Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಈ ಚಿತ್ರಗಳನ್ನು ನೋಡುತ್ತಿದ್ದರೆ, ಕಲ್ಲೆದೆಯು ಕರಗಿ ನೀರಾದೀತು...
ಒಂದು ಚಿತ್ರ ಇತಿಹಾಸದ ಒಂದು ಭಾಗವನ್ನೇ ಬಿಂಬಿಸಬಹುದು ಎನ್ನುತ್ತಾರೆ. ಅಂತೆಯೇ ಐತಿಹಾಸಿಕ ಕ್ಷಣಗಳನ್ನು ದಾಖಲಿಸಿದ ಕೆಲವು ಚಿತ್ರಗಳು ಇಂದಿಗೂ ಆ ಸಂದರ್ಭದ ಮೂಕ ಸಾಕ್ಷಿಯಾಗಿ ಉಳಿದಿದ್ದು ನೋಡುವವರ ಮನದಲ್ಲಿ ಭಾವನೆಗಳನ್ನು ಮೂಡಿಸುತ್ತವೆ. ಇಂತಹ ಕೆಲವು ಐತಿಹಾಸಿಕ ಮತ್ತು ಅಮೂಲ್ಯವಾದ ಚಿತ್ರಗಳನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಈ ಚಿತ್ರಗಳನ್ನು ನೋಡುತ್ತಿದ್ದರೆ ಕೆಲವೊಮ್ಮೆ ನಮ್ಮ ಚಿತ್ತಸ್ವಾಸ್ಥ್ಯವೇ ಚಂಚಲಗೊಳ್ಳಬಹುದು. ಕೆಲವು ಮರುಕ ಮೂಡಿಸಿದರೆ ಕೆಲವು ಹೀಗೂ ಇತ್ತೇ ಎಂದು ಅಚ್ಚರಿಯನ್ನೂ ಮೂಡಿಸಬಹುದು.
ಈ ಎಲ್ಲಾ ಚಿತ್ರಗಳು 100%ರಷ್ಟು ನಿಜವಾಗಿದ್ದು ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಚಿತ್ರದಲ್ಲಿರುವವರು ಮತ್ತು ಈ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದವರು ಪಟ್ಟ ವೇದನೆ, ನೋವು, ಪರಿತಾಪಗಳನ್ನು ಈ ಚಿತ್ರಗಳು ಸ್ಪಷ್ಟವಾಗಿ ನಿವೇದಿಸುತ್ತಿವೆ. ಈ ಚಿತ್ರಗಳನ್ನು ನೋಡಿದಾಗ ನಿಮಗೆ ಏನೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ....

ಜರ್ಮನಿಯ ಬರ್ಗೆನ್-ಬೆಲ್ಸೆನ್ ಅತಿದೊಡ್ಡ ಗೋರಿ
1941 ರಿಂದ 1945ರ ನಡುವಣ ಮಹಾಯುದ್ಧದ ಸಮಯದಲ್ಲಿ ಸುಮಾರು ಇಪ್ಪತ್ತು ಸಾವಿರ ಸೋವಿಯತ್ ರಷ್ಯಾದ ಸೆರೆಹಿಡಿದ ಸೈನಿಕರು ಮತ್ತು ಐವತ್ತು ಸಾವಿರಕ್ಕೂ ಹೆಚ್ಚು ಯುದ್ಧ ಕೈದಿಗಳನ್ನು ಕೊಂದು ದೊಡ್ದದೊಂದು ಗುಂಡಿಯಲ್ಲಿ ಹೂಳಲಾಯಿತು. ಹೆಣಗಳೇ ತುಂಬಿದ್ದ ಈ ಗುಂಡಿಯಲ್ಲಿ ಹೆಮ್ಮೆಯಿಂದ ನಡೆದು ತನ್ನ ಪರಾಕ್ರಮ ಬಿಂಬಿಸಿದ ಜರ್ಮನ್ ವೈದ್ಯರೊಬ್ಬರನ್ನು ಬಳಿಕ ಕ್ರೂರತೆ ಮತ್ತು ಪಾಶವಿಕ ಕೃತ್ಯಕ್ಕಾಗಿ ಗಲ್ಲಿಗೇರಿಸಲಾಯಿತು. Image courtesy

ಅಮೇರಿಕಾದಲ್ಲಿ ಕಪ್ಪು ಜನರಿಗೆ ನೀಡುತ್ತಿದ್ದ ನೇಣುಶಿಕ್ಷೆ
ಲಾರೆನ್ಸ್ ಬೀಟ್ಲರ್ ಎಂಬುವರು ಸೆರೆಹಿಡಿದ ಈ ಚಿತ್ರದಲ್ಲಿ ಇಬ್ಬರು ಕಪ್ಪುವರ್ಣದ ವ್ಯಕ್ತಿಗಳನ್ನು ನೇಣು ಹಾಕುತ್ತಿರುವುದನ್ನು ತೋರಿಸಲಾಗಿದೆ. ಇವರನ್ನು ಅತ್ಯಾಚಾರದ ಆರೋಪದಲ್ಲಿ ನೇಣು ಹಾಕಲಾಗಿತ್ತು. ಆದರೆ ಇವರ ಮೇಲೆ ಇದ್ದ ಆರೋಪಗಳು ಸುಳ್ಳು ಎಂದು ಸಾಬೀತಾಗುವ ಮೊದಲೇ ಇಬ್ಬರು ಇಹಲೋಕ ತ್ಯಜಿಸಿ ಆಗಿತ್ತು. Image courtesy

ಶತಮಾನದ ಐತಿಹಾಸಿಕ ಚಿತ್ರ
9/11 ಧಾಳಿ ಎಂದೇ ಪ್ರಖ್ಯಾತವಾದ ಅಮೇರಿಕಾದ ಟ್ವಿನ್ ಟವರ್ ಮೇಲೆ ವೈಮಾನಿಕ ಧಾಳಿಯ ಈ ಚಿತ್ರ ಶತಮಾನದ ಐತಿಹಾಸಿಕ ಚಿತ್ರ ಎಂದೇ ಚರಿತ್ರೆಯಲ್ಲಿ ದಾಖಲಾಗಿದೆ. ಸ್ಟೀವ್ ಲುಡ್ಲುಂ ಎಂಬುವರು ತೆಗೆದ ಈ ಚಿತ್ರವನ್ನು ತೆಗೆಯುವ ವೇಳೆ ಅವರಿಗೆ ಇದೊಂದು ಧಾಳಿ ಎಂದೇ ಗೊತ್ತಿರಲಿಲ್ಲ. ಸುಮ್ಮನೇ ಸಾವಕಾಶವಾಗಿ ಫೋಟೋ ತೆಗೆಯುತ್ತಿದ್ದಾಗ ಈ ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಇನ್ನಷ್ಟು ಚಿತ್ರಗಳನ್ನು ತೆಗೆದರು. ಅವುಗಳಲ್ಲಿ ಈ ಚಿತ್ರ ಮರುದಿನದ ನ್ಯೂಯಾರ್ಕ್ ಟೈಮ್ಸ್ ನ ಮುಖಪುಟದಲ್ಲಿ ಪ್ರಕಟವಾಗಿ ಶತಮಾನದ ಚಿತ್ರವೆಂಬ ಖ್ಯಾತಿ ಪಡೆಯಿತು. Image courtesy

ಬೀಳುತ್ತಿರುವ ಮನುಷ್ಯ
ವರ್ಲ್ಡ್ ಟ್ರೇಡ್ ಸೆಂಟರ್ ಧಾಳಿಯ ಸಮಯದಲ್ಲಿ ಜೀವ ಉಳಿಸಿಕೊಳ್ಳಲು ಮೇಲಿನ ಅಂತಸ್ತಿನಿಂದ ಕಿಟಕಿಯಿಂದ ಹೊರಗೆ ದಾಟಿ ತಪ್ಪಿಸಿಕೊಳ್ಳುವಾಗ ಆಯತಪ್ಪಿ ಬಿದ್ದ ವ್ಯಕ್ತಿಯ ಶರೀರ ಗಾಳಿಯಲ್ಲಿದ್ದಾಗಲೇ ಕ್ಲಿಕ್ಕಿಸಿದ ಈ ಚಿತ್ರ ಇನ್ನೊಂದು ಐತಿಹಾಸಿಕ ಚಿತ್ರವಾಗಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಹೊರಗೆ ಧಾವಿಸಿದ ಆತ ಕೆಳಕ್ಕೆ ಬಿದ್ದ ಆಘಾತಕ್ಕೆ ಸ್ಥಳದಲ್ಲಿಯೇ ಮರಣವನ್ನಪಿದ್ದ. Image courtesy

ಭಾರತದ ಗ್ಯಾಸ್ ಗುರಂತ
ಭೋಪಾಲ್ ನ ಗ್ಯಾಸ್ ದುರಂತ ಒಂದು ಅತ್ಯಂತ ಹೃದಯವಿದ್ರಾವಕ ಘಟನೆಯಾಗಿದ್ದು ವಿಷಗಾಳಿಯ ಪ್ರಭಾವದಿಂದ ಐವತ್ತು ಸಾವಿರಕ್ಕೂ ಹೆಚ್ಚು ಜನರು ಅಂದು ಸಾವಿಗೀಡಾಗಿ ಇಂದಿಗೂ ಇದರ ಪರೋಕ್ಷ ಪರಿಣಾಮಗಳಿಂದ ಸಾವಿರಾರು ಜನರು ನರಳುತ್ತಿದ್ದಾರೆ. ಈ ಘಟನೆಯ ಸಮಯದಲ್ಲಿ ಪ್ಯಾಬ್ಲೋ ಬಾರ್ಥೋಲೋಮ್ಯೂ ಎಂಬುವರು ಕ್ಲಿಕ್ಕಿಸಿದ ಈ ಚಿತ್ರ ಭಾರತದ ಐತಿಹಾಸಿಕ ಚಿತ್ರವಾಗಿದೆ. Image courtesy

ವಿಯೆಟ್ನಾಂ ಯುದ್ಧದ ಭೀಕರತೆ ಬಿಂಬಿಸುವ ಚಿತ್ರ
ಅಮೇರಿಕಾ ಎಂಬ ದೈತ್ಯ ದೇಶದ ಅಡಿಯಾಳಾಗಲು ಒಪ್ಪದೇ ಸೆಟೆದು ನಿಂದ ಪುಟ್ಟ ದೇಶವಾದ ವಿಯೆಟ್ನಾಂ ನ ಪೌರರನ್ನು ಅಂದಿನ ಅಮೇರಿಕನ್ ಅಧಿಕಾರಿಗಳು ತಿಗಣೆಯಂತೆ ಹೊಸಕಿ ಹಾಕುತ್ತಿದ್ದರು. ಇಂತಹ ಒಂದು ಸಂದರ್ಭದಲ್ಲಿ ವಿಯೆಟ್ನಾಂ ಪ್ರಜೆಯೊಬ್ಬರನ್ನು ಅಮೇರಿಕಾದ General Nguyen Ngoc Loan ಎಂಬ ಅಧಿಕಾರಿಯೊಬ್ಬರು 1ನೇ ಫೆಬ್ರವರಿ 1968ರಂದು ಹಣೆಗೆ ಗುಂಡಿಟ್ಟು ಕೊಲ್ಲುವ ಕೆಲವೇ ಕ್ಷಣದ ಮೊದಲು ಎಡ್ಡೀ ಆಡಂಸ್ ಎಂಬುವರು ತೆಗೆದ ಈ ಚಿತ್ರ ಎಂತಹವರ ಮನವನ್ನೂ ಕಲಕುತ್ತದೆ. ಈ ಕೊಲೆಯ ಬಳಿಕ ಆ ಅಧಿಕಾರಿ ಇನ್ನೂ ಸುಮಾರು ಹನ್ನೆರಡು ಜನರನ್ನು ಕೊಲೆಗೈದಿದ್ದು ಬಳಿಕ ಈ ಕೃತ್ಯಕ್ಕಾಗಿ ವಿಚಾರಣೆಯನ್ನು ಎದುರಿಸಬೇಕಾಯ್ತು ಹಾಗೂ ಶಿಕ್ಷೆಯನ್ನೂ ಅನುಭವಿಸಬೇಕಾಗಿ ಬಂದಿತ್ತು. Image courtesy

ಇರಾಕ್ ನಲ್ಲಿ ಕೈದಿಗಳಿಗೆ ನೀಡುತ್ತಿದ್ದ ಚಿತ್ರಹಿಂಸೆ
ಈ ಚಿತ್ರವನ್ನು ಇರಾಕ್ ದೇಶದ ಗಾರಿಬ್ ಎಂಬ ಬಂದೀಖಾನೆಯಲ್ಲಿ ಕೈದಿಗಳ ಚಿತ್ರಹಿಂಸೆಯ ಸಮಯದಲ್ಲಿ ಅಮೇರಿಕಾದ ಭೂಸೇನೆ ಮತ್ತು ಸಿಐಎ ಏಜೆಂಟರಾಗಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದಾರೆ. ಅಂದು ಕೈದಿಗಳ ಮೇಲೆ ಹಿಂಸೆ, ಬಲಾತ್ಕಾರ, ಕೊಲೆ ಮತ್ತು ಗುದಕಾಮ ಮೊದಲಾದ ಅಪರಾಧಗಳು ನಡೆಯುತ್ತಿದ್ದವು. ಕುತ್ತಿಗೆಗೆ ಬೆಲ್ಟ್ ಹಾಕಿ ನಾಯಿಗಳಂತೆ ಎಳೆದೊಯ್ಯಲಾಗುತ್ತಿತ್ತು. Image courtesy



Click it and Unblock the Notifications