Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅರೆ, ಈ ಮೊದಲು ಅವರನ್ನು ಎಲ್ಲೋ ನೋಡಿದ್ದೆ!
ಜೀವನದ ಆಗುಹೋಗುಗಳ ಮಧ್ಯೆ ನಾವು ಹಲವಾರು ಮಂದಿಯನ್ನು ಭೇಟಿಯಾಗುತ್ತೇವೆ. ಕೆಲವರು ಚಿರಪರಿಚಿತರು, ಇನ್ನು ಕೆಲವರು ಅಪರಿಚಿತರು. ಬಸ್ ನಿಲ್ದಾಣ, ರೈಲು ನಿಲ್ದಾಣ ಅಥವಾ ಇನ್ನೆಲ್ಲೋ ಅವರನ್ನು ಭೇಟಿ ಮಾಡಿರುತ್ತೇವೆ. ಅದು ಒಂದು ನಿಮಿಷದ ಭೇಟಿಯಾಗಿರಬಹುದು. ಕೆಲವರ ಮುಖ ಮತ್ತೆ ಎಂದೂ ನಮಗೆ ನೆನಪಿಗೆ ಬರುವುದಿಲ್ಲ.
ಆದರೆ ಇನ್ನು ಕೆಲವರ ಮುಖ ಮತ್ತೆ ಮತ್ತೆ ನೆನಪಿಗೆ ಬಂದು ಅವರನ್ನು ಇದಕ್ಕೆ ಮೊದಲು ಕೂಡ ಭೇಟಿಯಾಗಿದ್ದೇನೆ ಎನ್ನುವ ಭಾವನೆ ಮೂಡುತ್ತದೆ. ಇದರಿಂದ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ ಮತ್ತು ಅವರನ್ನು ಎಲ್ಲಿ ಭೇಟಿಯಾಗಿದ್ದೇನೆ ಎನ್ನುವ ಪ್ರಶ್ನೆ ಏಳುತ್ತಲೇ ಇರುತ್ತದೆ. ಅಚ್ಚರಿ ಲೋಕಕ್ಕೆ ತಳ್ಳುವ 'ಪುನರ್ಜನ್ಮದ' ನೈಜ ಘಟನೆಗಳು
ಇಂತಹ ಭಾವನೆ ಮೂಡಲು ಅವರಿಗೂ ನಮಗೂ ಹಿಂದಿನ ಜನ್ಮದ ನಂಟಿರುವುದೇ ಕಾರಣವಂತೆ. ಇದನ್ನು ಕೇಳಿ ಅಚ್ಚರಿಯಾಗಬಹುದು. ಆದರೆ ಈ ಲೇಖನದಲ್ಲಿ ನೀವು ಹಿಂದಿನ ಜೀವನದ ವ್ಯಕ್ತಿಯೊಬ್ಬನನ್ನು ಭೇಟಿಯಾದ ಲಕ್ಷಣಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ಕೇಳಲು ವಿಚಿತ್ರವೆನಿಸಿದರೂ ಸಾಧ್ಯತೆಗಳು ಇಲ್ಲದಿಲ್ಲ. ಇದನ್ನು ನಿಖರವಾಗಿ ಹೇಳಲು ಬರುವುದಿಲ್ಲ. ಆದರೆ ಅಪರಿಚಿತರನ್ನು ಭೇಟಿಯಾದಾಗ ನಿಮ್ಮಲ್ಲಿ ಮೂಡಿರುವಂತಹ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಬಹುದು, ಮುಂದೆ ಓದಿಕೊಳ್ಳಿ....

ದೂರವಿದ್ದರೂ ನಿಮ್ಮಲ್ಲಿ ಬಲವಾದ ಸಂಬಂಧ
ದೈಹಿಕವಾಗಿ ದೂರವಿದ್ದರೂ ನಿಮ್ಮಲ್ಲಿ ಬಲವಾದ ಸಂಬಂಧ ಇದ್ದೇ ಇರುತ್ತದೆ. ಮೌಖಿಕವಾಗಿ ನೀವು ಯಾವುದೇ ಸಂದೇಶ ಪಡೆಯುವ ಮೊದಲೇ ಆಕಾಶವಾಣಿ ಮೂಲಕ ನಿಮಗೆ ಏನೋ ಕೇಳಿರುತ್ತದೆ.

ಅವರ ಒಡನಾಟದಲ್ಲಿ ಸಮಯ ಕಳೆದದ್ದೇ ಗೊತ್ತಾಗಲ್ಲ
ಅವರೊಂದಿಗೆ ಇದ್ದಾಗ ಸಮಯ ಹೇಗೆ ಕಳೆದು ಹೋಯಿತೆಂದು ತಿಳಿಯುವುದೇ ಇಲ್ಲ. ಅವರ ಒಡನಾಟದಲ್ಲಿ ಸಮಯ, ಸ್ಥಳ ಮತ್ತು ವಾಸ್ತವತೆಯನ್ನು ಮರೆತು ಹೋಗುತ್ತೀರಿ.

ಪುಸ್ತಕದಂತೆ ಎದುರಿನ ವ್ಯಕ್ತಿಯ ಭಾವನೆಗಳನ್ನು ಓದುತ್ತೀರಿ
ಕೆಲವೊಮ್ಮೆ ವ್ಯಕ್ತಿಯ ಭಾವನೆ ಮತ್ತು ಯೋಚನೆಗಳನ್ನು ತಿಳಿದುಕೊಳ್ಳಲು ಯಾವುದೇ ಪದಗಳು ಬೇಕಾಗಿರುವುದಿಲ್ಲ. ಅವರ ಕಣ್ಣುಗಳನ್ನು ನೋಡಿದರೆ ನಿಮಗೆ ಭಾವನೆಗಳು ಅರ್ಥವಾಗಿ ಬಿಡುತ್ತದೆ.

ಲವಾರು ನೆನಪುಗಳು
ನಿಮಗೆ ಗೊತ್ತಿಲ್ಲದೆ ಹಿಂದಿನ ಜೀವನದ ಬಗ್ಗೆ ನೀವು ಹಲವಾರು ನೆನಪುಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತೀರಿ. ನೀವು ವಾಸವಿದ್ದ ಸ್ಥಳ ಮತ್ತು ಹೋಗಿಬರುತ್ತಿದ್ದ ಮಾರ್ಗದ ಬಗ್ಗೆ ಮಾತನಾಡಬಹುದು. ಇದು ನಿಮಗೆ ಕಾಕತಾಳೀಯವೆನಿಸಬಹುದು. ಆದರೆ ಇದು ಹಿಂದಿನ ಜೀವನದ ಕೊಂಡಿಯಾಗಿರುತ್ತದೆ.

ಮನೆಯಲ್ಲಿರುವ ಭಾವನೆ
ಅವರನ್ನು ಭೇಟಿಯಾದಾಗ ಯಾವುದೇ ಹಿಂಜರಿಕೆಯಾಗುವುದಿಲ್ಲ. ಪ್ರತಿಯೊಂದು ಸರಾಗವಾಗಿ ಸಾಗುತ್ತದೆ ಹಾಗೂ ಆರಾಮವಾಗಿ ಮನೆಯಲ್ಲಿರುವಂತಹ ಭಾವನೆಯಾಗುತ್ತದೆ. ಅವರೊಂದಿಗಿನ ಸಂಬಂಧವು ತುಂಬಾ ಸರಳವಾಗಿರುತ್ತದೆ. ಯಾವುದೇ ಒತ್ತಡವಿರುವುದಿಲ್ಲ.



Click it and Unblock the Notifications
