ಊಹಿಸಲೂ ಸಾಧ್ಯವಿಲ್ಲದಷ್ಟು ದುಬಾರಿ ಮನೆಗಳು...

By Super

ವಿಶ್ವದ ವಿವಿಧ ಮಜಲುಗಳನ್ನು ನೋಡಲು ವಿಶ್ವ ಪರ್ಯಟನೆಯ ಬಯಕೆಯೇ? ಇದಕ್ಕೆ ವಿಶ್ವವನ್ನೆಲ್ಲಾ ಸುತ್ತುವ ಅಗತ್ಯವೇ ಇಲ್ಲ, ಬರೆಯ ಭಾರತದ ಉದ್ದಗಲಕ್ಕೆ ತಿರುಗಿದರೆ ಸಾಕು, ವಿಶ್ವದಲ್ಲಿ ಏನೇನು ನೋಡಬಹುದೋ ಅದನ್ನೆಲ್ಲಾ ಇಲ್ಲೇ ನೋಡಬಹುದು, ಬಹುಷಃ ಅದಕ್ಕಿಂತಲೂ ಹೆಚ್ಚು. ಏಕೆಂದರೆ ಭಾರತದಲ್ಲಿ ಸಿಗುವಷ್ಟು ವೈವಿಧ್ಯತೆ ಜಗತ್ತಿನ ಬೇರೆಲ್ಲೂ ಇರಲಾರದು. ಏಕೆಂದರೆ ಅತ್ಯಂತ ಬಡವರಿಂದ ಹಿಡಿದು ವಿಶ್ವದ

ಅತ್ಯಂತ ಶ್ರೀಮಂತರವರೆಗೆ, ಸಮುದ್ರ, ನದಿ, ಮರುಭೂಮಿ, ಹಿಮಚ್ಛಾದಿತ ಬೆಟ್ಟ, ರೈಲು, ಬಸ್ಸು, ಕಾರುಗಳು, ದುಬಾರಿ ಮನೆಗಳು, ಗುಡಿಸಲುಗಳು, ವಿಶ್ವದ ಅತ್ಯಂತ ದುಬಾರಿ ವಸ್ತುಗಳು, ವಿಶ್ವದ ಅತ್ಯಂತ ಅಗ್ಗವಾದ ವಸ್ತುಗಳು, ಪ್ರಾಮಾಣಿಕತೆ, ಭ್ರಷ್ಟಾಚಾರ, ದಡ್ಡ ಜನರು, ಅತಿ ಬುದ್ಧಿವಂತ ಜನರು, ಕಾಡುಗಳು, ಕೃಷಿಭೂಮಿ, ಮೀನುಗಾರಿಕೆ ಎಲ್ಲವೂ ಈ ಭಾರತದಲ್ಲಿಯೇ ಸಿಗುತ್ತವೆ. ಆದರೆ ಹೆಚ್ಚಿನವರ ಕಣ್ಣಿಗೆ ದುಬಾರಿ ಮತ್ತು ಪ್ರಖರವಾಗಿರುವುದು ಮಾತ್ರವೇ ಕಾಣುತ್ತವೆ. (ಇದೇ ಕಾರಣಕ್ಕೆ ಕಣ್ಣಿಗೆ ರಾಚುವಂತಿರುವ ಸ್ಥಳದಲ್ಲಿಯೇ ಜಾಹೀರಾತುಗಳ ದೊಡ್ಡ ದೊಡ್ಡ ಫಲಕಗಳನ್ನು ಅಳವಡಿಸುತ್ತಾರೆ).

ಶ್ರೀಮಂತರ ವಿಷಯ ತೆಗೆದುಕೊಳ್ಳುವುದಾದರೆ ಭಾರತದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಂತರಿದ್ದಾರೆ. ತಮ್ಮ ಆಸ್ತಿಯನ್ನು ಘೋಷಿಸಿಕೊಂಡವರು ಮಾತ್ರ ಶ್ರೀಮಂತರ ಪಟ್ಟಿಯಲ್ಲಿ ಸಿಗುವ ಕಾರಣ ಅಕ್ರಮವಾಗಿ ಹಣ ಸಂಪಾದಿಸಿದವರ ಹೆಸರು ಪಟ್ಟಿಯಲ್ಲಿಯೇ ಇಲ್ಲ. ಹೆಚ್ಚಿನವರು ತಮ್ಮ ಸಂಪಾದನೆಯ ಹಣವನ್ನು ವೈಭವೋಪೇತ ಮನೆಗಳನ್ನು ಕೊಳ್ಳುವುದರಲ್ಲಿ ಖರ್ಚು ಮಾಡುತ್ತಾರೆ. ಎಷ್ಟೇ ಆದರೂ ಅವರ ಮನೆಯ ದೋಸೆಯೂ ತೂತೇ ಅಲ್ಲವೇ! ಬನ್ನಿ, ಭಾರತದಲ್ಲಿ ಅತ್ಯಂತ ದುಬಾರಿಯಾದ ಇಂತಹ ಪ್ರಮುಖ ಮನೆಗಳಿಗೆ ಕೆಳಗಿನ ಸ್ಲೈಡ್ ಶೋ ಮೂಲಕ ಭೇಟಿ ನೀಡೋಣ...

ಆಂಟಿಲ್ಲಾ, ಮಾಲಿಕರು: ಮುಕೇಶ್ ಅಂಬಾನಿ

ಆಂಟಿಲ್ಲಾ, ಮಾಲಿಕರು: ಮುಕೇಶ್ ಅಂಬಾನಿ

ಮುಂಬೈಯ ದಕ್ಷಿಣ ಭಾಗದಲ್ಲಿರುವ ಪೆದ್ದಾರ್ ರೋಡ್ ಪಕ್ಕದಲ್ಲಿರುವ ಅಲ್ಟಾಮೌಂಟ್ ರಸ್ತೆಯಲ್ಲಿರುವ ಬೃಹದಾಕಾರದ ಕಟ್ಟಡವನ್ನು ಒಂದೇ ಮನೆ ಎಂದು ಕರೆಯಲು ಕಷ್ಟವಾಗುತ್ತದೆ. ಇದರ ಬೆಲೆ ಸುಮಾರು 6000ರಿಂದ 12,000 ಸಾವಿರ ಕೋಟಿ ರೂಪಾಯಿ ರೂಪಾಯಿ ಎಂದು ಅಂದಾಜು ಹಾಕಿದರೂ ಇದರ ಮಾಲಿಕರಾದ ಮುಕೇಶ್ ಅಂಬಾನಿಯವರು ನೀಡಿರುವ ದಾಖಲೆಗಳ ಪ್ರಕಾರ ಇದರ ಬೆಲೆ ಸುಮಾರು ಒಂದು ಬಿಲಿಯನ್ ಡಾಲರುಗಳು ಅಂದರೆ 6809,99,50,000.00 ರೂ (6809 ಕೋಟಿ ರೂ) ಮೂಲಕ ಇದು ವಿಶ್ವದ ಅತ್ಯಂತ ದುಬಾರಿ ಮನೆಯಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy-www.telegraph.co.uk

ಆಂಟಿಲ್ಲಾ, ಮಾಲಿಕರು: ಮುಕೇಶ್ ಅಂಬಾನಿ

ಆಂಟಿಲ್ಲಾ, ಮಾಲಿಕರು: ಮುಕೇಶ್ ಅಂಬಾನಿ

ಭಾರತದ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ ರಿಲೈಯನ್ಸ್ ಸಂಸ್ಥೆಗಳ ಮಾಲಿಕರಾದ ಮುಕೇಶ್ ಅಂಬಾನಿಯವರ ಮಹತ್ವಾಕಾಂಕ್ಷೆಯ ಈ ಕಟ್ಟಡ ಒಟ್ಟು ಇಪ್ಪತ್ತೇಳು ಮಹಡಿ ಎತ್ತರವಾಗಿದ್ದು ಮನೆಯ ನಿರ್ವಹಣೆಗೇ ಆರು ನೂರು ಜನ ಪರಿಚಾರಕರಿದ್ದಾರೆ. ಮನೆಯ ಟೆರೇಸಿನಲ್ಲೊಂದು ಹೆಲಿಪ್ಯಾಡ್, ನಾಲ್ಕು ಅಂತಸ್ತುಗಳಲ್ಲಿ ಉದ್ಯಾನವನ, ನಾಲ್ಕೂವರೆ ಸಾವಿರ ಚದರ ಮೀಟರ್ ಒಟ್ಟು ವಿಸ್ತೀರ್ಣ, ನೂರಾ ಎಪ್ಪತ್ತು ಮೀಟರ್ ಎತ್ತರ ಮೊದಲಾದ ವೈಶಿಷ್ಟ್ಯಗಳಿವೆ.

intoday.in

ಆಂಟಿಲ್ಲಾ, ಮಾಲಿಕರು: ಮುಕೇಶ್ ಅಂಬಾನಿ

ಆಂಟಿಲ್ಲಾ, ಮಾಲಿಕರು: ಮುಕೇಶ್ ಅಂಬಾನಿ

ಅಮೇರಿಕಾದ ಚಿಕಾಗೋ ನಗರದ ವಾಸ್ತುಶಿಲ್ಪಿಗಳಾದ Perkins and Will ಸಂಸ್ಥೆ ಈ ಕಟ್ಟಡದ ವಿನ್ಯಾಸ ಮತ್ತು ಅಲಂಕಾರವನ್ನು ಮಾಡಿದ್ದು ವಿಶ್ವದ ಅತ್ಯಂತ ದುಬಾರಿ ವಸ್ತುಗಳನ್ನೇ ಬಳಸಲಾಗಿದೆ. ಆದರೆ ಬಡಮಕ್ಕಳ ಅನಾಥಾಲಯಕ್ಕೆಂದು ನಿಗದಿಪಡಿಸಲಾಗಿದ್ದ ಜಾಗವನ್ನು ಅತಿಕ್ರಮಿಸಿ ಕಟ್ಟಿದ ಕಟ್ಟಡ ಎಂದು ಸ್ಥಳೀಯರು ದೂರುತ್ತಾರೆ. ಅವರೇ ಏಕೆ, ಭಾರತದ ಇನ್ನೊಬ್ಬ ಧುರೀಣ ರತನ್ ಟಾಟಾರವರೇ 'ಈ ಮನೆಯ ಮಾಲಿಕರಿಗೆ ವಿಶ್ವದ ಬಡಮಕ್ಕಳ ಕಷ್ಟದ ಬಗ್ಗೆ ಇಲ್ಲದ ಕರುಣೆಯ ಸಾಕಾರವೇ ಮನೆಯ ರೂಪ ತಾಳಿದೆ' ಎಂದು ಹೇಳಿದ್ದಾರೆ.

ಆಗಸದ ಶ್ವೇತಮನೆ, ಮಾಲಿಕರು: ವಿಜಯ್ ಮಲ್ಯ

ಆಗಸದ ಶ್ವೇತಮನೆ, ಮಾಲಿಕರು: ವಿಜಯ್ ಮಲ್ಯ

ಯು.ಬಿ. ಅಥವಾ ಯುನೈಟೆಡ್ ಬೆವರೇಜಸ್ ಸಂಸ್ಥೆಯ ಮಾಲಿಕರಾದ ವಿಜಯ್ ಮಲ್ಯರವರ ಕನಸಿನ ಮನೆಯಾದ ಆಗಸದ ಮನೆ ಅಥವಾ White House in the Sky ಕಟ್ಟಡ ಬೆಂಗಳೂರಿನಲ್ಲಿಯೇ ಇದೆ. ಇದರಲ್ಲಿ ಒಟ್ಟು ಎಂಭತ್ತೆರಡು ಅಪಾರ್ಟ್ಮೆಂಟುಗಳಿದ್ದು ಇದರಲ್ಲಿ ಹತ್ತನ್ನು ತಮ್ಮ ಕುಟುಂಬದವರಿಗಾಗಿ ಉಳಿಸಿಕೊಂಡು ಉಳಿದುವನ್ನು ಮಾರಾಟಕ್ಕೆ ಇಡಲಾಗಿದೆ.

Image courtesy-ww.itimes.com

ಆಗಸದ ಶ್ವೇತಮನೆ, ಮಾಲಿಕರು: ವಿಜಯ್ ಮಲ್ಯ

ಆಗಸದ ಶ್ವೇತಮನೆ, ಮಾಲಿಕರು: ವಿಜಯ್ ಮಲ್ಯ

ವಿಜಯ್ ಮಲ್ಯರವರ ಈ ಕಟ್ಟಡ ಸುಮಾರು ನೂರು ಕೋಟಿ ರೂಪಾಯಿಗಳಿಗೂ ಹೆಚ್ಚು ಬೆಲೆ ಬಾಳುವಂತಹದ್ದಾಗಿದ್ದು ವಿಶ್ವದಲ್ಲಿ ಪಡೆಯಬಹುದಾದ ಎಲ್ಲಾ ಐಷಾರಾಮಗಳನ್ನು ಹೊಂದಿದೆ. ಒಂದು ಸ್ಪಾ, ಸೆಲೂನ್, ಹೊರಾಂಗಣ ಮತ್ತು ಒಳಾಂಗಣ ಈಜುಕೊಳ, ವೈನ್ ಬಾರ್ ಮತ್ತು ಹೆಲಿಪ್ಯಾಡ್ ಸಹಾ ಇದೆ. ಸುಮಾರು ನಲವತ್ತು ಸಾವಿರ ಚದರಡಿ ಜಾಗದಲ್ಲಿ ಹರಡಿಕೊಂಡಿರುವ ಈ ಕಟ್ಟಡದ ಪ್ರತಿ ಮನೆಗೂ ಪ್ರತ್ಯೇಕವಾದ ಜಗಲಿ, ಬಾಲ್ಕನಿ ಇದೆ. ಅಷ್ಟೇ ಏಕೆ ಪರಿಚಾರಕರಿಗೆ ಓಡಾಡಲೆಂದೇ ಮನೆಯೊಳಗೆ ಲಿಫ್ಟುಗಳಿವೆ.

ರಾಣಾ ಕಪೂರ್ ರೆಸಿಡೆನ್ಸ್, ಮುಂಬೈ: ಮಾಲಿಕರು

ರಾಣಾ ಕಪೂರ್ ರೆಸಿಡೆನ್ಸ್, ಮುಂಬೈ: ಮಾಲಿಕರು

ಮುಂಬೈಯ ಟೋನಿ ಅಲ್ಟಾಮೌಂಟ್ ರಸ್ತೆಯಲ್ಲಿರುವ ಈ ಮನೆ ಮೊದಲು ಸಿಟಿಬ್ಯಾಂಕ್ ಮತ್ತು ಗ್ಲಾಕ್ಸೋ ಸ್ಮಿತ್ಕ್ಲೈನ್ ಸಂಸ್ಥೆಯ ಆಸ್ತಿಯಾಗಿತ್ತು. ರಾಣಾ ಕಪೂರ್ ಈ ಆಸ್ತಿಯನ್ನು ತಮ್ಮ ಪತ್ನಿಯ ಹೆಸರಿನಲ್ಲಿ ಖರೀದಿಸಿದರು. ಈ ಜಾಗ ಒಟ್ಟು 14,800 ಚದರಡಿ ವಿಸ್ತಾರಕ್ಕೆ ಹರಡಿಕೊಂಡಿದೆ. ಬೆಲೆ ಕೇವಲ 128ಕೋಟಿ. ಇದರಲ್ಲಿರುವ ಎರಡಂತಸ್ತಿನ ಕಟ್ಟಡ ಮುಕೇಶ್ ಅಂಬಾನಿಯವರ ಆಂಟಿಲ್ಲಾ ಕಟ್ಟಡದ ಪಕ್ಕದಲ್ಲಿಯೇ ಇದೆ.

ಕ್ಯಾಬಿನ್ಸ್ ಅಟ್ ಕೊಲಾಬಾ, ಮಾಲಿಕರು: ರತನ್ ಟಾಟಾ

ಕ್ಯಾಬಿನ್ಸ್ ಅಟ್ ಕೊಲಾಬಾ, ಮಾಲಿಕರು: ರತನ್ ಟಾಟಾ

ಭಾರತದ ಖ್ಯಾತ ಸಂಸ್ಥೆ ಟಾಟಾ ಸಮೂಹದ ಮಾಲಿಕರು ಹಾಗೂ ಭಾರತದ ಅತ್ಯಂತ ಶ್ರೀಮಂತ ವಾಣಿಜ್ಯೋದ್ಯಮಿಯಾಗಿರುವ ರತನ್ ಟಾಟಾರವರ ಮನೆ ವಿಶಾಲವಾಗಿದ್ದು ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಸುಮಾರು 125 ಕೋಟಿ ರೂ ಬೆಲೆಬಾಳುತ್ತದೆ. ಕೊಲಾಬಾದ ಸಮುದ್ರತೀರಕ್ಕೆ ಮುಖಮಾಡಿ ನಿಂತಿರುವ ಈ ಮನೆ ಒಟ್ಟು 13,350 ಚದರಡಿ ಜಾಗದಲ್ಲಿ ಹರಡಿಕೊಂಡಿದೆ.

Image courtesy-www.pursuitist.in

ಕ್ಯಾಬಿನ್ಸ್ ಅಟ್ ಕೊಲಾಬಾ, ಮಾಲಿಕರು: ರತನ್ ಟಾಟಾ

ಕ್ಯಾಬಿನ್ಸ್ ಅಟ್ ಕೊಲಾಬಾ, ಮಾಲಿಕರು: ರತನ್ ಟಾಟಾ

ರತನ್ ಟಾಟಾರವರ ಈ ಮೂರಂತಸ್ತಿನ ಅಪ್ಪಟ ಶ್ವೇತವರ್ಣದ ಭವನ ಕೇವಲ ಸ್ಥಳದಿಂದಾಗಿಯೇ ಈ ಬೆಲೆ ಪಡೆದಿದೆಯೋ ಹೊರತು ಮನೆ ಮಾತ್ರ ಹೊರಗಿನಿಂದ ನೋಡಲು ಮೂರಂತಂಸ್ತಿನ ಸಾಮಾನ್ಯವಾಗಿ ಯಾವುದೇ ತಾಲ್ಲೂಕಿನಲ್ಲಿ ಕಾಣಬರುವ ಸಾಮಾನ್ಯ ಮನೆಯಂತೆಯೇ ಕಾಣುತ್ತದೆ. ಪ್ರತಿ ಮಹಡಿಯಲ್ಲಿಯೂ ಒಂದು ಮಲಗುವ ಕೋಣೆ ಮತ್ತು ನಡುಮನೆಗಳಿವೆ. ಪ್ರತ್ಯೇಕ ಜಿಮ್, ವಿಶಾಲ ಹಜಾರ ಮತ್ತೊಂದು ಈಜುಕೊಳವಿದೆ. ಒಳಾಂಗಣವನ್ನು ಆಧುನಿಕ, ಆದರೆ ಕನಿಷ್ಟ ಸೌಲಭ್ಯಗಳಿಂದ ಅಲಂಕರಿಸಲಾಗಿದೆ.

ಗುಲಿಸ್ತಾನ್, ಮಾಲಿಕರು: ಆನಂದ್ ಮಹಿಂದ್ರಾ

ಗುಲಿಸ್ತಾನ್, ಮಾಲಿಕರು: ಆನಂದ್ ಮಹಿಂದ್ರಾ

ಮಹಿಂದ್ರಾ ಗ್ರೂಪ್ ಸಮೂಹ ಸಂಸ್ಥೆಗಳ ಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಆನಂದ್ ಮಹಿಂದ್ರಾರವರ ಈ ಗುಲಿಸ್ತಾನ್ ಒಟ್ಟು 13,000ಚದರಡಿ ಸ್ಥಳದಲ್ಲಿ ಹರಡಿಕೊಂಡಿದೆ. ಪ್ರಸ್ತುತ ಮಾರುಕಟ್ಟೆ ಬೆಲೆ 270 ಕೋಟಿ ರೂಪಾಯಿಗಳು. ರಿಶಿ ಗಗನ್ ಟ್ರಸ್ಟ್ ಮತ್ತು ಆರ್ಬಿಟ್ ಕಾರ್ಪೋರೇಶನ್ ಸಂಸ್ಥೆಯಿಂದ ಈ ಮನೆಯನ್ನು ಅವರು ಖರೀದಿಸಿದ್ದಾರೆ. ಮುಂಬೈಯ ಪ್ರಿಯದರ್ಶಿನಿ ಪಾರ್ಕ್ ಬಳಿ ಇರುವ ಈ ಮನೆಯ ಸ್ಥಳ ಅವರ ಪಿತ್ರಾರ್ಜಿತ ಅಸ್ತಿಯಾಗಿದ್ದು ಈ ಸ್ಥಳದಲ್ಲಿಯೇ ಕಟ್ಟಿರುವ ಮನೆಯನ್ನು ಆನಂದ್ ಮಹಿಂದ್ರಾರವರೇ ಬಾಡಿಗೆಗೆ ಪಡೆದುಕೊಂಡಿದ್ದರು. ಈ ಸ್ಥಳ ಮಾರಾಟಕ್ಕೆ ಇದೆ ಎಂಬ ಊಹಾಪೋಹಗಳು ಹುಟ್ಟಿಕೊಂಡ ಬಳಿಕ ಈ ದುಬಾರಿ ಬೆಲೆ ಕೊಟ್ಟು ಅವರೇ ಮನೆಯನ್ನು ಖರೀದಿಸಿದ್ದಾರೆ.

Image courtesy-www.siliconindia.com

NCPA ಅಪಾರ್ಟ್ಮೆಂಟ್ಸ್, ಮುಂಬೈ

NCPA ಅಪಾರ್ಟ್ಮೆಂಟ್ಸ್, ಮುಂಬೈ

ಮುಂಬೈಯ ನಾರಿಮನ್ ಪಾಯಿಂಟ್ ಎಂಬ ಅತ್ಯಂತ ದುಬಾರಿ ಸ್ಥಳದಲ್ಲಿರುವ ಈ ಕಟ್ಟಡ ತನ್ನ ಸ್ಥಳಮಹಾತ್ಮೆಯಿಂದಲೇ ಅತ್ಯಂತ ದುಬಾರಿ ಬೆಲೆ ಪಡೆದುಕೊಂಡಿದೆ. ಇಪ್ಪತ್ತೆರಡು ಮಹಡಿಗಳ ಈ ಕಟ್ಟಡದ ಪ್ರತಿ ಫ್ಲಾಟ್ ಸಹಾ ಅತಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಈ ಕಟ್ಟಡದ ಒಂದೊಂದು ಫ್ಲಾಟ್ ಮೂವತ್ತು ಕೋಟಿ ರೂ ಬೆಲೆ ಬಾಳುತ್ತದೆ. ಬ್ರಿಟನ್ನಿನಲ್ಲಿರುವ ಅನಿವಾಸಿ ಭಾರತೀಯರೊಬ್ಬರು ನಾಲ್ಕು ಕೋಣೆಗಳ ಒಂದು ಮನೆಯನ್ನು ಮೂವತ್ತನಾಲ್ಕು ಕೋಟಿ ರೂ ತೆತ್ತು ಖರೀದಿಸಿದ್ದಾರೆ. ದಿನೇ ದಿನೇ ಏರುತ್ತಿರುವ ಬೆಲೆಯ ಕಾರಣ ಇಂದು ಒಂದು ಮನೆ ಪಡೆಯಲು ಮೂವತ್ತೈದು ಕೋಟಿ ರೂ ತೆರಬೇಕು. 2012ರ ಮಾರುಕಟ್ಟೆಯ ಪ್ರಕಾರ ಚದರಡಿ ಜಾಗದ ಬೆಲೆ ರೂ. 1.11ಲಕ್ಷ!

Image courtesy-Wikimedia Commons

ಅಡೋಬಿ, ಮಾಲಿಕರು: ಅನಿಲ್ ಅಂಬಾನಿ

ಅಡೋಬಿ, ಮಾಲಿಕರು: ಅನಿಲ್ ಅಂಬಾನಿ

ಸಹೋದರ ಮುಕೇಶ್ ಅಂಬಾನಿಯವರ ವೈಭವೋಪೇತ ಮನೆಗೆ ಸರಿಸಮನಲ್ಲದಿದ್ದರೂ ಅದಕ್ಕೆ ಪೈಪೋಟಿ ನೀಡುವ ಮನೆಯನ್ನು ಅನಿಲ್ ಅಂಬಾನಿ ಕಟ್ಟಿಸಿದ್ದಾರೆ. ಮುಂಬೈಯ ಬಾಂದ್ರಾ ಜಿಲ್ಲೆಯ ಪಾಲಿ ಹಿಲ್ ನಲ್ಲಿರುವ, ಸುಮಾರು ಐದು ಸಾವಿರ ಕೋಟಿ ರೂಪಾಯಿ ಬೆಲೆಬಾಳುವ ಮನೆಗೆ ಅವರು ಅಡೋಬಿ (Abode) (ಕನ್ನಡ ಅರ್ಥ: ನೆಲೆ) ಎಂದು ಹೆಸರಿಟ್ಟಿದ್ದಾರೆ.

Image courtesy-www.pursuitist.in

ಮನ್ನತ್, ಮಾಲಿಕರು: ಶಾರುಖ್ ಖಾನ್

ಮನ್ನತ್, ಮಾಲಿಕರು: ಶಾರುಖ್ ಖಾನ್

ಭಾರತದ ಎಲ್ಲಾ ವೈಭವದ ಮನೆಗಳು ಉದ್ಯಮಿಗಳಿಗೆ ಮಾತ್ರ ಸೇರಿವೆ ಎಂದರೆ ತಪ್ಪಾಗುತ್ತದೆ. ಹಿಂದಿ ಚಿತ್ರರಂಗದ ದಿಗ್ಗಜ, ಶಾರುಖ್ ಖಾನ್ ರವರ ಮನೆ ಒಂದು ಅರಮನೆಗೆ ಸಮನಾಗಿದ್ದು ಸುಮಾರು ಇನ್ನೂರು ಕೋಟಿ ರೂಪಾಯಿ ರೂಪಾಯಿ ಬೆಲೆಬಾಳುತ್ತದೆ. ನಿಯೋ ಕ್ಲಾಸಿಕಲ್ ಶೈಲಿಯಲ್ಲಿ ಕಟ್ಟಲಾಗಿರುವ ಈ ಮನೆಯ ಒಂದೊಂದು ಚಿಕ್ಕ ಚಿಕ್ಕ ವಸ್ತು ಮತ್ತು ವಿನ್ಯಾಸವನ್ನು ಅತಿ ನಾಜೂಕಿನಿಂದ ನಿರ್ಮಿಸಲಾಗಿದೆ.

Image courtesy-www.sprbuildtech.com

ಮನ್ನತ್, ಮಾಲಿಕರು: ಶಾರುಖ್ ಖಾನ್

ಮನ್ನತ್, ಮಾಲಿಕರು: ಶಾರುಖ್ ಖಾನ್

ಇಡಿಯ ಮನೆಯಲ್ಲಿ ಇಡಿಯ ವಿಶ್ವದ ವಿವಿಧ ಭಾಗಗಳಿಂದ ಸಂಗ್ರಹಿಸಲಾದ ಹಲವಾರು ಅಪೂರ್ವ ಕಲಾಕೃತಿಗಳನ್ನಿರಿಸಲಾಗಿದ್ದು ಒಂದು ಅಪೂರ್ವ ಸಂಗ್ರಹಾಲಯದಂತೆಯೇ ತೋರುತ್ತದೆ. ಅಷ್ಟೇ ಅಲ್ಲ, ವಿಶ್ವದ ಅತಿ ದುಬಾರಿ ಒಳಾಂಗಣ ವಿನ್ಯಾಸ ಹಾಗೂ ಎಂ.ಎಫ್ ಹುಸೇನ್ ರವರ ವರ್ಣಚಿತ್ರಗಳಿಂದ ಗೋಡೆಗಳನ್ನು ಅಲಂಕರಿಸಲಾಗಿದೆ.

Image courtesy-www.sprbuildtech.com

X
Desktop Bottom Promotion