Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಮೋಜು, ಮಸ್ತಿ ಮಾಡಿಕೊಂಡೇ ಮದುವೆಯಾದವರ ಕಥೆ ಇದು!
ಮದುವೆ ಎಂಬುದು ಸಾಮಾನ್ಯರ ಬಾಳಿನಲ್ಲಿ ಒಮ್ಮೆ ಮಾತ್ರ ಬರುವ ವಿಶೇಷ. ಕೆಲವು ವಿಶೇಷ ಮತ್ತು ವಿಶಿಷ್ಟ ವ್ಯಕ್ತಿಗಳು ಮಾತ್ರ, ಇದನ್ನು ಹವ್ಯಾಸವಾಗಿಟ್ಟುಕೊಂಡು ಸಂಗಾತಿಗಳನ್ನು ಬದಲಾಯಿಸುತ್ತಲೆ ಇರುತ್ತಾರೆ. ಬನ್ನಿ ಆ 'ಇಂದ್ರ'ಲೋಕದ ವ್ಯಕ್ತಿಗಳನ್ನು ಬಿಟ್ಟು ನಮ್ಮ ಲೋಕದವರ ಕತೆ ಮಾತನಾಡೋಣ. ಮದುವೆ ಎಂದರೆ ಮುಗಿಯಿತು ತಿಂಗಳ ಮೊದಲೇ ನಮ್ಮ ಅಬ್ಬರ ಶುರುವಾಗುತ್ತೆ.
ಮಂಟಪದಿಂದ ಹಿಡಿದು ಮಧುಚಂದ್ರಕ್ಕೆ ಹೋಗಿ ಯಾವ ಕಾರ್ಯಕ್ರಮಗಳನ್ನು, ಸ್ಥಳಗಳನ್ನು ನೋಡಬೇಕು ಎಂಬುದರವರೆಗೆ ಇದರ ಪಟ್ಟಿ ಬೆಳೆಯುತ್ತದೆ. ಹುಡುಗಿ ತಾನು ಹಾಕುವ ಬಟ್ಟೆಗೆ ಹೊಂದಾಣಿಕೆಯಾಗುವ ಸಣ್ಣ ಗುಂಡು ಸೂಜಿಯನ್ನು ಸಹ ಬಿಡುವುದಿಲ್ಲ. ಹುಡುಗ ಹೇರ್ ಕಟ್‌ನಿಂದ ಹಿಡಿದು ಸಾಕ್ಸ್ ಮತ್ತು ಶೂವರೆಗೆ ಸಿದ್ಧನಾಗಿರುತ್ತಾನೆ. ಮದುವೆಯೋ ಅಥವಾ ಶಿಕ್ಷೆಯೋ ಒಂದೂ ಅರ್ಥವಾಗುತ್ತಿಲ್ಲ!
ಇಲ್ಲಿ ನಾವು ಸಿದ್ಧತೆಯ ಬಗ್ಗೆ ಅಲ್ಲ, ಬದಲಿಗೆ ಮದುವೆ ಯಾವ ಯಾವ ಸ್ಥಳದಲ್ಲಿ ಹೇಗೆ ಆಯಿತು ಎಂದು ನಿಮಗೆ ತಿಳಿಸುತ್ತಿದ್ದೇವೆ. ಬನ್ನಿ ಈ ಅಪರೂಪದ ಮದುವೆಗಳನ್ನು ನಾವು ಸಹ ಚಿತ್ರಗಳಲ್ಲಿಯಾದರು ನೋಡಿಕೊಂಡು ಬರೋಣ. ಮದುವೆಯಲ್ಲೂ ಸಹ ಈ ಬಗೆಯ ಸೃಜನಶೀಲತೆ ಮೆರೆದಿದ್ದಾರಲ್ಲ ಅವರಿಗೆ ಒಂದು ಅಭಿನಂದನೆ ಸಲ್ಲಿಸೋಣ. ನೀವು ಒಂದು ವೇಳೆ ಮದುವೆಯಾಗದಿದ್ದಲ್ಲಿ, ಇಂತಹ ಒಂದು ಆಲೋಚನೆಯನ್ನು ನೀವು ಸಹ ಮಾಡಿ... ಇಂತಹ ಚಿತ್ರ-ವಿಚಿತ್ರ ಮದುವೆಯನ್ನು ಎಲ್ಲಿಯಾದರೂ ನೋಡಿದ್ದೀರಾ?

ಈ ಗುಲಾಬಿಯು ನಿನಗಾಗಿ
ಚೀನಾದಲ್ಲಿ ಒಬ್ಬ ಭೂಪನು ತನ್ನ ಇಡೀ ಒಂದು ವರ್ಷದ ಸಂಬಳವನ್ನು ಖರ್ಚು ಮಾಡಿ 99,999 ಗುಲಾಬಿಗಳನ್ನು ತನ್ನ ಪ್ರೇಯಸಿಗಾಗಿ ಮದುವೆಯ ದಿನ ಉಡುಗೊರೆಯಾಗಿ ನೀಡಿದನು. ಚೀನಾದಲ್ಲಿ 999 ಎಂಬುದು ಅದೃಷ್ಟದ ಸಂಕೇತ. ಈ ಗುಲಾಬಿಗಳು ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಇವರಿಗಾಗಿ ಹಾರಿಬಂದವು. ಇದನ್ನು 30 ಕಾರುಗಳಲ್ಲಿ ಸಾಗಿಸಲಾಯಿತು. Image courtesy

ಗುರುತ್ವಾಕರ್ಷಣೆ ರಹಿತ ಮದುವೆ
ಎರಿನ್ ಮತ್ತು ನೋಹಾ ಫಲ್ಮರ್ ಎಂಬ ನ್ಯೂಯಾರ್ಕ್‌ನ ಜೋಡಿಯು ಬೋಯಿಂಗ್ 727-200 ವಿಮಾನದಲ್ಲಿ ಹೋಗುವಾಗ ಮದುವೆಯಾದರು. ಇವರ ಮದುವೆಯನ್ನು ಮತ್ತಷ್ಟು ವಿಶೇಷ ಮಾಡಲು ವಿಮಾನ ಸಿಬ್ಬಂದಿ ವಿಮಾನವನ್ನು ಗುರುತ್ವಾಕರ್ಷಣೆ ಮಾಡಿದರು. ಇದನ್ನು ನೀವು ಸಹ ಪ್ರಯತ್ನಿಸಬಹುದು, ಸ್ವಲ್ಪ ಹಣ ಖರ್ಚಾಗುತ್ತದೆಯಷ್ಟೆ. Image courtesy

ಸೈಕಲ್ ಸವಾರಿ
ಸೈಕಲ್ ಸವಾರಿ ಮಾಡುವ ಇಷ್ಟವಿರುವ ಈ ಸಂಗಾತಿಗಳು ತಮ್ಮ ಮದುವೆಯನ್ನು ಸೈಕಲ್‌ಗಳ ಮೇಲೆಯೇ ಮಾಡಿಕೊಂಡರು. ಅವರ ಅತಿಥಿಗಳು ಸಹ ನಗರದಾದ್ಯಂತ ಸೈಕಲ್ ಸವಾರಿ ಮಾಡಿ ಇವರಿಗೆ ಅಭಿನಂದನೆ ಸಲ್ಲಿಸಿದರು! Image courtesy

ಶಾರ್ಕ್ ತೊಟ್ಟಿಯಲ್ಲಿ ಮದುವೆ
ಅಬ್ಬಾ ಇದು ಗುಂಡಿಗೆ ಇರುವವರ ಮದುವೆ. 120000 ಗ್ಯಾಲನ್ ನೀರು ಮತ್ತು ಅದರಲ್ಲಿ ಒಂದು ಶಾರ್ಕ್ ಇದ್ದ ತೊಟ್ಟಿಯಲ್ಲಿ ಈ ಜೋಡಿ ಮದುವೆಯಾದರು. ಬಿಳಿ ಡೈವರ್ ಸೂಟಿನಲ್ಲಿ ವಧು, ಕಪ್ಪು ಡೈವರು ಸೂಟಿನಲ್ಲಿ ವರ, ಇಬ್ಬರೂ ಪರಿಣತ ಡೈವರ್‌ಗಳು ಶಾರ್ಕ್ ಸಾಕ್ಷಿಯಾಗಿ ಮದುವೆಯಾದರು. Image courtesy

ವಿಶ್ವದ ಅತಿ ಉದ್ದದ ಬ್ರೈಡಲ್ ಟ್ರೈನ್
ಗ್ಯಾಂಗ್‌ಜೌ ಎಂಬ ಚೀನಾದ ನಗರದ ವಧುವೊಬ್ಬಳು ತನ್ನ ಬ್ರೈಡಲ್ ಟ್ರೈನ್ ಮೂಲಕ ವಿಶ್ವದಾಖಲೆಯನ್ನು ಮಾಡಿದಳು. ಇದು ವಿಚಿತ್ರವಾದರು ಸತ್ಯ. ಇದು 100 ಕೆ.ಜಿ ತೂಕ ಮತ್ತು 600 ಅಡಿ ಉದ್ದವಿತ್ತು. ಆಕೆಯ ಹಿಂದೆ ಇದು ಹರಿದು ಬರುವಾಗ ಹೇಗಿತ್ತು ಎಂದು ನೀವೇ ಊಹಿಸಿ! Image courtesy

ಟಿಜೆ ಮ್ಯಾಕ್ಸ್ ಮದುವೆ
ಲಿಸಾ ಸತಾಯುತ್ ಎಂಬ ಶಾಪಿಂಗ್ ಹುಚ್ಚಿನ ವಧು ತನ್ನ ಮದುವೆಯನ್ನು ಶಾಪಿಂಗ್ ಮಾಡುವ ಸ್ಥಳದಲ್ಲಿ ಮಾಡ್ಕೊಂಡಳು. ಶಾಪಿಂಗ್ ಮಾಡಲು ಬಂದವರು ಈ ಮದುವೆಗೆ ಸಾಕ್ಷಿಯಾದರು. Image courtesy

ಹುಟ್ಟುಡುಗೆಯಲ್ಲಿ ಮದುವೆ
ಫಿಲ್ ಹೆಂಡಿಕಟ್ ಮತ್ತು ಎಲ್ಲಿ ಬಾರ್ಟನ್ ಎಂಬ ಆಸ್ಟ್ರೇಲಿಯಾದ ಜೋಡಿ ತಮ್ಮ ಮದುವೆಯನ್ನು ವಿಶಿಷ್ಟವಾಗಿ ಆಚರಿಸಿದರು. ಅದಕ್ಕೆ 250 ಅತಿಥಿಗಳು ಸಹ ಬಂದಿದ್ದರು. ಈ ಜೋಡಿ ಅವರ ಮುಂದೆ ಯಾವುದೇ ನಾಚಿಕೆಯಿಲ್ಲದೆ ತಮ್ಮ ಹುಟ್ಟುಡುಗೆಯಲ್ಲಿ ಮದುವೆಯಾದರು!! Image courtesy

ಮದುವೆಯ ನಂತರ ಬಂಗೀ ಜಂಪಿಂಗ್!
ಬ್ರಸೆಲ್ಸ್‌ನ ಈ ಮಿಸ್ಟರ್ ಅಂಡ್ ಮಿಸಸ್ ಕಿಪ್ಪರ್ಸ್ ಒಂದು ಬಿಸಿ ಬಲೂನಿನಲ್ಲಿ ಆಕಾಶದಲ್ಲಿ ಮದುವೆಯಾದರು. ಇವರ ಜೊತೆಗೆ 10 ಜನ ಅತಿಥಿಗಳು ಇದ್ದರು. ನೆಲದಿಂದ 160 ಅಡಿ ಎತ್ತರದಲ್ಲಿ ಇವರು ತಮ್ಮ ಮದುವೆಯನ್ನು ಮಾಡಿಕೊಂಡರು. ಅದಾದ ನಂತರ ಇವರು ಅಲ್ಲಿಂದ ಬಂಗೀ ಜಂಪಿಂಗ್ ಮಾಡಿ ಸಂಭ್ರಮಿಸಿದರು. Image courtesy



Click it and Unblock the Notifications