Latest Updates
-
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ!
ಅತೀ ತೂಕದ ಮಕ್ಕಳು- ಇದು ವೈದ್ಯಲೋಕಕ್ಕೇ ಸವಾಲು!
ಭೂಮಿಯ ಮೇಲೆ ಪ್ರತಿಯೊಂದು ದಿನವೂ ಏನಾದರೊಂದು ವಿಚಿತ್ರಗಳು ಸಂಭವಿಸುತ್ತಲೇ ಇರುತ್ತದೆ. ಕೆಲವೊಂದು ನಮ್ಮನ್ನು ಮೂಗಿನ ಮೇಲೆ ಕೈಯಿಡುವಂತೆ ಮಾಡಿದರೆ, ಇನ್ನು ಕೆಲವು ವಿಚಿತ್ರಗಳನ್ನು ನೋಡಿ ಅಯ್ಯೋ ಎನ್ನುತ್ತೇವೆ. ನಮ್ಮ ಸುತ್ತಮುತ್ತಲಿನಲ್ಲೇ ವಿಚಿತ್ರಗಳು ನಡೆದಾಗ ಇದೆಲ್ಲವೂ ದೇವರ ಲೀಲೆ ಎಂದು ಹೇಳುತ್ತೇವೆ. ನಾಲ್ಕು ಕಾಲು ಮತ್ತು ನಾಲ್ಕು ಕೈಗಳನ್ನು ಹೊಂದಿರುವ ಮಗು, ಎರಡು ತಲೆ ಹೊಂದಿರುವ ಮಗು ಹೀಗೆ ಹಲವಾರು ವಿಚಿತ್ರಗಳನ್ನು ನಾವು ನೋಡಿದ್ದೇವೆ.
ಈ ಲೇಖನದಲ್ಲಿ ನಾವು ವಿಶ್ವದೆಲ್ಲೆಡೆ ವಿಚಿತ್ರವಾಗಿ ಜನಿಸಿದಂತಹ ಮಕ್ಕಳ ಬಗ್ಗೆ ತಿಳಿದುಕೊಳ್ಳುವ. ನಾವು ಈ ಲೇಖನದಲ್ಲಿ ವಿಚಿತ್ರವೆಂದು ಹೇಳುವ ಮಕ್ಕಳು ಹುಟ್ಟುವಾಗಲೇ 5 ಕೆ.ಜಿ.ಗಿಂತ ಹೆಚ್ಚಿನ ತೂಕ ಹೊಂದಿರುವಂತಹದ್ದು. ಈ ಮಕ್ಕಳನ್ನು ಭೂಮಿ ಮೇಲೆ ಜನಿಸಿದ ಅತ್ಯಂತ ಭಾರದ ಮಕ್ಕಳೆಂದರೆ ತಪ್ಪಾಗಲಾರದು. ಕೆಲವು ಮಕ್ಕಳು ನೋಡಲು ವಿಕಾರವಾಗಿದ್ದರೆ ಮತ್ತೆ ಕೆಲವು ಮಕ್ಕಳನ್ನು ಸಾಕಲು ಅವುಗಳ ತಂದೆ-ತಾಯಿ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಯಾವ್ಯಾವ ದೇಶಗಳಲ್ಲಿ ಅತೀ ತೂಕದ ಮಕ್ಕಳು ಜನಿಸಿದ್ದಾರೆ ಎನ್ನುವುದನ್ನು ನಾವಿಲ್ಲಿ ತಿಳಿದುಕೊಳ್ಳುವ.

ಜಸ್ಲೀನ್(ಜರ್ಮನಿ)
ಈ ಮಗು ಹುಟ್ಟುವಾಗ 6.1 ಕೆ.ಜಿ. ತೂಕ ಮತ್ತು 57 ಸೆ,.ಮೀ. ಉದ್ದವಿತ್ತು. ಈ ಮಗುವಿನ ತಾಯಿ ಗರ್ಭಿಣಿಯಾಗಿರುವ ವೇಳೆ ಗರ್ಭಧಾರಣೆಯ ಸಕ್ಕರೆ ಕಾಯಿಲೆಗೆ ಒಳಗಾಗಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಜರ್ಮನಿ ಸರಕಾರಿ ಈ ಮಗುವನ್ನು ದೇಶದಲ್ಲಿ ಹುಟ್ಟಿದ ಅತ್ಯಂತ ಭಾರದ ಮಗು ಎಂದು ಘೋಷಿಸಿದೆ.
Image courtesy

ಮ್ಯಾಕ್ಸಿನೆ ಮರಿನ್(ಸ್ಪೇನ್)
ಸ್ವಾಭಾವಿಕ ಹೆರಿಗೆ ಮೂಲಕ ಜನಿಸಿದ ಈ ಮಗುವಿನ ಭಾರ 6.2 ಕೆ.ಜಿ. 40ರ ಹರೆಯದ ಮಗುವಿನ ತಾಯಿಗೆ ಹೆರಿಗೆ ವೇಳೆ ನೋವನ್ನು ತಡೆಯಲು ಯಾವುದೇ ಅನಸ್ತೇಸಿಯಾವನ್ನು ನೀಡಲಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. Image courtesy

ಜಾರ್ಜ್ ಕಿಂಗ್
2013ರಲ್ಲಿ ಜನಿಸಿದ ಈ ಮಗು ಹೆಸರೇ ಹೇಳುವಂತೆ ರಾಜನಂತೆ ಜನಿಸಿದೆ. ಇದು ಹುಟ್ಟುವಾಗ 15 ಪೌಂಡ್ ಮತ್ತು 7 ಔನ್ಸ್ ತೂಕ ಹೊಂದಿತ್ತು. ಇದು ಸಾಮಾನ್ಯವಾಗಿ ಹುಟ್ಟುವ ಮಗುವಿನ ದೇಹಕ್ಕಿಂತ ಎರಡುಪಟ್ಟು ಹೆಚ್ಚು. ಹೆರಿಗೆ ವೇಳೆ ಮಗುವಿನ ತಾಯಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೆ ಹೆರಿಗೆ ಬಳಿಕ ತಾಯಿ ಆರೋಗ್ಯವಾಗಿದ್ದಳು. Image courtesy

ಜಾ ಮೈಕಲ್(ಟೆಕ್ಸಾಸ್)
ಟೆಕ್ಸಾಸ್ ನಲ್ಲಿ ಪ್ರತಿಯೊಂದು ದೊಡ್ಡದಾಗಿರುತ್ತದೆ ಎನ್ನುವ ಮಾತಿದೆ. ಈ ಮಗು ಇದನ್ನು ನಿಜವಾಗಿಸಿದೆ. ಈ ಮಗು ಎಲ್ಲಾ ದಾಖಲೆಗಳನ್ನು ಮುರಿದು 16 ಪೌಂಡ್ ತೂಕದೊಂದಿಗೆ ಜನ್ಮ ಪಡೆಯಿತು. ಈ ಮಗು ಸಾಮಾನ್ಯವಾಗಿ ಜನಿಸುವ ಮಗುವಿನ ಭಾರಕ್ಕಿಂತ ಎರಡು ಪಟ್ಟು ಹೆಚ್ಚು ಭಾರ ಹೊಂದಿತ್ತು. Image courtesy

ನಾದಿಯಾ ಖಾಲಿನಾ(ಸೆರ್ಬಿಯಾ)
ತನ್ನ ತಾಯಿಗೆ 12ನೇ ಮಗುವಾಗಿರುವ ನಾದಿಯಾ ತನ್ನ ಜನನದ ವೇಳೆ 7.5 ಕೆ.ಜಿ. ತೂಕ ಹೊಂದಿದ್ದಳು. ಹೆರಿಗೆ ವೇಳೆ ತಾಯಿ ಮತ್ತು ಮಗು ಆರೋಗ್ಯವಾಗಿದ್ದರು. Image courtesy

ಸ್ಟೆಫನ್ ಹೆಂಡ್ರಿಕ್ಸ್ ಲೂಯಿಸ್-ಜೀಯನ್(ನಾರ್ವೆ)
ಈ ಮಗು ದಾಖಲೆ ಸೇರಿಕೊಂಡ ಐದನೇ ಮಗುವಾಗಿದೆ. ಈ ಮಗು ಹುಟ್ಟುವಾಗ 14 ಪೌಂಡ್ ಮತ್ತು 13 ಔನ್ಸ್ ತೂಗುತ್ತಾ ಇತ್ತು. 23 ಇಂಚು ಉದ್ದದ ಈ ಮಗುವನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದರು. Image courtesy

ಅಡೆಮಿಲ್ಟನ್ ಡೊಸ್ ಸ್ಯಾಂಟೊಸ್(ಬ್ರೆಜಿಲ್)
ಈ ಮಗು ಜನಿಸುವಾಗ ತುಂಬಾ ದೊಡ್ಡ ಮಗುವಾಗಿತ್ತು. ಇದರ ಭಾರ 8 ಕೆ.ಜಿ. ತಾಯಿಯ ಸಕ್ಕರೆ ಕಾಯಿಲೆ ಸಮಸ್ಯೆಯಿಂದಾಗಿ ಈ ರೀತಿಯ ಭಾರ ಹೊಂದಿದ ಮಗು 2005ರಲ್ಲಿ ಜನಿಸಿತ್ತು. Image courtesy



Click it and Unblock the Notifications
