For Quick Alerts
ALLOW NOTIFICATIONS  
For Daily Alerts

  ಅಚ್ಚರಿ, ಕುತೂಹಲ ಕೆರಳಿಸುವ ಮನೋವೈಜ್ಞಾನಿಕ ಸಂಗತಿಗಳು

  By Manu
  |

  ನಾವು ಕೆಲವೊಂದು ಸಂಗತಿಗಳನ್ನು ಸಾಮಾನ್ಯ ವಿಚಾರಗಳು ಎಂದು ಉದಾಸೀನ ಮಾಡಿರುತ್ತೇವೆ. ಆದರೆ ಅದರಲ್ಲಿ ಅಸಾಮಾನ್ಯ ಅಂಶಗಳು ಇರುತ್ತವೆ. ನಮಗೆ ಇನ್ನೂ ಸರಿಯಾಗಿ ಗೊತ್ತಿಲ್ಲದ ಕೆಲವೊಂದು ಕ್ಷೇತ್ರಗಳಲ್ಲಿ ಮನೋವಿಜ್ಞಾನವು ಒಂದು. ಏಕೆಂದರೆ ಪ್ರತಿನಿತ್ಯ ಇಲ್ಲಿ ಒಂದು ಹೊಸ ವಿಚಾರ ಅನ್ವೇಷಣೆಗೆ ಒಳಪಡುತ್ತಾ ಇರುತ್ತದೆ. ಹಿಂದಿನ ಫಲಿತಾಂಶಗಳು ಇಲ್ಲಿ ಪರಿಷ್ಕರಿಸಲ್ಪಡುತ್ತಾ ಇರುತ್ತವೆ.

  ಮನೋವಿಜ್ಞಾನವು, ಮನಸ್ಸಿನ ವಿಜ್ಞಾನವಾಗಿರುತ್ತದೆ. ಇಲ್ಲಿ ಮನಸ್ಸು ಮತ್ತು ದೇಹಕ್ಕೂ ಇರುವ ಸಂಬಂಧಗಳು ವಿಶ್ಲೇಷಣೆಗೆ ಒಳಪಡುತ್ತಾ ಇರುತ್ತವೆ. ಪ್ರಸಿದ್ಧ ಚಿಂತಕ ಜೇಮ್ಸ್ ಅಲೆನ್ ಹೇಳಿದಂತೆ " ನೀವು ಏನು ಎಂಬುದು, ನಿಮ್ಮ ಆಲೋಚನೆಗಳನ್ನು ಅವಲಂಬಿಸಿರುತ್ತದೆ", ಎಂಬ ಮಾತು ನಮ್ಮ ಈ ಲೇಖನವನ್ನು ಸಂಕ್ಷಿಪ್ತವಾಗಿ ಮತ್ತು ಅರ್ಥಬದ್ಧವಾಗಿ ವಿವರಿಸುತ್ತದೆ. ಬನ್ನಿ ಮನೋವಿಜ್ಞಾನದ ಕುರಿತಾದ ಕೆಲವೊಂದು ಆಶ್ಚರ್ಯಕರ ವಿಚಾರಗಳನ್ನು ತಿಳಿದುಕೊಂಡು ಬರೋಣ...

  ಸಂಗತಿ#1

  ಸಂಗತಿ#1

  ಒಬ್ಬ ವ್ಯಕ್ತಿಯ ಮೇಲೆ ಮೂರು ದಿನಕ್ಕೂ ಅಧಿಕ ಕಾಲ ಕೋಪ ಮಾಡಿಕೊಂಡು ಇರಲಾಗುವುದಿಲ್ಲವಂತೆ. ಒಂದು ವೇಳೆ ನೀವು ಮೂರಕ್ಕೂ ಹೆಚ್ಚು ದಿನ ಕೋಪಿಸಿಕೊಂಡರೆ, ನೀವಿಬ್ಬರೂ ಪ್ರೀತಿಯಲ್ಲಿರಲಿಲ್ಲ ಎಂದೇ ಅರ್ಥ.

  ಸಂಗತಿ#2

  ಸಂಗತಿ#2

  ನೀವು ಪ್ರೀತಿಸುವ ವ್ಯಕ್ತಿಯ ನೋವನ್ನು ನೀವು ಅವರ ಕಣ್ಣಿನಲ್ಲಿ ಕಾಣುತ್ತೀರಿ. ಅವರು ಇಡೀ ಪ್ರಪಂಚವನ್ನು ತಮ್ಮ ಕೃತಕ ನಗೆಯಿಂದ ಯಾಮಾರಿಸಿದರು ನೀವು ಮಾತ್ರ ಅದನ್ನು ಗ್ರಹಿಸಿರುತ್ತೀರಿ.

  ಸಂಗತಿ#3

  ಸಂಗತಿ#3

  ಮೆದುಳು ಪುರುಷ ಮತ್ತು ಮಹಿಳೆ ಮೆದುಳು ಎಂದು ವಿಭಾಗಿಸಲ್ಪಟ್ಟಿರುತ್ತದೆ ಎಂಬ ಒಂದು ಮೂಢನಂಬಿಕೆ ಇರುತ್ತದೆ. ಆದರೆ ಹಾಗೆ ಬೇರ್ಪಟ್ಟಿದೆ ಎಂಬುದೆಲ್ಲ ಸುಳ್ಳು.

  ಸಂಗತಿ#4

  ಸಂಗತಿ#4

  ಚಿಕ್ಕ ವಯಸ್ಸಿನಲ್ಲೇ ಹೆಣ್ಣು ಮಕ್ಕಳು ತಮ್ಮ ವಯಸ್ಸಿನ ಗಂಡು ಮಕ್ಕಳಿಗಿಂತ ಬೇಗ ಮಾತನಾಡುವುದನ್ನು ಮತ್ತು ವಾಕ್ಯ ರಚನೆಯನ್ನು ಕಲಿಯಲು ಆರಂಭಿಸುತ್ತಾರೆ. ಅದಕ್ಕಾಗಿಯೇ ಅವರು ಗಂಡು ಮಕ್ಕಳಿಗಿಂತ ಹೆಚ್ಚು ಮಾತನಾಡುತ್ತಾರೆ.

  ಸಂಗತಿ#5

  ಸಂಗತಿ#5

  ಕೈ ಕುಲುಕುವುದು ಮತ್ತು ಒಂದು ಆತ್ಮೀಯ ಆಲಿಂಗನವು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ನಿಮ್ಮನ್ನು ಆರೋಗ್ಯವಾಗಿ ಇರಿಸುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಸಾಭೀತು ಮಾಡಿ.

  ಸಂಗತಿ#6

  ಸಂಗತಿ#6

  ಮುತ್ತು ಕೊಡುವುದು, ಬಾಳೆ ಹಣ್ಣು ಅಥವಾ ಚಾಕೋಲೆಟ್ ತಿನ್ನುವುದು ಮತ್ತು ಚ್ಯೂಯಿಂಗ್ ಗಮ್ ಅಗಿಯುವುದು ಇವೆಲ್ಲವೂ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ. ನಿಜ ಅಲ್ಲವೇ!

  ಸಂಗತಿ#7

  ಸಂಗತಿ#7

  ನಾವು ಹುಟ್ಟಿದಾಗಿನಿಂದ ಸಾಯುವವರೆಗೆ ನಮ್ಮ ಕಣ್ಣುಗಳು ಒಂದೇ ಗಾತ್ರದಲ್ಲಿರುತ್ತವೆ. ಒಮ್ಮೆ ಆಲೋಚಿಸಿ ಅವುಗಳೇನಾದರು ಬೆಳೆಯುತ್ತಿದ್ದಲ್ಲಿ, ನಾವು ಎಷ್ಟು ಭಯಂಕರವಾಗಿ ಕಾಣುತ್ತಿದ್ದೆವು!

  ಸಂಗತಿ#8

  ಸಂಗತಿ#8

  ಶಕ್ತಿಶಾಲಿ ವ್ಯಕ್ತಿಗಳಿಗೆ ನೋವುಗಳು ಭಾದಿಸುವುದಿಲ್ಲ ಎಂದು ನೀವು ಭಾವಿಸಿರಬಹುದು. ಇಲ್ಲ ಅವರಿಗು ನೋವಾಗುತ್ತದೆ, ಆದರೆ ಅದಕ್ಕಾಗಿ ನಿರಂತರವಾಗಿ ಆಲೋಚಿಸುವುದು ಸರಿಯಲ್ಲ ಎಂದು ಅವರು ಅರಿತಿರುತ್ತಾರೆ.

  ಸಂಗತಿ#9

  ಸಂಗತಿ#9

  ಸ್ನೇಹಿತರನ್ನು ಹೊಂದಿಲ್ಲದಿದ್ದರೆ ನೀವು ಸಾಯುತ್ತಿರಾಂತೆ. ಅದು ಹೇಗೆ ಅಂದಿರಾ? ಒಂದು ಇಡೀ ಸಿಗರೇಟ್ ಪ್ಯಾಕ್ ಅನ್ನು ಸೇದುವ ಮೂಲಕ, ಅದಕ್ಕಾಗಿಯಾದರು ಸ್ನೇಹಿತರನ್ನು ಇಟ್ಟುಕೊಳ್ಳಿ, ನೀವು ಬದುಕುವುದಕ್ಕಾಗಿ.

  ಸಂಗತಿ#10

  ಸಂಗತಿ#10

  ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮತ್ತೊಂದು ಮಾರ್ಗವೆಂದರೆ ಅದು ಹಾಡು ಹಾಡುವ ಮೂಲಕ. ಹೌದು ತಮಾಷೆಯಾದರು ಸತ್ಯ, ಹಾಡು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ಸಹ ಹತೋಟೀಯಲ್ಲಿಡುತ್ತದೆ ಮತ್ತು ಮೂಡ್ ಅನ್ನು ಸುಧಾರಿಸುತ್ತದೆ.

   

  English summary

  Psychological facts that will blow your mind

  Here, in this article, we've shared the list of a few amazing psychological facts about our brain. We're sure these facts will blow your mind off and appreciate the creation of God. Find out more about these interesting facts that will make you wonder how amazingly our brain works. Read on to know more.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more