Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಮಾಷೆಯ ಸಂಗತಿ: 'ನಾವೇ ಬೇರೆ, ನಮ್ಮ ಸ್ಟೈಲ್‌ಯೇ ಬೇರೆ!
ಭಾರತ ವಿವಿಧತೆಯಲ್ಲಿ ಏಕತೆಯಿರುವ ದೇಶ, ವೈವಿಧ್ಯಮಯ ದೇಶ, ಸುಂದರ ದೇಶ, ಧಾರ್ಮಿಕ ಸಹಿಷ್ಣುತೆಯಿರುವ ದೇಶ, ಇತ್ಯಾದಿ ಇತ್ಯಾದಿ. ಆದರೆ ಭಾರತದಲ್ಲಿ ಇನ್ನೂ ಇದೆ, ಮತ್ತಷ್ಟು ಇದೆ, ಮಗದಷ್ಟು ಇದೆ. ನೋಡಿದರೆ ತಕ್ಷಣಕ್ಕೆ ನಗು ತರಿಸುವಂತಹ, ಮತ್ತೆ ಮತ್ತೆ ನೋಡಬೇಕೆನಿಸುವ, ಸಾಕಪ್ಪಾ ಇನ್ನು ಜನ್ಮದಲ್ಲಿ ಇಂತಹ ದೃಶ್ಯವನ್ನು ಮತ್ತೆ ನೋಡಬಾರದೆನ್ನಿಸುವ ಹಲವಾರು ದೃಶ್ಯಗಳು ನಮಗೆ ಕಾಣಿಸುತ್ತಿರುತ್ತವೆ! ಬದಲಾಗದ ದೇಶ; ನೋಡಿ ಸ್ವಾಮಿ ನಾವು ಇರೋದೇ ಹೀಗೆ!
ಇಲ್ಲಿ ನಾವು ನಿಮಗೆ ತೋರಿಸುತ್ತಿರುವ ಚಿತ್ರಗಳು ಭಾರತದ ಶುದ್ಧ ದೇಸಿ ಚಿತ್ರಗಳು. ಇವನ್ನು ನೋಡಿದರೆ ನಿಮಗೆ ಭಾರತದ ಒಂದು ಕೋನದ ಪರಿಚಯ ದೊರೆಯುತ್ತದೆ. ನಮ್ಮವರು ಎಷ್ಟು ಗಂಭೀರರೋ, ಅಷ್ಟೇ ವಿನೋದಾತ್ಮಕ ಪ್ರವೃತ್ತಿಯುಳ್ಳವರು ಎಂದು ಇದರಿಂದ ಬಿಂಬಿತವಾಗುತ್ತದೆ. ಬನ್ನಿ ತಡ ಮಾಡದೆ ಆ ಅದ್ಭುತ ಚಿತ್ರಗಳು ಏನು ತೋರಿಸುತ್ತವೆ ಎಂದು ನೋಡಿಕೊಂಡು ಬರೋಣ...

ಪಾಪ ಆ ವಧು
ಪ್ರಾಣ ಸ್ನೇಹಿತರು ಎಂದರೆ ಇವರೇ ನೋಡಿ, ನವವಧುವನ್ನು ಸಹ ಪಕ್ಕಕ್ಕೆ ತಳ್ಳಿ ತಮ್ಮ ಸ್ನೇಹಿತನ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ!!! Image courtesy

ಯಾಮಾರಿದರೆ ಅಷ್ಟೇ!
ಎಂತಹ ಪ್ರಸಿದ್ಧ ಬ್ರ್ಯಾಂಡ್ ಆದರೂ, ಅದಕ್ಕೆ ಭಾರತೀಯ ಪೈಪೋಟೀ ಇರುತ್ತದೆ. ಈ ಹೋಟೆಲಿನಂತಹದು. ಯಾಮಾರಿದರೆ ಅದು ನಿಮ್ಮ ಜವಾಬ್ದಾರಿ! Image courtesy

ನಾವು ಏನು ಬೇಕಾದರು ಸಾಗಿಸುತ್ತೇವೆ
ಹೆಸರಿಗೆ ಅದು ದ್ವಿಚಕ್ರ ವಾಹನ, ನಮ್ಮ ಪಾಲಿಗೆ ಅದು ಲಾರಿಗಿಂತ ಕಮ್ಮಿಯಲ್ಲ ಬಾಸು, ಇನ್ನೂ ನಿಮಗೆ ಸಂಶಯವೇ! Image courtesy

ಇಂತಹ ಸಲೂನ್‌ಗಳು ನಮ್ಮ ದೇಶದಲ್ಲಿ ಮಾತ್ರ
ದೊಡ್ಡ ಊರಲ್ಲಿ 10 ಸಲೂನ್ ಇದ್ದರೂ, ಹೆಚ್ಚಿನವುಗಳಲ್ಲಿ ಇಂತಹ ಕಾಗುಣಿತ, ವ್ಯಾಕರಣ ದೋಷಗಳನ್ನು ನೀವು ನೋಡಿರಬಹುದು. ಬೇಕಾದರೆ ಒಮ್ಮೆ ಪ್ರಯತ್ನಿಸಿ. Image courtesy

ಮಕ್ಕಳನ್ನು ನೋಡಿಕೊಳ್ಳುವುದು ಹೀಗೆ
ಮಗು-ಹೆಂಡತಿ ಇಬ್ಬರಲ್ಲಿ ಯಾರು ಮುಖ್ಯ, ಎರಡನೆಯದಕ್ಕೆ ನನ್ನ ಪ್ರಾಮುಖ್ಯತೆ ಎನ್ನುತ್ತಿದ್ದಾರೆ ಇಲ್ಲಿನ ನಮ್ಮ ಅಮ್ಮಾವ್ರ ಗಂಡ! ಪಾಪ ಆ ಪಾಪುವಿನ ಗತಿ ನೀವೇ ಊಹಿಸಿ! Image courtesy

ಲಿಫ್ಟ್ ಕೋತಿಗೆ
ಮಂಗನಿಂದ ಮಾನವ, ಎಂದು ನಂಬುವವರು ನಾವು. ಕೋತಿಗೂ ಲಿಫ್ಟ್ ಕೊಟ್ಟರೆ ತಪ್ಪೇನು. Image courtesy

ತಮಾಷೆಯ ಬೋರ್ಡ್‍ಗಳು
ನಿಮಗೆ ಎಚ್ಚರಿಸಿದರೆ ನೀವು ಕೇಳುವುದಿಲ್ಲ. ಅದಕ್ಕಾಗಿ ಈ ಬಗೆಯ ತಮಾಷೆಯ ಬೋರ್ಡ್‌ಗಳು ಅಲ್ಲಲ್ಲಿ ನೇತಾಡುತ್ತಿರುತ್ತವೆ. Image courtesy



Click it and Unblock the Notifications
