Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಹಿಳೆಯರ ಒಳಗುಟ್ಟು, ನಿಮಗೂ ಅಚ್ಚರಿಯಾಗಬಹುದು!
ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು, ಹೆಣ್ಣಿನ ಮನಸ್ಸಿನಲ್ಲೇನಿದೆ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಿಲ್ಲ ಎಂಬ ನಾಣ್ಣುಡಿಯೊಂದಿದೆ. ಮಹಿಳೆಯರ ಬಗ್ಗೆ ಎಷ್ಟು ತಿಳಿದುಕೊಂಡಿದ್ದರೂ ಅದು ಕಡಿಮೆಯೇ. ಮೇಲ್ನೋಟಕ್ಕೆ ನೋಡಿದರೆ ಮಹಿಳೆಯರು ಹೆಚ್ಚು ಭಾವಪರವಶೆಯುಳ್ಳವರು, ಕೊಳ್ಳುಬಾಕರು, ಸೌಂದರ್ಯಾರಾಧಕರು, ಸಿಹಿ ತಿನ್ನಲು ಇಷ್ಟಪಡುವವರು, ತಮ್ಮನ್ನು ಸುಂದರವಾಗಿ ಅಲಂಕರಿಸಿಕೊಳ್ಳುವವರು, ಆಭರಣ ಲೋಲುಪರು, ಹರಟೆ ಮಲ್ಲಿಯರು, ಮತ್ತು ಗುಟ್ಟು ಹರಡುವವರು ಎಂಬ ಹಲವು ಗುಣಗಳನ್ನು ಎಲ್ಲರೂ ಒಪ್ಪುತ್ತಾರೆ. ಮಹಿಳೆಯರು ಯಾಕಪ್ಪಾ ಈ ರೀತಿಯಾಗಿ ವರ್ತಿಸುತ್ತಾರೆ?
ಇವೆಲ್ಲಾ ಒಂದು ಕಾಲಕ್ಕೆ ಸೀಮಿತವಾದ ಗುಣಗಳಾಗಿದ್ದವು. ಆದರೆ ಇಂದು ಕಾಲ ಬದಲಾಗಿದೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಮಹಿಳೆ ಪುರುಷನಿಗೆ ಸರಿಸಮನಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಬರುತ್ತಿದ್ದಾಳೆ. ಒಂದು ಸಮೀಕ್ಷೆಯ ಪ್ರಕಾರ ಇಂದು 19% ಮಹಿಳೆಯರು ತಮ್ಮ ತಂದೆ ತಾಯಿಯರಿಗಿಂತಲೂ ಹೆಚ್ಚು ಸಂಪಾದಿಸುತ್ತಿದ್ದಾರೆ. ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ತೋರ್ಪಡಿಸಲು ಹೆಚ್ಚು ಸಮರ್ಥರಾದ ಮಹಿಳೆಯರು ವರ್ಷಕ್ಕೆ 30 ರಿಂದ 60 ಬಾರಿಯಾದರೂ ಕಣ್ಣೀರು ಸುರಿಸಿ ಅಳುತ್ತಾರಂತೆ.
ಎಷ್ಟೇ ಕಡಿಮೆ ಎಂದರೂ ಸುಮಾರು ದಿನಕ್ಕೆ ಇಪ್ಪತ್ತು ಸಾವಿರ ಪದಗಳನ್ನು ಮಾತನಾಡುತ್ತಾರಂತೆ. ಇವೆಲ್ಲಾ ಅಂತೆಕಂತೆಗಳಲ್ಲ, ಹಲವು ಸಮೀಕ್ಷೆಗಳು ಸಾಕ್ಷಿಸಮೇತ ನೀಡಿರುವ ವಿವರಗಳು. ಓಹೋ, ಹೀಗೆಲ್ಲಾ ಹೇಳುತ್ತಾರಾ ನಮ್ಮ ಬಗ್ಗೆ, ಇನ್ನು ಏನೇನು ಹೇಳಿದ್ದಾರೆ ನೋಡೋಣ ಎಂದು ಈಗಾಗಲೇ ಕೆಲವು ಮಹಿಳೆಯರು ಸೆರಗನ್ನು ಸೊಂಟಕ್ಕೆ ಸಿಕ್ಕಿಸಿರಬಹುದು. ಬನ್ನಿ, ಕೆಳಗಿನ ಸ್ಲೈಡ್ ಶೋ, ಮೂಲಕ ಏನೇನು ಹೇಳಿದ್ದಾರೆ ಎಂದು ನೋಡೋಣ....

ವಾಸ್ತವಾಂಶ #1
ಸಂಬಂಧ ಕಡಿದು ಹೊರಬಂದ ಬಳಿಕ ಮಹಿಳೆಯರು ಕ್ಷಿಪ್ರಕಾಲದಲ್ಲಿ ಸಾಮಾನ್ಯಸ್ಥಿತಿಗೆ ಮರಳುತ್ತಾರೆ ಎಂದು ಸಮೀಕ್ಷೆ ತಿಳಿಸುತ್ತದೆ. ಅಂದರೆ ಯಾವುದೋ ಕಾರಣಕ್ಕೆ ಪರಸ್ಪರ ದೂರವಾಗಬೇಕಾದಾಗ ಮಹಿಳೆಯರು ಮಾನಸಿಕರಾಗಿ ಹೆಚ್ಚು ಪ್ರೌಢರಾಗುತ್ತಾರೆ. ಕ್ಷಿಪ್ರ ಸಮಯದಲ್ಲಿ ಹೊಸ ಜೀವನಕ್ಕೆ ಹೊಂದಿಕೊಳ್ಳುತ್ತಾರೆ. ಅತ್ತ ಪುರುಷರು ವ್ಯಸನಕ್ಕೆ ತುತ್ತಾಗುವುದನ್ನು ಹೆಚ್ಚಾಗಿ ಗಮನಿಸಲಾಗಿದೆ.

ವಾಸ್ತವಾಂಶ #2
ಮಹಿಳೆಯರು ಕಟ್ಟುಮಸ್ತು ಶರೀರದ ಪುರುಷರನ್ನು ಎಷ್ಟೇ ಹೊಗಳಿ ಬಯಸಿದರೂ ವಿವಾಹದ ಆಯ್ಕೆ ಬಂದಾಗ ಮಾತ್ರ ಉತ್ತಮ ಗುಣಗಳಿರುವ ಸಾಮಾನ್ಯ ಮೈಕಟ್ಟಿನ ಪುರುಷರನ್ನೇ ಬಯಸುತ್ತಾರೆ. ಉತ್ತಮ ಗುಣಗಳ ಪುರುಷನ ಬಗ್ಗೆ ಹೆಚ್ಚು ತಿಳಿದುಕೊಂಡಷ್ಟೂ ಆತನನ್ನೇ ವರಿಸುವ ಬಯಕೆ ಹೆಚ್ಚುತ್ತಾ ಹೋಗುತ್ತದೆ.

ವಾಸ್ತವಾಂಶ#3
ಒಂದು ವೇಳೆ ಹಾದಿ ತಪ್ಪಲು ಅವಕಾಶ ಇದ್ದು ಇದರಲ್ಲಿ ಸಿಕ್ಕಿ ಬೀಳುವ ಅವಕಾಶ ಇಲ್ಲವೇ ಇಲ್ಲ ಎಂದಾದರೆ ಗುಪ್ತವಾದ ಸಂಬಂಧಕ್ಕೆ ಸಿದ್ದ ಎಂಬುದನ್ನು 70% ಮಹಿಳೆಯರು ಒಪ್ಪುತ್ತಾರೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ.

ವಾಸ್ತವಾಂಶ #4
ಇನ್ನೊಂದು ವಿಚಿತ್ರ ಸಂಶೋಧನೆಯಲ್ಲಿ ಇನ್ನೂ ವಿಚಿತ್ರ ಸಂಗತಿ ಹೊರಬಿದ್ದಿದೆ. ಅದೆಂದರೆ ಪುರುಷನ ಕಂಕುಳ ಬೆವರಿನ ಕೆಲವು ಹನಿಗಳನ್ನು ಮಹಿಳೆಯ ತುಟಿಗೆ ಹಚ್ಚಿದರೆ ಇದರಿಂದ ಆಕೆಯ ದೇಹದಲ್ಲಿ ಉದ್ವೇಗ, ಭಾವಪರವಶತೆ ಉತ್ತಮಗೊಳ್ಳುವುದು, ಮನಸ್ಸು ನಿರಾಳವಾಗುವುದು, ಮತ್ತು ಇನ್ನೂ ಮುಖ್ಯವಾಗಿ ಮಾಸಿಕ ಋತುಚಕ್ರ ಕ್ರಮಬದ್ಧವಾಗುವುದು ಕಂಡು ಬಂದಿದೆ.

ವಾಸ್ತವಾಂಶ #5
ಮಹಿಳೆಯರಿಗೆ ತಮ್ಮ ಪುರುಷ ವ್ಯಾಯಾಮಶಾಲೆಯಲ್ಲಿ ವ್ಯಾಯಾಮ ಮಾಡುವುದಕ್ಕಿಂತಲೂ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಲೈಂಗಿಕವಾಗಿ ಹೆಚ್ಚು ಆಕರ್ಷಕರಾಗಿ ಕಾಣುತ್ತಾರಂತೆ.

ವಾಸ್ತವಾಂಶ #6
ಇನ್ನೊಂದು ಸಮೀಕ್ಷೆಯ ಪ್ರಕಾರ ಬೆಳ್ಳುಳ್ಳಿಯನ್ನು ತಿಂದು ಬೆವರಿನಲ್ಲಿ ಬೆಳ್ಳುಳ್ಳಿಯ ವಾಸನೆಯನ್ನು ಸೂಸುವ ಪುರುಷರು ಮಹಿಳೆಯರಲ್ಲಿ ಕಾಮವಾಂಛೆಯನ್ನು ಹೆಚ್ಚಿಸುತ್ತದೆ.

ವಾಸ್ತವಾಂಶ #7
ಪುರುಷರು ತಮ್ಮ ಬಿಡುವಿನ ಕೆಲ ಸಮಯವನ್ನು ಕಾಮ ಮತ್ತು ಪ್ರಣಯ ಕುರಿತಾದ ಚಿಂತನೆಗಳಲ್ಲಿ ಕಳೆದರೆ ಮಹಿಳೆಯರು ತಮ್ಮ ಮೇಕಪ್ ಮತ್ತು ಇಂತಹ ಉಡುಗೆ ತೊಟ್ಟರೆ ತಾನು ಹೇಗೆ ಕಾಣುತ್ತೇನೆ ಎಂಬ ಚಿಂತನೆಯಲ್ಲಿ ಕಳೆಯುತ್ತಾರೆ.

ವಾಸ್ತವಾಂಶ #8
ಮಹಿಳೆಯರನ್ನು ಹೊರಗೆ ಸುತ್ತಾಡಲು ಬನ್ನಿ ಎಂದು ಪುರುಷರು ಕರೆದರೆ ಅವರಿಗೆ ಅಪ್ಯಾಯಮಾನವಾದ ಸಂತೋಷವುಂಟಾಗುತ್ತದೆ ಹಾಗೂ ಕೂಡಲೇ ಸಿದ್ಧರಾಗುತ್ತಾರೆ. ಒಂದು ವೇಳೆ ಆ ವ್ಯಕ್ತಿಯೊಂದಿಗೆ ಹೋಗಲು ಇಷ್ಟವಿಲ್ಲದಿದ್ದರೂ ತಮ್ಮನ್ನು ಕರೆದರಲ್ಲಾ ಎಂದು ಸಂತುಷ್ಟರಾಗುತ್ತಾರೆ.

ವಾಸ್ತವಾಂಶ #9
ಇನ್ನೊಂದು ಸಮೀಕ್ಷೆಯಲ್ಲಿ 30%ರಷ್ಟು ಮಹಿಳೆಯರು ಎಂದೂ ಕಾಮಸುಖದ ಪರಾಕಾಷ್ಠೆ (orgasm) ತಲುಪುವುದೇ ಇಲ್ಲ. ಆದರೂ ತಮ್ಮ ಪ್ರಿಯಕರನನ್ನು ಸಂತೋಷವಾಗಿಡಲು ಅವರು ಸುಳ್ಳು ಸುಳ್ಳೇ ಹೌದು ಎಂದು ಹೇಳುತ್ತಾರೆ.

ವಾಸ್ತವಾಂಶ #10
ಇನ್ನೊಂದು ಸಮೀಕ್ಷೆಯ ಪ್ರಕಾರ ಓರ್ವ ಮಹಿಳೆ ಮತ್ತು ಪುರುಷ ಕೇವಲ ಸ್ನೇಹಿತರಾಗಿರಲು ಸಾಧ್ಯವೇ ಇಲ್ಲ. ಉತ್ತಮ ಸ್ನೇಹಿತರೆಂದು ಕಂಡುಬಂದ ಎಲ್ಲರೂ ತಮ್ಮೊಳಗಿನ ಭಾವನೆಯನ್ನು ಕೇವಲ ಸ್ನೇಹ ಹಾಳಾಗಬಾರದು ಎಂಬ ಕಾರಣಕ್ಕೆ ಅದುಮಿಟ್ಟಿರುತ್ತಾರೆ ಅಷ್ಟೇ.



Click it and Unblock the Notifications
