For Quick Alerts
ALLOW NOTIFICATIONS  
For Daily Alerts

ಈತ ಎಪ್ಪತ್ತು ವರ್ಷಗಳಿಂದ ಅನ್ನ ನೀರು ಇಲ್ಲದೇ ಬದುಕುತ್ತಿದ್ದಾನೆ!

|

ಅನ್ನಾಹಾರವಿಲ್ಲದೇ ಎಷ್ಟು ದಿನ ಜೀವಂತವಿರಬಹುದು? ಅತಿ ಹೆಚ್ಚು ಅಂದರೆ ನಾಲ್ಕೈದು ದಿನ ಇರಬಹುದು ಅಷ್ಟೇ. ಆದರೆ ಭಾರತದ ಗುಜರಾತ್ ರಾಜ್ಯದ ಪ್ರಹ್ಲಾದ್ ಜಾನಿ ಎಂಬ ವ್ಯಕ್ತಿ ತಾನು ಕಳೆದ ಎಪ್ಪತ್ತು ವರ್ಷಗಳಿಂದಲೂ ಅನ್ನಾಹಾರವನ್ನೇ ಸೇವಿಸಿಲ್ಲ ಎಂದು ಹೇಳುವ ಮೂಲಕ ಜನಸಾಮಾನ್ಯರಿಗಿಂತಲೂ ವೈದ್ಯರಿಗೇ ಅಚ್ಚರಿ ಮೂಡಿಸಿದ್ದಾರೆ.... ಮುಂದೆ ಓದಿ...

ಇವರ ಪರಿಚಯ

ಇವರ ಪರಿಚಯ

ಪ್ರಹ್ಲಾದ್ ಜಾನಿ ಅಥವಾ ಚುನರಿವಾಲಾ ಮಾತಾಜಿ (ಜನನ 13 ಆಗಸ್ಟ್ 1929, ಗುಜರಾತ್) ಓರ್ಬ ಬಾಬಾ ಅಥವಾ ಸಂತರಾಗಿದ್ದು ಇವರಿಗೆ ಈಗ ಎಂಭತ್ತೇಳು ವರ್ಷ. 1940ರಿಂದ ಇವರು ನೀರನ್ನು ಅಥವಾ ಆಹಾರವನ್ನೇ ಸೇವಿಸಿಲ್ಲ. Image courtesy

ಗುಹೆಯೊಂದರಲ್ಲಿಯೇ ವಾಸ!

ಗುಹೆಯೊಂದರಲ್ಲಿಯೇ ವಾಸ!

ಸುಮಾರು ಎಪ್ಪತ್ತು ವರ್ಷಗಳವರೆಗಿನ ಜೀವನವನ್ನು ಇವರು ಗುಹೆಯೊಂದರಲ್ಲಿ ಕಳೆದಿದ್ದಾರೆ. ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ಯೋಗಾಭ್ಯಾಸ ಮತ್ತು ತಪಸ್ಸಿನ ಫಲದಿಂದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ ಎಂದು ಅವರೇ ಹೇಳಿಕೊಂಡಿದ್ದಾರೆ.

ವೈದ್ಯರಿಂದ ತಪಾಸಣೆ

ವೈದ್ಯರಿಂದ ತಪಾಸಣೆ

ಅನ್ನ ನೀರಿಲ್ಲದೇ ಜೀವಂತವಾಗಿದ್ದೇನೆ ಎಂದು ಹೇಳಿದರೆ ಜನ ನಂಬಿದರೂ ವೈದ್ಯರು ನಂಬಬೇಕಲ್ಲ, ಈ ಸುದ್ದಿ ತಿಳಿದುಬರುತ್ತಿದ್ದಂತೆಯೇ ಇವರ ಬಗ್ಗೆ ಸಂಶೋಧನೆ ನಡೆಸಲು ವೈದ್ಯರ ದಂಡೇ ಉತ್ಸುಕತೆ ತಾಳಿದೆ.

ಇಪ್ಪತ್ತನಾಲ್ಕು ಗಂಟೆಗಳ ಕಾಲ ನಿಗಾ!

ಇಪ್ಪತ್ತನಾಲ್ಕು ಗಂಟೆಗಳ ಕಾಲ ನಿಗಾ!

ಇವರ ಅಭ್ಯಾಸ ಮತ್ತು ಆರೋಗ್ಯವನ್ನು 2003 ಮತ್ತು 2010 ಆಧುನಿಕ ಉಪಕರಣಗಳ ನೆರವಿನಿಂದ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಗಮನವಿಟ್ಟು ನೋಡಿ ಮಾಹಿತಿಗಳನ್ನು ಕಲೆಹಾಕಲಾಕಿದೆ.

2003ರ ಸಂಶೋಧನೆಯ ವಿವರ

2003ರ ಸಂಶೋಧನೆಯ ವಿವರ

ಇವರನ್ನು ಹತ್ತು ದಿನಗಳವರೆಗೆ ಆಸ್ಪತ್ರೆಯ ಕೋಣೆಯೊಂದರಲ್ಲಿ ಯಾರೂ ಪ್ರವೇಶಿಸದಂತೆ ಪ್ರತಿಭಂದಿಸಿ ಇವರ ಚಲನವಲನಗಳನ್ನು ಗಮನಿಸಲಾಯಿತು. ಈ ಸಮಯದಲ್ಲಿ ಇವರಿಗೆ ಯಾವುದೇ ಆಹಾರ ನೀರು ಅಥವಾ ಶೌಚಾಲಯದ ವ್ಯವಸ್ಥೆಯನ್ನು ದೊರಕದಂತೆ ಮಾಡಲಾಗಿತ್ತು.

2003ರ ಸಂಶೋಧನೆಯ ವಿವರ

2003ರ ಸಂಶೋಧನೆಯ ವಿವರ

ಹತ್ತುದಿಗಳ ಕಾಲ ದೇಹವನ್ನೇನೂ ಪ್ರವೇಶಿಸಲೂ ಇಲ್ಲ, ಹೊರಬರಲೂ ಇಲ್ಲಈ ಹತ್ತು ದಿನಗಳ ಕಾಲ ಇವರು ಯಾವುದೇ ಆಹಾರ ಸ್ವೀಕರಿಸಿಲ್ಲ ಅಥವಾ ಇವರ ದೇಹದಿಂದ ಯಾವುದೇ ತ್ಯಾಜ್ಯ ಹೊರಹೋಗಿಲ್ಲ.

ತೂಕ ಕೊಂಚವೇ ಕಡಿಮೆಯಾದಂತೆ ಕಂಡುಬಂತು!

ತೂಕ ಕೊಂಚವೇ ಕಡಿಮೆಯಾದಂತೆ ಕಂಡುಬಂತು!

ಆದರೆ ಇವರ ಮೂತ್ರಕೋಶದಲ್ಲಿ ಮೂತ್ರ ಉತ್ಪತ್ತಿಯಾಗಿರುವುದು ಉಪಕರಣಗಳಲ್ಲಿ ದಾಖಲಾಗಿದೆ. ಇವರ ತೂಕ ಕೊಂಚವೇ ಕಡಿಮೆಯಾದಂತೆ ಆಗಿದೆಯೇ ವಿನಃ ಈ ಅವಧಿಯಲ್ಲಿ ಇವರು ಯಾವುದೇ ಆಹಾರ ಸ್ವೀಕರಿಸಿಲ್ಲ ಎಂದು ಗಮನವಿರಿಸಿದ ವೈದ್ಯರು ಖಚಿತಪಡಿಸಿದ್ದಾರೆ.

2010ರ ಸಂಶೋಧನೆಯ ವಿವರ

2010ರ ಸಂಶೋಧನೆಯ ವಿವರ

ಸುಮಾರು ಏಳು ವರ್ಷಗಳ ಬಳಿಕ ಇವರನ್ನು ಇನ್ನೊಂದು ತಂಡ ಇನ್ನೂ ಆಧುನಿಕ ಉಪಕರಣಗಳ ನೆರವಿನಿಂದ ತಪಾಸಣೆಗೆ ಒಳಪಡಿಸಿತು. ಈ ತಂಡದ ನೇತೃತ್ವವನ್ನು ಗುಜರಾತ್‌ನ ಖ್ಯಾತ ವೈದ್ಯ ಮತ್ತು ತಜ್ಞರಾದ ಡಾ. ಸುಧೀರ್‌ಶಾ ವಹಿಸಿದ್ದರು.

ಮೂವತ್ತೈದು ನುರಿತ ವೈದ್ಯರ ತಂಡ

ಮೂವತ್ತೈದು ನುರಿತ ವೈದ್ಯರ ತಂಡ

ಇವರ ತಂಡದಲ್ಲಿ Indian Defence Institute of Physiology and Allied Sciences (DIPAS) ವಿಭಾಗದ ಮೂವತ್ತೈದು ನುರಿತ ವೈದ್ಯರೂ ಇದ್ದರು. ಕುತೂಹಲ ತಾಳಿದ್ದ ಇತರ ಕೆಲವು ವೈದ್ಯರೂ ಇವರ ಸಂಶೋಧನೆಯಲ್ಲಿ ಭಾಗಿಯಾಗಲು ಸ್ವತಃ ಮುಂದೆ ಬಂದಿದ್ದರು.

ಇವರ ಪ್ರತಿ ಚಲನವಲನವನ್ನು ದಾಖಲಿಸಲಾಯಿತು

ಇವರ ಪ್ರತಿ ಚಲನವಲನವನ್ನು ದಾಖಲಿಸಲಾಯಿತು

ಇವರನ್ನು ಇರಿಸಿದ್ದ ಕೋಣೆಯಲ್ಲಿ ಆರೋಗ್ಯದ ವಿವರಗಳನ್ನು ಕ್ಷಣಕ್ಷಣಕ್ಕೂ ದಾಖಲಿಸುವ ನಿಖರ ಉಪಕರಣಗಳ ಸಹಿತ ಇವರ ಚಲನವಲನದ ಬಗ್ಗೆ ಗಮನವಿಡಲು ಹಲವು ಗುಪ್ತ ಕ್ಯಾಮೆರಾಗಳನ್ನೂ ಇರಿಸಿ ದಿನದ ಇಪ್ಪತ್ತನಾಲ್ಕೂ ಗಂಟೆ ಕಾಲ ಗಮನವಿರಿಸಲಾಗಿತ್ತು. ಒಟ್ಟು ಹತ್ತು ದಿನಗಳ ಕಾಲ ತೀವ್ರ ನಿಗಾವಹಿಸಿ ಇವರನ್ನು ಅಭ್ಯಸಿಸಲಾಯಿತು.

ಇವರ ಪ್ರತಿ ಚಲನವಲನವನ್ನು ದಾಖಲಿಸಲಾಯಿತು

ಇವರ ಪ್ರತಿ ಚಲನವಲನವನ್ನು ದಾಖಲಿಸಲಾಯಿತು

ಆದರೆ ಅಷ್ಟೂ ವೈದ್ಯರು ಅವಾಕ್ಕಾಗುವಂತೆ ಈ ಸಂತ ಒಂದು ತೊಟ್ಟು ನೀರನ್ನೂ ತುತ್ತು ಆಹಾರವನ್ನೂ ಸೇವಿಸಿರಲಿಲ್ಲ ಅಥವಾ ವಿಸರ್ಜಿಸಲಿಲ್ಲ. ಅಲ್ಲದೇ ದೇಹದ ಸ್ಥಿತಿಗತಿ ತಿಳಿಸುವ ಉಪಕರಣಗಳು ಇವರ ದೇಹದಲ್ಲಿ ಯಾವುದೇ ಒತ್ತಡ ಅಥವಾ ರಕ್ತದಲ್ಲಿನ ಕಿರುಬಿಲ್ಲೆ (ಪ್ಲೇಟ್ಲೆಟ್) ಗಳ ಸಂಖ್ಯೆಯಲ್ಲಿಯೂ ಒಂದಿನಿತೂ ಕಡಿಮೆಯಾಗಿಲ್ಲ ಎಂದು ದಾಖಲಿಸಿದ್ದವು.

ಹಾರ್ವರ್ಡ್ ಪ್ರೊಫೆಸರ್ ರಿಂದಲೂ ’ಅಸಾಧ್ಯ’ ಎಂಬ ಉದ್ಗಾರ!

ಹಾರ್ವರ್ಡ್ ಪ್ರೊಫೆಸರ್ ರಿಂದಲೂ ’ಅಸಾಧ್ಯ’ ಎಂಬ ಉದ್ಗಾರ!

ಈ ಅದ್ಭುತ ಶಕ್ತಿಯ ಬಗ್ಗೆ ಉತ್ಸುಕತೆ ತೋರಿದವರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಡಾ. ಮೈಕಲ್ ವ್ಯಾನ್ ರೂಯೆನ್ ಎಂಬುವರೂ ಒಬ್ಬರು. ಆದರೆ ಇವರನ್ನು ಬಂಧನದಲ್ಲಿರಿಸಿ ಗಮನವಿರಿಸಿದ ಕ್ರಮವನ್ನೇ ಖಂಡಿಸಿ ಇದರಲ್ಲೇನಾದರೂ ಎಡವಟ್ಟಾಗಿದ್ದಿದ್ದರೆ ಇವರ ಯಕೃತ್ ವೈಫಲ್ಯ, ಹೃದಯದ ಅತಿಹೆಚ್ಚಿನ ಬಡಿತ, ಹೃದಯದ ಮೇಲೆ ಅತಿ ಹೆಚ್ಚಿನ ಒತ್ತಡ ಮೊದಲಾದ ತೊಂದರೆ ಬರಬಹುದಾಗಿತ್ತು ಎಂದು ಕ್ಯಾತೆ ತೆಗೆದಿದ್ದಾರೆ.

ಈಗ ಆಸ್ಟ್ರಿಯಾ ಮತ್ತು ಜರ್ಮನಿಯ ವೈದ್ಯರ ಸರದಿ

ಈಗ ಆಸ್ಟ್ರಿಯಾ ಮತ್ತು ಜರ್ಮನಿಯ ವೈದ್ಯರ ಸರದಿ

ಮಾತಾಜಿಯವರ ಅದ್ಭುತ ಶಕ್ತಿಯನ್ನು ಕಣ್ಣಾರೆ ಕಂಡೇ ನಂಬುತ್ತೇವೆ ಎಂದು ಆಸ್ಟ್ರಿಯಾ ಮತ್ತು ಜರ್ಮನಿ ದೇಶಗಳ ಕೆಲವು ವೈದ್ಯರು ಉತ್ಸುಕತೆ ತೋರಿದ್ದಾರೆ. ಭಾರತದ ವೈದ್ಯರು ಬಳಸಿದ ಉಪಕರಣಗಳ ಬದಲಿಗೆ ನಮ್ಮದೇ ಉಪಕರಣಗಳಿಂದ ಇವರ ಗುಟ್ಟು ರಟ್ಟು ಮಾಡುತ್ತೇವೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ.

ಈಗ ಆಸ್ಟ್ರಿಯಾ ಮತ್ತು ಜರ್ಮನಿಯ ವೈದ್ಯರ ಸರದಿ

ಈಗ ಆಸ್ಟ್ರಿಯಾ ಮತ್ತು ಜರ್ಮನಿಯ ವೈದ್ಯರ ಸರದಿ

ಇನ್ನು ಕೆಲವೇ ದಿನಗಳಲ್ಲಿ ಈತನ ಆರೋಗ್ಯವನ್ನು ಈ ವೈದ್ಯರು ತಪಾಸಣೆಗೊಳಪಡಿಸಿ ಯಾವ ರಹಸ್ಯವನ್ನು ಬಹಿರಂಗಪಡಿಸುತ್ತಾರೆ ಎಂಬುದನ್ನು ಎಲ್ಲರೂ ಕಾತುರದಿಂದ ಕಾಯೋಣ.

English summary

Man Claimed To Have Had No Food Or Water For 70 Years!

Have you heard about the man who has claimed to have survived 70 long years without food and water? Well, we all assume that this is just a way to get famous around the world.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more