Latest Updates
-
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು?
ಉಗುರು ಕಚ್ಚುವ ದುರಭ್ಯಾಸ, ಯಾಕೆ ಬೇಕು? ಬಿಟ್ಟಾಕಿ
ನಮ್ಮ ದೇಹದಲ್ಲಿ ಅತಿ ಹೆಚ್ಚು ಸಾಂದ್ರತೆಯಲ್ಲಿ ಬ್ಯಾಕ್ಟೀರಿಯಾಗಳು ನೆಲೆಸುವ ಸ್ಥಳ ಯಾವುದು ಗೊತ್ತೇ? ಅದೇ ಉಗುರುಸಂದಿ. ಇದಕ್ಕೇ ಉಗುರನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳುತ್ತಿರುವುದು ಅಗತ್ಯವಾಗಿದೆ. ಊಟಕ್ಕೂ ಮುನ್ನ ಕೈ ತೊಳೆದುಕೊಳ್ಳಲು ಹೇಳುವ ಕಾರಣವೇನು ಗೊತ್ತೇ? ಕೈಗಳಲ್ಲಿರುವ ಬ್ಯಾಕ್ಟೀರಿಯಾಗಳು ನಿವಾರಣೆಯಾಗಬೇಕು ಎಂದು ಆದರೆ ಉಗುರು ಸಂದಿಯಲ್ಲಿರುವ ಕೊಳೆಯಲ್ಲಿ ಬ್ಯಾಕ್ಟೀರಿಯಾಗಳಿದ್ದು ಸುಲಭವಾಗಿ ಹೋಗಲಾರವು.
ಈ ಬಗ್ಗೆ ಸೂಕ್ಷ್ಮವಾಗಿ ನಡೆಸಿದ ಸಂಶೋಧನೆಯಲ್ಲಿ ಒಂದು ಬೆರಳ ಉಗುರಿನ ಸಂಧಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ವಿಶ್ಲೇಷಿಸಿದಾಗ ಇದರಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ವಿಧದ ಬ್ಯಾಕ್ಟೀರಿಯಾಗಳಿದ್ದುದು ಕಂಡುಬಂದಿದೆ! ಈಗ ಉಗುರನ್ನು ಹಲ್ಲಿನಿಂದ ಕಚ್ಚಿಕೊಂಡಾಗ ಈ ಬ್ಯಾಕ್ಟೀರಿಯಾಗಳು ನೇರವಾಗಿ ಬಾಯಿಯೊಳಕ್ಕೆ ಧಾವಿಸುತ್ತವೆ.
ಉಗುರು ಕಚ್ಚುವ ಅಭ್ಯಾಸ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಇರುತ್ತದೆ. ಆದರೆ ವಯಸ್ಸಾದಂತೆ ಈ ಅಭ್ಯಾಸ ಕಡಿಮೆಯಾಗುತ್ತಾ ಹೋಗುತ್ತದೆ, ಹೋಗಬೇಕು. ಆದರೆ ಕೆಲವರಲ್ಲಿ ಮಾತ್ರ ಇದು ಬಹುಕಾಲದವರೆಗೆ ಉಳಿದುಕೊಂಡಿರುತ್ತದೆ. ಮಕ್ಕಳು ಎಷ್ಟು ಬೇಗ ಈ ಅಭ್ಯಾಸ ಬಿಡುತ್ತಾರೋ ಅಷ್ಟೂ ಒಳ್ಳೆಯದು. ಏಕೆಂದರೆ ಇದರಿಂದ ಆಗುವ ಹಾನಿಯ ಬಗ್ಗೆ ಇರುವ ಮಾಹಿತಿ ಭೀತಿ ಹುಟ್ಟಿಸುತ್ತವೆ. ಈ ಕೆಟ್ಟ ಅಭ್ಯಾಸದಿಂದ ನಿಮಗೆ ಅರಿವಿಲ್ಲದೇ ನಿಮ್ಮ ದೇಹಕ್ಕೆ ಏನೇನಾಗುತ್ತದೆ ಎಂದು ಅರಿವಾದರೆ ಉಗುರು ಕಚ್ಚುವ ಅಭ್ಯಾಸ ಬಿಡುವ ಮನಸ್ಸು ಖಂಡಿತಾ ಆಗುತ್ತದೆ. ಒಂದು ವೇಳೆ ನಿಮಗೂ ಉಗುರು ಕಚ್ಚುವ ಅಭ್ಯಾಸವಿದ್ದು ಬಿಡಲು ತೊಂದರೆಯಾಗುತ್ತಿದ್ದರೆ ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ.

ಉಗುರುಸಂದಿಯೇ ಬ್ಯಾಕ್ಟೀರಿಯಾಗಳ ವೃದ್ಧಿಯಾಗುವ ಸ್ಥಳ
ಒಂದು ಸಮೀಕ್ಷೆಯ ಪ್ರಕಾರ ಅತಿಸಾರ (ಬೇಧಿ), ವಾಂತಿ ಮತ್ತು ಅಜೀರ್ಣ ಮೊದಲಾದ ತೊಂದರೆಗೆ Escherichia coli ಎಂಬ ಬ್ಯಾಕ್ಟೀರಿಯಾ ಎಂದು ಖಚಿತವಾದರೆ ಇದಕ್ಕೆ ಆ ವ್ಯಕ್ತಿಯ ಉಗುರು ಕಚ್ಚುವ ಅಭ್ಯಾಸವೇ ಪ್ರಮುಖ ಕಾರಣ ಎಂದು ಕಂಡುಬಂದಿದೆ. ಸಂಶೋಧನೆಗಳ ಪ್ರಕಾರ ಉಗುರು ಕಚ್ಚುವ ಅಭ್ಯಾಸವಿರುವ 76% ಜನರಿಗೆ ವಾಂತಿ ಬೇಧಿಯ ತೊಂದರೆ ಕಾಡುತ್ತದೆ. ಇನ್ನೊಂದು ಮಾತುಗಳಲ್ಲಿ ಹೇಳಬೇಕೆಂದರೆ ವಾಂತಿ ಬೇಧಿಗೆ ಉಗುರು ಕಚ್ಚುವ ಅಭ್ಯಾಸವೇ 76% ಖಚಿತ ಕಾರಣವಾಗಿದೆ.

ಉಗುರು ಕಚ್ಚುವಿಕೆಯಿಂದ ಹಲ್ಲು ಹಾಳಾಗುತ್ತದೆ
ಸಾಮಾನ್ಯವಾಗಿ ಉಗುರು ಕಚ್ಚುವಾಗ ಉಗುರು ಸಂದಿಯಲ್ಲಿರುವ ಬ್ಯಾಕ್ಟೀರಿಯಾಗಳೂ ಹಲ್ಲುಗಳ ಮೇಲೆ ದಾಟಿಕೊಳ್ಳುತ್ತವೆ. ಇವು ಹಲ್ಲುಗಳ ಸಂಧಿಯಲ್ಲಿ ಮನೆ ಮಾಡಿಕೊಂಡು ಹಲ್ಲುಗಳ ಆಳಕ್ಕೆ ನುಗ್ಗುತ್ತವೆ.
ಸಾಮಾನ್ಯ ಬ್ರಶ್ ಮೂಲಕ ಇವು ನಿವಾರಣೆಯಾಗುವುದಿಲ್ಲ. ಹಲ್ಲಿನ ಬೇರಿನಾಳಕ್ಕೆ ಇಳಿದು ಕೊಳೆಯುವಂತೆ ಮಾಡಿ ಹಲ್ಲು ಅಲುಗಾಡಿಸಲು ತೊಡಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಗುರು ಕಚ್ಚುವಿಕೆಯಿಂದ ಹಲ್ಲು ಹಾಳಾಗುತ್ತದೆ
ತಕ್ಷಣ ಸೂಕ್ತ ಚಿಕಿತ್ಸೆ ಇಲ್ಲದಿದ್ದರೆ ಉಗುರು ಕಚ್ಚಿದ್ದ ಹಲ್ಲನ್ನು ಅಥವಾ ಅದರ ಅಕ್ಕಪಕ್ಕದ ಹೆಚ್ಚು ಹಲ್ಲುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವ ಅಪಾಯವಿದೆ.

ಒಸಡುಗಳೂ ಹಾನಿಗೊಳಗಾಗುತ್ತವೆ
ಉಗುರು ಸಂದಿಯಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ನೇರವಾಗಿ ಒಸಡುಗಳ ಒಳಗೇ ನುಗ್ಗಿ ಸೋಂಕು ಉಂಟುಮಾಡುತ್ತವೆ. ಒಳಗಡೆ ಕೀವು ಉಂಟಾಗಿ ಹುಳಗಳು ಬೆಳೆಯುತ್ತವೆ. gingival swelling ಎಂಬ ಊತ ಅತಿ ನೋವು ನೀಡುವಂತಹದ್ದಾಗಿದ್ದು ಗಲ್ಲ ಜಾಂಬವಂತನಂತಾಗುತ್ತದೆ. ಹೀಗಾಗಬಾರದು ಎಂದರೆ ಉಗುರು ಕಚ್ಚಲು ಹೋಗಬೇಡಿ.

ಬಾಯಿ ದುರ್ವಾಸನೆ ಸೂಸುತ್ತದೆ
ಉಗುರು ಕಚ್ಚುವ ಅಭ್ಯಾಸದಿಂದ ಕೆಲವು ದುರ್ನಾತ ಬೀರುವ ಬ್ಯಾಕ್ಟೀರಿಯಾಗಳೂ ಬಾಯಿಯೊಳಗೆ ದಾಟಿಕೊಂಡು ನಾಲಿಗೆಯ ಹಿಂಭಾಗ, ನಾಲಿಗೆಯ ಹಿಂಭಾಗದ ಬದಿ, ಗಂಟಲ ಮೇಲ್ಭಾಗ, ಬಾಯಿಯ ಮೇಲ್ಭಾಗ (ಅಥವಾ ಛಾವಣಿ), ಕಿರುನಾಲಿಗೆಯ ಅಕ್ಕಪಕ್ಕದಲ್ಲೆಲ್ಲಾ ಅಂಟಿಕೊಂಡು ತಮ್ಮ ವಠಾರವನ್ನು ಬೆಳೆಸುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ತೆಳುವಾದ ಬಿಳಿ ಪದರವೊಂದರಂತೆ ಕಾಣುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಾಯಿ ದುರ್ವಾಸನೆ ಸೂಸುತ್ತದೆ
ಮೊದಮೊದಲು ಹೆಚ್ಚಿನ ತೊಂದರೆ ಇಲ್ಲದ ಕಾರಣ ಹೆಚ್ಚಿನವರು ಗಮನ ನೀಡದೇ ಹೋಗುತ್ತಾರೆ. ಆದರೆ ದಿನಗಳೆದಂತೆ ಇವುಗಳು ಕೊಳೆತು ದುರ್ವಾಸನೆ ಸೂಸಲು ಪ್ರಾರಂಭವಾಗುತ್ತದೆ. ಎದುರಿನವರು ನಿಮ್ಮ ಮಾತುಗಳನ್ನು ಆಲಿಸಲು ಸಾಧ್ಯವಾಗದೇ ಮುಖ ತಿರುಗಿಸುವುದು ನಿಮಗೆ ಅತೀವ ಮುಜುಗರ ತರುತ್ತದೆ.

ಉಗುರಿನ ಬಣ್ಣ ಹೊಟ್ಟೆಗೆ ಹೋಗುವ ಅಪಾಯ
ಕೆಲವರಿಗೆ ಉಗುರು ಕಚ್ಚುವ ಅಭ್ಯಾಸ ಹೀಗಿರುತ್ತದೆ ಎಂದರೆ ಉಗುರಿನ ಬಣ್ಣವನ್ನೂ ಜೊತೆಗೇ ನುಂಗಿ ಬಿಡುತ್ತಾರೆ. ಉಗುರಿನ ಬಣ್ಣದಲ್ಲಿ formaldehyde ಎಂಬ ರಾಸಾಯನಿಕವಿದೆ. ಇದು ಶವಾಗಾರದಲ್ಲಿ ಶವಗಳು ಕೊಳೆಯದೇ ಇರಲು ಉಪಯೋಗಿಸುವ ರಾಸಾಯನಿಕ. ಇದು ಹೊಟ್ಟೆಗೆ ಸರ್ವಥಾ ಹೋಗಕೂಡದು. ಆದ್ದರಿಂದ ಉಗುರು ಕಚ್ಚುವ ಅಭ್ಯಾಸ ಒಳ್ಳೆಯದಲ್ಲ.

ಉಗುರಿನ ಬೆಳವಣಿಗೆ ನಿಂತು ಹೋಗುತ್ತದೆ
ಉಗುರು ಮತ್ತು ಕೂದಲು ಸತತವಾಗಿ ಬೆಳೆಯುತ್ತಿರುವ ಅಂಗಗಳು. ಉಗುರಿನ ಬುಡದಲ್ಲಿರುವ ಅತಿ ಸೂಕ್ಷ್ಮ ಅಂಗಾಂಶದಿಂದ ಉಗುರು ಬೆಳೆಯಲು ಅಗತ್ಯವಾದ ಕೆರಾಟಿನ್ ಎಂಬ ವಸ್ತು ದೊರಕುತ್ತದೆ. ಒಂದು ವೇಳೆ ಸತತವಾದ ಉಗುರು ಕಚ್ಚುವ ಅಭ್ಯಾಸವಿದ್ದರೆ ಈ ಅಂಗಾಂಶವೂ ಘಾಸಿಗೊಳ್ಳುತ್ತದೆ. ಒಂದು ಹಂತದಲ್ಲಿ ರಿಪೇರಿಯಾಗದಷ್ಟು ಘಾಸಿಯಾಗಿ ಉಗುರಿನ ಬೆಳವಣಿಗೆ ನಿಂತೇ ಹೋಗುತ್ತದೆ. ಇರುವ ಉಗುರು ಉದುರಿ ಬೆರಳುಗಳು ಮುಟ್ಟಲೂ ಆಗದಷ್ಟು ನೋವಿನಿಂದ ಕೂಡುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಗುರಿನ ಬೆಳವಣಿಗೆ ನಿಂತು ಹೋಗುತ್ತದೆ
ಉಗುರಿನ ತುದಿಯಲ್ಲಿ ಉಗುರು ಒಂದು ಚಿಕ್ಕ ಉಬ್ಬಿದ ಮಸೂರದಂತೆ ತೋರುತ್ತಾ ಕೈಗಳು ವಿಕಾರವಾಗುತ್ತವೆ. ಎದುರಿಗೆ ಸಿಕ್ಕವರಿಗೆಲ್ಲಾ ಇದು ಹೇಗಾಯಿತು ಎಂದು ಹೇಳೀ ಹೇಳೀ ಜನ್ಮವೇ ಅನರ್ಥಕ ಎಸಿಸುತ್ತದೆ. ಹೀಗಾಗಬಾರದು ಎಂದರೆ ಉಗುರು ಕಚ್ಚುವುದನ್ನು ಬಿಟ್ಟೇ ಬಿಡಿ. ಎಷ್ಟು ಕಷ್ಟವಾದರೂ ಚಿಂತೆಯಿಲ್ಲ.



Click it and Unblock the Notifications
