Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರಕೃತಿಯ ರುದ್ರ, ನರ್ತನಕ್ಕೆ, ಅಂದು ದೇಶವೇ ಬೆಚ್ಚಿ ಬಿದ್ದಿತು
ಪ್ರಕೃತಿಯೊಂದಿಗೆ ಆಟವಾಡಬೇಡಿ, ಅದು ಮುನಿಸಿಕೊಂಡರೆ ಪ್ರಳಯಾಂತಕವಾಗುತ್ತದೆ ಎಂದು ಹಿರಿಯರು ಹೇಳುತ್ತಲೇ ಬಂದಿದ್ದಾರೆ. ಆದರೂ ಹಲವಾರು ಪ್ರಕೃತಿ ವಿಕೋಪಗಳು ಜಗತ್ತನ್ನು ಆಗಾಗ ಕಾಡುತ್ತಲೇ ಇರುತ್ತವೆ.
ಕೆಲವು ಭೂಮಿಯ ಗರ್ಭದಲ್ಲಿ ಸತತವಾಗಿ ಆಗುತ್ತಲೇ ಇರುವ ಚಟುವಟಿಕೆಗಳ ಕಾರಣ ಎಂದಾದರೊಮ್ಮ ಅದುರುವ ನೆಲ, ಒತ್ತಡವನ್ನು ತಡೆಯಲಾರದೇ ಹೊಮ್ಮುವ ಜ್ವಾಲಾಮುಖಿ, ಸಮುದ್ರದಾಳದ ನೆಲ ಕುಸಿದು ಉಂಟಾಗುವ ಸುನಾಮಿ, ಎಲ್ ನಿನೋ ಮೊದಲಾದವು ನೈಸರ್ಗಿಕವಾದರೆ ಅತಿವೃಷ್ಟಿ, ಅನಾವೃಷ್ಟಿ, ಆಮ್ಲಮಳೆ ಮೊದಲಾದವು ಮನುಷ್ಯ ನಿಸರ್ಗದೊಂದಿಗೆ ಆಡಿದ ಆಟದ ಪರಿಣಾಮವಾಗಿದೆ.
ನಿಸರ್ಗ ಪ್ರಕೋಪಕ್ಕೆ ತುತ್ತಾಗಿ ಆಗುವ ನಷ್ಟ ಕೇವಲ ಆಸ್ತಿ ಪಾಸ್ತಿಯಲ್ಲಲ್ಲ, ಜೀವಹಾನಿಯಲ್ಲಿಯೂ ಭಾರಿಯೇ ಆಗಿರುತ್ತದೆ. ಪ್ರಕೋಪಕ್ಕೆ ಒಳಗಾದ ಸ್ಥಳ ನರಕಕೂಪವಾಗಿರುತ್ತದೆ. ಇಂತಹ ಪ್ರಕೋಪಗಳು ಭಾರತದಲ್ಲಿ ಸಂಭವಿಸಿದ ಹತ್ತು ಪ್ರಮುಖ ಘಟನೆಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ, ಮುಂದೆ ಓದಿ...

ಪ್ಲೇಗ್ ಮಾರಿ
ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತದಲ್ಲಿ ಪಿಡುಗಾಗಿ ಆಕ್ರಮಿಸಿದ ಸಾಂಕ್ರಾಮಿಕ ರೋಗ ಪ್ಲೇಗ್ ಮೂರು ದಶಗಳಲ್ಲಿ ಬಲಿ ತೆಗೆದುಕೊಂಡ ಸಂಖ್ಯೆ 1.2 ಕೋಟಿ!

1770ರ ಬಂಗಾಳದ ಬರ
ಹದಿನೆಂಟನೆಯ ಶತಮಾನದಲ್ಲಿ ಬಂಗಾಳ ರಾಜ್ಯ (ಆಗಿನ್ನೂ ವಿಭಜಿತವಾಗಿರಲಿಲ್ಲ) ಭಯಂಕರ ಬರಕ್ಕೆ ತುತ್ತಾಯಿತು. ತಿನ್ನಲು ಕುಡಿಯಲು ಇಲ್ಲದೇ ಸುಮಾರು ಒಂದು ಕೋಟಿ ಜನರು ಸಾವಿಗೀಡಾದರು.

1770ರ ಬಂಗಾಳದ ಬರ
ತಿನ್ನಲು ಕುಡಿಯಲು ಇಲ್ಲದೇ ಸುಮಾರು ಒಂದು ಕೋಟಿ ಜನರು ಸಾವಿಗೀಡಾದರು. ಅಂದಿನ ಜನಸಂಖ್ಯೆಯನ್ನು ಪರಿಗಣಿಸಿದಾಗ ಈ ಪ್ರಮಾಣ ಮೂರನೇ ಒಂದರಷ್ಟಿತ್ತು.

1943ರ ಬಂಗಾಳದ ಬರ
ಹಿಂದೆ ಆವರಿಸಿದ್ದಂತಹ ಬರ 1943ರಲ್ಲಿ ಇನ್ನೊಮ್ಮೆ ಆವರಿಸಿತು. ಭಾರತದ ಭತ್ತದ ಗಣಿ ಎಂದೇ ಪ್ರಸಿದ್ಧವಾಗಿದ್ದ ಈ ಪ್ರದೇಶವೀಗ ನಲವತ್ತು ಲಕ್ಷ ಜನರನ್ನು ಆಹುತಿ ತೆಗೆದುಕೊಂಡು ಸ್ಮಶಾನವಾಗಿ ಪರಿಣಮಿತವಾಗಿತ್ತು.

1632-33ರ ದಖ್ಖನ್ ಪ್ರಸ್ಥಭೂಮಿಯ ಬರ
1632-33ರ ಅವಧಿಯಲ್ಲಿ ಮೊಗಲರ ಆಳ್ವಿಕೆಯ ಕಾಲದಲ್ಲಿಯೂ ಭಾರತದ ದಖ್ಖನ್ ಪ್ರಸ್ಥಭೂಮಿ ಭಯಂಕರ ಬರಕ್ಕೆ ತುತ್ತಾಗಿತ್ತು. ಒಟ್ಟು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರು ಹಸಿವಿನಿಂದ ತೀರಿಕೊಂಡರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

1632-33ರ ದಖ್ಖನ್ ಪ್ರಸ್ಥಭೂಮಿಯ ಬರ
ಇತಿಹಾಸಕಾರ ಪ್ರಕಾರ ಸತತವಾಗಿ ಮೂರು ಬಾರಿಯ ಬೆಳೆ ಬೆಳೆಯದೇ ಬಿಸಿಲಿಗೆ ಒಣಗಿ ಹೋದ ಕಾರಣ ಆಹಾರದ ತೀವ್ರ ಆಭಾವ ಎದುರಾಗಿತ್ತು. ಅಲ್ಲದೇ ಆ ಸಮಯದಲ್ಲಿ ಔಷಧಿ ಲಭ್ಯವಿಲ್ಲದಿದ್ದ ಹಲವಾರು ಕಾಯಿಲೆಗಳು ಜನರನ್ನು ಬಾಧಿಸತೊಡಗಿ ಸೂಕ್ತ ಆರೈಕೆ ಮತ್ತು ಚಿಕಿತ್ಸೆಯಿಲ್ಲದೇ ಜನರು ಸಾವನ್ನಪ್ಪುತ್ತಿದ್ದರು.

1835ರ ಕಾರಿಂಗಾ ಚಂಡಮಾರುತ
ಈಗ ಆಂಧ್ರ ಪ್ರದೇಶವೆಂದು ಕರೆಯಲ್ಪಡುವ ಪ್ರದೇಶ ಹತ್ತೊಂಭತ್ತನೆಯ ಶತಮಾನದಲ್ಲಿ ಕಾರಿಂಗಾ ಪ್ರದೇಶವಾಗಿತ್ತು. 1835ರಲ್ಲಿ ಅಪ್ಪಳಿಸಿದ ಭಯಂಕರ ಚಂಡಮಾರುತಕ್ಕೆ 3.2 ಲಕ್ಷ ಜನರು ತೀರಿಕೊಂಡರೆ ತೀರ ಪ್ರದೇಶದಲ್ಲಿ ಲಂಗರು ಹಾಕಿದ್ದ 25,000 ಹಡಗು ಮತ್ತು ದೊಡ್ಡ ದೋಣಿಗಳು ನಷ್ಟಗೊಂಡವು.

1737ರ ಕೋಲ್ಕತ್ತಾ ಚಂಡಮಾರುತ
ಇಂದು ಕೋಲ್ಕತ್ತಾ ಎಂದು ಕರೆಯಲ್ಪಡುವ ನಗರ ಆಗ ಕಲ್ಕತ್ತಾ ಎಂದು ಕರೆಯಲ್ಪಡುತ್ತಿತ್ತು. 1737ರ ಅಕ್ಟೋಬರ್ 7ರಂದು ಅಪ್ಪಳಿಸಿದ ಭಾರೀ ಚಂಡಮಾರುತ ಒಮ್ಮೆಲೇ ಮೂರು ಲಕ್ಷ ಜನರನ್ನು ಬಲಿತೆಗೆದುಕೊಂಡಿತು.

2001ರ ಗುಜರಾತ್ ಭೂಕಂಪ
7.9 ರಿಕ್ಟರ್ ಮಾಪಕದ ಭಾರೀ ಭೂಕಂಪವೊಂದು 2001ರ ಗಣರಾಜ್ಯ ದಿನದಂದು ಗುಜರಾತ್ ನ ಕಛ್ ಜಿಲ್ಲೆಯ ಭಾಚಾವ್ ತಾಲ್ಲೂಕಿನ ಛೋಬಾರಿ ಎಂಬ ಗ್ರಾಮದಲ್ಲಿ ಕೇಂದ್ರೀಕೃತವಾಗಿದ್ದ ಈ ಭಾರೀ ಭೂಕಂಪ ಅಲುಗಿದ್ದು ಕೇವಲ ಮೂರು ನಿಮಿಷ.

2001ರ ಗುಜರಾತ್ ಭೂಕಂಪ
ಆದರೆ ಮೂವತ್ತು ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು ನಾಲ್ಕು ಲಕ್ಷಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿತು.

2004ರ ಡಿ. 26ರಂದು ಅಪ್ಪಳಿಸಿದ ಸುನಾಮಿ
ಭಾರತದಿಂದ ಎಷ್ಟೋ ದೂರದಲ್ಲಿರುವ ಸುಮಾತ್ರಾ ಬಳಿ ಕೇಂದ್ರೀಕೃತವಾದ 9.0 ರಿಕ್ಟರ್ ಮಾಪಕದ ಪ್ರಬಲ ಭೂಕಂಪದ ಕಾರಣ ಸಮುದ್ರದಲ್ಲಿ ಎದ್ದ ಭಾರೀ ಅಲೆಗಳು ಸಾವಿರಾರು ಕಿ.ಮೀ ದೂರದ ರಾಷ್ಟ್ರಗಳಿಗೆ ಅಪ್ಪಳಿಸಿತ್ತು.

2004ರ ಡಿ. 26ರಂದು ಅಪ್ಪಳಿಸಿದ ಸುನಾಮಿ
ಭೂಕಂಪದ ಇತಿಹಾಸದಲ್ಲಿಯೇ ಮೂರನೆಯ ಅತ್ಯಂತ ಪ್ರಬಲವಾದ ಈ ಭೂಕಂಪದ ಪರಿಣಾಮವಾಗಿ ಎದ್ದ ಸುನಾಮಿ ಅಲೆಗಳು ಭಾರತದಲ್ಲಿ 10,000 ಜನರನ್ನು ಹಾಗೂ ವಿಶ್ವದ ಇತರ ಹನ್ನೊಂದು ರಾಷ್ಟ್ರಗಳ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತು.

1993ರ ಲಾತೂರ್ ಭೂಕಂಪ
6.4 ರಿಕ್ಟರ್ ಮಾಪಕದ ಈ ಭೂಕಂಪ ಮಹಾರಾಷ್ಟ್ರದ ಲಾತೂರ್ ಎಂಬ ಊರಿನಲ್ಲಿ ಕೇಂದ್ರೀಕೃತವಾಗಿದ್ದು 30ರ ಸೆಪ್ಟೆಂಬರ್ 1993ರ ಮುಂಜಾನೆ ನಾಲ್ಕು ಗಂಟೆಗೆ ಸಂಭವಿಸಿತ್ತು.

1993ರ ಲಾತೂರ್ ಭೂಕಂಪ
ಮನೆಯಲ್ಲಿ ಮಲಗಿದ್ದ ಜನರಿಗೆ ಏನಾಗುತ್ತಿದೆ ಎಂದು ಅರಿವಾಗುವ ಮುನ್ನವೇ ಇಪ್ಪತ್ತು ಸಾವಿರ ಜನರು ಮಲಗಿದ್ದಲ್ಲೇ ಮನೆಗಳು ಕುಸಿದ ಅವಶೇಷಗಳ ಅಡಿ ಸಾವನ್ನಪ್ಪಿದರು. ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸುಮಾರು ಎರಡು ಲಕ್ಷ ಮನೆಗಳು ನೆಲಸಮವಾದವು.

2013ರ ಉತ್ತರಖಂಡದ ಮೇಘಸ್ಪೋಟ
ಭಾರತೀಯರು ಎಂದೂ ಕೇಳದೇ ಇದ್ದ ಮೇಘಸ್ಪೋಟ ಅಥವಾ cloudburst ಎಂಬ ಪದವನ್ನು 16 ನೇ ಜೂನ್ 2013ರಂದು ಇಡಿಯ ದೇಶದವರು ಕಲಿತರು. ಏಕಾಏಕಿ ಮೋಡಗಳು ಧುತ್ತನೇ ನೀರಿನ ರೂಪದಲ್ಲಿ ಬಿದ್ದ ಪರಿಣಾಮವಾಗಿ ಕೆಲವೇ ಕ್ಷಣಗಳಲ್ಲಿ ಕೊರಕಲು, ನದಿಗಳು ಉಕ್ಕಿ ಹರಿದವು.

2013ರ ಉತ್ತರಖಂಡದ ಮೇಘಸ್ಪೋಟ
ಅನವರತ ಮಳೆ ನದಿದಂಡೆಗಳನ್ನೆಲ್ಲಾ ಕುಸಿಯುತ್ತಾ ಅದರ ಅಂಚಿನ ಮೇಲೆ ಕಟ್ಟಿದ್ದ ಮನೆಗಳನ್ನು ನುಂಗುತ್ತಾ ಮುಂದುವರೆಯಿತು. ಎಷ್ಟು ಜನರು ಈ ಪ್ರಕೋಪದಿಂದ ಹತರಾದರು, ಎಷ್ಟು ಮನೆಗಳು ನಷ್ಟಗೊಂಡವು ಎಂಬ ವಿವರಗಳು ಇನ್ನೂ ನಿಖರವಾಗಿ ಸಿಕ್ಕಿಲ್ಲ.

ನೂರು ವರ್ಷಗಳ ಬಳಿಕ ಸುರಿದ ಚೆನ್ನೈ ಮಹಾಮಳೆ
ಇದೇ ವರ್ಷ, ೨೦೧೫ರಲ್ಲಿ ನೂರು ವರ್ಷಗಳ ಇತಿಹಾಸದಲ್ಲಿಯೇ ಸುರಿಯದಿದ್ದ ಮಳೆ ಚೆನ್ನೈಯಲ್ಲಿ ಸುರಿಯಿತು. ಆದರೆ ಈ ಬಾರಿ ನೀರು ನಿಲ್ಲಬೇಕಿದ್ದ ಸ್ಥಳದಲ್ಲೆಲ್ಲಾ ಒಂದಿಂಚೂ ಬಿಡದಂತೆ ಮನೆಗಳನ್ನು ಕಟ್ಟಿಕೊಂಡಿದ್ದವರಿಗೆ ಮಾತ್ರ ಭಾರೀ ತೊಂದರೆಯಾಗಿತ್ತು.

ನೂರು ವರ್ಷಗಳ ಬಳಿಕ ಸುರಿದ ಚೆನ್ನೈ ಮಹಾಮಳೆ
ಸರಿಸುಮಾರು ನಗರದ ಬಹುತೇಕ ಭಾಗ ನೀರಿನಲ್ಲಿ ಮುಳುಗಿತು. ಮಳೆ ಬರಲಾರದು ಎಂಬ ಉಢಾಪೆಯಿಂದ ಸ್ವಚ್ಛಗೊಳಿಸದೇ ಬಿಟ್ಟಿದ್ದ ಗಟಾರ, ಚರಂಡಿಗಳೆಲ್ಲ ಕಟ್ಟಿಕೊಂಡು ನಗರಪಾಲಿಕೆಯ ನಿರ್ಲಕ್ಷವನ್ನು ಎತ್ತಿ ತೋರಿತು. ಆದರೆ ಈ ಸಮಯದಲ್ಲಿ ಜನರು ತೋರಿಸಿದ ಸಾಮರಸ್ಯ, ಭ್ರಾತೃತ್ವ, ಸೌಹಾರ್ದತೆ ಇಡಿಯ ದೇಶಕ್ಕೇ ಮಾದರಿಯಾಯಿತು.



Click it and Unblock the Notifications