರೆಹಿಡಿದಿದ್ದರೆ ಎಷ್ಟು ಚೆನ್ನಾಗಿತ್ತು ಎನ್ನಿಸಬಹುದು. ಆದರೆ ಹಿಂದೆ ಎಲ್ಲರ ಬಳಿ ಕ್ಯಾಮೆರಾ ಇಲ್ಲದಿದ್ದ ಕಾರಣ ಹೆಚ್ಚಿನವು ಯಾರಿಗೂ ಗೊತ್ತಾಗುತ್ತಲೇ ಇರಲಿಲ್ಲ. ಆದರೆ ಇಂದು ಎಲ್ಲರ ಬಳಿಯೂ ಕ್ಯಾಮೆರಾ ಮತ್ತು ಹಂಚಿಕೊಳ್ಳಲು ಅಂತರ್ಜಾಲ ವ್ಯವಸ್ಥೆ ಇರುವ ಕಾರಣ ಹಲವು ವಿನೋದದ ಚಿತ್ರಗಳನ್ನು ನೋಡಬಹುದು.

  ಇದರಲ್ಲೊಂದು ವಿಚಿತ್ರ ಮತ್ತು ವಿನೋದದ ಘಟನೆಗಳೆಂದರೆ ಹೊಗೆಗೂಡಿನಲ್ಲಿ ಕೆಲವರು ಸಿಕ್ಕಿಕೊಂಡಿರುವುದು. ವಾಸ್ತವವಾಗಿ ಹೊಗೆಗೂಡು ಇರುವುದೇ ಹೊಗೆ ಹೊರಹೋಗಲಿಕ್ಕೇ ಹೊರತು ಮನುಷ್ಯರಿಗಲ್ಲ. ಆದರೂ ಇದರ ಮೂಲಕ ಒಳಗೆ ನುಸುಳುವ ಯತ್ನದಲ್ಲಿ ಸಿಕ್ಕಿಕೊಂಡವರ ಗತಿ ಕಂಡಾಗ ಮರುಕಕ್ಕಿಂತಲೂ ನಗುವೇ ಹೆಚ್ಚು ಹುಟ್ಟುತ್ತದೆ. ಕೆಲವರಂತೂ ಸಕಾಲಕ್ಕೆ ಸಹಾಯ ಸಿಗದೇ ಸಿಕ್ಕಿಕೊಂಡಲ್ಲೇ ಸತ್ತೇ ಹೋಗಿದ್ದಾರೆ.   ವರ್ಷಗಳೇ ಕಳೆದರೂ, ಇಲ್ಲಿನ ಶವಗಳು ಕೊಳೆಯುವುದಿಲ್ಲ!

  ಆದರೆ ಸಿಕ್ಕಿಕೊಂಡ ಬಳಿಕ ಇವರಿಗೆ ಅಪಾಯವಾಗದಂತೆ ಹೊರತೆಗೆಯುವುದೂ ಅಗ್ನಿಶಾಮಕ ದಳದವರಿಗೂ ಒಂದು ಸಾಹಸವೇ ಸರಿ. ಸಿಕ್ಕಿಕೊಂಡವರನ್ನು ಹೊರತೆಗೆದ ಬಳಿಕ ಹೊಗೆಗೂಡಿನ ಒಳಭಾಗದ ಹೊಗೆಯ ಕಪ್ಪು ತಾಕಿ ಇವರ ಮುಖಗಳು ಮಸಿಯದಂತಾಗಿ ರುವುದನ್ನು ಕಂಡರಂತೂ ನಗು ತಡೆಯಲಾಗದು. ಬನ್ನಿ, ಇಂತಹ ಕೆಲವು ವ್ಯಕ್ತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....

  ಕೊಲೆ ಮಾಡಿದ ಬಳಿಕ ಆತನ ಶವ ಮೂವತ್ತು ವರ್ಷ ಹೊಗೆಗೂಡಲ್ಲಿತ್ತು

  ಕೊಲೆ ಮಾಡಿದ ಬಳಿಕ ಆತನ ಶವ ಮೂವತ್ತು ವರ್ಷ ಹೊಗೆಗೂಡಲ್ಲಿತ್ತು

  ರಾಬರ್ಟ್ ಥಾಮ್ಪ್ಸನ್ ಎಂಬ ವ್ಯಕ್ತಿ ಹದಿನಾಲ್ಕು ವರ್ಷದ ಹುಡುಗನಾಗಿದ್ದಾಗ, ಅಂದರೆ 1977ರ ಕ್ರಿಸ್ಮಸ್ ಮುನ್ನಾದಿನದಿಂದ ನಾಪತ್ತೆಯಾಗಿದ್ದ. ಈತನನ್ನು ಹುಡುಕಿದ್ದ ಪೋಲೀಸರು ಅಂದು ಈತ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದ ಎಂದು ತೀರ್ಮಾನಿಸಿ ಕೇಸು ಮುಚ್ಚಿಬಿಟ್ಟಿದ್ದರು. ಇದಾದ ಬಳಿಕ ಈತನ ಸಹೋದರರಲ್ಲೊಬ್ಬ ಪೋಲೀಸರ ಬಳಿ ವಿಚಿತ್ರ ದೂರೊಂದನ್ನು ತೆಗೆದುಕೊಂಡು ಬಂದ. ಏಕೆಂದರೆ ಈತನ ಸಹೋದರಿಯ ಬಾಯ್ ಫ್ರೆಂಡ್ ಇವನೊಂದಿಗೆ ಯಾವುದೋ ಕೋಳಿ ಜಗಳದಲ್ಲಿ ಸಿಟ್ಟಿನ ಆವೇಶದಲ್ಲಿ ನಿನ್ನನ್ನೂ ಆ ರಾಬರ್ಟ್‌ನನ್ನು ಕೊಂದ ಹಾಗೇ ಕೊಂದು ಹೊಗೆಗೂಡಲ್ಲಿ ಹಾಕಿ ಬಿಡ್ತೀನಿ ನೋಡು ಎಂದು ಅಬ್ಬರಿಸಿದ್ದ. ಈ ಮಾತನ್ನು ಗಂಭೀರವಾಗಿ ಪರಿಗಣಿಸಿದ ಪೋಲೀಸರು ರಾಬರ್ಟ್‌ನ ಕೇಸನ್ನು 2005ರಲ್ಲಿ ಮತ್ತೆ ಹೊರತೆಗೆದರು. ಏನಿದು ಹೊಗೆಕೊಳವೆ ಎನ್ನುತ್ತಾನಲ್ಲಾ ಎಂದು ತ್ಯಜಿಸಲ್ಪಟ್ಟ ರಾಬರ್ಟ್‌ನ ಮನೆಯ ಹೊಗೆಗೂಡನ್ನು ಪರಿಶೀಲಿಸಿದಾದ ರಾಬರ್ಟ್‌ನ ಅಸ್ಥಿಪಂಜರ ಸಿಕ್ಕಿತ್ತು. Image courtesy

  ಕೀ ಕಳೆದುಕೊಂಡು ಹೊಗೆಗೂಡಲ್ಲಿ ಸಿಕ್ಕಿಕೊಂಡ ಮಹಿಳೆ

  ಕೀ ಕಳೆದುಕೊಂಡು ಹೊಗೆಗೂಡಲ್ಲಿ ಸಿಕ್ಕಿಕೊಂಡ ಮಹಿಳೆ

  ನಾವೆಲ್ಲರೂ ಹೊರಗೆ ಹೋಗುವಾಗ ಏನಾದರೊಂದನ್ನು ಮರೆಯುತ್ತೇವೆ. ಕೆಲವೊಮ್ಮೆ ಮನೆಯ ಬೀಗದ ಕೈ ಒಳಗಿದ್ದಂತೆಯೇ ಹೊರಬಾಗಿಲನ್ನು ಎಳೆದುಕೊಂಡು ಹೋಗುವುದೂ ಇದೆ. ಇದರಲ್ಲೇನೂ ಅವಮಾನವಿಲ್ಲ. ವಿಷಯ ತಿಳಿಸಿದರೆ ಅಕ್ಕಪಕ್ಕದವರು ಸಹಾಯಕ್ಕೆ ಬಂದೇ ಬರುತ್ತಾರೆ. ಆದರೆ ಆನಾ ಮೋರೆನೋ ಎಂಬ ಮಹಿಳೆಗೆ ಇದೊಂದು ಅವಮಾನ ಎಂದೆನ್ನಿಸಿ ಯಾರ ಕಣ್ಣಿಗೂ ಬೀಳದೆ ಹೊಗೆಗೂಡಿನ ಮೂಲಕ ಒಳಬರಲು ಯತ್ನಿಸಿ ಸಿಕ್ಕಿಕೊಂಡಳು. ಬಳಿಕ ಅಗ್ನಿಶಾಮಕ ದಳ ಇವರನ್ನು ಸುರಕ್ಷಿತವಾಗಿ ಹೊರತೆಗೆಯಿತು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಆದರೆ ಸುದ್ದಿ ಪ್ರಸಾರ ಮಾಡುವ ವಾಹಿನಿಯ ಟೀವಿ ಕ್ಯಾಮೆರಾ ಒಂದು ಈ ದೃಶ್ಯವನ್ನು ನೇರಪ್ರಸಾರ ಮಾಡಿದ್ದ ಕಾರಣ ಆಕೆ ತೀವ್ರ ಮುಜುಗರಕ್ಕೊಳಗಾಗಬೇಕಾಯಿತು. Image courtesy

  ಪುರುಷನ ಹೃದಯಕ್ಕೆ ಲಗ್ಗೆ ಇಡಲು ಊಟ ಬಳಸಿ, ಹೊಗೆಗೂಡಲ್ಲ

  ಪುರುಷನ ಹೃದಯಕ್ಕೆ ಲಗ್ಗೆ ಇಡಲು ಊಟ ಬಳಸಿ, ಹೊಗೆಗೂಡಲ್ಲ

  ಜಿನೋವೆವಾ ನುನೆಜ್ ಎಂಬ ಮಹಿಳೆ ಬಹಳ ದಿನಗಳಿಂದ ಪುರುಷರೊಬ್ಬರಿಗೆ ಗಾಳ ಹಾಕುತ್ತಿದ್ದರು.ಕೊಂಚ ಕಾಲ ಡೇಟಿಂಗ್ ಸಹಾ ನಡೆಯಿತು. ಆತ ಇದಕ್ಕೆ ಯಾವುದೇ ಸೊಪ್ಪು ಹಾಕದ ಕಾರಣ ಒಮ್ಮೆ ತಾನೇ ಆತನ ಮನೆಯೊಳಗೆ ನುಗ್ಗಿ ಆತನನ್ನು ಸಂಧಿಸುತ್ತೇನೆಂದುಕೊಂಡು ಹೊಗೆಗೂಡಿನ ಮೂಲಕ ಮನೆಯ ಒಳಗೆ ಇಳಿಯಲು ಯತ್ನಿಸಿದ್ದಳು. ಆದರೆ ದಪ್ಪ ಇಟ್ಟಿಗೆಗಳ ಇಕ್ಕಟ್ಟಾದ ಹೊಗೆಗೊಳವೆಯೊಳಗೆ ಇಳಿಯಲೂ ಆಗದೇ ಹೊರಬರಲೂ ಆಗದೇ ಅಗ್ನಿಶಾಮಕ ದಳವನ್ನು ಕರೆಸಲಾಯ್ತು. ಅಗ್ನಿಶಾಮಕ ದಳದವರಿಗೂ ಇವರಿಗೆ ಪೆಟ್ಟಾಗದಂತೆ ಹೊರತೆಗೆಯುವುದು ಹೇಗೆಂದೇ ತಲೆಗೆ ಹೊಳೆಯದೇ ಕಡೆಗೆ ಸೋಪು ನೀರನ್ನು ಸುರಿದು ನಿಧಾನವಾಗಿ ಹೊರತೆಗೆದರು. Image courtesy

  ಹೊಗೆಕೊಳವೆಯಲ್ಲಿ ಸತ್ತ ಕಳ್ಳ

  ಹೊಗೆಕೊಳವೆಯಲ್ಲಿ ಸತ್ತ ಕಳ್ಳ

  ಚಳಿಗಾಲದಲ್ಲೊಂದು ದಿನ ಈ ಮನೆಯ ಯಜಮಾನ ತನ್ನ ಮನೆಯ ಹೊಗೆಗೂಡಿನಲ್ಲಿ ಕೊಂಚ ಕಟ್ಟಿಗೆ ಒಡ್ಡಿ ಬೆಂಕಿ ಹಚ್ಚಿದ. ಯಾವಾಗ ಹೊಗೆ ಮೇಲೇರಲು ಪ್ರಾರಂಭವಾಯಿತೋ, ಆಗ ಮೇಲಿನಿಂದ ವ್ಯಕ್ತಿಯೊಬ್ಬ ಕಿರುಚಿಕೊಂಡ ಶಬ್ದ ಕೇಳಿಬಂದಿತ್ತು. ಎಲ್ಲಿಂದ ಶಬ್ದ ಬರುತ್ತಿದೆ ಎಂದು ಕುತೂಹಲದಿಂದ ಎಲ್ಲೆಡೆ ಪರಿಶೀಲಿಸಿದವರಿಗೆ ಹೊಗೆಗೂಡಿನೊಳಗಿಂದ ಬರುತ್ತಿದೆ ಎಂದು ಗೊತ್ತಾಗಿತ್ತು. ತಕ್ಷಣ ಸಹಾಯವಾಣಿಗೆ ಕರೆ ಮಾಡಿ ತುರ್ತು ವಿಭಾಗದಿಂದ ವೃತ್ತಿಪರ ವ್ಯಕ್ತಿಗಳು ಬಂದು ಬಿಡಿಸುವಷ್ಟರಲ್ಲಿಯೇ ಹೊಗೆಗೂಡಿನಲ್ಲಿ ಸಿಕ್ಕಿಕೊಂಡಿದ್ದ ವ್ಯಕ್ತಿ ಸತ್ತೇಹೋಗಿದ್ದ. ಆತ ಒಬ್ಬ ಕಳ್ಳನಾಗಿದ್ದು ಈ ಮನೆಯಲ್ಲಿ ಏನೋ ಕದ್ದು ಬಾಗಿಲಿನಿಂದ ಹೊರಹೋಗಲು ಸಾಧ್ಯವಾಗದೇ ಸಿಕ್ಕಿಕೊಳ್ಳುವ ಭಯದಿಂದ ಒಳಗಿನಿಂದ ಹೊಗೆಗೂಡಿನಲ್ಲಿ ತೂರಿದ್ದ. Image courtesy

  ತನ್ನ ಪ್ರಿಯಕರನ ಮನೆಗೆ ನುಗ್ಗಲು ಯತ್ನಿಸಿದ ವೈದ್ಯೆಯೂ ಹೊಗೆಗೂಡಿನಲ್ಲಿ ಸಿಕ್ಕಿ ಸತ್ತಳು

  ತನ್ನ ಪ್ರಿಯಕರನ ಮನೆಗೆ ನುಗ್ಗಲು ಯತ್ನಿಸಿದ ವೈದ್ಯೆಯೂ ಹೊಗೆಗೂಡಿನಲ್ಲಿ ಸಿಕ್ಕಿ ಸತ್ತಳು

  ಡಾ. ಜಾಕ್ವೆಲಿನ್ ಕೋಟಾರಾಕ್ ಎಂಬ ವೈದ್ಯೆ ಪುರುಷನೊಬ್ಬನನ್ನು ಅಪಾರವಾಗಿ ಪ್ರೀತಿಸುತ್ತಿದ್ದು ಒಮ್ಮೆ ಈತನ ಮನೆಯೊಳಗೆ ನುಗ್ಗಲು ಯತ್ನಿಸಿದ್ದಳು, ಅದೂ ಹೊಗೆಗೂಡಿನ ಮೂಲಕ. ಆದರೆ ತೀರಾ ಇಕ್ಕಟ್ಟಾದ ಸ್ಥಳದಲ್ಲಿ ಸಿಕ್ಕಿಕೊಂಡು ಉಸಿರು ಕಟ್ಟಿ ಸತ್ತಳು. ಮೂರು ದಿನಗಳ ಬಳಿಕ ಮನೆಯನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿಯೊಬ್ಬರು ಹೊಗೆಗೂಡಿನೊಳಗಿನಿಂದ ಶವವನ್ನು ನೋಡಿ ಪೋಲೀಸರಿಗೆ ತಿಳಿಸಿದ್ದರು. Image courtesy

   

  English summary

  Stories Of People Stuck In Chimneys

  We hear so many weird, bizarre stories about so many things happening around the world. One among them is about people getting stuck in chimneys. Here in this article, we are about to share some of the interesting and bizarre stories about people who have got stuck in chimneys. Find out more about these interesting cases of people stuck in chimneys. We sure the firefighters had a tough time to get these guys out. Read on to know more..
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more