Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಚ್ಚರ! ಜಗತ್ತಿನ ಈ ಸ್ಥಳಗಳಿಗೆ ಯಾರಿಗೂ ಪ್ರವೇಶವಿಲ್ಲ
ಪ್ರತಿ ದೇಶದಲ್ಲಿಯೂ ಅತಿಗಣ್ಯ ವ್ಯಕ್ತಿಗಳಿರುವ ಕಟ್ಟಡ ಅಥವಾ ರಕ್ಷಣಾ ವ್ಯವಸ್ಥೆಯ ಕಟ್ಟಡಗಳಿಗೆ ಪ್ರವೇಶ ಪಡೆಯಲು ಜನಸಾಮಾನ್ಯರಿಗೆ ಸಾಧ್ಯವಿಲ್ಲ. ಏಕೆಂದರೆ ಸುರಕ್ಷತೆಯ ವಿಷಯವಾಗಿ ವಿಶೇಷ ಅನುಮತಿಯಿಲ್ಲದೇ ಪ್ರವೇಶ ಸಾಧ್ಯವೇ ಇಲ್ಲ. ಉದಾಹರಣೆಗೆ ರಾಷ್ಟ್ರಪತಿ ಭವನ. ಆದರೆ ಕೆಲವು ಸ್ಥಳಗಳು ಈ ನಿಯಮಗಳಿಗೆ ಹೊರತಾಗಿದ್ದು ಯಾರಿಗೂ ಅನುಮತಿ ನೀಡಲಾಗುವುದಿಲ್ಲ. ದ್ವೀಪಗಳ ಹಿಂದಿನ ನಿಗೂಢ ರಹಸ್ಯ-ಅನುಭವ ಮಾತ್ರ ಭಯಾನಕ!
ಜಗತ್ತಿನಲ್ಲಿ ಇಂತಹ ಹಲವಾರು ಸ್ಥಳಗಳಿದ್ದು ಹೆಚ್ಚಿನವುಗಳ ಬಗ್ಗೆ ಯಾವುದೋ ಅಗೋಚರ ಕಾರಣಕ್ಕಾಗಿ ಮಾಹಿತಿಯನ್ನು ಗುಪ್ತವಾಗಿಯೇ ಇಡಲಾಗಿದೆ. ಆದರೆ ಕುತೂಹಲ ಎಂಬುದು ಮನುಷ್ಯರಿಗೆ ಬಂದ ಹುಟ್ಟುಗುಣವಾಗಿದ್ದು ಕೆಲವರು ಈ ರಹಸ್ಯ ಸ್ಥಳಗಳನ್ನು ಸಂದರ್ಶಿಸಲು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಕೆಲವು ಪ್ರಮುಖ ಸ್ಥಳಗಳು ಬ್ರಿಟನ್ನಿನಲ್ಲಿದ್ದು ಇದನ್ನು ಸಂದರ್ಶಿಸಲು ವಿಶೇಷ ಅನುಮತಿ ಪಡೆದ ಸಂಶೋಧಕರಿಗೆ ಮಾತ್ರ ಸಾಧ್ಯ. ನೆನಪಿರಲಿ, ಈ ಸ್ಥಳಕ್ಕೆ ಬ್ರಿಟನ್ನಿನ ರಾಜ ಮನೆತನದ ಸದಸ್ಯರಿಗೂ ನಿಷೇಧವಿದೆ. ಬನ್ನಿ, ಇಂತಹ ಕೆಲವು ಸ್ಥಳಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯೋಣ:

ಅಂಡಮಾನಿನ ನಾರ್ಥ್ ಸೆಂಟಿನಲ್ ದ್ವೀಪ
ಬಂಗಾಳ ಕೊಲ್ಲಿಯಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಗಳಲ್ಲಿರುವ ನೂರಾರು ದ್ವೀಪಗಳಲ್ಲೊಂದಾದ ನಾರ್ಥ್ ಸೆಂಟಿನಲ್ ದ್ವೀಪ ಕೇವಲ ಇಪ್ಪತ್ತೆಂಟು ಚದರ ಕಿ.ಮೀ. ವಿಸ್ತೀರ್ಣದ ಪುಟ್ಟ ದ್ವೀಪವಾಗಿದೆ. ಸುತ್ತಲೂ ಮೊಣಕಾಲಿನಷ್ಟು ಆಳವಿರುವ ಹವಳದ ಪ್ರವಾಳ ಅಥವಾ ಕೋರಾಲ್ ರೀಫ್ (coral reef) ಸುತ್ತುವರೆದಿದೆ. ಸಾಗರ ವಿಜ್ಞಾನಿಗಳ ಪಾಲಿಗೆ ಇದು ಸಂಶೋಧನೆಗೆ ಅತ್ಯಂತ ಪ್ರಶಸ್ತ ಸ್ಥಳವಾಗಿದ್ದರೂ ಈ ದ್ವೀಪದಲ್ಲಿರುವ ಮೂಲನಿವಾಸಿಗಳ ಕಾರಣ ಈ ದ್ವೀಪಕ್ಕೆ ಸರ್ಕಾರ ಭೇಟಿಯನ್ನು ನಿಷೇಧಿಸಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
Image courtesy - www.tripoto.com

ಅಂಡಮಾನಿನ ನಾರ್ಥ್ ಸೆಂಟಿನಲ್ ದ್ವೀಪ
ಈ ಮೂಲನಿವಾಸಿಗಳು ನಾಗರಿಕತೆಯನ್ನು ದ್ವೇಷಿಸುವ ಜನರಾಗಿದ್ದು ತಮ್ಮ ದ್ವೀಪಕ್ಕೆ ಯಾರನ್ನೂ ಬರಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಪ್ರಾಯಶಃ ಈ ಜನರು ಇಂದು ಭೂಮಿಯಲ್ಲಿ ಉಳಿದಿರುವ ಕೆಲವೇ ಮೂಲನಿವಾಸಿಗಳಲ್ಲಿ ಒಬ್ಬರಾಗಿರಬಹುದು ಎಂದು ನಂಬಲಾಗಿದೆ. ಈ ದ್ವೀಪಕ್ಕೆ ಭೇಟಿ ನೀಡುವವರನ್ನು ಅವರು ಅತಿಕ್ರಮಿಗಳೆಂದು ಪರಿಗಣಿಸಿ ಬಾಣ ಹೂಡಿ ಕೊಲ್ಲಲು ಯತ್ನಿಸುತ್ತಾರೆ.
Image courtesy - www.tripoto.com

ಅಂಡಮಾನಿನ ನಾರ್ಥ್ ಸೆಂಟಿನಲ್ ದ್ವೀಪ
1975ರಲ್ಲಿ ಕುತೂಹಲದಿಂದ ಈ ದ್ವೀಪಕ್ಕೆ ತನ್ನ ಕ್ಯಾಮೆರಾದೊಂದಿಗೆ ಭೇಟಿ ನೀಡಿದ ನ್ಯಾಶನಲ್ ಜಿಯೋಗ್ರಾಫಿಕ್ ಸೊಸೈಟಿಯ ಸಂಸ್ಥೆಯ ನಿರ್ದೇಶಕರೊಬ್ಬರನ್ನು ಈ ಮೂಲ ನಿವಾಸಿಗಳು ಬಾಣ ಹೂಡಿ ಹಿಮ್ಮೆಟ್ಟಿಸಿದ್ದರು. ಈ ಬಾಣ ಅವರ ತೊಡೆಗೆ ತೂರಿ ಪ್ರಾಣಾಪಾಯವನ್ನುಂಟುಮಾಡಿತ್ತು. ಇಂತಹ ಹಲವು ಪ್ರಕರಣಗಳಾದ ಬಳಿಕ 1996ರಲ್ಲಿ ಭಾರತ ಸರ್ಕಾರ ಈ ದ್ವೀಪಕ್ಕೆ ಎಲ್ಲರಿಗೂ ಪ್ರವೇಶ ನಿರ್ಬಂಧಿಸಿದೆ.
Image courtesy- www.tripoto.com

ಫ್ರಾನ್ಸ್ ನಲ್ಲಿರುವ ಲಾಸ್ಕಾಸ್ಕ್ ಗುಹೆಗಳು (Lascaux Caves)
ದಕ್ಷಿಣ ಫ್ರಾನ್ಸ್ ನಲ್ಲಿರುವ ಈ ಗುಹೆಗಳಲ್ಲಿ ಶಿಲಾಯುಗದ ಕಾಲದ ಗುಹಾಚಿತ್ರಗಳು ದೊರಕಿವೆ. ಪ್ರಾಕ್ತನಶಾಸ್ತ್ರಜ್ಞರ ಪ್ರಕಾರ ಇವು ಇಪ್ಪತ್ತು ಸಾವಿರ ವರ್ಷಗಳಿಗೂ ಹಿಂದಿನವು. ಇವುಗಳಲ್ಲಿ ಹೆಚ್ಚಿನವು ಪ್ರಾಣಿಗಳ ಚಿತ್ರಗಳಾಗಿವೆ. ಸೆಪ್ಟೆಂಬರ್ 12, 1940ರಂದು ಫ್ರಾನ್ಸಿನ ಮಾರ್ಸೆಲ್ ರ್‍ಯಾವಿಡಾಟ್ ಎಂಬ ಯುವಕ ಈ ಗುಹೆಗಳ ಪ್ರವೇಶದ್ವಾರವನ್ನು ಕಂಡುಹಿಡಿದ.
Image courtesy wikipedia.org

ಫ್ರಾನ್ಸ್ ನಲ್ಲಿರುವ ಲಾಸ್ಕಾಸ್ಕ್ ಗುಹೆಗಳು (Lascaux Caves)
ಇದರೊಳಗೆ ಏನಿರಬಹುದು ಎಂಬ ಕುತೂಹಲವನ್ನು ತಾಳಲಾರದೇ ಮನೆಗೆ ಹಿಂದಿರುಗಿದ ಬಳಿಕ ತನ್ನ ಇನ್ನೂ ಮೂವರು ಸ್ನೇಹಿತರೊಂದಿಗೆ ಈ ಸ್ಥಳಕ್ಕೆ ತಾವೇ ತಯಾರಿಸಿದ ತೆಪ್ಪವೊಂದರ ಮೇಲೆ ಆಗಮಿಸಿದ. ಟಾರ್ಚ್ ಬೆಳಗಿಸಿ ಗುಹೆಯನ್ನು ಪ್ರವೇಶಿಸಿದ ಈ ತರುಣರು ಒಳಗಿನ ಗೋಡೆಗಳ ಮೇಲೆಲ್ಲಾ ಪುರಾತನ ಚಿತ್ರಗಳಿದ್ದುದನ್ನು ಕಂಡು ದಂಗಾದರು. ಹೆಚ್ಚಿನವು ಪ್ರಾಣಿಗಳ ವಿವಿಧ ಭಂಗಿಗಳ ಚಿತ್ರಗಳಾಗಿದ್ದವು.
wikipedia.org

ಫ್ರಾನ್ಸ್ ನಲ್ಲಿರುವ ಲಾಸ್ಕಾಸ್ಕ್ ಗುಹೆಗಳು (Lascaux Caves)
ಬಳಿಕ ಹಿಂದಿರುಗಿದ ಈ ತರುಣರು ತಮ್ಮ ಊರಿನ ಸ್ಥಳೀಯ ಅಧಿಕಾರಿಗಳಿಗೆ ಈ ವಿಷಯ ತಿಳಿಸಿದರು. ಬಳಿಕ ಹಲವು ಇತಿಹಾಸಕಾರರು ಮತ್ತು ಪ್ರಾಕ್ತನಶಾಸ್ತ್ರಜ್ಞರು ಈ ಸ್ಥಳವನ್ನು ಸಂದರ್ಶಿಸಿದ್ದಾರೆ. ಬಳಿಕ, 1948ರಲ್ಲಿ ಇತರ ಕುತೂಹಲಿ ಸಾರ್ವಜನಿಕರಿಗೂ ಈ ಗುಹೆಯನ್ನು ಸಂದರ್ಶಿಸಲು ಅವಕಾಶ ಕಲ್ಪಿಸಲಾಯಿತು. ಈ ಅವಕಾಶವನ್ನು ಬಳಸಿಕೊಂಡ ಜನಸ್ತೋಮ ಭಾರೀ ಸಂಖ್ಯೆಯಲ್ಲಿ ಗುಹೆಗಳಿಗೆ ಧಾವಿಸಿದರು. ಆದರೆ ಗುಹೆಯೊಳಗೆ ಜನರ ನಿಃಶ್ವಾಸದ ಗಾಳಿ ಹೊರಹೋಗಲು ಯಾವುದೇ ದಾರಿ ಇಲ್ಲದ ಕಾರಣ ಗುಹೆಯೊಳಕ್ಕೆ ಇಂಗಾಲದ ಡೈ ಆಕ್ಸೈಡ್ ಅನಿಲದ ಸಾಂದ್ರತೆ ಹೆಚ್ಚುತ್ತಾ ಹೋಗಿತ್ತು. ಇದು ಗುಹೆಗಳ ಚಿತ್ರಗಳನ್ನು ಕರಗಿಸತೊಡಗಿತು.

ಫ್ರಾನ್ಸ್ ನಲ್ಲಿರುವ ಲಾಸ್ಕಾಸ್ಕ್ ಗುಹೆಗಳು (Lascaux Caves)
ಮೊದಮೊದಲು ಇದಕ್ಕೆ ಕಾರಣ ಗೊತ್ತಾಗದಿದ್ದರೂ ಬಳಿಕ ವಿಜ್ಞಾನಿಗಳು ಇದಕ್ಕೆ ಸರಿಯಾದ ಕಾರಣವನ್ನು ಕಂಡುಕೊಂಡರು. ಇದಕ್ಕೆ ಮನುಷ್ಯರ ನಿಃಶ್ವಾಸದ ಇಂಗಾಲದ ಡೈ ಆಕ್ಸೈಡ್ ಕಾರಣ ಎಂದು ಗೊತ್ತಾದ ಬಳಿಕ ಇನ್ನಷ್ಟು ಹಾಳಾಗುವುದನ್ನು ತಡೆಯಲು 1963ರಲ್ಲಿ ಈ ಗುಹೆಯನ್ನು ವಿಶ್ವದ ಪಾರಂಪರಿಕಾ ಸ್ಥಳ ಎಂದು ಯುನೆಸ್ಕೋ ಘೋಷಿಸಿ ಸಂದರ್ಶಕರಿಗೆ ಇಲ್ಲಿ ಪ್ರವೇಶವನ್ನು ನಿರಾಕರಿಸಿತು. ಈಗ ಈ ಗುಹೆಗೆ ಕೇವಲ ವಿಶೇಷ ಅನುಮತಿ ಪಡೆದ ವಿಜ್ಞಾನಿ ಮತ್ತು ಪ್ರಾಕ್ತನಶಾಸ್ತ್ರಜ್ಞರಿಗೆ ಮಾತ್ರ ವಿಶೇಷ ಸಲಕರಣೆಗಳ ಜೊತೆಗೆ ಪ್ರವೇಶ ಸಾಧ್ಯ. ಇನ್ನುಳಿದಂತೆ ಜನಸಾಮಾನ್ಯರಿಗೆ ಪ್ರವೇಶ ನಿಷಿದ್ಧವಾಗಿದೆ.

ಮಾಸ್ಕೋ ನಗರದ ಮೆಟ್ರೋ-2
ರಷ್ಯಾದ ರಾಜಧಾನಿ ಮಾಸ್ಕೋ ನಗರದ ತಳದಲ್ಲಿ ರಹಸ್ಯವಾದ ಮೆಟ್ರೋ ರೈಲಿನ ಸುರಂಗವೊಂದಿದೆ. ಇದು ಯಾವಾಗ ನಿರ್ಮಿಸಲಾಯಿತು ಅಥವಾ ನಿರ್ಮಿಸಿದ ಬಳಿಕ ಏಕೆ ಕಾರ್ಯಗತಗೊಳ್ಳಲಿಲ್ಲ ಎಂಬೆಲ್ಲಾ ಪ್ರಶ್ನೆಗಳಿಗೆ ಇಂದಿಗೂ ಸೂಕ್ತ ಉತ್ತರವಿಲ್ಲ. ಇದನ್ನು ಸಂದರ್ಶಿಸಿದವರು ಮೆಟ್ರೋ ಸುರಂಗಕ್ಕೆ ಬಳಸಿದ ಸಾಮಾಗ್ರಿಗಳನ್ನು ಪರಿಶೀಲಿಸಿ ಇದು ಜೋಸೆಫ್ ಸ್ಟಾಲಿನ್ ರವರ ಕಾಲದಲ್ಲಿ ನಿರ್ಮಿಸಿದ್ದಿರಬಹುದು ಎಂದು ಅಂದಾಜಿಸುತ್ತಾರೆ. ಇದಕ್ಕೆ D-6 ಎಂಬ ಗುಪ್ತನಾಮ ಅಥವಾ ಸಂಕೇತನಾಮವಿದ್ದು ಕ್ರೆಮ್ಲಿನ್ ನಗರ ಮತ್ತು Federal Security Service ಅಥವಾ FSB ಸಂಸ್ಥೆಯ ಮುಖ್ಯ ಕಟ್ಟಡಕ್ಕೆ ಸಂಪರ್ಕ ಕಲ್ಪಿಸುತ್ತದೆ.
jalopnik.com

ಮಾಸ್ಕೋ ನಗರದ ಮೆಟ್ರೋ-2
ಅಲ್ಲದೇ ಇನ್ನೊಂದು ದಾರಿ ಸರ್ಕಾರಿ ವಿಮಾನ ನಿಲ್ದಾಣ Vnukovo-2 ಹಾಗೂ ರಾಮೆನ್ಕಿ(Ramenki) ಎಂಬ ಪಟ್ಟಣದ ಬಳಿ ಇರುವ ಇನ್ನೊಂದು ರಹಸ್ಯಮಯ ನೆಲದಾಳದ ನಗರಕ್ಕೂ ಸಂಪರ್ಕ ಕಲ್ಪಿಸಿತ್ತು. ಅಲ್ಲದೇ ಇನ್ನೂ ಹಲವಾರು ಸರ್ಕಾರೀ ಪ್ರಮುಖ ಸ್ಥಳಗಳಿಗೂ ಸಾಗುತ್ತಿತ್ತು. 1994ರಲ್ಲಿ ಈ ಮಾರ್ಗದ ಪ್ರವೇಶದ್ವಾರವ ರಷ್ಯಾದ ಹವ್ಯಾಸಿ ತಂಡವೊಂದು ಅಕಸ್ಮಾತ್ತಾಗಿ ಕಂಡುಹಿಡಿಯಿತು. ಇದಕ್ಕೂ ಮುನ್ನ 1991ರಲ್ಲಿ ಅಮೇರಿಕಾದ ಗುಪ್ತಚರ ಇಲಾಖೆ ಈ ಸುರಂಗ ಮಾರ್ಗವಿರುವ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿತ್ತು.
jalopnik.com

ಮಾಸ್ಕೋ ನಗರದ ಮೆಟ್ರೋ-2
1992ರಲ್ಲಿ ರಷ್ಯಾದ ಪ್ರಮುಖ ಪತ್ರಿಕೆಯೂ ಈ ಬಗ್ಗೆ ಬರೆದ ಬಳಿಕ ರಷ್ಯಾದ ಭೂಗತ ಮಿಲಿಟರಿ ಅಧಿಕಾರಿಗಳೆಲ್ಲಾ ಒಬ್ಬೊಬ್ಬರಾಗಿ ಈ ಬಗ್ಗೆ ಕೆಲವು ಮಾಹಿತಿಗಳನ್ನು ನೀಡತೊಡಗಿದರು. ಸುಮಾರು ನಲವತ್ತು ವರ್ಷಗಳ ಕಾಲ ನಡೆದಿದ್ದ ರೈಲು ಕಾಮಗಾರಿ ಮುಗಿದು ಸುಮಾರು ನೂರು ವರ್ಷಗಳೇ ಆಗಿ ಹೋಗಿದ್ದರೂ ಸರ್ಕಾರಿ ರಹಸ್ಯವಾಗಿ ಇದನ್ನು ಗುಪ್ತವಾಗಿರಿಸಲಾಗಿತ್ತು. ಇಂದಿಗೂ ರಷ್ಯಾ ಸರ್ಕಾರ ಈ ರೈಲು ಸುರಂಗಕ್ಕೆ ಪ್ರವೇಶ ನೀಡುವುದಿರಲಿ, ಇದರ ಇರುವಿಕೆಯನ್ನೇ ಅಲ್ಲಗಳೆಯುತ್ತದೆ.

ಜಪಾನಿನ ಐಸೆ ಗ್ರಾಂಡ್ ಮಂದಿರ
ಜಪಾನ್ ದೇಶದ ಭೂಪಟವನ್ನು ಗಮನಿಸಿದರೆ ಇದರ ತೀರಪ್ರದೇಶದಲ್ಲಿ ಮಾತ್ರ ಜನವಾಸವಿದ್ದು ಉಳಿದ ಸ್ಥಳಗಳು ನಿರ್ಜನವಾಗಿವೆ. ಆದರೆ ನಡುನಡುವೆ ಸುಮಾರು ನೂರಕ್ಕೂ ಹೆಚ್ಚು ಮಂದಿರಗಳಿವೆ. ಅದರಲ್ಲಿ ಐಸೆ ಗ್ರಾಂಡ್ ಮಂದಿರ (The Ise Grand Shrine) ಅತ್ಯಂತ ಪವಿತ್ರ ಎಂದು ಭಾವಿಸಲಾಗಿದೆ.
en.wikipedia.org

ಜಪಾನಿನ ಐಸೆ ಗ್ರಾಂಡ್ ಮಂದಿರ
ಇದು ಸೂರ್ಯದೇವಿಗೆ (Amaterasu, the Sun goddess) ಮುಡಿಪಾದ ಮಂದಿರವಾಗಿದ್ದು ಇದು ಕ್ರಿ. ಪೂರ್ವ ನಾಲ್ಕನೆಯ ಇಸವಿಯಲ್ಲಿ ಕಟ್ಟಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಮಂದಿರಕ್ಕೆ ಕೇವಲ ಜಪಾನಿನ ರಾಜಮನೆತನದ ಅತ್ಯುನ್ನತ ಹುದ್ದೆ ಹೊಂದಿರುವ ವ್ಯಕ್ತಿಗಳು ಮತ್ತು ಮಂದಿರದ ಪೂಜಾರಿ ಅಥವಾ ಪೂಜಾರ್ತಿಯವರಿಗೆ ಮಾತ್ರ ಪ್ರವೇಶ ಸಾಧ್ಯ. ಇನ್ನುಳಿದಂತೆ ಜಗತ್ತಿನ ಬೇರೆ ಯಾರಿಗೂ ಈ ಹುಲ್ಲಿನ ಛಾವಣಿಯ ಮಂದಿರಕ್ಕೆ ಪ್ರವೇಶ ಸಾಧ್ಯವಿಲ್ಲ.
en.wikipedia.org

ಸೋಲೋಮಾನ್ ದ್ವೀಪಗಳ ಪೂರ್ವ ರೆನ್ನೆಲ್ ದ್ವೀಪ (East Rennell , Solomon Islands)
ನಮ್ಮ ಅಂಡಮಾನ್ ದ್ವೀಪಸಮೂಹದಂತೆಯೇ ಸೋಲೋಮಾನ್ ಐಲ್ಯಾಂಡ್ ಎಂಬ ದ್ವೀಪಸಮೂಹ ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿದ್ದು ನೂರಾರು ಚಿಕ್ಕ ಪುಟ್ಟ ದ್ವೀಪಗಳನ್ನು ಹೊಂದಿದೆ. ಇದರಲ್ಲೊಂದು ದ್ವೀಪವಾದ ಪೂರ್ವ ರೆನ್ನೆಲ್ ದ್ವೀಪವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿ ಪ್ರವೇಶ ನಿರ್ಭಂಧಿಸಿದೆ. ಏಕೆಂದರೆ ಈ ದ್ವೀಪದಲ್ಲಿ ನರಭಕ್ಷಕರಾದ ದೈತ್ಯ ಜನರು ವಾಸವಾಗಿದ್ದಾರೆ ಎಂಬ ಪ್ರಪೀತಿಯಿದ್ದು ಹೊರಗಿನವರು ಯಾರೇ ಬಂದರೂ ಅವರನ್ನು ಕೊಲೆಗೈದು ತಿನ್ನುತ್ತಾರೆ ಎಂದು ಮಾಹಿತಿಗಳಿಂದ ತಿಳಿದುಬಂದಿದೆ.
loveandbarley.com

ಬ್ರೆಜಿಲ್ ದೇಶದ ಹಾವುಗಳ ದ್ವೀಪ
ಬ್ರೆಜಿಲ್ ದೇಶದ ಸಾವೋ ಪಾವ್ಲೋ ತೀರದಿಂದ ಅನತಿ ದೂರದಲ್ಲಿರುವ Ilha da Queimada Grande ಎಂಬ ದ್ವೀಪ Snake Island ಅಥವಾ ಹಾವುಗಳ ದ್ವೀಪವೆಂದೇ ಪ್ರಸಿದ್ಧಿ ಪಡೆದಿದೆ. ಹೆಸರೇ ಸೂಚಿಸುವಂತೆ ಈ ದ್ವೀಪದಲ್ಲಿ ವಿಪರೀತ ಸಂಖ್ಯೆಯಲ್ಲಿ ಚಿನ್ನದ ಬಣ್ಣದ ಹಾವುಗಳು ಅಥವಾ Golden Lancehead Vipers (Bothrops insularis) ಹರಿದಾಡಿಕೊಂಡಿವೆ ಎಷ್ಟು ಎಂದರೆ ಪ್ರತಿ ಚದರ ಮೀಟರಿಗೆ ಒಂದರಷ್ಟು ಹೆಚ್ಚು!. ಈ ಹಾವುಗಳು ವಿಷಪೂರಿತವಾಗಿದ್ದು ದ್ವೀಪದ ಎಲ್ಲೆಡೆ ಕಾಣಬರುವ ಕಾರಣ ಈ ದ್ವೀಪಕ್ಕೆ ಕಾಲಿಡುವುದು ಪ್ರಾಣಕ್ಕೆ ಅಪಾಯಕರ.
Daily bhaskar

ಬ್ರೆಜಿಲ್ ದೇಶದ ಹಾವುಗಳ ದ್ವೀಪ
1909ರಲ್ಲಿ ಇಲ್ಲಿ ದೀಪಸ್ತಂಭವೊಂದನ್ನು ಸ್ಥಾಪಿಸಿ ಒಂದು ಕುಟುಂಬವನ್ನು ನಿರ್ವಹಣೆಗಾಗಿ ನಿಯೋಜಿಸಲಾಗಿತ್ತು. ಆದರೆ ಒಂದೇ ದಿನದಲ್ಲಿ ಇಲ್ಲಿ ವಾಸವಾಗಿರುವುದು ಎಷ್ಟು ಅಪಾಯಕರ ಎಂದು ತಿಳಿದು ತಕ್ಷಣ ವಾಪಸ್ ಕರೆಸಿಕೊಂಡು ಈ ದ್ವೀಪದಲ್ಲಿ ಮನುಷ್ಯರು ಹೋಗದಂತೆ ನಿರ್ಬಂಧ ವಿಧಿಸಲಾಗಿದೆ. ದೀಪಸ್ತಂಭವನ್ನು ಸ್ವಯಂಚಾಲಿತವಾಗಿಸಲಾಗಿದೆ. ಇಂದಿಗೂ ಈ ದ್ವೀಪಕ್ಕೆ ಕೇವಲ ಉರಗತಜ್ಞರು ಅಥವಾ ದೀಪಸ್ತಂಭದ ಉಸ್ತುವಾರಿ ಅಥವಾ ವಿವರವನ್ನು ಪಡೆಯುವವರು ಮಾತ್ರ ವಿಶೇಷ ಸಲಕರಣೆ ಮತ್ತು ಸುರಕ್ಷಾ ಸಾಧನಗೊಳೊಂದಿಗೆ ಭೇಟಿ ನೀಡುತ್ತಾರೆ. ಇದಕ್ಕೂ ಸರ್ಕಾರದ ವಿಶೇಷ ಅನುಮತಿ ಅಗತ್ಯ. ಇನ್ನುಳಿದಂತೆ ಜನಸಾಮಾನ್ಯರಿಗೆ ಈ ದ್ವೀಪಕ್ಕೆ ಪ್ರವೇಶವಿಲ್ಲ.



Click it and Unblock the Notifications









