For Quick Alerts
ALLOW NOTIFICATIONS  
For Daily Alerts

ಈ ರಾಷ್ಟ್ರಗಳ ಹೆಸರು ಕೇಳಿದರೆಯೇ ಕೈಕಾಲು ನಡುಗುತ್ತದೆ!

By Super Admin
|

ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿಯು ತಾನು ಮತ್ತು ತನ್ನ ಪರಿವಾರವು ಯಾವಾಗಲೂ ಸುರಕ್ಷಿತವಾಗಿರಬೇಕು. ಯಾವುದೇ ಗಲಾಟೆ, ಗದ್ದಲಗಳಿಲ್ಲದೆ ಜೀವನ ಸಾಗುತ್ತಿರಬೇಕೆಂದು ಬಯಸುವುದು ಸಹಜ. ಭೂಮಿ ಮೇಲಿನ ಶೇಕಡಾ 95ರಷ್ಟು ಮಂದಿ ಶಾಂತಿಯನ್ನು ಬಯಸುತ್ತಾರೆಯೇ ಹೊರತು ಯುದ್ಧವನಲ್ಲ. ಆದರೆ ಇಂದಿನ ದಿನಗಳಲ್ಲಿ ಆತಿಯಾಗುತ್ತಿರುವ ಉಗ್ರರ ಉಪಟಳದಿಂದಾಗಿ ಕೆಲವೊಂದು ದೇಶಗಳಲ್ಲಿ ಶಾಂತಿಯೆನ್ನುವುದು ಮರೀಚಿಕೆಯಾಗಿದೆ. ವಿಶ್ವದ ಅತ್ಯಂತ ಅಪಾಯಕಾರಿಯಾದ ಉಗ್ರಗಾಮಿ ಸಂಘಟನೆಗಳು

ಅಲ್ಲಿನ ಜನರಿಗೆ ಜೀವನವೆನ್ನುವುದು ನರಕವೆನ್ನುವಂತಾಗಿದೆ. ದಿನನಿತ್ಯವೂ ಅಲ್ಲಿ ಬಾಂಬ್ ದಾಳಿ, ಸಾವುನೋವು ಸಂಭವಿಸುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಅಲ್ಲಿನ ಜನರು ತಮ್ಮ ಕುಟುಂಬವನ್ನು ಕಾಪಾಡುವುದೇ ಹರಸಾಹಸದ ಕೆಲಸವಾಗಿದೆ. ಈ ಲೇಖನದಲ್ಲಿ ಉಗ್ರರ ಭೀತಿಯಿಂದ ಬದುಕುತ್ತಿರುವ ದೇಶಗಳ ಬಗ್ಗೆ ವಿವರಗಳನ್ನು ನೀಡಲಿದ್ದೇವೆ.

ಇಲ್ಲಿ ಪ್ರತಿನಿತ್ಯ ಉಗ್ರರು ಬಾಂಬ್ ಸಿಡಿಸಿ ಅಥವಾ ಇನ್ನೇನಾದರೂ ಅನಾಹುತ ಮಾಡಿದಾಗ ಸಾವು ಸಂಭವಿಸುತ್ತಾ ಇರುತ್ತದೆ ಮತ್ತು ಸಣ್ಣ ಸಣ್ಣ ಮಕ್ಕಳು ಸಾವನ್ನಪ್ಪಬಹುದು ಅಥವಾ ವಿಕಲಾಂಗರಾಗಬಹುದು. ಇಂತಹ ರಾಷ್ಟ್ರಗಳಲ್ಲಿ ಉಗ್ರರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭೂಮಿ ಮೇಲಿರುವ ತುಂಬಾ ಅಪಾಯಕಾರಿ ದೇಶಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ. ಲೇಖನವನ್ನು ಓದುತ್ತಾ ಆ ದೇಶಗಳಲ್ಲಿ ಕೂಡ ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುವ... ಮುಂದೆ ಓದಿ...

ಸಿರಿಯಾ

ಸಿರಿಯಾ

ಮುಸ್ಲಿಂ ರಾಷ್ಟ್ರವಾಗಿರುವ ಇಲ್ಲಿ ಮುಸ್ಲಿಮರ ಎರಡು ಪಂಗಡಗಳಲ್ಲಿ ಒಂದಾಗಿರುವ ಸುನ್ನಿಗಳು ಬಹುಸಂಖ್ಯಾತರು ಮತ್ತು ಇವರನ್ನು ಆಳುವವರು ಶಿಯಾಗಳು. ಇಲ್ಲಿ ಯಾವಾಗಲೂ ಶಿಯಾ ಮತ್ತು ಸುನ್ನಿಗಳ ಮಧ್ಯೆ ಯುದ್ಧ ಮತ್ತು ಪ್ರತಿಭಟನೆಗಳು ನಡೆಯುತ್ತಾ ಇರುತ್ತದೆ. ಇದರಿಂದಾಗಿ ಅಮಾಯಕ ನಾಗರಿಕರು ಬಲಿಯಾಗುತ್ತಿದ್ದಾರೆ.

ಅಫ್ಘಾನಿಸ್ತಾನ

ಅಫ್ಘಾನಿಸ್ತಾನ

ಭೂಮಿ ಮೇಲೆ ವಾಸಿಸಲು ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯಲ್ಲಿ ಇದು ಎರಡನೇ ಸ್ಥಾನದಲ್ಲಿದೆ. 11/9 ದಾಳಿಯ ಬಳಿಕ ಅಮೆರಿಕಾ ನೇತೃತ್ವದ ನ್ಯಾಟೋ ಪಡೆಯು ಉಗ್ರರಿಗೆ ನೆರವು ನೀಡುತ್ತಿದ್ದ ಅಲ್ಲಿನ ಸರಕಾರವನ್ನು ಬರ್ಖಾಸ್ತು ಮಾಡಿತ್ತು. ಮೂಲಭೂತ ಸೌಕರ್ಯಗಳಿಗೆ ಇದರಿಂದ ತುಂಬಾ ಹಾನಿಯಾಗಿದೆ. ಅಮೆರಿಕಾದ ಮಿತ್ರ ಪಡೆಗಳು ಇಲ್ಲಿ ಶಾಂತಿ ಮರಳಿ ತರಲು ಪ್ರಯತ್ನಿಸುತ್ತಿದೆ.

ದಕ್ಷಿಣ ಸುಡಾನ್

ದಕ್ಷಿಣ ಸುಡಾನ್

ವಾಯುವ್ಯ ಆಫ್ರಿಕಾದ ರಾಷ್ಟ್ರವಾಗಿರುವ ಇಲ್ಲಿ ಅಧಿಕಾರಕ್ಕಾಗಿ ಎರಡು ಪಂಗಡಗಳ ಮಧ್ಯೆ ಆಗಾಗ ನಾಗರಿಕ ಯುದ್ಧವು ನಡೆಯುತ್ತಿರುತ್ತದೆ. ಅಗತ್ಯವೇ ಇಲ್ಲದೆ ಇರುವಂತಹ ಯುದ್ಧ ಮತ್ತು ಪ್ರತಿಭಟನೆಯಲ್ಲಿ ಈಗಾಗಲೇ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಹೊರತುಪಡಿಸಿ ಇಲ್ಲಿನ ನಾಗರಿಕರ ಆರೋಗ್ಯ ಸ್ಥಿತಿಯು ತುಂಬಾ ಕೆಟ್ಟದಾಗಿದೆ. ಸಾವಿರಾರು ಮಂದಿ ಇಲ್ಲಿ ಎಚ್ ಐವಿ ಮತ್ತು ಮಲೇರಿಯಾದಿಂದ ಬಳಲುತ್ತಿದ್ದಾರೆ.

ಇರಾಕ್

ಇರಾಕ್

2003ರಲ್ಲಿ ಅಮೆರಿಕಾವು ಇರಾಕ್ ಮೇಲೆ ಯುದ್ಧ ಸಾರಿತು ಮತ್ತು 2011ರಲ್ಲಿ ಇದು ಕೊನೆಗೊಂಡಿತು. ಐಸಿಸ್ ಉಗ್ರ ಪಡೆಯು ಈ ರಾಷ್ಟ್ರದ ಮೂರನೇ ಒಂದು ಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಅಮೆರಿಕಾ ಮತ್ತು ನ್ಯಾಟೋ ಪಡೆಗಳು ಹಾಗೂ ಇತರ ಬಂಡುಕೋರರು ಮಾಡಿದಂತಹ ಹಾನಿಯಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ವಿಶ್ವದ ಅಪಾಯಕಾರಿ ರಾಷ್ಟ್ರಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಸುಡಾನ್

ಸುಡಾನ್

ಎರಡು ಯುದ್ಧಗಳ ಬಳಿಕ ಸರಕಾರದ ಹಿಡಿತವಿಲ್ಲದೆ ಇರುವುದು, ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ, ಬಂಡುಕೋರರ ಹಾವಳಿ ಮತ್ತು ಪ್ರತಿಭಟನೆಗಳು ಈ ರಾಷ್ಟ್ರವು ವಾಸಿಸಲು ತುಂಬಾ ಅಪಾಯಕಾರಿಯಾಗಿದೆ.

English summary

Most Dangerous Countries On The Planet

We have shared a list of the latest most dangerous countries where terror flourishes and it can be seen as an everyday affair. So, find out about the most dangerous countries on the planet and we only pray to the Almighty that, moving ahead, humans learn to Live and Let Live.
X
Desktop Bottom Promotion