For Quick Alerts
ALLOW NOTIFICATIONS  
For Daily Alerts

  ಪ್ರಣಯದಾಟ ಇವರ ಪ್ರಾಣವನ್ನೇ ಬಲಿ ತೆಗೆದುಕೊಂಡಿತು!

  By Arshad
  |

  ದಂಪತಿಗಳ ನಡುವಣ ಬಾಂಧವ್ಯಕ್ಕೆ ಮಾನಸಿಕವಾದ ವಿಶ್ವಾಸ ಎಷ್ಟು ಅಗತ್ಯವೋ ದೈಹಿಕವಾದ ಸಾಮೀಪ್ಯವೂ ಅಷ್ಟೇ ಅಗತ್ಯ. ಎಲ್ಲಾ ಧರ್ಮಗಳಲ್ಲಿ ಪತಿ ಪತ್ನಿಯರ ಶಾರೀರಿದ ಸಂಬಂಧವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಪ್ರಣಯಕ್ರಿಯೆಯ ಮೂಲಕ ದಂಪತಿಗಳು ಒಬ್ಬರಿಗೊಬ್ಬರು ಹತ್ತಿರಾಗುವ, ಪರಸ್ಪರ ಗೌರವ ನೀಡುವ, ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

  ಆದರೆ ಈ ಕ್ರಿಯೆ ಆತ್ಮೀಯವಾದಷ್ಟೂ ಸರಾಗವೇ ಹೊರತು ಆತಂಕ, ದುಗುಡ, ಅವಸರ ಮೊದಲಾದವು ಅಪಾಯಕಾರಿಯಾಗಿವೆ. ಅಂತೆಯೇ ದಾಂಪತ್ಯದ ಹೊರಗಿನ ಸಂಬಂಧಗಳೆಲ್ಲವೂ ಒಂದು ರೀತಿ ಅಪಾಯಕಾರಿಯೇ ಆಗಿವೆ. ತಪ್ಪು ಮಾಡುತ್ತಿರುವ ಭಾವನೆ ಮನದಲ್ಲಿ ತುಂಬಿಕೊಂಡಿದ್ದು ಇದರಿಂದ ಅಪಘಾತಗಳೂ ಸಂಭವಿಸಬಹುದು.   ಅಚ್ಚರಿ ಜಗತ್ತು: ಸೆಕ್ಸ್ ವಿಷಯದಲ್ಲಿ, ಜಗತ್ತಿನ ವಿಚಿತ್ರ ಕಾನೂನು!

  ಕೆಲವು ಸಾವಿಗೂ ಕಾರಣವಾಗಬಹುದು. ಇಂದು ಇಂತಹ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಇವರಲ್ಲಿ ಕೆಲವರು ಅತಿ ಮುಜುಗರ ತರಿಸುವ ಸಂಧರ್ಭಗಳಲ್ಲಿ ಸಾವನ್ನಪ್ಪಿದ್ದರೆ ಕೆಲವು ಮಾತ್ರ ನಗು ಬರಿಸದೇ ಇರದು. ಕೆಲವರ ಪ್ರಯತ್ನ ಅಸಾಧ್ಯವಾದ ನಿಟ್ಟಿನಲ್ಲಿದ್ದರೆ ಕೆಲವು ಸಂದರ್ಭಗಳು ಎಚ್ಚರಿಕೆಯನ್ನೂ ನೀಡುತ್ತವೆ.

  ಈತನ ಸೌತೆಕಾಯಿ ಬಳಸುವ ಹುಮ್ಮಸ್ಸು ಪ್ರೇಯಸಿಯ ಉಸಿರನ್ನೇ ಕಟ್ಟಿತು

  ಈತನ ಸೌತೆಕಾಯಿ ಬಳಸುವ ಹುಮ್ಮಸ್ಸು ಪ್ರೇಯಸಿಯ ಉಸಿರನ್ನೇ ಕಟ್ಟಿತು

  ಪ್ರಣಯದಾಟದಲ್ಲಿ ಕೆಲವು ಉಪಕರಣಗಳನ್ನು ಬಳಸುವುದು ಸಹಜ. ಕೆಲವು ವಿಚಿತ್ರವಾಗಿದ್ದರೆ ಕೆಲವು ಅಪಾಯಕಾರಿಯಾಗಿವೆ. ನಲವತ್ತಾರು ವರ್ಷ ವಯಸ್ಸಿನ ಆಲಿವರ್ ಡಯೆಟ್ಮನ್ ಎಂಬ ವ್ಯಕ್ತಿ ತನ್ನ ಸಮವಯಸ್ಸಿನ ಪ್ರೇಯಸಿ ರಿಕಾ ವರ್ನಾ ಎಂಬುವರನ್ನು ಪ್ರಣಯದಾಟದ ಸಮಯದಲ್ಲಿ ಅಕಸ್ಮಿಕವಾಗಿ ಸಾವಿಗೀಡಾಗುವಂತೆ ಮಾಡಿದ್ದ. ಹೇಗೆಂದರೆ ಪ್ರಣಯದಾಟದಲ್ಲಿ ಬಳಸಲು ಸೌತೆಕಾಯಿಯನ್ನು ಆಕೆಯ ಬಾಯಿಗೆ ತುರುಕಿ ಗಂಟಲಿನಾಳಕ್ಕೆ ತಳ್ಳಿದ್ದ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಈತನ ಸೌತೆಕಾಯಿ ಬಳಸುವ ಹುಮ್ಮಸ್ಸು ಪ್ರೇಯಸಿಯ ಉಸಿರನ್ನೇ ಕಟ್ಟಿತು

  ಈತನ ಸೌತೆಕಾಯಿ ಬಳಸುವ ಹುಮ್ಮಸ್ಸು ಪ್ರೇಯಸಿಯ ಉಸಿರನ್ನೇ ಕಟ್ಟಿತು

  ಆಕೆ ಉಸಿರು ಕಟ್ಟಿ ತಕ್ಷಣವೇ ಪರಂಧಾಮಕ್ಕೆ ಹೋಗುವಂತಾಯಿತು. ಆದರೆ ಈತನನ್ನು ಬಂಧಿಸಿ ವಿಚಾರಿಸಿದ ನ್ಯಾಯಾಧೀಶರು ಇದನ್ನು ಅಕಸ್ಮಿಕ ಎಂದು ಒಪ್ಪಿಕೊಳ್ಳದೇ ನಿರ್ಲಕ್ಷ್ಯದಿಂದಾದ ನರಹತ್ಯೆ ಎಂದೇ ಪರಿಗಣಿಸಿ ಶಿಕ್ಷೆಯನ್ನು ವಿಧಿಸಿತ್ತು.

  ನೆಲ್ಸನ್ ರಾಕ್ ಫೆಲ್ಲರ್

  ನೆಲ್ಸನ್ ರಾಕ್ ಫೆಲ್ಲರ್

  ಅಮೇರಿಕಾದ ಪೂರ್ವ ಉಪಾಧ್ಯಕ್ಷ, ನಾಲ್ಕು ಬಾರಿ ಸಂಸ್ಥಾನವೊಂದರ ಗವರ್ನರ್ ಹಾಗೂ ಅಮೇರಿಕಾದ ರಾಜಕೀಯ ಗಣ್ಯರಲ್ಲಿ ಪ್ರಮುಖ, ಅತಿ ಶ್ರೀಮಂತ ವ್ಯಕ್ತಿಯಾದ ನೆಲ್ಸನ್ ರಾಕ್ ಫೆಲ್ಲರ್ ಸಹಾ ಇಂತಹ ಒಂದು ಅಪಘಾತದಲ್ಲಿ ತೀರಾ ಮುಜುಗರ ತರಿಸುವ ಸಂದರ್ಭದಲ್ಲಿ ಮರಣವನ್ನಪ್ಪಿದ್ದರು. ಎಪ್ಪತ್ತು ವರ್ಷದ ವಯಸ್ಸಿನಲ್ಲಿ ಇವರು ತಮ್ಮ ಸೆಕ್ರೆಟರಿಯೊಂದಿಗೆ ಪ್ರಣಯದಾಟದಲ್ಲಿದ್ದಾಗ ತೀವ್ರ ಹೃದಯಾಘಾತ ಸಂಭವಿಸಿ ಮರಣವನ್ನಪ್ಪಿದ್ದರು.

  Image courtesy

  ಪ್ರಣಯದಲ್ಲಿದ್ದ ಜೋಡಿಯ ಕೊಲೆ

  ಪ್ರಣಯದಲ್ಲಿದ್ದ ಜೋಡಿಯ ಕೊಲೆ

  25 ವರ್ಷ ವಯಸ್ಸಿನ ಶಕೂರ್ ಆರ್ಲಿನ್ ಮತ್ತು 32 ವರ್ಷ ವಯಸ್ಸಿನ ಲೀಸಾ ಸ್ಮಿತ್ ಎಂಬ ದಂಪತಿ ತಮ್ಮ ಎಸ್ ಯು.ವಿ. ವಾಹನವನ್ನು ಪಾರ್ಕ್ ಮಾಡಿ ಹಿಂಬದಿಯ ಆಸನದಲ್ಲಿ ನಗ್ನಾವಸ್ಥೆಯಲ್ಲಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಈ ಜೋಡಿಯ ಮೇಲೆ ಹಲವು ಬಾರಿ ಗುಂಡುಗಳನ್ನು ಹೊಡೆದು ಕೊಲೆ ಮಾಡಿ ಮಾಯವಾಗಿದ್ದ. ಪ್ರಣಯಿಗಳನ್ನು ಸಹಿಸದ ವಿಕೃತ ಮನಸ್ಸಿನ ವ್ಯಕ್ತಿಯಿಂದಾದ ಕೊಲೆ ಎಂದು ಈ ಪ್ರಕರಣವನ್ನು ಪರಿಗಣಿಸಲಾಯಿತು.

  Image courtesy

  ಅತ್ಯಾಚಾರದ ಪ್ರಯತ್ನದಲ್ಲಿ ಸತ್ತ ವ್ಯಕ್ತಿ

  ಅತ್ಯಾಚಾರದ ಪ್ರಯತ್ನದಲ್ಲಿ ಸತ್ತ ವ್ಯಕ್ತಿ

  ಅಮೇರಿಕಾದ ಟೆಕ್ಸಸ್ ರಾಜ್ಯದ ರಿವೋಲಿ ಎಂಬಲ್ಲಿ ಮನೆಗೆ ನುಗ್ಗಿ ಎಪ್ಪತ್ತೇಳು ವರ್ಷದ ವೃದ್ದೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ 53ವರ್ಷದ ಈ ಪಾನಮತ್ತ ವ್ಯಕ್ತಿ ಅತ್ಯಾಚಾರದ ಸಮಯದಲ್ಲಿ ತನ್ನ ಉಸಿರುಗಟ್ಟುತ್ತಿದೆ ಎಂದು ಹೇಳುತ್ತಾ ಅಲ್ಲೇ ಕುಸಿದು ಬಿದ್ದ. ಈ ಸಮಯವನ್ನು ಉಪಯೋಗಿಸಿ ತನ್ನ ಮನೆಯಿಂದ ಹೊರಬಂದ ಈ ವೃದ್ದೆ ತಕ್ಷಣ ಸುತ್ತಮುತ್ತಲಿನವರಿಗೆ ಸುದ್ದಿ ಮುಟ್ಟಿಸಿ ಪೋಲೀಸರನ್ನು ಕರೆಸಿ ನೋಡಿದಾಗ ಆತ ಆಗಲೇ ಸಾವನ್ನಪ್ಪಿಯಾಗಿತ್ತು. ಮರಣೋತ್ತರ ಪರೀಕ್ಷೆಯಿಂದ ಆತ ಹೃದಯಾಘಾತದಿಂದ ಮರಣ ಹೊಂದಿದ್ದ ಎಂದು ತಿಳಿದುಬಂದಿತ್ತು.

  Image courtesy

  ತನ್ನದೇ ದಾರ ಕುತ್ತಿಗೆಗೆ ಸುತ್ತಿಕೊಂಡು ಸತ್ತ ನಟ

  ತನ್ನದೇ ದಾರ ಕುತ್ತಿಗೆಗೆ ಸುತ್ತಿಕೊಂಡು ಸತ್ತ ನಟ

  ಪ್ರಣಯದಾಟದ ಸಮಯದಲ್ಲಿ ಕೆಲವರು ವಿಚಿತ್ರ ವಿಚಿತ್ರವಾದ ಕ್ರಮಗಳನ್ನು ಅನುಸರಿಸುವುದುಂಟು. ಎಪ್ಪತ್ತೆರಡು ವರ್ಷ ವಯಸ್ಸಿನ ಅಮೇರಿಕಾದ ಚಿತ್ರನಟ ಡೇವಿಡ್ ಕ್ಯಾರಾಡೈನ್ ಥಾಯ್ಲೆಂಡಿನ ಹೋಟೆಲ್ ಕೋಣೆಯಲ್ಲಿ ನಗ್ನಾವಸ್ಥೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದ. ಈ ಸ್ಥಿತಿ ಎಂದರೆ ತನ್ನ ಪುರುಷಾಂಗ ಮತ್ತು ಕುತ್ತಿಗೆಗೆ ದಾರವನ್ನು ಕಟ್ಟಿಕೊಂಡು ಸೆಳೆಯುವ ಯಾವುದೋ ಒಂದು ಕ್ರಮ. ಆದರೆ ಇದು ಅವರ ಜೀವಕ್ಕೇ ಮುಳುವಾಗಿ ಪರಿಣಮಿಸಿತ್ತು. ಈ ಸ್ಥಿತಿಯನ್ನು ವೈದ್ಯರು Autoerotic Asphyxiation ಎಂದು ಕರೆಯುತ್ತಾರೆ. ಇವರಿಗೆ ಐದು ಮದುವೆಯಾಗಿದ್ದು ಕಡೆಯ ಪತ್ನಿ ಆನ್ನೀ ಬಿಯರ್ಮನ್ ರವರು ಬಳಿಕ ಈ ಕ್ರಿಯೆ ಅವರ ಇಷ್ಟದ ಕ್ರಿಯೆಯಾಗಿತ್ತು ಎಂದು ಪ್ರತಿಕ್ರಿಯಿಸಿದ್ದರು.

  Image courtesy

  ಪ್ರಣಯದಾಟದಲ್ಲಿ ವಿದ್ಯುದಾಘಾತ

  ಪ್ರಣಯದಾಟದಲ್ಲಿ ವಿದ್ಯುದಾಘಾತ

  ಪ್ರಣಯದ ಸಮಯದಲ್ಲಿ ಪ್ರಿಯಕರನ ಸ್ಪರ್ಷ ವಿದ್ಯುತ್ ಆಘಾತದಂತೆ ತೋರುವುದೇನೋ ನಿಜ. ಆದರೆ ಕ್ರಿಸ್ಟೆನ್ ಟೇಲರ್ ಎಂಬ ಈ ಮಹಿಳೆಗೆ ಮಾತ್ರ ತನ್ನ ಪತಿಯೊಂದಿಗೆ ಕೂಡುವ ಸಮಯದಲ್ಲಿ ನಿಜವಾದ ವಿದ್ಯುತ್ ಆಘಾತವೇ ಎದುರಾಗಿತ್ತು. ಸಾಮಾನ್ಯವಾಗಿ ಈ ದಂಪತಿ ಪ್ರಣಯದ ಸಮಯದಲ್ಲಿ ಪರಸ್ಪರರಿಗೆ ಚಿಕ್ಕ ಚಿಕ್ಕ ವಿದ್ಯುತ್ ಆಘಾತ ನೀಡಿ ಈ ಸಮಯವನ್ನು ರೋಮಾಂಚನವಾಗಿಸುವುದು ಒಂದು ಅಭ್ಯಾಸವಾಗಿತ್ತು. ಆದರೆ ಕಡೆಯ ಸಂಸರ್ಗದಲ್ಲಿ ಈಕೆಯ ಪತಿ ಭಾರೀ ಆಘಾತ ನೀಡಿದ ಕಾರಣ ಆಕೆಯ ಪ್ರಾಣಕ್ಕೇ ಮುಳುವಾಯಿತು.

  ಅತಿಯಾದರೆ ವಯಾಗ್ರಾವೂ ವಿಷ

  ಅತಿಯಾದರೆ ವಯಾಗ್ರಾವೂ ವಿಷ

  ಕಾಮೋತ್ತೇಜಕ ಗುಳಿಗೆಗಳನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ಸೇವಿಸಬೇಕು ಎಂದು ಮಾತ್ರೆಗಳ ಪ್ಯಾಕೆಟ್ಟುಗಳ ಮೇಲೇ ಬರೆದಿರುತ್ತದೆ. ಆದರೆ ರಶ್ಯಾದ ಸರ್ಗೆಯಿ ಟುಗಾನೋವ್ ಎಂಬ ಈ ಮೆಕ್ಯಾನಿಕ್ ಗೆ ಇದನ್ನು ಓದುವ ವ್ಯವಧಾನವೇ ಇರಲಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಅತಿಯಾದರೆ ವಯಾಗ್ರಾವೂ ವಿಷ

  ಅತಿಯಾದರೆ ವಯಾಗ್ರಾವೂ ವಿಷ

  ಏಕೆಂದರೆ ಸತತ ಹನ್ನೆರಡು ಗಂಟೆಗಳವರೆಗೆ ಇಬ್ಬರು ಮಹಿಳೆಯರೊಂದಿಗೆ ಪ್ರಣಯದಾಟ ನಡೆಸಬೇಕು ಎಂದು ಈಗ ಪಂಥ ಕಟ್ಟಿದ್ದ. ಈ ಪಂಥವನ್ನು ಗೆಲ್ಲಲು ಆತ ಒಂದು ವಯಾಗ್ರಾ ಬಾಟಲಿಯಲ್ಲಿದ್ದ ಅಷ್ಟೂ ಗುಳಿಗೆಗಳನ್ನು ನೇರವಾಗಿ ಗಂಟಲಿಗಿಳಿಸಿದ್ದ. ಇದರ ಪರಿಣಾಮವಾಗಿ ಭಾರೀ ಹೃದಯಾಘಾತವಾಗಿತ್ತು. ಆದರೆ ತನ್ನ ಪಂಥವನ್ನು ಗೆದ್ದೇ ಆತ ಸತ್ತ.

   

  English summary

  People Who Died While Making Love!

  Here, in this article, we've shared the list of people who have died during the act of lovemaking or adultery. These are the cases in which people have died in the most embarrassing situations possible and their partners have had to face the guilt. Some of these cases can make you think how can anybody even think of trying out something so weird, while a few of these cases may make you giggle. So, read on to find out more about the people who died during a lovemaking session.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more