Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದು ಕ್ರಿಕೆಟಿಗರು ಹಾಗೂ ಸಿನಿ ತಾರೆಯರ ಪ್ರೇಮ ಕಥೆ!
ಭಾರತದಲ್ಲಿ ಶೀಘ್ರವಾಗಿ ಅತಿಹೆಚ್ಚು ಹಣಮಾಡಲು ಮೂರು ದಾರಿಗಳಿವೆ. ಅವೆಂದರೆ ರಾಜಕೀಯ, ಕ್ರಿಕೆಟ್ ಮತ್ತು ಬಾಲಿವುಡ್ ತಾರೆಯಾಗುವುದು. ಆದರೆ ಈ ಭಾಗ್ಯ ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ. ಹಣ, ಪ್ರಸಿದ್ಧಿ, ಖ್ಯಾತಿ ಎಲ್ಲವೂ ಇವರಿಗೆ ಲಭ್ಯವಾಗುತ್ತದೆ. ಈ ಖ್ಯಾತಿ ಪಡೆದಿರುವವರಲ್ಲಿ ಕೆಲವರು ತಮ್ಮ ಜೀವನಸಂಗಾತಿಯಾಗಿ ಖ್ಯಾತಿ ಪಡೆದಿರುವವರನ್ನೇ ವರಿಸುವುದನ್ನು ಗಮನಿಸಬಹುದು.
ಅಂತೆಯೇ ಬಾಲಿವುಡ್ ಮತ್ತು ಕ್ರಿಕೆಟ್ ತಾರೆಯರ ನಡುವಣ ಬಾಂಧವ್ಯ ಹಲವು ವರ್ಷಗಳಿಂದ ನಡೆದು ಬಂದಿದೆ. ಇದು ಬರೆಯ ಭಾರತದಲ್ಲಿ ಮಾತ್ರವಲ್ಲ. ಭಾರತ ಪಾಕಿಸ್ತಾನದ ನಡುವೆಯೂ ನಡೆದಿವೆ. ಎಪ್ಪತ್ತರ ನಟಿ ರೀನಾ ರಾಯ್ ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ ರನ್ನು ವರಿಸಿದ್ದು ಒಂದು ಉದಾಹರಣೆ. ಬನ್ನಿ, ಇಂತಹ ಇನ್ನೂ ಹಲವು ಜೋಡಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ನಗ್ಮಾ ಮತ್ತು ಸೌರವ್ ಗಂಗೂಲಿ
ಕ್ರಿಕೆಟ್ ಆಟಗಾರ ಮತ್ತು ಕಪ್ತಾನ ಸೌರವ್ ಗಂಗೂಲಿ ಹಾಗೂ ಚಿತ್ರನಟಿ ನಗ್ಮಾ ರ ನಡುವೆ ಯಾವ ತರಹದ ಸಂಬಂಧವಿದೆ ಎಂಬುದನ್ನು ಮಾಧ್ಯಮಗಳು ಎಷ್ಟು ಕೆದಕಿದರೂ ಸಿಗದ ಮಾಹಿತಿ ಆಸ್ಟ್ರೇಲಿಯಾದ ಆಟಗಾರನ ಮೂಲಕ ಹೊರಬಂದಿತ್ತು. ಆದರೆ ಈ ಮಾಹಿತಿ ಸತ್ಯ ಎಂದು ಯಾವುದೇ ಮಾಧ್ಯಮ ಪುರಾವೆ ಸಹಿತ ಸಾಬೀತುಪಡಿಸಲಾಗಿಲ್ಲ. ಯಾವುದೇ ಪಾರ್ಟಿ ಅಥವಾ ಕಾರ್ಯಕ್ರಮಗಳಲ್ಲಿ ಇಬ್ಬರೂ ಭಾಗವಹಿಸಿದ್ದರೂ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ.

ಜೀನತ್ ಅಮಾನ್ ಮತ್ತು ಇಮ್ರಾನ್ ಖಾನ್
ಮಡಿವಂತಿಕೆಯನ್ನು ಬದಿಗಿಟ್ಟು ಬೆಳ್ಳಿಪರದೆಯಲ್ಲಿ ಮೈಮಾಟ ತೋರಿದ ದಿಟ್ಟ ನಟಿಯರಲ್ಲಿ ಜೀನತ್ ಅಮಾನ್ ಪ್ರಮುಖರು. ಕುರ್ಬಾನಿ, ಸತ್ಯಂ ಶಿವಂ ಸುಂದರಂ ಮೊದಲಾದ ಚಿತ್ರಗಳಲ್ಲಿ ಮೈಮಾಟದ ಮೂಲಕ ಹೆಚ್ಚಿನ ಪ್ರಚಾರ ಪಡೆದ ಅವರು ಅಂದಿನ ದಿನಗಳಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದ್ದ ಕ್ರಿಕೆಟಿಗ ಇಮ್ರಾನ್ ಖಾನ್ ರೊಂದಿಗೆ ಹೆಚ್ಚು ಒಡನಾಟ ನಡೆಸುತ್ತಿದ್ದರು.

ಜೀನತ್ ಅಮಾನ್ ಮತ್ತು ಇಮ್ರಾನ್ ಖಾನ್
ಇನ್ನೇನು ಇವರು ವಿವಾಹವಾಗುತ್ತಾರೆ ಎನ್ನುತ್ತಿದ್ದಾಗಲೇ ಬೇರೆಯಾದರು. ಇದಕ್ಕೆ ಸ್ಪಷ್ಟ ಕಾರಣಗಳನ್ನು ನೀಡಲಿಲ್ಲವಾದರೂ ಮಾಧ್ಯಮಗಳ ಪ್ರಕಾರ ರಾಷ್ಟ್ರೀಯತೆ ಮತ್ತು ಇತರ ಕಾರಣಗಳು ಪರಸ್ಪರ ಬೇರ್ಪಡಲು ಕಾರಣವಾಗಿದ್ದಿರಬಹುದು.

ಸಂಗೀತಾ ಬಿಜಲಾನಿ ಮತ್ತು ಅಜರುದ್ದೀನ್
ಭಾರತ ಕಂಡ ಅತ್ಯಂತ ಯಶಸ್ವಿ ಕಪ್ತಾನ ಮತ್ತು ಕ್ಷೇತ್ರರಕ್ಷಕ ಎಂಬ ಹೆಗ್ಗಳಿಕೆ ಪಡೆದ ಮೊಹಮ್ಮದ್ ಅಜರುದ್ದೀನ್ ಅಂದಿನ ದಿನಗಳಲ್ಲಿ ವಾಶಿಂಗ್ ಪೌಡರ್ ನಿರ್ಮಾ ಜಾಹೀರಾತಿನ ಮೂಲಕ ಭಾರತದಲ್ಲಿ ಪ್ರಖ್ಯಾತಿ ಪಡೆದಿದ್ದ ಸಂಗೀತಾ ಬಿಜಲಾನಿಯವರ ಸ್ನೇಹ ಮೊದಮೊದಲು ಗುಟ್ಟಾಗಿದ್ದುದು ಬಳಿಕ ರಟ್ಟಾಗತೊಡಗಿತು. ಏಕೆಂದರೆ ಆಗ ಅಜರುದ್ದೀನ್ ವಿವಾಹಿತರಾಗಿದ್ದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಂಗೀತಾ ಬಿಜಲಾನಿ ಮತ್ತು ಅಜರುದ್ದೀನ್
1987 ರಿಂದ ಅವರ ಪತ್ನಿಯಾಗಿದ್ದ ನೌರೀನ್ ರೊಂದಿಗೆ ಸುಖಸಂಸಾರ ಹೂಡಿದ್ದರೂ ಬಿಜಲಾನಿಯವರ ಆಕರ್ಷಣೆ ಅವರನ್ನು ವಿಚ್ಚೇದನಕ್ಕೆ ಪ್ರೇರೇಪಿಸಿತು. 1996ರಲ್ಲಿ ನೌರೀನ್ ರನ್ನು ಬಿಟ್ಟು ಅವರು ಬಿಜಲಾನಿಯವರನ್ನು ಮದುವೆಯಾದರು. ಆದರೆ 2010ರಲ್ಲಿ ಈ ವಿವಾಹವೂ ವಿಚ್ಛೇದನಗೊಂಡಿತು.

ಇಶಾ ಶ್ರಾವಣಿ ಮತ್ತು ಜಹೀರ್ ಖಾನ್
ಸುಮಾರು ಎಂಟು ವರ್ಷಗಳ ಕಾಲ ಜೊತೆಯಾಗಿ ಕಾಣಿಸಿಕೊಂಡಿದ್ದ ನಟಿ ಇಶಾ ಶ್ರಾವಣಿ ಮತ್ತು ಕ್ರಿಕೆಟಿಗ ಜಹೀರ್ ಖಾನ್ ಇನ್ನೇನು ಮದುವೆಯಾಗುತ್ತಾರೆ ಎಂದಿದ್ದಾಗ ಏನಾಯಿತೋ ಗೊತ್ತಿಲ್ಲ, ಏಕಾ ಏಕಿ ಒಬ್ಬರನ್ನೊಬ್ಬರು ನೋಡುವುದನ್ನೇ ಬಿಟ್ಟುಬಿಟ್ಟರು.

ರೀನಾ ರಾಯ್ ಮತ್ತು ಮೊಹ್ಸಿನ್ ಖಾನ್
ಭಾರತ ಮತ್ತು ಪಾಕಿಸ್ತಾನದ ನಡುವೆ ಬೆಸುಗೆ ಬೆಸೆದ ಜೋಡಿಗಳಲ್ಲಿ ಈ ತಾರಾಜೋಡಿಯೂ ಒಂದು. ಕ್ರಿಕೆಟ್ ನಲ್ಲಿ ತಮ್ಮ ದಿನಗಳು ಮುಗಿದ ಬಳಿಕ ತಮ್ಮ ತಾರಾಬಲವನ್ನು ಭಾರತದ ಬಾಲಿವುಡ್ ನಲ್ಲಿ ಪ್ರಯತ್ನಿಸಿದ ಮೊಹ್ಸಿನ್ ಖಾನ್ ರಿಗೆ ಯಶಸ್ಸು ದೊರಕಲಿಲ್ಲ. ಸಾಥಿ ಮತ್ತು ಬಟ್ವಾರಾ ಮೊದಲಾದ ಚಿತ್ರಗಳಲ್ಲಿ ನಟಿಸಿದರೂ ಭಾರತೀಯ ಪ್ರೇಕ್ಷಕ ಅವರ ನಟನೆಯನ್ನು ಸ್ವಾಗತಿಸಲೇ ಇಲ್ಲ. ನಟನಾಗುವುದಿರಲಿ, ರೀನಾರ ಪತಿಯಾಗಿಯೇ ಉಳಿಯುವ ಭಾಗ್ಯವೂ ಅವರಿಗೆ ಉಳಿಯಲಿಲ್ಲ. ವಿಚ್ಛೇದನದ ಬಳಿಕ ರೀನಾ ಭಾರತಕ್ಕೆ ಮರಳಿದರೆ ಮೊಹ್ಸಿನ್ ಖಾನ್ ಕರಾಚಿಯಲ್ಲಿಯೇ ಉಳಿದು ಇನ್ನೊಂದು ಮದುವೆಯಾದರು.

ಅನೂಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ
ಬಾಲಿವುಡ್ ಮತ್ತು ಕ್ರಿಕೆಟ್ ರಂಗದ ಬೆಸುಗೆಯಲ್ಲಿ ತೀರಾ ಇತ್ತೀಚಿನ ಜೋಡಿ ಎಂದರೆ ಅನೂಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ. ಇಬ್ಬರೂ ಜೊತೆಯಾಗಿ ಹಲವು ಕಡೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬರ ಕಾರ್ಯಕ್ರಮಗಳಲ್ಲಿ ಇನ್ನೊಬ್ಬರು ಭಾಗಿಯಾಗುವುದು ಸಾಮಾನ್ಯವಾಗಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅನೂಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ
ಅಷ್ಟೇ ಅಲ್ಲ, ಭಾರತದ ಪರವಾಗಿ ಕ್ರಿಕೆಟ್ ಆಡಲು ನ್ಯೂಜಿಲ್ಯಾಂಡಿಗೆ ತೆರಳಿದ್ದಾಗ ಅವರಿಗೆ ಬೆಂಬಲ ನೀಡಲು ಅನೂಷ್ಕಾ ಸಹಾ ತೆರಳಿದ್ದರು. ಅಂತೆಯೇ ಬಾಂಬೆ ವೆಲ್ವೆಟ್ ಎಂಬ ಚಿತ್ರದ ಚಿತ್ರೀಕರಣಕ್ಕಾಗಿ ಶ್ರೀಲಂಕಾಕ್ಕೆ ಅನೂಷ್ಕಾ ತೆರಳಿದ್ದಾಗ ಅವರಿಗೆ ಬೆಂಬಲ ನೀಡಲು ವಿರಾಟ್ ಸಹಾ ಶ್ರೀಲಂಕಾಕ್ಕೆ ತೆರಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇವರಿಬ್ಬರೂ ಕೂಡ ಬೇರೆಯಾಗಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.

ರವಿ ಶಾಸ್ತ್ರಿ ಮತ್ತು ಅಮೃತಾ ಸಿಂಗ್
ಅಡಿಲೇಡ್ ನಲ್ಲಿ 1985ರಲ್ಲಿ ನಡೆದ ಬೆನ್ಸನ್ ಅಂಡ್ ಹೆಜಸ್ ವಿಶ್ವಕಪ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತದ ಗೆಲುವಿಗೆ ಕಾರಣರಾದ ರವಿ ಶಾಸ್ತ್ರಿಯವರಿಗೆ ಬಹುಮಾನವಾಗಿ ಆಡಿ ಸಂಸ್ಥೆಯ ಕಾರು ಸಿಕ್ಕ ಬಳಿಕ ಅವರ ಖ್ಯಾತಿ ಗಗನಕ್ಕೇರಿತು.

ರವಿ ಶಾಸ್ತ್ರಿ ಮತ್ತು ಅಮೃತಾ ಸಿಂಗ್
ಅಂದಿನ ದಿನಗಳಲ್ಲಿ ಅಮೃತಾ ಸಿಂಗ್ ಬಾಲಿವುಡ್ ನಲ್ಲಿ ಉತ್ತಮ ಸ್ಥಾನದಲ್ಲಿದ್ದು. ಇಬ್ಬರೂ ಪರಸ್ಪರ ಆಕರ್ಷಿತರಾಗಿ ಕೆಲವು ಕಾಲ ಜೊತೆಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರೆ. ಆದರೆ ಇದು ವಿವಾಹದವರೆಗೆ ಮುಂದುವರೆಯಲಿಲ್ಲ, ಬಳಿಕ ಅಮೃತಾ ಸಿಂಗ್ ಸೈಫ್ ಅಲಿ ಖಾನ್ ರನ್ನು ವಿವಾಹವಾದರು. ಇತ್ತ ರವಿಶಾಸ್ತಿ 1990ರಲ್ಲಿ ರಿತು ಸಿಂಗ್ ರನ್ನು ವಿವಾಹವಾಗಿ ಸುಖೀ ದಾಂಪತ್ಯ ನಡೆಸುತ್ತಿದ್ದಾರೆ.



Click it and Unblock the Notifications









