Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇನ್ನೂ ಯಕ್ಷ ಪ್ರಶ್ನೆಯಂತೆಯೇ ಕಾಡುವ ನಿಗೂಢ ರಹಸ್ಯಗಳು!
ನಮ್ಮ ಜೀವನದಲ್ಲಿ ನಾವು ಬಹಳಷ್ಟನ್ನು ಕಾತರಗಳನ್ನು ಎದುರು ನೋಡುತ್ತೇವೆ ಮತ್ತು ಇದು ಹೆಚ್ಚು ಆಶ್ಚರ್ಯಕರವಾಗಿರುತ್ತದೆ ಅಂತೆಯೇ ಕೌತುಕಮಯವಾಗಿರುತ್ತದೆ. ಈ ಅಂಶಗಳ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ಅವಲೋಕಿಸಿದಾಗ, ನಿಮ್ಮನ್ನು ಇದು ಅಚ್ಚರಿಯ ಕೂಪಕ್ಕೆ ತಳ್ಳುತ್ತದೆ. ಆದರೆ ವಿಜ್ಞಾನವೂ ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ವಿಫಲವಾಗಿದೆ.
ಇಂದಿನ ಲೇಖನದಲ್ಲಿ ವಿಜ್ಞಾನವೂ ಉತ್ತರ ಕಂಡುಕೊಳ್ಳಲು ಅಸಾಧ್ಯವಾಗಿರುವ ಅಂಶಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದು ದೈನಂದಿನ ಕ್ರಮದಲ್ಲಿ ನಡೆಯುವ ಈ ಚಟುವಟಿಕೆಗಳೇ ನಮ್ಮನ್ನು ಮಂತ್ರಮುಗ್ಧಗೊಳಿಸಿದೆ. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಬೆಳೆದರೂ, ಇನ್ನೂ ಉತ್ತರ ಸಿಗುತ್ತಿಲ್ಲ!
ಹಕ್ಕಿಗಳ ವಲಸೆ, ಬರ್ಮುಡಾ ಟ್ರಯಾಂಗಲ್ ರಹಸ್ಯ ಹೀಗೆ ವೈಜ್ಞಾನಿಕವಾಗಿ ಕೂಡ ಸೋಲನ್ನು ಕಂಡುಕೊಂಡ ಅಚ್ಚರಿಗಳು ನಮ್ಮ ಕಣ್ಣಮುಂದೆ ಇದ್ದು ಏಕಿದು ಪರಿಹಾರವೇ ಕಾಣದ ರಹಸ್ಯವಾಗಿ ಉಳಿದಿದೆ ಎಂಬುದು ನಮ್ಮನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಹಾಗಿದ್ದರೆ ಆ ಪರಿಹಾರ ಕಾಣದ ಸಂಗತಿಗಳೇನು ಎಂಬುದನ್ನು ಕಂಡುಕೊಳ್ಳೋಣ.

ಹಕ್ಕಿಗಳ ವಲಸೆ
ನಿರ್ದಿಷ್ಟ ಸಮಯದಲ್ಲಿ ಹಕ್ಕಿಗಳು ವಲಸೆ ಹೋಗುತ್ತವೆ. ಯಾವುದೇ ನ್ಯಾವಿಗೇಶನ್ ಅಥವಾ ಟ್ರ್ಯಾಕರ್ ಅನ್ನು ಬಳಸಿಕೊಳ್ಳದೆಯೇ ತಮ್ಮ ಗಮ್ಯಸ್ಥಾನವನ್ನು ಇವು ತಲುಪುತ್ತವೆ. ಇದು ಅವುಗಳಿಗೆ ಹೇಗೆ ಸಾಧ್ಯ!

ಆಮ್ಲಜನಕವಿಲ್ಲದೆ ಬದುಕುವ ಪ್ರಾಣಿಗಳು!
ಕೆಲವೊಂದು ಬ್ಯಾಕ್ಟೀರಿಯಾ ಮತ್ತು ಜೀವಿಗಳು ಆಮ್ಲಜನಕದ ಅಗತ್ಯವಿಲ್ಲದೆ ಬದುಕುತ್ತವೆ. ಈ ಅಂಶವನ್ನು ವಿಜ್ಞಾನಿಗಳು ಈಗ ಕಂಡುಕೊಳ್ಳುತ್ತಿದ್ದು, ಅದಕ್ಕೆ ಉತ್ತರವಿನ್ನೂ ದೊರಕಿಲ್ಲ.

ಪ್ರವೃತ್ತಿಗಳು
ನಿಮ್ಮ ಭಾವನೆಗಳು ಯಾವಾಗಲೂ ನಿಜವಾಗಿರುತ್ತವೆ. ಹೆಚ್ಚಿನ ಸಮಯಗಳಲ್ಲಿ ಇದು ಸಾಧ್ಯವಾಗಿರುತ್ತದೆ. ಮನಃ ಶಾಸ್ತ್ರಜ್ಞರು ಹೇಳುವಂತೆ ಇದು ರಹಸ್ಯವನ್ನು ಒಳಗೊಂಡಿದೆ; ಆದರೆ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಯಾವುದೇ ನಿರ್ದಿಷ್ಟ ಅಧ್ಯಯನಗಳಿಲ್ಲ.

ದೆವ್ವಗಳು
ಹಲವಾರು ವರ್ಷಗಳಿಂದ ನಂಬದವರು ಮತ್ತು ನಂಬುವವರ ನಡುವಿನ ಚರ್ಚೆಯಾಗಿ ನಡೆಯುತ್ತಲೇ ಇದೆ. ವಿಜ್ಞಾನವು ಇದೊಂದು ಮಾನಸಿಕ ಭಾವನೆ ಎಂಬುದಾಗಿ ಹೇಳಿದ್ದರೆ, ಜನರು ದೆವ್ವಗಳು ಇರುವುದು ನಿಜ ತಾವು ಕಣ್ಣಾರೆ ಕಂಡಿದ್ದೇವೆ ಎಂಬುದಾಗಿ ನುಡಿಯುತ್ತಾರೆ.

ಏಲಿಯನ್ ಅಸ್ತಿತ್ವ!
ಏಲಿಯನ್ ಮತ್ತು ಹಾರುವ ತಟ್ಟೆಯನ್ನು ಹಲವಾರು ಜನರು ನೋಡಿದ್ದು ಈ ರಹಸ್ಯವನ್ನು ಇನ್ನೂ ಪರಿಹರಿಸಲಾಗಿಲ್ಲ. ವಿಜ್ಞಾನಕ್ಕೂ ಇದು ಅಸಾಧ್ಯವಾಗಿದೆ.

ಅಯಸ್ಕಾಂತ ಧ್ರುವಗಳು
ವಿಜ್ಞಾನವು ಉತ್ತರ ಕಂಡುಕೊಳ್ಳಲಾಗದೇ ಇರುವ ರಹಸ್ಯವಾಗಿದೆ. ನೀವು ಅಯಸ್ಕಾಂತವನ್ನು ಎಷ್ಟೇ ಸಣ್ಣದಾಗಿ ತುಂಡರಿಸಿ, ಇದು ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಪಡೆದುಕೊಂಡಿರುತ್ತದೆ. ಅದ್ಭುತ ಅಲ್ಲವೇ? Image courtesy

ಆಕಳಿಕೆ
ಆಯಾಸ ಮತ್ತು ಸೋಮಾರಿತನದ ಗುರುತಾಗಿ ಆಕಳಿಕೆಯನ್ನು ನಾವು ತೆಗೆಯುತ್ತೇವೆ. ಇದು ಏಕೆ ಸಂಭವಿಸುತ್ತದೆ ಎಂಬುದು ರಹಸ್ಯವಾಗಿದೆ. ಜನರು ಹೇಳುವಂತೆ ದೇಹದಲ್ಲಿ ಆಮ್ಲಜನಕದ ಕೊರತೆಯನ್ನು ಇದು ಎದ್ದುಗಾಣಿಸುತ್ತದೆ ಎಂದಾಗಿದೆ. ಆದರೆ ಇದರ ಬಗ್ಗೆ ಯಾವುದೇ ನಿಖರ ಮಾಹಿತಿ ಇನ್ನೂ ದೊರೆತಿಲ್ಲ.

ಬರ್ಮುಡಾ ಟ್ರಯಾಂಗಲ್ ರಹಸ್ಯ
ಟ್ರಯಾಂಗಲ್‌ನ ಆಳದಲ್ಲಿ ಎಷ್ಟೋ ವಿಮಾನಗಳು ಮತ್ತು ಹಡಗುಗಳು ಕಣ್ಮರೆಯಾಗಿ ಹೋಗಿವೆ. ಆದರೆ ಈ ಕಣ್ಮರೆಯಾದ ಹಡಗು ವಿಮಾನ ಏನಾಯಿತು, ಈ ಜಾಗದಲ್ಲಿ ಮಾತ್ರವೇ ಇದು ಏಕೆ ಸಂಭವಿಸುತ್ತದೆ ಎಂಬುದು ರಹಸ್ಯವಾಗಿಯೇ ಉಳಿದಿದೆ. ಭೂಮಿಯಲ್ಲಿರುವ ಹೆಚ್ಚು ರಹಸ್ಯಮಯ ಸ್ಥಳವಾಗಿ ಇದು ಉಳಿದುಕೊಂಡಿದೆ. ಅಚ್ಚರಿಗೊಳಿಸುವ ಬರ್ಮುಡಾ ಟ್ರಯಾಂಗಲ್‌ನ ನಿಗೂಢ ರಹಸ್ಯ!



Click it and Unblock the Notifications











