Latest Updates
-
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್
ಭೂಮಿಯ ಮೇಲಿನ ವಿಸ್ಮಯ ಸ್ಥಳಗಳು- ಹೀಗೂ ಉಂಟೇ?
ಮಾನವ ಮೂಲತಃ ಕುತೂಹಲತೆಯನ್ನು ತನ್ನಲ್ಲಿ ಅದುಮಿಟ್ಟುಕೊಳ್ಳಲಾರದ ಮನೋಭಾವವನ್ನು ಹೊಂದಿರುತ್ತಾನೆ. ಈತನ ಕುತೂಹಲವನ್ನು ಯಾವುದೆಲ್ಲಾ ಸೆಳೆಯುತ್ತದೆಯೋ, ಅದನ್ನು ಈತ ಹೋಗಿ ಪರೀಕ್ಷಿಸಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾನೆ ಮತ್ತು ಅದರಲ್ಲಿ ಈತ ಯಶಸ್ವಿಯು ಸಹ ಆಗಿದ್ದಾನೆ. ಅದರಲ್ಲೂ ನಿಗೂಢ ತಾಣಗಳು ಇವನನ್ನು ಕೈಬೀಸಿ ಕರೆಯುತ್ತಲೆ ಇರುತ್ತವೆ.
ಭೂಮಿಯ ಮೇಲೆ ಕೆಲವೊಂದು ಪ್ರದೇಶಗಳಿಗೆ ಸಾಮಾನ್ಯ ಮನುಷ್ಯರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೆಲವೊಂದು ಪ್ರದೇಶಗಳು ಮಿಲಿಟರಿಯವರಿಗೆ ಮಾತ್ರ ಪ್ರವೇಶವನ್ನು ನೀಡಲಾಗಿರುತ್ತದೆ, ಇನ್ನೂ ಕೆಲವನ್ನು ಮಿಲಿಟರಿಯವರೇ ಕಾಯುತ್ತಿರುತ್ತಾರೆ. ಇನ್ನೂ ಕೆಲವೊಂದು ನಿಜಕ್ಕೂ ಭಯಾನಕ ಸ್ಥಳಗಳಾಗಿದ್ದು, ಜನರೇ ಅಲ್ಲಿಗೆ ಹೋಗಲು ಎದುರುತ್ತಾರೆ. ಈ ಲೇಖನದಲ್ಲಿ ಅಂತಹ ಕೆಲವೊಂದು ಸ್ಥಳಗಳ ಕುರಿತು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ. ಬನ್ನಿ ಆ ಕೌತುಕಮಯ ಸ್ಥಳಗಳ ಕುರಿತಾಗಿ ನಾವು ಸಹ ತಿಳಿದುಕೊಳ್ಳೋಣ....

ಮೌಂಟ್ ವೆದರ್ ಎಮರ್ಜೆನ್ಸಿ ಆಪರೇಶನ್ಸ್ ಸೆಂಟರ್
ಪ್ರಳಯವು ಕೇವಲ ಚಲನಚಿತ್ರಗಳಲ್ಲಿ ಮಾತ್ರ ಸಂಭವಿಸುತ್ತದೆ ಎಂದುಕೊಳ್ಳಬೇಡಿ. ನಿಜ ಜೀವನದಲ್ಲಿ ಸಹ ಸಂಭವಿಸಬಹುದು ಎಂದು ಭಾವಿಸುವ ಹಲವರು ಇದ್ದಾರೆ. ಅಂತಹವರಿಗಾಗಿ ಮತ್ತು ಒಂದು ವೇಳೆ ಪ್ರಳಯ ಸಂಭವಿಸಿದರೆ ಪ್ರಪಂಚದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಈ ಅದ್ಭುತ ಕೇಂದ್ರದಲ್ಲಿ ಆಶ್ರಯ ಪಡೆಯಲು ಇದನ್ನು ರೂಪಿಸಲಾಗಿದೆ. Image courtesy

ಜಿಯಾಂಗ್ಸು ನ್ಯಾಷನಲ್ ಸೆಕ್ಯೂರಿಟಿ ಎಜುಕೇಶನ್ ಮ್ಯೂಸಿಯಂ
ಈ ವಸ್ತು ಸಂಗ್ರಹಾಲಯವು ಚೀನಾದಲ್ಲಿದೆ. ಇಲ್ಲಿಗೆ ಯಾವುದೇ ವಿದೇಶಿಯರನ್ನು ಪ್ರವೇಶಿಸಲು ಬಿಡುವುದಿಲ್ಲ. ಇದೊಂದು ರಹಸ್ಯಮಯ ವಸ್ತು ಸಂಗ್ರಹಾಲಯವಾಗಿದ್ದು, ಇಲ್ಲಿ ಚೀನೀಯರು ಬಳಸುವ ಪತ್ತೆದಾರಿ ಉಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. Image courtesy

ಇಸ್ ಗ್ರ್ಯಾಂಡ್ ಶ್ರೈನ್
ಇದು ಜಪಾನಿನಲ್ಲಿರುವ ಒಂದು ಗುಡಿಯಾಗಿದೆ. ಇಲ್ಲಿಗೆ ಅರ್ಚಕ ಮತ್ತು ಅರ್ಚಕಿಯರಿಬ್ಬರನ್ನು ಹೊರತುಪಡಿಸಿದರೆ, ಇತರರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ವಿಶ್ವದ ಅದೆಂತಹದೇ ಮಹಾನ್ ವ್ಯಕ್ತಿ ಬಂದರು ದೇವಾಲಯದ ಹುಲ್ಲು ಛಾವಣಿಯನ್ನು ನೋಡಿಕೊಂಡು ಸುಮ್ಮನೆ ವಾಪಸ್ ಹೋಗಬೇಕು, ಅಷ್ಟು ಕಟ್ಟುನಿಟ್ಟಾಗಿ ಈ ದೇವಾಲಯದ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. Image courtesy

ನಿಹವು ದ್ವೀಪ
ಹವಾಯಿಯನ್ ದ್ವೀಪದ ಸರ್ಕಾರವು ತೆಗೆದುಕೊಂಡಿರುವ ಅತ್ಯುತ್ತಮ ನಿರ್ಧಾರಗಳಲ್ಲಿ ಇದು ಒಂದು. ಈ ನಿರ್ಧಾರದ ಹಿಂದೆ ಪರಿಸರ ರಕ್ಷಣೆಯ ಕಾಳಜಿ ಇರುವುದು ಶ್ಲಾಘನೀಯ. ಈ ದ್ವೀಪದ ಮಾಲೀಕರ ಸಂಬಂಧಿಕರಿಗೆ ಹೊರತುಪಡಿಸಿದರೆ, ಇತರರಿಗೆ ಈ ದ್ವೀಪ ಪ್ರವೇಶಕ್ಕೆ ನಿರ್ಬಂಧವನ್ನು ವಿಧಿಸಲಾಗಿದೆ. Image courtesy

ಮಹಾರಾಣಿಯ ಮಲಗುವ ಕೋಣೆ
ಇದು ಸಹ ವಿಶ್ವದ ಅತ್ಯಂತ ರಹಸ್ಯಮಯ ಸ್ಥಳವಾಗಿದೆ. ಇಲ್ಲಿಗೆ ವಿಶ್ವದ ಯಾವುದೇ ವ್ಯಕ್ತಿಯನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಇದಕ್ಕಾಗಿಯೇ ನಾವು ಈ ಕೋಣೆಯ ಬದಲಿಗೆ ಬಾಲ್ ರೂಮ್ ಚಿತ್ರವನ್ನು ಹಂಚಿಕೊಳ್ಳುತ್ತಿದ್ದೇವೆ! Image courtesy



Click it and Unblock the Notifications