For Quick Alerts
ALLOW NOTIFICATIONS  
For Daily Alerts

ವಿಮಾನದಲ್ಲಿ ಶೌಚಾಲಯ ಬಳಸುವುದಕ್ಕೂ ರೂಲ್ಸ್ ಇದೆ!

By Arshad
|

ಇಂದು ವಿಮಾನಯಾನ ಕೇವಲ ಶ್ರೀಮಂತರ ಪ್ರತಿಷ್ಠೆಯಾಗಿಲ್ಲ, ಬದಲಿಗೆ ಜನಸಾಮಾನ್ಯರೂ ವರ್ಷಕ್ಕೊಂದೆರಡು ಬಾರಿಯಾದರೂ ಪ್ರಯಾಣಿಸಬಹುದಾದಷ್ಟು ಭರಿಸುವಂತಿದೆ. ಕೆಲವರಂತೂ ರೈಲು ಬಸ್ಸುಗಳಲ್ಲಿ ಹೋಗುವಷ್ಟೇ ಸುಲಭವಾಗಿ ವಿಮಾನದಲ್ಲಿ ದೇಶದಾದ್ಯಂತ, ವಿದೇಶಗಳಿಗೆ ತಿರುಗಾಡುತ್ತಾ ಇರುತ್ತಾರೆ. ಆದರೆ ವಿಮಾನ ಪ್ರಯಾಣ ನೆಲದ ಅಥವಾ ನೀರಿನ ಸಾರಿಗೆಗಳಿಗಿಂತ ಹೆಚ್ಚು ಕಠಿಣ ಮತ್ತು ಜಾಗರೂಕತೆ ಬೇಡುವ ಯಾನವಾಗಿದೆ. ಆದ್ದರಿಂದ ವಿಮಾನಯಾನದ ಸಿಬ್ಬಂದಿಯಾಗಲು ಕಠಿಣ ತರಬೇತಿಯನ್ನೂ ಪಡೆಯಬೇಕಾಗುತ್ತದೆ.

ಆದರೆ ಪ್ರಯಾಣಿಕರು? ಇವರಿಗೆ ಪ್ರಯಾಣದ ನಡುವೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಪ್ರತಿ ಪ್ರಯಾಣದ ಮುನ್ನವೂ ಕಡ್ಡಾಯವಾಗಿ ತಿಳಿಸಲಾಗುತ್ತದೆ. ಆದರೆ ವಿಮಾನದ ಆರೋಹಣ ಅಂದರೆ ನೆಲ ಬಿಟ್ಟು ಏಳುವಾಗ (ಟೇಕ್ಆಫ್) ಮತ್ತು ಅವರೋಹಣ ಅಂದರೆ ಆಗಸದಿಂದ ನಿಲ್ದಾಣಕ್ಕೆ ಇಳಿಯುವಾಗ (ಲ್ಯಾಂಡಿಂಗ್) ಕಡ್ಡಾಯವಾಗಿ ಸೀಟ್ ಬೆಲ್ಟ್ ಕಟ್ಟಲು ಮತ್ತು ಶೌಚಾಲಯ ಬಳಸದಿರಲು ನಿರ್ದೇಶನ ನೀಡಲಾಗುತ್ತದೆ. ವಿಮಾನ ಅಪಹರಣಗಳಲ್ಲಿಯೇ ಅತಿ ಭಯಾನಕವಾದ ಪ್ರಕರಣಗಳು

ಇದೊಂದು ಅಗತ್ಯ ಸುರಕ್ಷತಾ ಕ್ರಮವಾಗಿದ್ದು ಸಿಬ್ಬಂತಿ ಸಹಿತ ವಿಮಾನದಲ್ಲಿರುವ ಅಷ್ಟೂ ಜನರೂ ಪಾಲಿಸಬೇಕಾದುದು ಅವಶ್ಯವಾಗಿದೆ. ಕಡ್ಡಾಯವೇನೋ ಸರಿ, ಆದರೆ ಏಕೆ ಈ ಕಟ್ಟುಪಾಡನ್ನು ವಿಧಿಸಲಾಗಿದೆ? ಕುತೂಹಲ ಕೆರಳಿತೇ? ಕೆಳಗಿನ ಸ್ಲೈಡ್ ಶೋ ನಿಮ್ಮ ಕುತೂಹಲವನ್ನು ತಣಿಸಲಿದೆ:

ಕಾರಣ #1

ಕಾರಣ #1

ವಿಮಾನದ ಸಮತೋಲನಕ್ಕೆ ಎರಡು ಶಕ್ತಿಗಳು ಅಗತ್ಯ. ಒಂದು ಗುರುತ್ವ ಶಕ್ತಿ, ಎರಡನೆಯದು ಮುನ್ನುಗ್ಗುವ ಶಕ್ತಿ. ಬರ್ನೋಲಿಯ ಸಿದ್ಧಾಂತದ ಪ್ರಕಾರ ವಿಮಾನ ಮುನ್ನುಗ್ಗುವ ಭರದಲ್ಲಿ ರೆಕ್ಕೆಗಳ ಕೆಳಭಾಗದ ಗಾಳಿ ಸಂಕುಚಿತಗೊಂಡು ಮೇಲ್ಭಾಗದ ಗಾಳಿ ವಿಕಸನಗೊಳ್ಳುವ ಮೂಲಕ ವಿಮಾನ ಗಾಳಿಯಲ್ಲಿ ಮೇಲೇರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಾರಣ #1

ಕಾರಣ #1

ಆದರೆ ಮೇಲೇರುವಾಗ ಮತ್ತು ಕೆಳಕ್ಕಿಳಿಯುವಾಗ ಇಡಿಯ ವಿಮಾನ ನೆಲಕ್ಕೆ ಸಮಾನಾಂತರವಾಗಿರದೇ ಇಳಿ ಜಾರಾಗಿರುತ್ತದೆ. ಈ ಸಮಯದಲ್ಲಿ ಶೌಚಾಲಯದಲ್ಲಿದ್ದವರು ಜಾರಿ ಬೀಳಬಹುದು. ಹಿಡಿದುಕೊಳ್ಳಲು ಒಂದು ಹಿಡಿ ಬಿಟ್ಟರೆ ಬೇರೇನೂ ಆಧಾರವಿಲ್ಲದ ಕಾರಣ ವ್ಯಕ್ತಿಯ ಭಾರವೇ ಅವರಿಗೆ ಬಿದ್ದು ಗಾಯಗೊಳ್ಳಲು, ಮೂಳೆ ಮುರಿತಕ್ಕೂ ಕಾರಣವಾಗಬಹುದು.

ಕಾರಣ #2

ಕಾರಣ #2

ಶೌಚಾಲಯದಲ್ಲಿ ಸೀಟ್ ಬೆಲ್ಟ್ ಇರುವುದಿಲ್ಲ. ಅಲ್ಲದೇ ಶೌಚಾಲಯದಲ್ಲಿರುವ ಇತರ ವಸ್ತುಗಳು ಅಂದರೆ ಕಮೋಡ್, ಕೈತೊಳೆಯುವ ಬೋಗುಣಿ ಇತ್ಯಾದಿಗಳ ಕೋನಗಳು ಅಲುಗಾಟದ ಸಮಯದಲ್ಲಿ ಶೌಚಾಲಯದಲ್ಲಿದ್ದ ವ್ಯಕ್ತಿಗೆ ಅಪಾಯವನ್ನುಂಟುಮಾಡಬಹುದು. ಆರೋಹಣದ ಸಮಯದಲ್ಲಿ ಇಳಿಜಾರಾಗುವ ಮೂಲಕ ಜಾರಿ ಆಯಕಟ್ಟಿನ ಸ್ಥಳಕ್ಕೇನಾದರೂ ಈ ಮೂಲೆಗಳು ಬಡಿದರೆ ಆರೋಗ್ಯಕ್ಕೆ

ಧಕ್ಕೆಯಾಗಬಹುದು.

ಕಾರಣ #3

ಕಾರಣ #3

ಶೌಚಾಲಯದಲ್ಲಿ ಅಗತ್ಯವಾಗಿ ನೀರು, ವಿದ್ಯುತ್, ಟಾಯ್ಲೆಟ್ ಪೇಪರ್, ಕೈ ತೊಳೆಯುವ ಸೋಪು ಮೊದಲಾದವೆಲ್ಲಾ ಇರುತ್ತವೆ. ವಿಮಾನದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದಾಗ ಬೆಂಕಿ ಹತ್ತಿಕೊಳ್ಳುವ ಸಂಭವ ಅತಿ ಹೆಚ್ಚಿರುವ ಸ್ಥಳವೆಂದರೆ ಶೌಚಾಲಯ. ಆದ್ದರಿಂದ ಯಾವುದೇ ಪ್ರಮಾದಕ್ಕೆ ಆಸ್ಪದ ನೀಡದಿರಲು ಈ ಸಮಯಗಳಲ್ಲಿ ಶೌಚಾಲಯದ ಬಳಕೆಯನ್ನು ನಿರ್ಬಂಧಿಸಲಾಗುತ್ತದೆ.

ಕಾರಣ #4

ಕಾರಣ #4

ಶೌಚಾಲಯಕ್ಕೆ ಒಂದೇ ಚಿಕ್ಕ ಬಾಗಿಲಿದ್ದು ಒಂದು ವೇಳೆ ಆರೋಹಣ ಅಥವಾ ಅವರೋಹಣದ ಸಮಯದಲ್ಲಿ ಯಾವುದೋ ಎಡವಟ್ಟಿನಿಂದ ಈ ಬಾಗಿಲು ಬಿಗಿಯಾಗಿಬಿಟ್ಟರೆ ಒಳಗಿನ ವ್ಯಕ್ತಿ ಅಸಹಾಯಕನಾಗುತ್ತಾನೆ. ಕೆಲವು ತುರ್ತು ಪರಿಸ್ಥಿತಿಗಳಲ್ಲಿ ಇಲ್ಲಿನ ಗಾಳಿ ನಿಂತು ಹೋದರೆ ಪ್ರಾಣಕ್ಕೂ ಅಪಾಯವಾಗಬಹುದು.

ಕಾರಣ #5

ಕಾರಣ #5

ಆರೋಹಣ ಅಥವಾ ಅವರೋಹಣದ ಸಮಯದಲ್ಲಿ ಯಾವುದೋ ತೊಂದರೆಗೆ ಒಳಗಾಗಿ ಬಾಗಿಲನ್ನು ಬಲವಂತವಾಗಿ ತೆರೆಯಬೇಕಾಗಿ ಬಂದಾಗ ಒಳಗಿದ್ದ ವ್ಯಕ್ತಿ ತನ್ನ ಬಟ್ಟೆಗಳನ್ನು ಸಡಿಲಿಸಿದ್ದರೆ ಇದಕ್ಕಿಂತ ಮುಜುಗರಕ್ಕೀಡಾಗುವ ಸಂದರ್ಭ ಇನ್ನೊಂದಿರಲಾರದು.

ಕಾರಣ #6

ಕಾರಣ #6

ವಿಮಾನದ ಪ್ರಯಾಣಿಕರು ವಿಮಾನದ ಎಲ್ಲಾ ಕಟ್ಟಳೆಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದು ಸುರಕ್ಷತೆಯ ಕಾರಣದಿಂದ ಅನಿವಾರ್ಯವೂ ಆಗಿದೆ. ಆರೋಹಣ ಅವರೋಹಣದ ಸಮಯದಲ್ಲಿ ಶೌಚಾಲಯಗಳನ್ನು ಬಳಸದಿರುವುದು ವಿಮಾನದ ಕಟ್ಟಳೆಗಳಲ್ಲಿ ಸ್ಪಷ್ಟವಾಗಿ ನಮೂದಿಸಿದ್ದು ಇದನ್ನು ಪಾಲಿಸುವುದು ಪ್ರತಿ ಪ್ರಯಾಣಿಕರ ಕರ್ತವ್ಯವಾಗಿದೆ.

ಕಾರಣ #7

ಕಾರಣ #7

ಕೆಲವೊಮ್ಮೆ ಆರೋಹಣ ಅಥವಾ ಅವರೋಹಣದ ಸಮಯದಲ್ಲಿ ವಿಮಾನ ಧಿಡೀರನೇ ಸೆಳೆತಕ್ಕೆ ಒಳಗಾಗಬಹುದು. ಈ ಸೆಳೆತವನ್ನು ಸೀಟ್ ಬೆಲ್ಟ್ ಕಟ್ಟಿದ್ದರೆ ಅಪಾಯವಿಲ್ಲ. ಇಲ್ಲದಿದ್ದರೆ ಕುರ್ಚಿಯಲ್ಲಿ ಕುಳಿತಿದ್ದವರು ಮುಗ್ಗರಿಸಿ ಬೀಳುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಾರಣ #7

ಕಾರಣ #7

ಶೌಚಾಲಯದಲ್ಲಿ ಕುಳಿತಿರುವಾಗ ಸೀಟ್ ಬೆಲ್ಟ್ ಇಲ್ಲದ ಕಾರಣ ಇಂತಹ ಸೆಳೆತದ ಸಮಯದಲ್ಲಿ ಮುಗ್ಗರಿಸಿ ಹಲ್ಲು, ಮೂಗು ಕಣ್ಣುಗಳಂತಹ ಮುಖ್ಯ ಅಂಗಗಳಿಗೆ ಹಾನಿಯಾಗುವ ಸಂಭವವಿದೆ.

ಕಾರಣ #7

ಕಾರಣ #7

ಆದ್ದರಿಂದ ವಿಮಾನ ತನ್ನ ನಿಗದಿತ ಎತ್ತರಕ್ಕೇರಿ ಸ್ಥಿತಗೊಂಡ ಬಳಿಕ ವಿಮಾನದ ಕಪ್ತಾನ ಶೌಚಾಲಯ ಬಳಸಲು ನಿರ್ದೇಶಿಸುವವರೆಗೂ ತಮ್ಮ ಆಸನದಲ್ಲಿ ಕುಳಿತುಕೊಂಡು ಹೊರಗಿನ ಮೋಡಗಳನ್ನು ನೋಡುತ್ತಿರುವುದೇ ಕ್ಷೇಮ..!

English summary

Reasons Not To Use Toilets During Landing/Takeoff

While you travel in an aeroplane there are certain rules that you need to follow. From fastening your seat belts while traveling to not using the washroom, there are various rules which come into action and play a very important role in our safety. Therefore, read on to know more about the interesting reasons as to why you should not visit washrooms when on a flight, especially during landing and takeoff.
X
Desktop Bottom Promotion