For Quick Alerts
ALLOW NOTIFICATIONS  
For Daily Alerts

ಪ್ರವಾಸಿಗರು ಸಿಕ್ಕಿ ಹಾಕಿಕೊಂಡ ಕ್ಷಣಗಳು, ಹೀಗೂ ಉಂಟೆ!

By Super
|

ಅದೇ ಊರು, ಅದೇ ಮನೆ, ಅದೇ ಬೀದಿ ನೋಡಿ ನೋಡಿ ಬೇಸರವಾದಾಗ ನಾವು ಪ್ರವಾಸ ಎಂದು ಹೋಗಿ ಬರುತ್ತೇವೆ. ಆದರೆ ಹಾಗೆ ಹೋದಾಗ ಅಲ್ಲಿ ನಾವು ಕೆಲವೊಂದು ಅದ್ಭುತಗಳನ್ನು ನೋಡುತ್ತೇವೆ. ಇನ್ನೂ ಕೆಲವೊಮ್ಮೆ ಕರ್ಮಕಾಂಡಗಳೆಂದು ಕರೆಯುವಂತಹ ಸಂದರ್ಭಗಳನ್ನು ಸಹ ಎದುರಿಸುತ್ತೇವೆ. ಹೋದ ಕಡೆ ಕ್ಯಾಮೆರಾ ಇಲ್ಲವಾದರೂ ಒಳ್ಳೆಯ ಮೊಬೈಲ್ ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ತೆಗೆದುಕೊಂಡು ಹೋಗುವುದು ಇತ್ತೀಚಿನ ದಿನಗಳ ವಾಡಿಕೆಯಾಗಿರುತ್ತದೆ.

ಇವುಗಳ ಮೂಲಕ ಅದ್ಭುತಗಳನ್ನು ಸೆರೆ ಹಿಡಿದವರು ಇದ್ದಾರೆ. ಬನ್ನಿ ಈ ಅಂಕಣದಲ್ಲಿ ಅಂತಹ ಅದ್ಭುತಗಳನ್ನು ಮತ್ತು ಅಚ್ಚರಿಗಳನ್ನು ನಿಮ್ಮ ಮುಂದೆ ಇಡುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಇಲ್ಲಿರುವ ಚಿತ್ರಗಳನ್ನು ಅಚಾನಕ್ಕಾಗಿ ಶೂಟ್ ಮಾಡಲಾಗಿರುವಂತಹದಾಗಿದೆ. ಅನಿರೀಕ್ಷಿತ ಘಟನೆಗಳು ನಡೆದಾಗ ಪ್ರವಾಸಿಗರು ತಮ್ಮ ಸಮಯ ಪ್ರಜ್ಞೆಯಿಂದ ತೆಗೆದ ಚಿತ್ರಗಳು ಇವು. ಜ್ವಾಲಾಮುಖಿಯ ಸ್ಫೋಟ, ಕಳ್ಳನ ಕೈಚಳಕ, ಇತ್ಯಾದಿ ಇತ್ಯಾದಿಗಳು ಕ್ಯಾಮೆರಾ ಕಣ್ಣಲ್ಲಿ ದಾಖಲಾಗಿವೆ! ಈ ಎಲ್ಲಾ ಚಿತ್ರಗಳು ಕ್ಷಣಾರ್ಧದಲ್ಲಿ ತೆಗೆಯಲ್ಪಟ್ಟವು ಬನ್ನಿ ಅವು ಯಾವುವು ಎಂದು ನೋಡೋಣ!

ಹೆಲ್ಮೆಟ್ ಕ್ಯಾಮೆರಾದಲ್ಲಿ ದಾಖಲಾದ ದರೋಡೆ

ಹೆಲ್ಮೆಟ್ ಕ್ಯಾಮೆರಾದಲ್ಲಿ ದಾಖಲಾದ ದರೋಡೆ

ನೀವು ಎಲ್ಲಾದರು ಪ್ರವಾಸ ಹೋದಾಗ ಯಾರಾದರು ನಿಮ್ಮನ್ನು ದರೋಡೆ ಮಾಡಿದರೆ ಹೇಗಿರುತ್ತದೆ? ನೆನೆಸಿಕೊಳ್ಳಲು ಸಹ ಅಸಹ್ಯವಾಗುತ್ತದಲ್ಲವೇ? ಹಾಗೆ ಆಯಿತು ಬ್ಯೂನಸ್ ಐರಿಸ್‌ನಲ್ಲಿ ಒಬ್ಬ ಪ್ರವಾಸಿ ಸೈಕ್ಲಿಂಗ್ ಮಾಡುವಾಗ ಒಬ್ಬ ದರೋಡೆಕೋರ ಬಂದು ಬ್ಯಾಕ್‌ಪ್ಯಾಕ್ ನೀಡುವಂತೆ ಒತ್ತಾಯಿಸಿದ. ಈ ಘಟನೆ ಆ ಪ್ರವಾಸಿ ಧರಿಸಿದ್ದ ಹೆಲ್ಮೆಟ್‌ನಲ್ಲಿದ್ದ ಕ್ಯಾಮೆರಾದಲ್ಲಿ ದಾಖಲಾಯಿತು. ಅದೃಷ್ಟವಶಾತ್ ಪ್ರವಾಸಿಯು ದರೋಡೆಕೋರನ ಗುಂಡಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ. ಅಲ್ಲದೆ ಆತನಿಗೆ ಒಬ್ಬ ಪೋಲಿಸ್ ಸಹ ಅದೇ ಬೀದಿಯಲ್ಲಿ ಕಾಣಿಸಿದ. Image courtesy

ಬಲಿಯನ್ನು ಹಿಂಬಾಲಿಸಿ ಬಂದ ಶಾರ್ಕ್!

ಬಲಿಯನ್ನು ಹಿಂಬಾಲಿಸಿ ಬಂದ ಶಾರ್ಕ್!

ಶಾರ್ಕ್ ಒಂದು ತನ್ನ ಬಲಿಯನ್ನು ಅಟ್ಟಿಸಿಕೊಂಡು ಬೀಚ್‌ವರೆಗೆ ಬಂದ ಚಿತ್ರ ಇದು. ಈ ಅದ್ಭುತ ಕ್ಷಣವನ್ನು ಇಟಾಲಿಯನ್ ಬೀಚಿನಲ್ಲಿ ಸೆರೆಹಿಡಿಯಲಾಯಿತು. ಆ ಮೀನು ಶಾರ್ಕ್‌ನಿಂದ ತಪ್ಪಿಸಿಕೊಳ್ಳಲು ಬೀಚ್ ತೀರಕ್ಕೆ ಹಾರಿದಾಗ, ವಿಧಿಯಿಲ್ಲದೆ ಶಾರ್ಕ್ ಹಿಂದೆ ಸರಿದು ಹೋಯಿತು. Image courtesy

ಕಳ್ಳನ ಕರಾಮತ್ತು ನಡೆಯಲಿಲ್ಲ

ಕಳ್ಳನ ಕರಾಮತ್ತು ನಡೆಯಲಿಲ್ಲ

ಅಹಮದ್ ಹಸನ್ ಎನ್ನುವ ಒಬ್ಬ ಕಳ್ಳನು ಒಬ್ಬ ಪಾದಚಾರಿಯಿಂದ ಐವತ್ತು ಡಾಲರ್ ಲಪಟಾಯಿಸಿ ಕಾರಿನಲ್ಲಿ ಪರಾರಿಯಾಗಲು ಹೋದನು. ಆದರೆ ಹಣ ಕಳೆದುಕೊಂಡವನು ಅದೇ ಕಾರಿಗೆ ಹಾರಿ, ಅದನ್ನು ತಪ್ಪಾದ ದಾರಿಗೆ ತಿರುಗಿಸಿಬಿಟ್ಟನು. ಆಮೇಲೆ ನಡೆದ ಮಾರಾಮಾರಿಯು ರಷ್ಯಾ ದೇಶದ ಪ್ರವಾಸಿಯ ಕ್ಯಾಮೆರಾದಲ್ಲಿ ಸೆರೆಯಾಯಿತು. Image courtesy

ಜಾರಿ ಬಿದ್ದ ಜವಾನ್

ಜಾರಿ ಬಿದ್ದ ಜವಾನ್

ವಿಶ್ವ ವಿಖ್ಯಾತ ಬಕಿಂಗ್ ಹ್ಯಾಮ್ ಅರಮನೆಯಲ್ಲಿ, ಅಷ್ಟೇ ಪ್ರಸಿದ್ಧ ಚೇಂಜ್ ಆಫ್ ಗಾರ್ಡ್ ಎಂಬ ಪಾಳಿ ಬದಲಾಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೈನಿಕನೊಬ್ಬ ಜಾರಿಬಿದ್ದ ಕ್ಷಣ ಇದು. ಹಾಗೆ ಬಿದ್ದರು ಮತ್ತೆ ಎದ್ದು ಕವಾಯತನ್ನು ಮುಗಿಸಿದ ಈ ಮಹಾನುಭಾವ! Image courtesy

ಜ್ವಾಲಮುಖಿಯ ಸ್ಫೋಟ- ಪಪುವಾ ನ್ಯೂಗಿನಿಯಾ

ಜ್ವಾಲಮುಖಿಯ ಸ್ಫೋಟ- ಪಪುವಾ ನ್ಯೂಗಿನಿಯಾ

58 ವರ್ಷ ವಯಸ್ಸಿನ ಫಿಲ್ ಮೆಕ್‌ನಮರ ಎಂಬ ಆಸ್ಟ್ರೇಲಿಯಾದ ಪ್ರವಾಸಿ ಸಣ್ಣ ದೋಣಿಯಲ್ಲಿ ವಿಹರಿಸುತ್ತಿದ್ದಾಗ ಈ ಅದ್ಭುತವನ್ನು ಸೆರೆ ಹಿಡಿದನು. ಮೌಂಟ್ ತವ್ರುವುರ್ ಎಂಬ ಪರ್ವತದಲ್ಲಿನ ಜ್ವಾಲಾಮುಖಿ ಸ್ಪೋಟಗೊಂಡಾಗ ಈತ ಅದನ್ನು ಸೆರೆಹಿಡಿದನು. Image courtesy

ಪ್ಯಾಡಲ್ -ಬೋರ್ಡರ್ ಒಬ್ಬ ತಿಮಿಂಗಲದ ಮೇಲೆ ಸರ್ಫಿಂಗ್ ಮಾಡುತ್ತಿರುವುದು

ಪ್ಯಾಡಲ್ -ಬೋರ್ಡರ್ ಒಬ್ಬ ತಿಮಿಂಗಲದ ಮೇಲೆ ಸರ್ಫಿಂಗ್ ಮಾಡುತ್ತಿರುವುದು

ನಿಜ, ಈ ಮಹಾನುಭಾವನು ಸರ್ಫಿಂಗ್ ಮಾಡಲು ಸರ್ಫ್ ಬೋರ್ಡ್ ಬಿಟ್ಟು ತಿಮಿಂಗಲ ಏರಿದ್ದಾನೆ. ಒಬ್ಬ ಪ್ರವಾಸಿಯು ಆ ಅದ್ಭುತವನ್ನು ಸೆರೆ ಹಿಡಿದಿದ್ದಾನೆ. ಮಾರ್ಕ್ ಜಾಕ್‌ಸನ್ ಹವಾಯಿಯ ಕೈಲುವ-ಕೊನಾ ಬೀಚಿನಲ್ಲಿ ತನ್ನ ಎಂದಿನ ಸರ್ಫಿಂಗ್ ಬೋರ್ಡ್ ಮೇಲೆ ಆಟವಾಡುತ್ತಾ ಇದ್ದಾಗ, ಇದ್ದಕ್ಕಿದ್ದಂತೆ ಒಂದು ತಿಮಿಂಗಲವು ಸಾಗರದಿಂದ ಎದ್ದು ಬಿಸಿಲಿಗೆ ಮೈಚಾಚಿ ಬಿಟ್ಟಿತು. ಆಗ ಈತ ಅದರ ಮೇಲೆ ಇದ್ದ!!!. ಕೊನೆಗೆ ಈ ಸರ್ಫರ್ ಮೆಲ್ಲದೆ 400 ಅಡಿ ದೂರದಲ್ಲಿದ್ದ, ತೀರಕ್ಕೆ ಸುರಕ್ಷಿತವಾಗಿ ಬಂದು ಸೇರಿಕೊಂಡ. Image courtesy

ಟ್ಯುನಿಷಿಯಾ ಬೀಚ್ ಶೂಟಿಂಗ್

ಟ್ಯುನಿಷಿಯಾ ಬೀಚ್ ಶೂಟಿಂಗ್

ಇದು ಪ್ರವಾಸದಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಕೆಟ್ಟ ಅನುಭವಗಳಲ್ಲಿ ಒಂದಾಗಿರುತ್ತದೆ. ಇಬ್ಬರು ದಂಪತಿಗಳು ಬೀಚಿನಲ್ಲಿ ವಿಹರಿಸುವಾಗ ಒಂದು ದೊಡ್ಡ ಸ್ಪೋಟ ಕೇಳಿದರು. ಏನು ಎಂದು ನೋಡಿದರೆ ಮೊದಲು ಯಾರೋ ಪಟಾಕಿ ಸುಡುತ್ತಿದ್ದಾರೆ ಎನಿಸಿತು. ಆದರೆ ನಂತರ ಗೊತ್ತಾಗಿದ್ದು, ಅದು ಗನ್ ಸದ್ದು ಎಂದು. ಕೊನೆಗೆ ಅವರು ತಮ್ಮ ರೂಮಿಗೆ ಓಡಿ ಬಂದು ಜೀವ ಉಳಿಸಿಕೊಂಡರು. ಅವರ ಪುಣ್ಯಕ್ಕೆ ಅವರು ದಾಳಿಕೋರನಿಗಿಂತ ದೂರದಲ್ಲಿ ಇದ್ದರು! Image courtesy

English summary

OMG Moments Caught By Tourists!

When you travel to a new place, all that you would want to do is to click images of places and things around that you see. However, what happens when you click some amazing, OMG and WOW moments? Well, we here at Boldsky have shared some of the epic and OMG moments in this article which tourists have witnessed while travelling.
Story first published: Thursday, May 26, 2016, 13:19 [IST]
X
Desktop Bottom Promotion