For Quick Alerts
ALLOW NOTIFICATIONS  
For Daily Alerts

  ಸದ್ದಿಲ್ಲದೇ ಸಮಾಜ ಸೇವೆ ಮಾಡುತ್ತಿರುವ, ಇವರೇ ನಿಜವಾದ ಹೀರೋಗಳು

  By manu
  |

  ಭಾರತದಲ್ಲಿ ಒಂದು ಮಾತು ಪ್ರಚಲಿತವಾಗಿದೆ. ಅದೆಂದರೆ ಕ್ಷಿಪ್ರವಾಗಿ ಹಣ ಮಾಡಬೇಕಾದರೆ ಒಂದೇ ರಾಜಕಾರಣಿಯಾಗಬೇಕು, ಇಲ್ಲಾ ಸಿನೇಮಾನಟನಾಗಬೇಕು ಎಂಬುದು. ಆದರೆ ಎರಡೂ ರಂಗಗಳಲ್ಲಿ ಯಶಸ್ಸು ಪಡೆಯುವುದು ನಾವಂದುಕೊಂಡಷ್ಟು ಸುಲಭವಲ್ಲ. ನಾವು ಅಂದುಕೊಂಡಂತೆ ಯಶಸ್ಸು, ಹಣ ಮತ್ತು ಒನಪು ಎಲ್ಲವೂ ಕೆಲವರಿಗೆ ಮಾತ್ರ ಲಭ್ಯವಾಗುವ ಸೌಭಾಗ್ಯ. ಸಾವು ಬದುಕಿನ ಹೋರಾಟದಲ್ಲಿ, ಗೆದ್ದು ಬಂದವರ ರಿಯಲ್ ಸ್ಟೋರಿ

  ಅದರಲ್ಲೂ ಪ್ರಮುಖ ನಟರು ಪಡೆಯುವ ಕೋಟಿಗಟ್ಟಲೇ ಸಂಭಾವನೆಯಂತೂ ಯಾರದ್ದೂ ಕಣ್ಣು ಕುಕ್ಕಬಹುದು. ಆದರೆ ಯಶಸ್ಸಿನೊಂದಿಗೆ ಲಭಿಸುವ ಈ ಅಪಾರವಾದ ಸಂಭಾವನೆಯ ಕೊಂಚ ಪಾಲನ್ನು ಧರ್ಮಾರ್ಥಕಾರ್ಯಗಳಿಗೆ ವಿನಿಯೋಗಿಸಿ ನಿಜವಾದ ಸಮಾಜಸೇವೆ ಮಾಡುವ ನಟರು ನಮ್ಮಲ್ಲಿದ್ದಾರೆ. ಇಂತಹ ಕೆಲವು ಪ್ರಮುಖ ನಟರ ಬಗ್ಗೆ ಕೆಳಗಿನ ಸ್ಲೈಡ್ ಷೋ ಮೂಲಕ ಕೆಲವು ಅಮೂಲ್ಯ ಮಾಹಿತಿಗಳನ್ನು ನೀಡಲಾಗಿದೆ..

  ಸಲ್ಮಾನ್ ಖಾನ್

  ಸಲ್ಮಾನ್ ಖಾನ್

  ತಮ್ಮ ವೈಯಕ್ತಿಕ ಬದುಕಿನಲ್ಲಿನ ಏರುಪೇರುಗಳಿಂದಾಗಿಯೇ ಹೆಚ್ಚು ಪ್ರಚಾರ ಪಡೆದುಕೊಳ್ಳುವ ಸಲ್ಮಾನ್ ಖಾನ್ ರನ್ನು ಅತಿ ಹೆಚ್ಚಿನ ದಾನಶೂರ ಎಂದು ಬಾಲಿವುಡ್ ಜಗತ್ತಿನಲ್ಲಿ ಭಾವಿಸಲಾಗುತ್ತದೆ. ಇವರೊಂದು 'ಬೀಯಿಂಗ್ ಹ್ಯೂಮನ್' ಎಂಬ ಅಸರ್ಕಾರಿ ಸಂಸ್ಥೆ (ಲಾಭರಹಿತ ಅಥವಾ ಎನ್.ಜಿ.ಒ) ನಡೆಸುತ್ತಿದ್ದು ಶೀಘ್ರಕಾಲದಲ್ಲಿಯೇ ಭಾರತದ ಒಂದು ಪ್ರಮುಖ ಅಸರ್ಕಾರಿ ಸಂಸ್ಥೆಯಾಗಿ ಬೆಳೆದಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಸಲ್ಮಾನ್ ಖಾನ್

  ಸಲ್ಮಾನ್ ಖಾನ್

  ಈ ಸಂಸ್ಥೆಯ ಧರ್ಮಾರ್ಥ ಕಾರ್ಯಗಳಲ್ಲಿ ಸಹಾಯದ ಅಗತ್ಯವಿರುವ ಮಕ್ಕಳಿಗೆ ಸೂಕ್ತ ನೆರವು, ವೈದ್ಯಕೀಯ ವೆಚ್ಚ ಭರಿಸುವುದು ಮೊದಲಾದ ಕಾರ್ಯಗಳನ್ನು ಸದ್ದಿಲ್ಲದೇ ನಡೆಸುತ್ತಾ ಬಂದಿದೆ.

  ಜಾನ್ ಅಬ್ರಹಾಂ

  ಜಾನ್ ಅಬ್ರಹಾಂ

  ಸಾಕುಪ್ರಾಣಿಗಳು, ವನ್ಯಜೀವಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಜಾನ್ ಅಬ್ರಹಾಂ ಇದೇ ಕಾರಣದಿಂದ ಪೀಟಾ (Ethical Treatment of Animals (PETA)) ಸಂಸ್ಥೆಯ ಸಕ್ರಿಯ ಸದಸ್ಯರೂ ಆಗಿದ್ದಾರೆ. ಈ ಸಂಸ್ಥೆಗೆ ಅವರು ತೆರೆದ ಮನಸ್ಸಿನಿಂದ ದಾನ ಮಾಡುವುದು ಮಾತ್ರವಲ್ಲ ತಮ್ಮಿಂದಾದ ನೆರವನ್ನೂ ನೀಡುತ್ತಾರೆ. ತಾವು ನೀಡಿರುವ ದೇಣಿಗೆ ಬಗ್ಗೆ ಅವರಾಗಿ ಯಾರಲ್ಲಿಯೂ ಹೇಳಿಕೊಳ್ಳದೇ ಇದ್ದರೂ ನಮ್ಮ ವಾರ್ತಾ ಪ್ರತಿನಿಧಿಗಳಿಗೆ ಹೇಗೆ ಈ ಬಗ್ಗೆ ಸುಳಿವು ಸಿಗುತ್ತದೆಯೋ ಗೊತ್ತಿಲ್ಲ, ಆದರೆ ಪ್ರಚಾರ ಸಿಕ್ಕಿಬಿಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಜಾನ್ ಅಬ್ರಹಾಂ

  ಜಾನ್ ಅಬ್ರಹಾಂ

  ಅಷ್ಟೇ ಅಲ್ಲ, ಇವರ ಸ್ವಂತದ್ದೇ ಆದ ‘John's Brigade for Habitat' ಎಂಬ ಧರ್ಮಾರ್ಥ ಸಂಸ್ಥೆ ಮನೆಯಿಲ್ಲದವರಿಗಾಗಿ ಮನೆಗಳನ್ನು ನೀಡುವ ಕಾರ್ಯ ಮಾಡುತ್ತಿದೆ. ಪೀಟಾದ ಹೊರತಾಗಿಯೂ ಇತರ ಧರ್ಮಾರ್ಥ ಸಂಸ್ಥೆಗಳಿಗೆ ಉದಾರಮನಸ್ಸಿನಿಂದ ದಾನ ನೀಡುವ ಇವರು ತಮ್ಮ ಬಳಿ ಸಹಾಯ ಬೇಡಿ ಬಂದವರನ್ನೆಂದೂ ನಿರಾಶೆಗೊಳಿಸಿಲ್ಲ.

  ಐಶ್ವರ್ಯ ರೈ ಬಚ್ಚನ್

  ಐಶ್ವರ್ಯ ರೈ ಬಚ್ಚನ್

  ನಮ್ಮ ಕರ್ನಾಟದ ಈ ಬೆಡಗಿಯ ಸೌಂದರ್ಯದ ಬಗ್ಗೆ ಯಾರಿಗೂ ಯಾವ ಅನುಮಾನವೂ ಇಲ್ಲ. ಆದರೆ ಇವರ ಹೃದಯವೂ ಅಷ್ಟೇ ಸುಂದರ ಎಂಬುದನ್ನು ಮಾತ್ರ ನೋಟದಲ್ಲಿ ಕಂಡುಕೊಳ್ಳಲು ಸಾಧ್ಯವಿಲ್ಲ. ಅಗತ್ಯವಿರುವ ಬಡಜನರ ಬಗ್ಗೆ ಇವರು ಹೊಂದಿರುವ ಕಾಳಜಿಯನ್ನು ನೇರವಾಗಿ ತೋರ್ಪಡಿಸಿಕೊಳ್ಳದ ಇವರು Aishwarya Rai Foundation ಎಂಬ ದತ್ತಕ ಸಂಸ್ಥೆಯ ಮೂಲಕ ಬಡಜನರಿಗೆ ನೆರವಾಗುತ್ತಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಐಶ್ವರ್ಯ ರೈ ಬಚ್ಚನ್

  ಐಶ್ವರ್ಯ ರೈ ಬಚ್ಚನ್

  ಬರೆಯ ಐಶ್ವರ್ಯದಿಂದ ಮಾತ್ರವಲ್ಲ, ತಮ್ಮ ಮರಣಾನಂತರ ತಮ್ಮ ಕಣ್ಣುಗಳನ್ನು ದಾನ ಮಾಡಬಹುದು ಎಂದು ಈಗಾಗಲೇ ಐ ಬ್ಯಾಂಕ್ ಅಸೋಸಿಯೇಶನ್ ಆಫ್ ಇಂಡಿಯಾದಲ್ಲಿ ನೋಂದಾಯಿಸಿಕೊಂಡಿರುವ ಇವರು ಹೃದಯವಂತಿಕೆಯನ್ನೂ ಮೆರೆದಿದ್ದಾರೆ.

  ಶಾರುಖ್ ಖಾನ್

  ಶಾರುಖ್ ಖಾನ್

  ನಮ್ಮ ಅಂಬರೀಶ್ ರಂತೆ ತಮ್ಮ ಜೊತೆಯಲ್ಲಿ ಕೆಲಸ ಮಾಡುತ್ತಿರುವರಿಂದ ಪುಡಿಗಾಸು, ಸಿಗರೇಟು, ಬೀಡಿ ಮೊದಲಾದವನ್ನು ಪಡೆದು ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವವುಳ್ಳ ಶಾರುಖ್‌ರ ಈ ಪರಿ ಕೆಲವರಿಗೆ ಇವರು ಜಿಪುಣರೆಂದು ಅನ್ನಿಸಲು ಕಾರಣವಾಗಿರಬಹುದು. ಆದರೆ ವಾಸ್ತವ ಬೇರೆಯೇ ಇದೆ. ಈ ಮೂಲಕ ಇವರು ತಮ್ಮ ಜೊತೆಗೆ ಕೆಲಸ ಮಾಡುತ್ತಿರುವ ಅತಿ ಕೆಳಗಿನವರೆಗಿನವರೆಗಿನ ಜನರೊಂದಿಗೂ ಬೆರೆಯಲು ಸಾಧ್ಯವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಶಾರುಖ್ ಖಾನ್

  ಶಾರುಖ್ ಖಾನ್

  ಶಾರುಖ್ ರವರು ಯಾವುದೇ ಪ್ರಚಾರವಿಲ್ಲದೇ ಹಲವಾರು ಎನ್.ಜಿ.ಒ ಮತ್ತು ಧರ್ಮಾರ್ಥ ಸಂಸ್ಥೆಗಳಿಗೆ ತಮ್ಮ ದೇಣಿಗೆಯನ್ನು ಮತ್ತು ನೆರವನ್ನು ನೀಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ, ಹಲವು ಆಸ್ಪತ್ರೆಗಳಲ್ಲಿ ಅಗತ್ಯವಿರುವ ರೋಗಿಗಳಿಗೆ ವೆಚ್ಚ ಮತ್ತು ಔಷಧಿಗಳನ್ನು ಪಡೆಯಲು ನೆರವಾಗುತ್ತಾರೆ. ಬರೆಯ ಹಣ ಕೊಟ್ಟು ಸುಮ್ಮನಿರದ ಇವರು ಮಾನಸಿಕ ರೋಗಿಗಳು ಮತ್ತು ತಬ್ಬಲಿ ಮಕ್ಕಳಿಗಾಗಿ ತಮ್ಮ ಸಮಯವನ್ನೂ ನೀಡುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಶಾರುಖ್ ಖಾನ್

  ಶಾರುಖ್ ಖಾನ್

  ಅಷ್ಟೇ ಅಲ್ಲ, ನಿಸರ್ಗ ಪ್ರಕೋಪದಿಂದ ಮನೆ ಮಠ ಕಳೆದು ನಿರ್ಗತಿಕರಾದವರಿಗೆ ನೆರವು ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನೂ ಏರ್ಪಡಿಸಿ ಇದರಲ್ಲಿ ಸ್ವತಃ ಭಾಗವಹಿಸುವುದು ಮಾತ್ರವಲ್ಲ ಇತರರಿಗೂ ನೆರವಾಗಲು ಪ್ರೇರಣೆ ನೀಡುತ್ತಾರೆ. ಜನರ ಜೀವನಮಟ್ಟ ಸುಧಾರಿಸಲು ನೆರವಾಗುವ UNOPS ಸಂಸ್ಥೆಯ ರಾಯಭಾರಿಯೂ ಆಗಿದ್ದಾರೆ. ಇವರಾಗಿ ಬಯಸದಿದ್ದರೂ ಇವರ ಕಾರ್ಯವನ್ನು ಯುನೆಸ್ಕೋ ಸಂಸ್ಥೆ ಗುರುತಿಸಿ ವಿಶ್ವಮಟ್ಟದಲ್ಲಿ ಇವರ ಹೆಸರನ್ನು ಚಿರಸ್ಥಾಯಿಯಾಗಿಸಿದೆ. ಯುನೆಸ್ಕೋನಿಂದ ಗುರುತಿಸಲ್ಪಟ್ಟ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.

  ಶಿಲ್ಪಾ ಶೆಟ್ಟಿ ಕುಂದ್ರಾ

  ಶಿಲ್ಪಾ ಶೆಟ್ಟಿ ಕುಂದ್ರಾ

  ಬರೆಯ ಸಮಾಜ ಸೇವೆ ಎಂದು ಬೊಗಳೆ ಬಿಡುವ ಬಾಲಿವುಡ್ ತಾರೆಯರ ನಡುವೆ ನಿಜವಾದ ಸಮಾಜಸೇವೆಯನ್ನು ನಿಃಸ್ವಾರ್ಥರೂಪದಲ್ಲಿ ನೀಡುತ್ತಿರುವ ಕರ್ನಾಟಕ ಮೂಲಕ ಶಿಲ್ಪಾ ಶೆಟ್ಟಿಯವರು ಹಲವಾರು ಧರ್ಮಾರ್ಥ ಸಂಸ್ಥೆಗಳಿಗೆ ತಮ್ಮ ದೇಣಿಗೆಯನ್ನು ನೀಡುತ್ತಾ ಬಂದಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಶಿಲ್ಪಾ ಶೆಟ್ಟಿ ಕುಂದ್ರಾ

  ಶಿಲ್ಪಾ ಶೆಟ್ಟಿ ಕುಂದ್ರಾ

  ಅಷ್ಟೇ ಅಲ್ಲ, ಬಿಗ್ ಬ್ರದರ್ ಎಂಬ ಟೀವಿ ಸ್ಪರ್ಧೆಯಲ್ಲಿ ವಿಜೇತರಾದ ಬಳಿಕ ಲಭ್ಯವಾದ ಅಪಾರ ಹಣವನ್ನೆಲ್ಲಾ ಭಾರತದ ಏಡ್ಸ್ ಸಂಸ್ಥೆಗೆ ನೀಡಿ ಹೃದಯವೈಶಾಲ್ಯವನ್ನು ಮೆರೆದಿದ್ದಾರೆ. ಇವರು ಸಹಾ ಪೀಟಾ ಸಂಸ್ಥೆಯ ಸಕ್ರಿಯ ಸದಸ್ಯೆಯಾಗಿದ್ದು ಪ್ರಾಣಿಗಳಿಗೆ ನೀಡುವ ಹಿಂಸೆಯ ವಿರುದ್ದ ‘Act Against Bullying' ಎಂಬ ಆಂದೋಲನದಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.

  ಪ್ರಿಯಾಂಕಾ ಚೋಪ್ರಾ

  ಪ್ರಿಯಾಂಕಾ ಚೋಪ್ರಾ

  ತಮ್ಮ ವೃತ್ತಿಜೀವನದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟೇ ಕಾಳಜಿಯನ್ನು ನಟಿ ಪ್ರಿಯಾಂಕಾ ಚೋಪ್ರಾರವರು ಮಕ್ಕಳ ವಿದ್ಯೆ ಮತ್ತು ಆರೋಗ್ಯದ ವಿಷಯದಲ್ಲಿಯೂ ವಹಿಸುತ್ತಾ ಬಂದಿದ್ದಾರೆ. ಇವರ ಕಾರ್ಯವನ್ನು ಗಮನಿಸಿದ ಯೂನಿಸೆಫ್ 2010 ರಲ್ಲಿ ಅವರಿಗೆ ಅರ್ಹವಾದ 'ರಾಷ್ಟ್ರೀಯ ರಾಯಭಾರಿ' ಯ ಪಟ್ಟ ನೀಡಿ ಗೌರವಿಸಿತ್ತು.

  ಪ್ರಿಯಾಂಕಾ ಚೋಪ್ರಾ

  ಪ್ರಿಯಾಂಕಾ ಚೋಪ್ರಾ

  ಯೂನಿಸೆಫ್ ನ ‘Save the Girl' ಅಥವಾ ಹೆಣ್ಣು ಭ್ರೂಣಹತ್ಯೆಯ ವಿರುದ್ಧ ನಡೆಯುತ್ತಿರುವ ಜನಾಂದೋಲನ ಕಾರ್ಯಕ್ರಮದ ಸಕ್ರಿಯ ಕಾರ್ಯಕರ್ತೆಯಾಗಿದ್ದು ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮಾತ್ರವಲ್ಲ, ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿಯೂ ಕಾರ್ಯನಿರತರಾಗಿದ್ದಾರೆ.

  ವಿದ್ಯಾ ಬಾಲನ್

  ವಿದ್ಯಾ ಬಾಲನ್

  ಟೀವಿಯ ಹಂ ಪಾಂಚ್ ಎಂಬ ಹಾಸ್ಯ ಧಾರಾವಾಹಿಯಲ್ಲಿ ಕಿವುಡಿಯ ಪಾತ್ರ ವಹಿಸಿದ್ದ ವಿದ್ಯಾ ಬಾಲನ್ ಇಂದು ಪ್ರಮುಖ ನಟಿಯಾಗಿ ಬೆಳೆದಿದ್ದರೂ ವಿಶಾಲ ಹೃದಯ ಹೊಂದಿದ್ದಾರೆ. ಭಾರತದಲ್ಲಿ ಸ್ವಚ್ಛತೆ ಮತ್ತು ನಿರ್ಮಲೀಕರಣದ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಈಕೆ ಭಾರತದ ಸ್ವಚ್ಛ ಕುಡಿಯುವ ನೀರು ಮತ್ತು ನೈರ್ಮಲ್ಯ ಆಂದೋಲನದ ರಾಯಭಾರಿಯೂ ಆಗಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ವಿದ್ಯಾ ಬಾಲನ್

  ವಿದ್ಯಾ ಬಾಲನ್

  ಈ ನಿಟ್ಟಿನಲ್ಲಿ ಇವರು ಇನ್ನಷ್ಟು ಹೆಚ್ಚು ಕಾರ್ಯಪ್ರವೃತ್ತರಾಗಿದ್ದು ಶೀಘ್ರದಲ್ಲಿಯೇ ಪ್ರಾರಂಭವಾಗಲಿರುವ ‘Clean India' ಎಂಬ ಕಾರ್ಯಕ್ರಮವನ್ನೂ ಬೆಂಬಲಿಸುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಭಾರತದಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಗಳು ನಡೆಯುತ್ತವೆ.

  ಅಮಿತಾಭ್ ಬಚ್ಚನ್

  ಅಮಿತಾಭ್ ಬಚ್ಚನ್

  ಇಡಿಯ ಭಾರತವೇ ಗೌರವಿಸುವ ಹಿರಿಯ ನಟ ಅಮಿತಾಭ್ ಬಚ್ಚನ್ ರವರು 2005 ರಲ್ಲಿ ಯೂನಿಸೆಫ್ ನ ಪಲ್ಸ್ ಪೋಲೀಯೋ ಕಾರ್ಯಕ್ರಮದಲ್ಲಿ ಸ್ವಪ್ರೇರಣೆಯಿಂದ ಕಾರ್ಯಕ್ರಮದ ರಾಯಭಾರಿಯಾಗಿ ಪ್ರೇರಣೆ ನೀಡಿದ್ದಾರೆ. ತಮ್ಮದೇ ಆದ ‘The Tsunami Welfare' ಎಂಬ ದತ್ತಕ ನಿಧಿಯನ್ನು ಸ್ಥಾಪಿಸಿ 2004ರಲ್ಲಿ ಸಂಭವಿಸಿದ ಭೀಕರ ಲಾತೂರ್ ಭೂಕಂಪದಲ್ಲಿ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಬಲುದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಅಮಿತಾಭ್ ಬಚ್ಚನ್

  ಅಮಿತಾಭ್ ಬಚ್ಚನ್

  ಅಷ್ಟೇ ಅಲ್ಲ, ಖ್ಯಾತ ನಟರು ಬಳಸಿದ ಉಡುಗೆಗಳನ್ನು ಆನ್ಲೈನ್ ಮೂಲಕ ಹರಾಜು ಹಾಕುವ ‘Jeneration' ಎಂಬ ವ್ಯವಸ್ಥೆಯನ್ನೂ ಪ್ರಾರಂಭಿಸಿದ್ದು ಈ ಮೂಲಕ ಲಭ್ಯವಾಗುವ ಧನವನ್ನು ಹಲವು ದತ್ತಕ ಮತ್ತು ಧರ್ಮಾರ್ಥ ಕಾರ್ಯಗಳಿಗೆ ವಿನಿಯೋಗಿಸುವ ಕಾರ್ಯವನ್ನೂ ಅವರು ಪ್ರಾರಂಭಿಸಿದ್ದಾರೆ.

   

  English summary

  Most Charitable Bollywood Celebrities You May Not Know

  It comes as no surprise when Bollywood celebs go out of their way to earn money, fame and glamor. But you respect them more when they work for a special cause and not for applause. Here we bring to you some of the most charitable Bollywood celebs.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more