For Quick Alerts
ALLOW NOTIFICATIONS  
For Daily Alerts

  ಅಪ್ರತಿಮ ಸಾಮರ್ಥ್ಯದ ವಿಶ್ವದ ಅಸಾಮಾನ್ಯ ವ್ಯಕ್ತಿಗಳು

  By
  |

  ಹಿಂದೆ ದೊಂಬರಾಟದವರು ಹಳ್ಳಿಗಳಲ್ಲಿ ನೀಡುವ ಚಿತ್ರ ವಿಚಿತ್ರ ಸರ್ಕಸ್ಸುಗಳನ್ನು ಕಂಡವರು ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತಾಗುತ್ತಿತ್ತು. ಏಕೆಂದರೆ ಜನಸಾಮಾನ್ಯರು ಮಾಡಲು ಸಾಧ್ಯವಿಲ್ಲದ ಕೆಲವು ಕೆಲಸಗಳನ್ನು ಇವರು ಮಾಡುತ್ತಿದ್ದರು. ಉದಾಹರಣೆಗೆ ತಲೆ ನುಗ್ಗಲು ಸಾಧ್ಯವಾಗುವಷ್ಟೇ ಅಗಲವಾದ ಲೋಹದ ಬಳೆಯಲ್ಲಿ ಇಡಿಯ ದೇಹ ನುಗ್ಗಿಸುವುದು. ಇವು ಕಣ್ಣಿಗೆ ಕಾಣುವ ಅಸಾಮರ್ಥ್ಯಗಳಾದರೆ ಕೆಲವರಲ್ಲಿರುವ ಸಾಮರ್ಥ್ಯಗಳನ್ನು ವಿವರಿಸಲು ಸಾಧ್ಯವಿಲ್ಲ.

  ನಮ್ಮ ನಡುವೆ ಇರುವ ಜನರಲ್ಲಿ ಕೆಲವರಲ್ಲಿ ಇಂತಹ ಅದ್ಭುತ ಸಾಮರ್ಥ್ಯಗಳಿವೆ. ಇವರು ಸುತ್ತಮುತ್ತಲಿನವರ ಗಮನವನ್ನು ಥಟ್ಟನೇ ಸೆಳೆಯುತ್ತಾರೆ. ಕೆಲವು ಸಾಮರ್ಥ್ಯಗಳು ಕೇವಲ ಕೇಳಲಿಕ್ಕೆ ನೋಡಲಿಕ್ಕೆ ಅದ್ಭುತವೇ ಹೊರತು ಇದರಿಂದ ಯಾರಿಗೇನೂ ಪ್ರಯೋಜನವಿಲ್ಲ. ಉದಾಹರಣೆಗೆ ಹಣೆಯಿಂದ ಮೊಳೆಯನ್ನು ಹೊಡೆಯುವ ಸಾಮರ್ಥ್ಯ.   ವಿಚಿತ್ರ ಅಂಗಗಳನ್ನು ಹೊಂದಿರುವ ಮಾನವ ಶರೀರಗಳು

  ಇನ್ನೂ ಕೆಲವು ಸಾಮರ್ಥ್ಯಗಳು ಅಸಾಮಾನ್ಯವಾಗಿದ್ದರೂ ನಿಜವಾಗಿಯೂ ಲೋಕ ಕಲ್ಯಾಣಕ್ಕಾಗಿ ಉಪಯೋಗಿಸಬಹುದಾಗಿವೆ. ಉದಾಹರಣೆಗೆ ದೇಹದೊಳಗಿನ ಅಂಗಗಳನ್ನು ನೋಡುವ ಎಕ್ಸ್ ರೇ ಸಾಮರ್ಥ್ಯ. ಇದರಿಂದ ಶಸ್ತ್ರಕ್ರಿಯೆಯ ಅಗತ್ಯವಿಲ್ಲದೇ ದೇಹದೊಳಗಿನ ತೊಂದರೆಗಳನ್ನು ತಿಳಿಸುವ ಮೂಲಕ ರೋಗವನ್ನು ಪತ್ತೆ ಹಚ್ಚಬಹುದು. ಇಂತಹ ವ್ಯಕ್ತಿಗಳು ವಿಶ್ವದ ಎಲ್ಲೆಡೆ ಇದ್ದರೂ ಪ್ರಚಾರದ ಕೊರತೆಯಿಂದ ಇವರ ಸಾಮರ್ಥ್ಯದ ಬಗ್ಗೆ ಹೆಚ್ಚಿನವರಿಗೆ ಅರಿವೇ ಇಲ್ಲದಾಗಿತ್ತು. ಆದರೆ ಇಂದು ಅಂತರ್ಜಾಲದ ಮೂಲಕ ಮಾಹಿತಿ ಎಲ್ಲೆಡೆ ಹರಿಯುತ್ತಿರುವಾಗ ಇಂತಹ ವ್ಯಕ್ತಿಗಳ ಬಗ್ಗೆಯೂ ಹಲವು ಮಾಹಿತಿಗಳು ದೊರಕುತ್ತಿವೆ. ಇಂತಹ ಕೆಲವು ವ್ಯಕ್ತಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು ಈ ಕೆಳಗೆ ನಿಡಿರುವ ಮಾಹಿತಿಯನ್ನು ಓದಿಕೊಳ್ಳಿ..

  People With Incredible Abilities
                         

  ಡೇನಿಯಲ್ ಟ್ಯಾಮೆಟ್

  ನಮ್ಮಲ್ಲಿ ಹೆಚ್ಚಿನವರಿಗೆ ಹತ್ತು ಹನ್ನೆರಡಕ್ಕಿಂತ ಮುಂದಿನ ಮಗ್ಗಿ ಮರೆತೇ ಹೋಗಿದೆ. ಆದರೆ ಕೆಲವು ವ್ಯಕ್ತಿಗಳಲ್ಲಿ ಗಣಿತದ ವಿಷಯಗಳು ಅತ್ಯಮೋಘವಾಗಿ ನೆನಪಿನಲ್ಲಿ ಉಳಿಯುತ್ತವೆ. ಬ್ರಿಟನ್ನಿನ ಡೇನಿಯಲ್ ಟ್ಯಾಮೆಟ್ ಎಂಬುವರಲ್ಲಿ ಇಂತಹ ಒಂದು ಅದ್ಭುತ ಶಕ್ತಿಯಿದೆ. ಸುಲಭ ಮಗ್ಗಿಗಳೆಲ್ಲಾ ಇವರ ಪಾಲಿಗೆ ಸಾಸಿವೆ ಸಮಾನ. ಪೈ ಅಥವಾ 22/7 ನ ನಿಖರತೆಯನ್ನು ಬಿಂದುವಿನ ಮುಂದೆ 22,514ಳಷ್ಟು ಅಂಕೆಗಳವರೆಗೆ ಇವರು ನೆನಪಿಟ್ಟುಕೊಂಡು ಸತತ ಐದು ಗಂಟೆಯವರೆಗೆ ಹೇಳಬಲ್ಲರು. ಅಷ್ಟೇ ಅಲ್ಲ, ಇವರು ಹನ್ನೊಂದು ವಿವಿಧ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು.

  People With Incredible Abilities

  ಬೆನ್ ಅಂಡರ್ವುಡ್

  ಕ್ಯಾನ್ಸರ್ ನಿಂದ ಕೇವಲ ಮೂರು ವರ್ಷದವರಿದ್ದಾಗ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದರೂ ಇವರು ತಮ್ಮ ಅಂತರ್ದೃಷ್ಟಿಯನ್ನು ಮಾತ್ರ ಕಳೆದುಕೊಂಡಿರಲಿಲ್ಲ. ದೇವರು ಒಂದು ಅಂಗವನ್ನು ಕಿತ್ತುಕೊಂಡರೆ ಇನ್ನೊಂದು ಅಂಗವನ್ನು ಬಲಪಡಿಸುತ್ತಾನಂತೆ. ಕೈಯಿಲ್ಲದವರು ಕೈಯಿಂದ ಮಾಡಬಹುದಾದ ಕೆಲಸಗಳನ್ನು ಕಾಲುಗಳಿಂದ ಮಾಡುವುದನ್ನು ಗಮನಿಸಬಹುದು. ಬೆನ್ ರಿಗೂ ದೇವರು ಈ ಶಕ್ತಿಯನ್ನು ಕಿವಿಗಳಿಗೆ ನೀಡಿದ್ದಾನೆ. ಇವರು ಬಾಯಿಯಿಂದ ಕೆಲವು ವಿಶಿಷ್ಟ ಸದ್ದುಗಳನ್ನು ಮೂಡಿಸಿ ಇದರ ಪ್ರತಿಧ್ವನಿಯನ್ನು ಗ್ರಹಿಸಿ ಮುಂದಿನ ವಸ್ತುಗಳು ಹೀಗೇ ಇರಬಹುದೆಂದು ಅಂದಾಜಿಸುವ ಅದ್ಭುತ ಸಾಮರ್ಥ್ಯವನ್ನು ಪಡೆದಿದ್ದಾರೆ. ಇದುವರೆಗೆ ಈ ಸಾಮರ್ಥ್ಯ ಕೇವಲ ಬಾವಲಿಗಳಲ್ಲಿತ್ತು. ಈ ಶಕ್ತಿಯ ಮೂಲಕ ಅವರು ತಮ್ಮ ಹದಿನಾರನೇ ವಯಸ್ಸಿನಲ್ಲಿ ಕ್ಯಾನ್ಸರ್ ನ ಉಲ್ಬಣತೆಯಿಂದ ವಿಧಿವಶರಾಗುವವರೆಗೂ ಎಲ್ಲರಂತೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗಿತ್ತು. ದೂರದಿಂದ ನೋಡಿದವರು ಇವರಿಗೆ ಕಣ್ಣುಗಳಿಲ್ಲ ಎಂದು ಹೇಳುವುದೇ ಕಷ್ಟವಾಗಿತ್ತು.

  People With Incredible Abilities

  ಡೇನಿಯಲ್ ಬ್ರೌನಿಂಗ್ ಸ್ಮಿಥ್

  ಈ ಹೆಸರನ್ನು ಹೇಳಿದರೆ ಹೆಚ್ಚಿನವರಿಗೆ ಪರಿಚಯವಾಗದಿದ್ದರೂ ರಬ್ಬರ್ ಬಾಯ್ ಎಂದಾಕ್ಷಣ ಎಲ್ಲರೂ ಇವರನ್ನು ಗುರುತಿಸುತ್ತಾರೆ. ಏಕೆಂದರೆ ತಮ್ಮ ಮೈಮೂಳೆಗಳನ್ನೆಲ್ಲಾ ರಬ್ಬರಿನಂತೆ ಬಗ್ಗಿಸಿ ಚಿತ್ರವಿಚಿತ್ರವಾದ ಭಂಗಿಗಳನ್ನು ಮೂಡಿಸುವುದು ಅಚ್ಚರಿ ತರಿಸುತ್ತದೆ. ಇವರು ತಮ್ಮ ಮೈಯನ್ನು ಕುಗ್ಗಿಸಿ ಜಂತಿಗಳಿಲ್ಲದ ಟೆನಿಸ್ ರಾಕೆಟ್ ನಲ್ಲಿ ತೂರಿಸಬಲ್ಲರು. ಈ ರೀತಿ ಮೈಮೂಳೆಗಳನ್ನು ತಿರಿಚುವವರನ್ನು contortionist ಎಂದು ಕರೆಯುತ್ತಾರೆ. ಕನ್ನಡದಲ್ಲಿ ಇವರನ್ನು ಅಷ್ಟಾವಕ್ರ ಎಂದು ಕರೆಯಬಹುದೇನೋ. ಹೌದಾದರೆ ಜಗತ್ತಿನ ಅತ್ಯಂತ ಶ್ರೇಷ್ಠ ಅಷ್ಟಾವಕ್ರನ ಪಟ್ಟ ಇವರಿಗೇ ಸಿಗಬೇಕು.

   

  People With Incredible Abilities

  ಹೂ ಕ್ವಿಯಾಂಗ್ (Hu Qiong)

  ನಮ್ಮ ಚರ್ಮ ಸುಲಭವಾಗಿ ಹರಿಯುವಂತಹದ್ದಾಗಿದ್ದು ಕೊಂಚವೇ ಹರಿತವಿರುವ ಯಾವುದೇ ಉಪಕರಣದ ಕೊಂಚವೇ ಒತ್ತಡ ಸಾಕು. ಚೂಪಾದ ಮೊಳೆ, ಮುಳ್ಳುಗಳಿಗಂತೂ ಒತ್ತಡವೇ ಬೇಡ, ಚಿಕ್ಕದಾಗಿ ಚುಚ್ಚಿದರೂ ತೂತಾಗಿ ರಕ್ತ ಹರಿಯತೊಡಗುತ್ತದೆ. ಆದರೆ ಚೀನಾದ ಹೂ ಕ್ವಿಯಾಂಗ್ ಎಂಬುವರ ಚರ್ಮ ಲೋಹದ ಪಟ್ಟಿಯಿಂದ ಮಾಡಿದ್ದೇನೋ ಎಂಬ ಅನುಮಾನ ಮೂಡುತ್ತದೆ. ಇವರಿಗೆ ಚಿಕ್ಕ ಪುಟ್ಟ ಮೊಳೆ, ಸೂಜಿಗಳೆಲ್ಲಾ ಲೆಕ್ಕವೇ ಇಲ್ಲ. ಇವರ ಚರ್ಮವನ್ನು ಈ ಚಿಕ್ಕಪುಟ್ಟ ವಸ್ತುಗಳು ಏನೂ ಮಾಡುವುದಿಲ್ಲ. ಹಾಗಾದರೆ ಇವರ ಚರ್ಮ ಎಷ್ಟು ಗಟ್ಟಿ ಎಂದು ತಿಳಿದುಕೊಳ್ಳಲು ಗೋಡೆಗೆ ತೂತು ಕೊರೆಯುವ ಡ್ರಿಲ್ಲಿಂಗ್ ಮೆಶೀನ್ ಅನ್ನೇ ತಮ್ಮ ತಲೆಗೆ, ಹೊಟ್ಟೆಗೆ, ಕುತ್ತಿಗೆಗೆ ಹಿಡಿದುಕೊಂಡು ಪ್ರಯತ್ನಿಸಿ ಸಫಲರಾಗಿದ್ದಾರೆ. ಅಷ್ಟೇ ಅಲ್ಲ, ವೇಗವಾಗಿ ತಿರುಗುತ್ತಿರುವ ಎಲೆಕ್ಟ್ರಿಕ್ ಗರಗಸವನ್ನೂ ಇವರು ಬರಿಗೈಯಿಂದ ಹಿಡಿದು ನಿಲ್ಲಿಸಿದ್ದಾರೆ.

  ಡೀನ್ ಕಾರ್ನಾಜ಼ೆಸ್

  ಭಾರತದ ಬುಧಿಯಾ ಸಿಂಗ್ ಎಂಬ ಬಾಲಕನಿಗೆ ಶಿಕ್ಷೆ ನೀಡಲು ಮೈದಾನಕ್ಕೆ ಸುತ್ತು ಬರಲು ಹೇಳಿದ ಪರಿಣಾಮವಾಗಿ ಆತನಲ್ಲಿದ್ದ ಅದ್ಭುತ ಶಕ್ತಿಯ ಪರಿಚಯವಾಯಿತು. ಈತ ಸುಸ್ತಾಗದೇ ಸತತವಾಗಿ ಅರವತ್ತೈದು ಕಿಮೀ ಓಡಬಲ್ಲ. ಇಂತಹದ್ದೇ ಶಕ್ತಿಯನ್ನು ಡೀನ್ ಕಾರ್ನಾಜ಼ೆಸ್ ಎಂಬುವರೂ ಹೊಂದಿದ್ದು ಇವರು ಮುನ್ನೂರೈವತ್ತು ಮೈಲಿ ಅಥವಾ 563 ಕಿಮೀ ದೂರವನ್ನು ಸತತವಾಗಿ ಓಡುತ್ತಾ ಕ್ರಮಿಸಿದ್ದಾರೆ.

  People With Incredible Abilities
   

  ಕಿಮ್ ಪೀಕ್

  ಬುದ್ದಿಮತ್ತೆಯನ್ನು ಅಳೆಯುವ ಐ ಕ್ಯೂ ಟೆಸ್ಟ್ ಎಂಬ ಪರೀಕ್ಷೆಯಲ್ಲಿ ಇವರು 87% ಅಂಕಗಳನ್ನು ಪಡೆದಿದ್ದರೂ ಅಮೇರಿಕಾದ ಕಿಮ್ ಪೀಕ್ ರ ಸ್ಮರಣಾ ಶಕ್ತಿಯನ್ನು ಮಾತ್ರ ಅಳೆಯುವ ಯಾವುದೇ ಸಾಧನ ಇದುವರೆಗೆ ಲಭ್ಯವಿಲ್ಲ. ಏಕೆಂದರೆ ಇವರು ಅತ್ಯಂತ ಶೀಘ್ರವಾಗಿ ನೋಡಿದ್ದನ್ನು ಸ್ಮರಣೆಯಲ್ಲಿಡುವ ಶಕ್ತಿಯನ್ನು ಹೊಂದಿದ್ದು ಇದರ ಮೂಲಕ ಏಕಕಾಲದಲ್ಲಿ ಒಂದು ಪುಸ್ತಕದ ಎರಡು ಪುಟಗಳನ್ನು ಓದಬಲ್ಲವರಾಗಿದ್ದಾರೆ. ಇಡಿಯ ಕುರಾನ್ ಅನ್ನು ಹತ್ತೇ ನಿಮಿಷದಲ್ಲಿ ಬಾಯಿಪಾಠ ಮಾಡುತ್ತಾರೆ, ಇವರ ಸ್ಮರಣೆಯಲ್ಲಿ ಹನ್ನೆರಡು ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಆದರೆ ಈ ಅದ್ಭುತ ಶಕ್ತಿಯ ವಕ್ತಿ ತಮ್ಮ 58ನೇ ವಯಸ್ಸಿನಲ್ಲಿ ವಿಧಿವಶರಾದರು. ಇವರ ಅಸಾಮಾನ್ಯ ಶಕ್ತಿಯನ್ನು ಆಧರಿಸಿ "ರೇನ್ ಮ್ಯಾನ್" ಎಂಬ ಚಲನಚಿತ್ರವನ್ನೂ ನಿರ್ಮಿಸಲಾಗಿದೆ.

  People With Incredible Abilities
   

  ನಟಾಶಾ ಡೆಮ್ಕಿನಾ

  ರಷ್ಯಾದ ನಟಾಶಾ ಡೆಮ್ಕಿನಾ ಎಂಬ ಯುವತಿಗೆ ತನ್ನ ಕಣ್ಣುಗಳಿಂದ ದೇಹದ ಒಳಗೂ ನೋಡಬಲ್ಲ ಎಕ್ಸ್ ರೇ ಕಣ್ಣುಗಳ ಸಾಮರ್ಥ್ಯವಿದೆ. ಇದರಿಂದ ಅವರು ಮಾನವ ದೇಹದ ಒಳಗಣ ಅಂಗಗಳನ್ನು ನೋಡಬಲ್ಲವರಾಗಿದ್ದು ಇವುಗಳಲ್ಲಿ ಯಾವುದಾದರೂ ತೊಂದರೆ ಇದ್ದರೆ ಗುರುತಿಸಬಲ್ಲವರಾಗಿದ್ದಾರೆ. ದೇಹದೊಳಗೆ ಇರುವ ಗಡ್ಡೆ, ವ್ರಣ, ಕ್ಯಾನ್ಸರ್ ಮೊದಲಾದವುಗಳನ್ನು ಇವರು ಗುರುತಿಸಿ ಇದರ ಚಿಕಿತ್ಸೆಗೆ ನೆರವಾಗಬಲ್ಲರು. ಇವರ ಈ ಶಕ್ತಿಯನ್ನು ರಷ್ಯಾ, ಅಮೇರಿಕಾ, ಜಪಾನ್ ಮೊದಲಾದ ದೇಶಗಳು ಇವರ ದೃಷ್ಟಿಯ ಫಲವನ್ನು ವೈದ್ಯಕೀಯ ಉದ್ದೇಶಕ್ಕಾಗಿ ಬಳಸಿಕೊಂಡಿವೆ.

  English summary

  People With Incredible Abilities

  We live in a world where you come across many unique things. These unique and bizarre things grab a lot of attention. There are more chances of these things getting viral, as they leave the world in an amused state. Here, in this article, we will be sharing some of the stories of interesting people who have taken the internet by a storm. So, check and find out more about these interesting people with their super-amazing interesting abilities.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more