Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಶಾಪಿಂಗ್ ಜೇಬಿಗೆ ಕತ್ತರಿ ಹಾಕದಂತಿರಲಿ...
ಶಾಪಿಂಗ್ ಮಾಡುವುದು ಎಂದರೆ ಒಂದು ರೀತಿಯ ಮಜದ ಅನುಭವವನ್ನು ಇದು ನೀಡುತ್ತದೆ. ಬಟ್ಟೆ ಬರೆಗಳ ಶಾಪಿಂಗ್ ಇರಬಹುದು, ಮನೆಗೆ ಬೇಕಾಗುವ ಸಾಮಾನು ಪದಾರ್ಥಗಳ ಶಾಪಿಂಗ್ ಇರಬಹುದು, ಇಲೆಕ್ಟ್ರಿಕಲ್ ಐಟಮ್ಗಳು ಕಚೇರಿ ಉಪಕರಣಗಳು ಹೀಗೆ, ಲೀಸ್ಟ್ ಮಾಡುತ್ತಾ ಹೋದ ಹಾಗೆ ದೊಡ್ಡ ಪಟ್ಟಯೇ ರೆಡಿಯಾಗಿ ಬಿಡುತ್ತದೆ.
ಇತ್ತೀಚಿನ ದಿನಗಳಲ್ಲಿ, ಆನ್ಲೈನ್ ತಾಣಗಳು ಶಾಪಿಂಗ್ ಮಾಡುವ ಜಂಜಾಟದಿಂದ ನಮಗೆ ಮುಕ್ತಿಯನ್ನು ನೀಗಿಸುತ್ತಿವೆ. ಕುಳಿತಲ್ಲೇ ಏನು ಬೇಕಾದರೂ ಆರ್ಡರ್ ಮಾಡಿಕೊಳ್ಳಬಹುದಾಗಿದೆ ಇದರಿಂದ ಶಾಪಿಂಗ್ ಮಾಡುವ ಸಮಯ ಕೂಡ ಉಳಿತಾಯವಾಗುತ್ತಿದೆ. ಆದರೆ ಶಾಪಿಂಗ್ ಮಜ ಬರುವುದೇ ಮಳಿಗೆಗಳನ್ನು ಸುತ್ತುತ್ತಾ ಅಲ್ಲಿರುವ ವಸ್ತುಗಳನ್ನೆಲ್ಲಾ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಾ ಬೇಕಾದ್ದನ್ನು ಖರೀದಿಸುತ್ತಾ ಅದರ ಆನಂದವನ್ನು ಪಡೆದುಕೊಳ್ಳುವುದೂ ಇನ್ನೊಂದು ವಿಧವಾದ ಅನುಭವಿಸುವುದು ಅವರ್ಣನೀಯವಾದುದು.
ಆದರೆ ಹೈಪರ್ ಮಾರುಕಟ್ಟೆಗಳಲ್ಲಿ ನೀವು ಶಾಪಿಂಗ್ ಮಾಡುತ್ತೀರಿ ಎಂದಾದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಬೇಕಾ ಬಿಟ್ಟಿಯಾಗಿ ಶಾಪಿಂಗ್ ಮಾಡದೇ ಅಗತ್ಯ ಉತ್ಪನ್ನಗಳನ್ನು ರಿಯಾಯಿತಿ ಆಧಾರದಲ್ಲಿ ಖರೀದಿಸುವ ಕ್ರಮ ನಿಮಗೆ ತಿಳಿದಿರಬೇಕು. ಇನ್ನು ಸೂಪರ್ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪದಾರ್ಥಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ನೀವು ಒಮ್ಮೆಲೇ ಹೆಚ್ಚಿನ ಸಾಮಾನುಗಳನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ ಈ ಸ್ಥಳ ಹೆಚ್ಚು ಸೂಕ್ತವೆಂದೆನಿಸಿದೆ. ಇನ್ನೂ ಇಲ್ಲೂ ನಿಮಗೆ ಸಮಯದ ಉಳಿತಾಯವನ್ನು ಮಾಡಿಕೊಂಡು ಹಣ ಪಾವತಿ ಮಾಡಲು ಉದ್ದನೆಯ ಸಾಲುಗಳಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಕೂಡ ಇರುವುದಿಲ್ಲ ಹಾಗೂ ಬೇಕು ಬೇಡದ್ದನ್ನೆಲ್ಲಾ ಖರೀದಿಸುವ ತಲೆನೋವೂ ಇರುವುದಿಲ್ಲ. ಹಾಗಿದ್ದರೆ ಆ ಸಲಹೆಗಳೇನು ಎಂಬುದನ್ನು ಅರಿತುಕೊಳ್ಳಲು ಕೆಳಗಿನ ವಿಧಾನಗಳನ್ನು ನೋಡಿ.

ಪಟ್ಟಿಯೊಂದಿಗೆ ವಸ್ತುಗಳನ್ನು ಖರೀದಿಸಿ
ನೀವು ಪಟ್ಟಿಯೊಂದಿಗೆ ಶಾಪಿಂಗ್ ಮಾಡುತ್ತಿದ್ದೀರಿ ಎಂದಾದಲ್ಲಿ, ಹಣ ಉಳಿತಾಯವಾಗುವುದು ಖಂಡಿತ. ಇಲ್ಲವೆಂದಾದಲ್ಲಿ ಸಿಕ್ಕಾಪಟ್ಟೆ ದುಡ್ಡು ಖರ್ಚಾಗುತ್ತದೆ. ವಾರಕ್ಕೆ ಬೇಕಾಗುವ ಪಟ್ಟಿಗಳನ್ನು ಸಿದ್ಧಪಡಿಸಿಕೊಳ್ಳಿ ಈ ವಸ್ತುಗಳು ನಿಮ್ಮ ಫ್ರಿಡ್ಜ್, ಅಡುಗೆಮನೆಯಲ್ಲಿ ಇಲ್ಲ ಎಂದಾದಲ್ಲಿ ಅವುಗಳನ್ನು ಮಾತ್ರ ಖರೀದಿಸಿ.
ವಾರದ ಪಟ್ಟಿ ತಯಾರಿರಲಿ
ನಿಮ್ಮ ಪಟ್ಟಿ ಸಂಪೂರ್ಣವಾಗಿದೆ ಎಂಬುದನ್ನು ಖಾತ್ರಿಪಡಿಸಲು ಇದು ಉತ್ತಮ ವಿಧಾನವಾಗಿದೆ. ವಾರಕ್ಕೆ ಬೇಕಾಗುವ ಸಾಮಾನುಗಳ ಪಟ್ಟಿಯನ್ನು ಸಿದ್ಧಮಾಡಿ. ಒಂದು ವಾರದ ಸಾಮಾನು ಪಟ್ಟಿ ಸಿದ್ಧವಾಯಿತು ಎಂದಾದಲ್ಲಿ ಮುಂದಿನ ವಾರಕ್ಕೂ ಅದನ್ನೇ ಅನುಸರಿಸಿದರೆ ಆಯಿತು. ಇದರಿಂದ ವಾರಕ್ಕೊಮ್ಮೆ ನಿಮಗೆ ಶಾಪಿಂಗ್ ಮಾಡಬಹುದಾಗಿದೆ.
ಹಸಿವಾಗಿರುವಾಗ ಶಾಪಿಂಗ್ ಬೇಡ
ಇದು ಸಾಮಾನ್ಯವಾಗಿದ್ದರೂ ನಿಜ. ನಿಮಗೆ ಹಸಿವಾಗಿರುವಾಗ, ನೀವು ಎಲ್ಲಾ ಬಗೆಯ ಆಹಾರ ಪದಾರ್ಥಗಳನ್ನು ಖರೀದಿಸುತ್ತೀರಿ. ಇದರಿಂದ ಹೆಚ್ಚು ಹಣ ಖರ್ಚಾಗುತ್ತದೆ. ಉತ್ತಮ ಆಹಾರವನ್ನು ಮೊದಲು ಸೇವಿಸಿ ಇದರಿಂದ ಪಟ್ಟಿಯಲ್ಲಿರುವ ಆಹಾರ ವಸ್ತುಗಳನ್ನು ಮಾತ್ರವೇ ನಿಮಗೆ ಖರೀದಿಸಲು ಸಾಧ್ಯ.
ಬಜೆಟ್ ಇರಲಿ
ನೀವು ಎಷ್ಟು ಹಣ ಖರ್ಚು ಮಾಡುತ್ತೀರಿ ಎಂಬುದು ನಿಮಗೆ ತಿಳಿದಿರಲಿ. ಇದರಿಂದ ಸೀಮಿತವಾಗಿ ಹಣ ಖರ್ಚು ಮಾಡಲು ನಿಮ್ಮಿಂದ ಸಾಧ್ಯವಾಗುತ್ತದೆ. ನಿಮ್ಮ ದುಡ್ಡಿನ ಸೀಮಿತ ಲೆಕ್ಕ ನಿಮಗಿಲ್ಲ ಎಂದಾದಲ್ಲಿ ವಿಪರೀತ ಖರ್ಚು ನಿಮ್ಮಿಂದ ಸಂಭವಿಸಬಹುದು.
ಪ್ಯಾಂಟ್ರಿ ಚೆಕ್ಲಿಸ್ಟ್ ತಯಾರಿಸಿ
ನಿಮ್ಮ ಪ್ಯಾಂಟ್ರಿಯಲ್ಲಿ ಸಾಮಾನ್ಯವಾಗಿ ನೀವು ಸಂಗ್ರಹಿಸುವ ಆಹಾರ ವಸ್ತುಗಳ ಪಟ್ಟಿ ಸಿದ್ಧಪಡಿಸಿ. ಪ್ಯಾಂಟ್ರಿಯಲ್ಲಿ ಅದನ್ನು ಪೋಸ್ಟ್ ಮಾಡಿ ಇಟ್ಟುಕೊಳ್ಳಿ. ನೀವು ಹೊಂದಿರುವ ಐಟಮ್ಗಳಿಗೆ ಸ್ಲ್ಯಾಶ್ ಮಾರ್ಕ್ ಹಾಕುತ್ತಾ ಬನ್ನಿ. ನೀವು ಇವುಗಳನ್ನು ಬಳಸಿದಾಗ, ಸ್ಲ್ಯಾಶ್ ಅನ್ನು ಎಕ್ಸ್ ಮಾರ್ಕ್ ಅನ್ನಾಗಿ ಮಾಡಿಕೊಳ್ಳಿ. ಇದರಿಂದ ನಿಮ್ಮ ಪಟ್ಟಿಯನ್ನು ಇನ್ನಷ್ಟು ಸರಳವಾಗಿ ತಯಾರಿಸಬಹುದು.
ಕಡಿಮೆ ಬೆಲೆಯಲ್ಲಿ ಖರೀದಿ
ಶಾಪಿಂಗ್ ಮಾಡುವಾಗ ರಿಯಾಯಿತಿ ದರದಲ್ಲಿ ವಸ್ತುಗಳ ಲಭ್ಯವಿದೆ ಎಂದು ಕ್ಷಣದಲ್ಲಿ ಅದನ್ನು ಖರ್ಚುಮಾಡದಿರಿ. ಉತ್ಪನ್ನದ ತಯಾರಿ ದಿನಾಂಕವನ್ನು ಖುದ್ದಾಗಿ ಪರಿಶೀಲಿಸಿಕೊಂಡೇ ಅವುಗಳ ಖರೀದಿಯನ್ನು ಮಾಡಿ.
ಬಿಲ್ ಮಾಡುವ ನಿಯಮ
ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರನ್ನು ಉದ್ದನೆಯ ಸಾಲಿನಲ್ಲಿ ನಿಲ್ಲಿಸಿ. ಇದರಿಂದ ನೀವು ಸಾಲಿನಲ್ಲಿ ಕೊನೆಯವರಾಗಿದ್ದರೂ ಅವರ ಮುಖಾಂತರ ಬಿಲ್ಲಿಂಗ್ ಅನ್ನು ನಡೆಸಿಕೊಳ್ಳಬಹುದು.



Click it and Unblock the Notifications
