Latest Updates
-
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ!
ಅದೃಷ್ಟವೆಂದರೆ ಹೀಗಿರಬೇಕು, ಮುಟ್ಟಿದ್ದೆಲ್ಲಾ ಚಿನ್ನವಾಗಬೇಕು!
ಏಯ್ ಆತನ ಅದೃಷ್ಟ ನೋಡೋ...ಸರಿಯಾಗಿ ಕೆಲಸ ಕೂಡ ಇಲ್ಲದವನು ಈಗ ಹೇಗಾಗಿದ್ದಾನೆ. ಅದೃಷ್ಟವೆಂದರೆ ಹೀಗಿರಬೇಕಪ್ಪ. ಇಂತಹ ಅದೃಷ್ಟ ನಮಗೂ ಸಿಗಲಿ ದೇವರೇ ಎಂದು ಒಬ್ಬ ಹಠಾತ್ ಆಗಿ ಶ್ರೀಮಂತನಾಗಿರುವುದನ್ನು ನೋಡಿ ಹೇಳುತ್ತೇವೆ. ಅದೃಷ್ಟವೆನ್ನುವುದು ಹಾಗೆ. ಯಾರನ್ನೂ ಏನು ಬೇಕಾದರೂ ಮಾಡಬಹುದು. ಭಿಕ್ಷುನಾಗಿದ್ದವ ಶ್ರೀಮಂತನಾಗಬಹುದು!
ಇದು ಅದೃಷ್ಟದ ಮಹಿಮೆ. ಒಂದು ಕೋಟಿಗಟ್ಟಲೆ ಲಾಟರಿ, ಖರೀದಿಸಿದ ಅಂಗಡಿಯಲ್ಲಿ ಭಾರೀ ವಿನಾಯಿತಿ ಅಥವಾ ಕಾರು ಅಥವಾ ಬೇರೆ ಯಾವುದೋ ವಸ್ತುಗಳು ನಿಮಗೆ ಲಕ್ಕಿ ಡ್ರಾದಲ್ಲಿ ಸಿಗುವುದು ಇದು ಅದೃಷ್ಟವೆನ್ನುತ್ತೇವೆ. ದೊಡ್ಡ ವಿಮಾನ ಅಪಘಾತವಾದಾಗಲೂ ಬದುಕುಳಿದು ಬರುವುದು ಕೂಡ ಅದೃಷ್ಟವೇ.
ಈ ಲೇಖನದಲ್ಲಿ ಭೂಮಿ ಮೇಲಿರುವ ಅತ್ಯಂತ ಅದೃಷ್ಟವಂತರ ಬಗ್ಗೆ ತಿಳಿಸಿಕೊಡಲಿದ್ದೇವೆ. ಇವರ ಬಗ್ಗೆ ಓದಿದರೆ ಅದೃಷ್ಟವು ಒಬ್ಬ ವ್ಯಕ್ತಿಯನ್ನು ಒಳ್ಳೆಯದು ಮಾಡಬಹುದು ಅಥವಾ ಕೆಟ್ಟದೂ ಮಾಡಬಹುದು ಎಂದು ತಿಳಿದುಕೊಳ್ಳಬಹುದು. ಭೂಮಿ ಮೇಲೆ ತುಂಬಾ ಅದೃಷ್ಟವಂತರಾಗಿರುವ ವ್ಯಕ್ತಿಗಳ ಬಗ್ಗೆ ಕೊಟ್ಟಿರುವ ಪಟ್ಟಿಯನ್ನು ಓದಿಕೊಂಡು ನಿಮಗೂ ಆ ಅದೃಷ್ಟ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳಿ.

ಫ್ರಾನೆ ಸೆಲಾಕ್
ಕ್ರೋವೆಶೀಯಾದ ಸಂಗೀತ ಶಿಕ್ಷಕನಾಗಿರುವ ಈತ ಏಳು ಸಲ ಸಾವಿನ ದವಡೆಯಿಂದ ಪಾರಾಗಿದ್ದಾನೆ. ರೈಲು, ವಿಮಾನ ಮತ್ತು ಬಸ್ಸು ದುರ್ಘಟನೆಯಲ್ಲಿ ಪಾರಾಗಿ ಬಂದಿದ್ದಾನೆ. ಆತನ ಕಾರು ಹಲವಾರು ಸಲ ಅಪಘಾತಕ್ಕೊಳಗಾಗಿದೆ. ಇಷ್ಟು ಮಾತ್ರವಲ್ಲದೆ ಆತನಿಗೆ ಒಂದು ಬಸ್ ಬಂದು ಬಡಿದಿದೆ. ಆತನ ಕಾರಿಗೆ ಬಡಿದಿದ್ದ ಟ್ರಕ್ ಒಂದು ಸುಮಾರು ದೂರ ಇದನ್ನು ದೂಡಿಕೊಂಡು ಹೋಗಿದೆ. ಇಂತಹ ಅವಘಡಗಳಿಂದ ಪಾರಾಗಿದ್ದ ಆತ 1,000,000 ಡಾಲರ್ ಲಾಟರಿ ಗೆದ್ದುಕೊಂಡು ವಿಶ್ವದ ಅತ್ಯಂತ ಅದೃಷ್ಟವಂತ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಜೊಯಾನ್ ಜಿಂಟರ್
ಜೊಯಾನ್ ಜಿಂಟರ್ ಸತತ ನಾಲ್ಕು ಸಲ ಟೆಕ್ಸಾಸ್ ಲಾಟರಿ ಗೆದ್ದುಕೊಂಡಾಕೆ. ಇದು ಅದೃಷ್ಟದ ಮೇಲೆ ಅದೃಷ್ಟ ಎನ್ನಬಹುದು ಅಲ್ಲವೇ? ಮೊದಲು ಆಕೆ 5.4 ಮಿಲಿಯನ್ ಡಾಲರ್, ಇದರ ಹತ್ತು ವರ್ಷದ ಬಳಿಕ 2 ಮಿಲಿಯನ್ ಡಾಲರ್, ಎರಡು ವರ್ಷ ಬಳಿಕ 3 ಮಿಲಿಯನ್ ಡಾಲರ್ ಇದರ ಬಳಿಕ ಅಂತಿಮವಾಗಿ ಆಕೆ 10 ಮಿಲಿಯನ್ ಡಾಲರ್ ಗೆದ್ದುಕೊಂಡಳು. ಇಂತಹ ಅದೃಷ್ಟ ಪ್ರತಿಯೊಬ್ಬರಿಗೂ ಸಿಗದು.
ರೇಷ್ಮಾ ಬೇಗಂ



Click it and Unblock the Notifications


