Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಇವರಿಗೆ ಬುದ್ಧಿವಂತ ಹುಡುಗಿಯರೆಂದರೆ ಎಲ್ಲಿಲ್ಲದ ಪ್ರೀತಿಯಂತೆ!
ಸಾಮಾನ್ಯವಾಗಿ ಮಹಿಳೆಯರಿಗೆ ಗೊತ್ತಿರದ ವಿಷಯವೆಂದರೆ ಪುರುಷರು ಅವರಲ್ಲಿ ಇಷ್ಟಪಡುವ ವಿಷಯಗಳೆಂದರೆ ಸೌಂದರ್ಯ ಮತ್ತು ಬುದ್ಧಿವಂತಿಕೆ. ಆದರೆ ಹೆಚ್ಚಿನ ಪುರುಷರು ಸೌಂದರ್ಯದ ಬಗ್ಗೆ ಚರ್ಚಿಸಿದರೂ ಆಕೆಯ ಬುದ್ಧಿವಂತಿಕೆ ತನಗೆ ಇಷ್ಟ ಎಂದು ಸರ್ವಥಾ ಹೇಳುವುದಿಲ್ಲ. ಒಂದು ಸಮೀಕ್ಷೆಯ ಪ್ರಕಾರ 76% ಪುರುಷರು ಬುದ್ಧಿವಂತ ಅಥವಾ ತಮಗಿಂತ ಹೆಚ್ಚು ಬುದ್ಧಿವಂತ ಮಹಿಳೆಯರನ್ನೇ ಜೀವನ ಸಂಗಾತಿಯಾಗಿಸಿಕೊಳ್ಳಲು ಇಷ್ಟಪಡುತ್ತಾರೆ.
ಇತ್ತೀಚೆಗೆ ನಡೆದ ಈ ಸಮೀಕ್ಷೆಯಲ್ಲಿ ಅರ್ಧದಷ್ಟು ಪುರುಷರಲ್ಲಿ ತಮಗಿಂತ ಹೆಚ್ಚು ಬುದ್ದಿವಂತ ಮಹಿಳೆಯರನ್ನು ಜೀವನಸಂಗಾತಿಯಾಗಿ ಆರಿಸಿಕೊಳ್ಳಲು ಇಚ್ಛಿಸುತ್ತೀರಾ ಎಂಬ ಪ್ರಶ್ನೆಗೆ 76 ಶೇಖಡಾ ಪುರುಷರು ಹೌದು ಎಂದು ಉತ್ತರಿಸಿದ್ದಾರೆ. ಇನ್ನುಳಿದ ಅರ್ಧದಷ್ಟು ಜನರಿಗೆ ಈ ವಿಷಯವಿರುವ ಆದರೆ ಈ ಪ್ರಶ್ನಾವಳಿಯಲ್ಲಿ ದಡ್ಡ, ಕಡಿಮೆ ಬುದ್ಧಿವಂತ ಎಂಬ ಪದಗಳೇ ಬರದಂತೆ ಎಚ್ಚರಿಕೆ ವಹಿಸಿದ್ದ ಪ್ರಶ್ನೆಗಳನ್ನು ಕೇಳಲಾಯ್ತು.
ಅಂದರೆ ಪ್ರಶ್ನೆಗಳನ್ನು ದಡ್ಡತನ ತೋರುವ ಮಹಿಳೆಯರಿದ್ದ ಹಾಗೂ ಬುದ್ಧಿವಂತರಂತೆ ತೋರುತ್ತಿದ್ದ ಮಹಿಳೆಯರ ಕೆಲವು ಚಿತ್ರಗಳನ್ನು ತೋರಿಸಿ ಆಯ್ಕೆ ಮಾಡಲು ಕೇಳಲಾಯ್ತು. ಇದರಲ್ಲಿ ಹೆಚ್ಚಿನವರು ಬುದ್ಧಿವಂತರಂತೆ ತೋರುತ್ತಿದ್ದ ಮಹಿಳೆಯರನ್ನೇ ಆರಿಸಿಕೊಂಡಿದ್ದರು. ಪುರುಷರೇಕೆ ಬುದ್ಧಿವಂತ ಜೀವನಸಂಗಾತಿಯನ್ನು ಆರಿಸಿಕೊಳ್ಳಲು ಇಚ್ಛಿಸುತ್ತಾರೆ ಎಂಬ ವಿಷಯ ಕುತೂಹಲಕರವಾಗಿದ್ದು ಕೆಳಗಿನ ಮಾಹಿತಿ ನಿಮ್ಮ ಕುತೂಹಲವನ್ನು ತಣಿಸಲಿದೆ.

ಇವರು ಬುದ್ಧಿವಂತರಾಗಿರುತ್ತಾರೆ
ಮಹಿಳೆಯರು ಸುಂದರರೂ ಬುದ್ಧಿವಂತರೂ ಆಗಿದ್ದರೆ ಹೆಚ್ಚಿನ ಪುರುಷರ ಆಕರ್ಷಣೆಗೆ ಸುಲಭವಾಗಿ ಒಳಗಾಗುತ್ತಾರೆ.

ಇವರು ಪುಸ್ತಕಗಳನ್ನು ಓದುವ ಹವ್ಯಾಸಿಗಳಾಗಿರುತ್ತಾರೆ
ಈ ಮಹಿಳೆಯರು ವಿವಿಧ ವಿಷಯಗಳ ಆಸಕ್ತರಾಗಿದ್ದು ಸದಾ ಪುಸ್ತಕಗಳ ಮೂಲಕ ತಮ್ಮ ಆಸಕ್ತಿಯನ್ನು ತಣಿಸುವವರಾಗಿರುತ್ತಾರೆ. ಆದ್ದರಿಂದ ಇವರೊಂದಿಗೆ ನಡೆಸುವ ಸಂವಾದವೂ ಕುತೂಹಲಕರವಾಗಿದ್ದು ಪುರುಷರು ಇವರೊಂದಿಗೆ ಹೆಚ್ಚು ಕಾಲ ಮಾತನಾಡುತ್ತಲೇ ಇರಲು ಬಯಸುತ್ತಾರೆ.

ಇವರು ನಿಮ್ಮ ಜೀವನವನ್ನು ನೋಡುವ ಪರಿಯನ್ನು ಬದಲಿಸುತ್ತಾರೆ
ಇವರ ಬುದ್ಧಿವಂತಿಕೆ ಸಮಾಜವನ್ನು ಹೆಚ್ಚು ಪ್ರಬುದ್ಧತೆಯಿಂದ ನೋಡಲು ಸಾಧ್ಯವಾಗಿಸಿರುತ್ತದೆ. ಇವರು ಜಗತ್ತನ್ನು ಭಿನ್ನ ಕೋನದಿಂದ ನೋಡಬಲ್ಲವರಾಗಿದ್ದು ಪುರುಷರು ನೋಡಬಲ್ಲ ಕೋನಕ್ಕೂ ಭಿನ್ನವಾಗಿ ನೋಡಬಲ್ಲವರಾಗಿರುತ್ತಾರೆ. ಈ ಭಿನ್ನ ದೃಷ್ಟಿ ಪುರುಷರಿಗೆ ಹೆಚ್ಚು ಇಷ್ಟವಾಗುತ್ತದೆ.

ಮನೋಭಾವದ ಕಾರಣ ಪುರುಷರಿಗೆ ಹೆಚ್ಚು ಆಕರ್ಷಣೀಯರಾಗಿರುತ್ತಾರೆ
ಇವರು ಸಾಮಾನ್ಯವಾಗಿ ಜನಜಂಗುಳಿಯ ಸಾಮಾನ್ಯ ಜನರಂತಿರದೇ ಪ್ರತ್ಯೇಕವಾಗಿರುವ ಇವರ ಮನೋಭಾವ ಪುರುಷರಿಗೆ ಹೆಚ್ಚು ಆಕರ್ಷಣೀಯವಾಗಿರುತ್ತದೆ.

ಇವರು ಪುರುಷರನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲವರಾಗಿರುತ್ತಾರೆ
ಹಲವು ಸಂಶೋಧನೆಗಳ ಮೂಲಕ ಬುದ್ಧಿವಂತ ಮಹಿಳೆಯರು ಪುರುಷರನ್ನು ಹೆಚ್ಚು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬಲ್ಲವಾಗಿರುತ್ತಾರೆ. ಆದ್ದರಿಂದ ಪುರುಷರ ಹೃದಯವನ್ನು ಗೆಲ್ಲುವುದು ಇವರಿಗೆ ಕಷ್ಟವಾಗಲಾರದು.

ಇವರು ಜಗಳವನ್ನು ಮುಂದುವರೆಸಲು ಇಚ್ಛಿಸುವುದಿಲ್ಲ
ಸಾಮಾನ್ಯವಾಗಿ ಯಾವುದೇ ಭಿನ್ನಾಭಿಪ್ರಾಯ ಎದುರಾದರೆ ಇದು ಜಗಳಕ್ಕೆ ತಿರುಗುವ ಸಂಭವ ಹೆಚ್ಚು. ಆದರೆ ಬುದ್ಧಿವಂತ ಮಹಿಳೆಯರು ಇದರ ಸುಳಿವನ್ನು ಮೊದಲೇ ಪಡೆದು ವಿಷಯವನ್ನು ಅಲ್ಲಿಯೇ ಮುಕ್ತಾಯಗೊಳಿಸಿ ಅಥವಾ ಪಲ್ಲಟಿಸಿ ಜಗಳವಾಗದಂತೆ ನೋಡಿಕೊಳ್ಳುತ್ತಾರೆ. ಇದು ಪುರುಷರಿಗೆ ಇಷ್ಟವಾದ ನಡವಳಿಕೆಯಾಗಿದೆ.

ಇವರು ಸಮರ್ಥ ಜೀವನಸಂಗಾತಿಯಾಗಲು ಅರ್ಹರಾಗಿದ್ದಾರೆ
ಇವರು ಮನೆಯನ್ನು ಮತ್ತು ಸಂದರ್ಭಗಳನ್ನು ಸುಲಭವಾಗಿ ನಿಭಾಯಿಸಲು ಮತ್ತು ನಿರ್ವಹಿಸಲು ಸಮರ್ಥರಿರುವ ಕಾರಣ ಇವರ ನಡವಳಿಕೆ ಪುರುಷರನ್ನು ಆಕರ್ಷಿಸಿ ಜೀವನ ಸಂಗಾತಿಗಳನ್ನಾಗಿಸಿಕೊಳ್ಳುವ ನಿರ್ಧಾರದತ್ತ ತಳ್ಳುತ್ತದೆ.



Click it and Unblock the Notifications











