Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ನಂಬುತ್ತೀರೋ ಬಿಡುತ್ತೀರೋ, ಇದೆಲ್ಲಾ ಡ್ರಗ್ಸ್ ಮಹಿಮೆಯಂತೆ!
ತಮಾಷೆಗೆಂದು ಸೇವನೆ ಮಾಡುವ ಮಾದಕ ದ್ರವ್ಯವು ಕ್ರಮೇಣ ಚಟವಾಗಿ ದೇಹವನ್ನೇ ಆವರಿಸಿಕೊಳ್ಳುತ್ತದೆ. ಚಟವಾದ ಬಳಿಕ ಇದನ್ನು ಬಿಟ್ಟಿರಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ. ಡ್ರಗ್ಸ್ ಮತ್ತು ಸ್ಟಿರಾಯ್ಡ್ ತುಂಬಾ ಅಪಾಯಕಾರಿ. ಆದರೂ ಇದನ್ನು ಸೇವನೆ ಮಾಡುವುದು ಒಂದು ಚಟವಾಗಿದೆ.
ಮಾದಕ ದ್ರವ್ಯದ ಚಟ ಹತ್ತಿಕೊಂಡರೆ ಸಾಕು. ಆತನ ಜೀವನವೇ ಹಾಳಾಗಿ ಹೋದಂತೆ ಅದರಿಂದ ಹೊರಬರಲು ಹರಸಾಹಸ ಪಡಬೇಕು. ಅದರಲ್ಲೂ ಕ್ರೀಡಾ ಜಗತ್ತಿನಲ್ಲಿ ಡ್ರಗ್ಸ್ ತೆಗೆದುಕೊಳ್ಳುವುದು ಸಾಮಾನ್ಯವೆನ್ನುವಂತಾಗಿದೆ. ಕೆಲವರು ಅತಿಯಾದ ಡ್ರಗ್ಸ್ ಸೇವನೆಯಿಂದಾಗಿ ತಮ್ಮ ಕ್ರೀಡೆ ಹಾಗೂ ವೈಯುಕ್ತಿಕ ಜೀವನವನ್ನೇ ಹಾಳು ಮಾಡಿರುವುದನ್ನು ನಾವು ನೋಡಿದ್ದೇವೆ. ಜಗತ್ತಿನ ಪ್ರಾಣಾಂತಿಕ ಮಾದಕ ದ್ರವ್ಯಗಳ ಬಗ್ಗೆ ಗೊತ್ತೇ?
ಈ ಲೇಖನದಲ್ಲಿ ಕೆಲವು ಜನಪ್ರಿಯ ಮಹಿಳೆಯರು ಡ್ರಗ್ಸ್ ಸೇವನೆ ಮಾಡಿ ತಮ್ಮ ಅಂಗಗಳನ್ನು ವೃದ್ಧಿಸಿ ತುಂಬಾ ಸೆಕ್ಸಿಯಾಗಿ ಕಾಣಿಸಿಕೊಂಡ ಬಗ್ಗೆ ಹೇಳಲಿದ್ದೇವೆ. ಸ್ಟಿರಾಯ್ಡ್‌ನ ಅತಿಯಾದ ಸೇವನೆಯಿಂದ ಯಾವ ರೀತಿ ಮಹಿಳೆಯರ ಜೀವನದಲ್ಲಿ ಬದಲಾವಣೆಗಳಾಗಿವೆ ಎನ್ನುವುದನ್ನು ಮುಂದಕ್ಕೆ ಓದಿಕೊಳ್ಳಿ. ರೋಸ್ಟ್ ಚಿಕನ್‌ನಲ್ಲಿಯೂ ಮಾದಕ ದ್ರವ್ಯ ಸಾಗಾಟ!

ಸಪೂರಗಿನ ಹುಡುಗಿ ಈಗ ದೇಹದಾರ್ಢ್ಯ ಪಟು
ಸ್ವೀಡನ್ ನ ಮೊನಿಕಾ ಮೊಲಿಕ್ಮೊವಿ ಎಂಬಾಕೆ ತನ್ನ 14ನೇ ವಯಸ್ಸಿನಲ್ಲಿ ದೇಹದಾರ್ಢ್ಯದ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾಳೆ. ಈಗ ಆಕೆ ಆಹಾರ ಪಥ್ಯ ಮತ್ತು ಪೋಷಕಾಂಶಗಳ ಬಗ್ಗೆ ಜನರಿಗೆ ಕೌನ್ಸಿಲಿಂಗ್ ನೀಡುತ್ತಿದ್ದಾಳೆ. ಆಕೆಯ ಚಿತ್ರ ನೋಡಿದಾಗ ಭಾರೀ ಬದಲಾವಣೆ ಉಂಟುಮಾಡಿದೆ ಎಂದೆನಿಸುತ್ತದೆ ಅಲ್ಲವೇ?

ಮಹಿಳೆಯಲ್ಲಿ ಪುರುಷರ ಲಿಂಗ ಬೆಳವಣಿಗೆ
ಸೌಂದರ್ಯಕ್ಕೇನೂ ಕೊರತೆಯಿಲ್ಲದ ಕ್ಯಾಂಡಿಕಾ ಆರ್ಮ್ ಸ್ಟ್ರಾಂಗ್ ಎಂಬಾಕೆ ಸ್ಟಿರಾಯ್ಡ್ ಸೇವನೆ ಮಾಡಲು ಆರಂಭಿಸಿದಾಗಿನಿಂದ ಆಕೆಯಲ್ಲಿ ಒಂದು ಇಂಚಿನ ಪುರುಷರ ಲಿಂಗದ ಬೆಳವಣಿಗೆ ಆಗಿದೆಯಂತೆ. ಆಕೆಯ ಭುಜಗಳು ಕೂಡ ದೊಡ್ಡದಾಗಿವೆ. ಆಕೆ ಟ್ರೆನಬೊಲೊನೆ ಎಂಬ ಸ್ಟಿರಾಯ್ಡ್ ತೆಗೆದುಕೊಳ್ಳಲು ಆರಂಭಿಸಿದ ಬಳಿಕ ಆಕೆಗೆ ಇದು ಚಟವಾಯಿತು ಮತ್ತು ಇದು ಖಂಡಿತವಾಗಿಯೂ ಆಕೆಯ ಜೀವನವನ್ನೇ ಬದಲಾಯಿಸಿದೆ.

ಪುರುಷರಂತೆ ಕಾಣುವ ಮಹಿಳೆ
ಜರ್ಮನ್‌ನ ಶಾಟ್ ಫುಟ್ ಚಾಂಪಿಯನ್ ಆಗಿದ್ದ ಆಕೆ ತನ್ನ ಪ್ರದರ್ಶನ ಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸ್ಟಿರಾಯ್ಡ್ ಸೇವನೆ ಮಾಡಿದಳು. ಇದರ ಬಳಿಕ ಆಕೆಯಲ್ಲಿ ಪುರುಷರ ಲಕ್ಷಣಗಳು ಕಾಣಿಸಿಕೊಂಡವು ಮತ್ತು ಆಕೆ ಹಲವಾರು ಸಲ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ. ಈಗ ಆಕೆ ಸಂಪೂರ್ಣವಾಗಿ ಪುರುಷರಂತಾಗಿದ್ದಾಳೆ.

ಬದಲಾದ ಶ್ರೀಮತಿ ಒಲಂಪಿಯಾ
1993ರಲ್ಲಿ ನಡೆದ ಶ್ರೀಮತಿ ಒಲಂಪಿಯಾ ಚಾಂಪಿಯನ್ ಶಿಪ್‌ನಲ್ಲಿ ಎರಡನೇ ಸ್ಥಾನ ಗೆದ್ದುಕೊಂಡಿದ್ದ ಡೆನಿಸ್ ರುತ್ಕೊವಸ್ಕಿ ಈಗಲೂ ಕಾನೂನಿನಿಂದ ದೂರ ಓಡುತ್ತಲಿದ್ದಾಳೆ. ಯಾಕೆಂದರೆ ಆಕೆ ಕಾನೂನುಬಾಹಿರವಾಗಿ ಕೆಲವೊಂದು ಡ್ರಗ್ಸ್ ಹಾಗೂ ಸ್ಟಿರಾಯ್ಡ್ ಸೇವನೆ ಮಾಡಿಕೊಂಡು ದೇಹದಲ್ಲಿ ಬದಲಾವಣೆ ಮಾಡಿಕೊಂಡಿದ್ದಳು.

ವೃತ್ತಿಪರ ದೇಹದಾರ್ಢ್ಯ ಸ್ಪರ್ಧೆ ಗೆದ್ದ ಅತ್ಯಂತ ಕಿರಿ ವಯಸ್ಸಿನ ಮಹಿಳೆ
ಬ್ರಿಟನ್‌ನ ವೃತ್ತಿಪರ ದೇಹದಾರ್ಢ್ಯ ಪಟು ಆಗಿರುವ ಜೊಯಾನ್ನಾ ಕ್ಲಾರೆ ತನ್ನ 21ನೇ ವಯಸ್ಸಿನಲ್ಲಿ ಐಎಫ್ ಬಿಬಿ ಗೆದ್ದುಕೊಂಡಿದ್ದಾಳೆ. ಸಪ್ರೈಸ್ ಶೀ ಎನ್ನುವ ಸಾಕ್ಷ್ಯಚಿತ್ರದಲ್ಲಿ ಆಕೆ ಕಾಣಿಸಿಕೊಂಡಿದ್ದಳು.

ದಢೂತಿ ದೇಹದಾರ್ಢ್ಯ ಪಟು ಮಹಿಳೆ
31ರ ಹರೆಯದ ಬ್ರಿಗಿಟಾ ಎಂಬ ವೃತ್ತಿಪರ ದೇಹದಾರ್ಢ್ಯ ಪಟು ಐಎಫ್ ಬಿಬಿಯಲ್ಲಿ ಫಿಟ್ನೆಸ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದಳು. ಆದರೆ ಆಕೆಯ ದೇಹವನ್ನು ನೋಡಿದವರು ಆಕೆಗೆ ದೇಹದಾರ್ಢ್ಯ ಪಟು ಆಗಲು ಸೂಚನೆ ನೀಡಿದರು. ಇದರ ಬಳಿಕ ಆಕೆ ಈಗ ವೃತ್ತಿಪರ ದೇಹದಾರ್ಢ್ಯ ಪಟು ಆಗಿದ್ದಾಳೆ.



Click it and Unblock the Notifications