For Quick Alerts
ALLOW NOTIFICATIONS  
For Daily Alerts

  ’ವಿಶ್ವದಲ್ಲಿಯೇ ದೊಡ್ಡ’ ಎಂಬ ಹಣೆಪಟ್ಟಿ ಹೊತ್ತ ಬೃಹತ್ ವಸ್ತುಗಳು

  By Super
  |

  ಜಾಹೀರಾತುಗಳನ್ನು ದೂರದಲ್ಲಿ, ದೊಡ್ಡದಾಗಿ ಏಕೆ ಹಾಕಿರುತ್ತಾರೆ ಗೊತ್ತೇ? ಇದರಿಂದ ಹೆಚ್ಚು ಜನರ ಗಮನ ಸೆಳೆಯುತ್ತದೆ ಎಂದು ನಾವೆಲ್ಲಾ ತಿಳಿದಿದ್ದೇವೆ. ಆದರೆ ವಾಸ್ತವವಾಗಿ ಇದು ತಲುಪಬಹುದಾದುದಕ್ಕಿಂತಲೂ ಹೆಚ್ಚಿನ ಜನರನ್ನು ತಲುಪಲು ಇಷ್ಟು ದೊಡ್ಡ ಜಾಹೀರಾತು ಫಲಕ ನಿರ್ಮಿಸುವ ಕಾಲು ಭಾಗಕ್ಕೂ ಕಡಿಮೆ ಖರ್ಚಿನಲ್ಲಿ ಕಾಗದಲ್ಲಿ ಮುದ್ರಿಸಿ ಹಂಚಬಹುದು.

  ಆದರೆ ಈ ವಿಧಾನ ಫಲಪ್ರದವಲ್ಲ. ಏಕೆಂದರೆ ಜನರಿಗೆ ದೊಡ್ಡದು ಕಣ್ಣಿಗೆ ಕಾಣುತ್ತದೆಯೇ ವಿನಃ ಚಿಕ್ಕದಲ್ಲ. ಆದ್ದರಿಂದ ಹೆಚ್ಚು ಖರ್ಚಾದರೂ ಸರಿ, ದೊಡ್ಡದೇ ಫಲಕವನ್ನು ಜಾಹೀರಾತಿಗಾಗಿ ಬಳಸಲಾಗುತ್ತದೆ. ಕಟೌಟ್, ಪ್ರತಿಮೆ ಇತ್ಯಾದಿಗಳೆಲ್ಲಾ ಇದೇ ಮನೋಭಾವದ ಪ್ರತೀಕಗಳಾಗಿವೆ.

  ಆದ್ದರಿಂದ 'ವಿಶ್ವದಲ್ಲಿಯೇ ದೊಡ್ಡ' ಎಂಬ ಹಣೆಪಟ್ಟಿ ಹೊತ್ತ ಯಾವುದೇ ವಸ್ತು ಅತಿ ಹೆಚ್ಚು ಜನರ ಗಮನವನ್ನು ಸೆಳೆಯುವುದರಿಂದ ಕೆಲವರು ಈ ದಾಖಲೆಗಳಿಗಾಗಿಯೇ ಅತಿ ದೊಡ್ಡದನ್ನು ನಿರ್ಮಿಸಲು ತೊಡಗುತ್ತಾರೆ. ವಿಶ್ವದ ಅತಿದೊಡ್ಡ ಚಾಕಲೇಟು, ಅತಿದೊಡ್ಡ ಕೀಟ ಇತ್ಯಾದಿಗಳೆಲ್ಲಾ ಇದಕ್ಕೊಂದು ಉದಾಹರಣೆಯಾಗಿದೆ. ಆದರೆ ಕೆಲವು ವಸ್ತುಗಳಂತೂ ನಿಜವಾಗಿಯೂ ಅತಿ ದೊಡ್ಡ ಗಾತ್ರ ಹೊಂದಿದ್ದು ಅಚ್ಚರಿಯ ಕೂಪಕ್ಕೆ ತಳ್ಳುತ್ತವೆ. 

  ಗಿನ್ನೆಸ್ ದಾಖಲೆ, ಲಿಮ್ಕಾ ದಾಖಲೆ ಮೊದಲಾದವುಗಳಲ್ಲೆಲ್ಲಾ ಇಂತಹ ವಿಶ್ವದ ಅತಿದೊಡ್ಡ ವಸ್ತುಗಳ ಸಂಗ್ರಹವೇ ಇದೆ. ಈ ವಸ್ತುಗಳು ಸತತವಾಗಿ ಜನರ ಗಮನವನ್ನು ತಮ್ಮೆಡೆಗೆ ಸೆಳೆಯುತ್ತವೆ. ಈ ಗಮನವನ್ನೇ ವ್ಯಾಪಾರವಾಗಿಸುವ ಹುನ್ನಾರವೇ ಇನ್ನಷ್ಟು ವಿಶ್ವದ ಅತಿದೊಡ್ಡ ವಸ್ತುಗಳಿಗೆ ಕಾರಣವಾಗುತ್ತದೆ. ಬನ್ನಿ ಇಂತಹ ಕೆಲವು ಅಪ್ರತಿಮ ಗಾತ್ರದ ಅಚ್ಚರಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

  ವಿಶ್ವದ ಅತಿದೊಡ್ಡ ಚಾಕಲೇಟು ಬಾರ್

  ವಿಶ್ವದ ಅತಿದೊಡ್ಡ ಚಾಕಲೇಟು ಬಾರ್

  ಮಕ್ಕಳಿಗೆ ಅತಿ ಇಷ್ಟವಾದ ಚಾಕಲೇಟು ದೊಡ್ಡ ಗಾತ್ರದಲ್ಲಿದ್ದಷ್ಟೂ ಇದನ್ನು ತಿನ್ನುವವರಿಗೆ ಬಂಪರ್ ಬಹುಮಾನ ಬಂದಂತೆ. ಖ್ಯಾತ ಚಾಕಲೇಟು ತಯಾರಕರಾದ ಗ್ರ್ಯಾಂಡ್ ಕ್ಯಾಂಡಿ ಸಂಸ್ಥೆ ಇತ್ತೀಚೆಗೆ ವಿಶ್ವದ ಅತಿದೊಡ್ಡ ಚಾಕಲೇಟೊಂದನ್ನು ನಿರ್ಮಿಸಿದೆ. ಹತ್ತಿಂಚು ದಪ್ಪ, 4408.92 ಕೇಜಿ ತೂಕುವ, 18.4 ಅಡಿ ಉದ್ದ, 9 ಅಡಿ ಅಗಲದ ಚಾಕಲೇಟನ್ನು ನಿರ್ಮಿಸಿ ಪ್ರದರ್ಶಿಸಿದೆ. Image courtesy

  ವಿಶ್ವದ ಅತಿದೊಡ್ಡ ಸಂಧಿಪದಿ

  ವಿಶ್ವದ ಅತಿದೊಡ್ಡ ಸಂಧಿಪದಿ

  ಜಪಾನ್‌ನಲ್ಲಿರುವ ಜೇಡ ಏಡಿ (Japanese Spider Crab) ವಿಶ್ವದಲ್ಲಿಯೇ ಅತಿ ದೊಡ್ಡ ಸಂಧಿಪದಿಯಾಗಿದೆ. ಇದರ ಕಾಲುಗಳನ್ನು ಅಳೆದರೆ ಸುಮಾರು ಹನ್ನೆರಡು ಅಡಿ ಇರುತ್ತದೆ. ಸಮಾಧಾನಕರ ವಿಷಯವೆಂದರೆ ಇವು ಸುಮಾರು ಸಾವಿರಕ್ಕೂ ಹೆಚ್ಚು ಅಡಿಯ ನೆಲದಾಳದಲ್ಲಿರುವ ಕಾರಣ ಭೂಮಿಯ ಮೇಲೆ ಕಂಡುಬರುವುದು ಅತ್ಯಪರೂಪ. Image courtesy

  ವಿಶ್ವದ ಅತಿ ದೊಡ್ಡ ಐಪಾಡ್

  ವಿಶ್ವದ ಅತಿ ದೊಡ್ಡ ಐಪಾಡ್

  ಕೆಲವೇ ಉತ್ಪನ್ನಗಳಿದ್ದರೂ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಎಂಬ ಹೆಗ್ಗಳಿಕೆ ಪಡೆದ ಸಂಸ್ಥೆಯೆಂದರೆ ಅಪಲ್. ಇದರ ಉತ್ಪನ್ನಗಳೂ ಐ ನಿಂದಲೇ ಪ್ರಾರಂಭವಾಗುತ್ತವೆ. ಐಪ್ಯಾಡ್ , ಅಪೋಡ್, ಐಫೋನ್ ಇತ್ಯಾದಿ. ವಿಶ್ವದಲ್ಲಿ ಎಲ್ಲರೂ ದೊಡ್ಡ ದೊಡ್ಡದನ್ನು ತಯಾರಿಸುತ್ತಿರಬೇಕಾದರೆ ಆಪಲ್ ಸುಮ್ಮನಿದ್ದೀತೇ? ಸರಿ, ಸರಿಯಾಗಿ ಇಪ್ಪತ್ತೈದು ಅಡಿ ಅಗಲದ ಅಪಾಡ್ ಒಂದನ್ನು ತಯಾರಿಸಿ ಓಹಿಯೋ ರಾಜ್ಯದ ಸ್ಟೇಟ್ ಹೌಸ್ ಕಟ್ಟಡದ ಬಳಿಕ ಯೂನಿಜಾನ್ ಬ್ಯಾಂಕ್ ಕಟ್ಟಡದ ಎದುರು ಸ್ಥಾಪಿಸಿಯೇ ಬಿಟ್ಟಿತು. ದೂರದಿಂದ ನೋಡುವವರಿಗೆ ಇದೊಂದು ಮಾದರಿಯಂತೆ ಕಂಡುಬಂದರೂ ಹತ್ತಿರ ಬಂದುನೋಡಿದರೆ ನಿಜವಾಗಿಯೂ ಇದರ ಡಿಸ್ಲ್ಪೇಯಲ್ಲಿ ಚಿತ್ರಗಳು ಮೂಡುತ್ತಿವೆ. ಐಪಾಡ್ ನಲ್ಲಿರುವ ಕೆಲಸಗಳನ್ನೂ ಮಾಡುವ ಜೊತೆಗೇ ಹಾಡುಗಳನ್ನೂ ಕೇಳಬಹುದು. ಸಾರ್ವಜನಿಕರೂ ತಮ್ಮ ಇಷ್ಟದ ಹಾಡುಗಳನ್ನು ಇದರಲ್ಲಿ ಅಳವಡಿಸಿ ಕೇಳಬಹುದು. ಅಚ್ಚರಿಯಾಗಿದೆಯೆಲ್ಲಾ! Image courtesy

   ವಿಶ್ವದ ಅತಿದೊಡ್ಡ ಮಾನವನಿರ್ಮಿತ ಮಳೆಬಿಲ್ಲು

  ವಿಶ್ವದ ಅತಿದೊಡ್ಡ ಮಾನವನಿರ್ಮಿತ ಮಳೆಬಿಲ್ಲು

  ಮಳೆಬಿಲ್ಲು ಮೂಡಲು ಹಲವಾರು ಸಂಗತಿಗಳು ಜರುಗಬೇಕು. ಸೂರ್ಯ ಒಂದೇ ಪೂರ್ವದಲ್ಲಿ ಅಥವಾ ಪಶ್ಚಿಮದತ್ತ ಇರಬೇಕು. ನಮ್ಮ ಮತ್ತು ಸೂರ್ಯನ ನಡುವೆ ಎಲ್ಲೋ ಒಂದು ಕಡೆ ಮಳೆ ಬೀಳುತ್ತಿರಬೇಕು. ಈ ಮಳೆಹನಿ ಇನ್ನೂ ಜಿನುಗುತ್ತಿರಬೇಕು. ಆದ ಬೆಳಕಿನ ವಕ್ರೀಭವನದಿಂದ ಸೂರ್ಯನಿಗೆ ವಿರುದ್ದವಾದ ದಿಕ್ಕಿನಲ್ಲಿ ಮಳೆಬಿಲ್ಲು ಮೂಡುತ್ತದೆ. ಆದರೆ 2004ರ ಸೆಪ್ಟೆಂಬರ್ ಹದಿನೆಂಟರಂದು ಫಿಲಿಪ್ಪೀನ್ಸ್ ನ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯದ ಮೂವತ್ತೊಂದು ಸಾವಿರ ವಿದ್ಯಾರ್ಥಿಗಳೂ, ಸಿಬ್ಬಂದಿ, ಆಡಳಿತವರ್ಗ, ಅಧ್ಯಾಪಕವರ್ಗ ಸಹಿತ ಎಲ್ಲರೂ ಮೈದಾನದಲ್ಲಿ ಒಂದಾಗಿ ವಿಶ್ವದ ಅತಿದೊಡ್ಡ ಮಾನವರೂಪದ ಮಳೆಬಿಲ್ಲನ್ನು ನಿರ್ಮಿಸಿಯೇ ಬಿಟ್ಟರು. ದೇಶದ ಆಡಳಿತ ಶಾಂತಿಯನ್ನು ಘೋಷಿಸಿ ವಿಶ್ವಸಂಸ್ಥೆಗೆ ಪಮಾಣಪತ್ರ ಸಲ್ಲಿಸಿದುದರ ಸಂಕೇತವಾಗಿ ಈ ಮಳೆಬಿಲ್ಲನ್ನು ರಚಿಸಲಾಯ್ತು. Image courtesy

  ವಿಶ್ವದ ಅತಿದೊಡ್ಡ ಚಿನ್ನದಮೀನು

  ವಿಶ್ವದ ಅತಿದೊಡ್ಡ ಚಿನ್ನದಮೀನು

  ಸಾಮಾನ್ಯವಾಗಿ ಮನೆಯ ಅಕ್ವೇರಿಯಂಗಳಲ್ಲಿರುವ ಚಿನ್ನದ ಬಣ್ಣದ ಮೀನು ಕೆಲವು ಗ್ರಾಂಗಳು ಮಾತ್ರ ತೂಗುತ್ತದೆ. ಆದರೆ orange koi carp fish ಎಂಬ ಮೀನು ಸುಮಾರು ಮೂವತ್ತು ಪೌಂಡುಗಳಷ್ಟು ತೂಗುತ್ತದೆ. ಅಂದರೆ ಸುಮಾರು ಮೂರು ವರ್ಷದ ಬಾಲಕನ ತೂಕದಷ್ಟು. ಇದುವರೆಗೆ ಹಿಡಿದ ಚಿನ್ನದ ಬಣ್ಣದ ಮೀನುಗಳಲ್ಲೇ ಇದು ದೊಡ್ಡದು ಎಂದು ತೀರ್ಮಾನವಾಗಿದೆ. Image courtesy

  ವಿಶ್ವದ ಅತಿದೊಡ್ಡ ರೋಮನ್ ನೆಲಹಾಸು (Mosaic)

  ವಿಶ್ವದ ಅತಿದೊಡ್ಡ ರೋಮನ್ ನೆಲಹಾಸು (Mosaic)

  ಹಿಂದೆ ರೋಮನ್ನರ ಕಾಲದಲ್ಲಿ ಇತಿಹಾಸದ ಪ್ರಮುಖ ಘಟನೆಗಳನ್ನು ನೆಲಹಾಸುಗಳ ಚಿಕ್ಕ ಚಿಕ್ಕ ಚಪ್ಪಡಿಗಳಲ್ಲಿ ಮೂಡಿಸಿ ನೆಲಕ್ಕೆ ಹಾಸಲಾಗುತ್ತಿತ್ತು. ಇಂತಹ ರೋಮನ್ನರ ಇತಿಹಾಸವನ್ನು ತಿಳಿಸುವ ನೆಲಹಾಸು ಒಂದು ತುರ್ಕಿಯಲ್ಲಿದೆ. Orpheus pavement ಎಂದು ಈ ನೆಲಹಾಸನ್ನು ಹೆಸರಿಸಲಾಗಿದೆ. ಆದರೆ ಇದರ ಪಡಿಯಚ್ಚನ್ನು ಬ್ರಿಟನ್ನಿನ ಬಾಬ್ ಮತ್ತು ಜಾನ್ ವುಡ್ವರ್ಡ್ ಎಂಬುವರು ಸುಮಾರು ಹದಿನಾರು ಚಿಕ್ಕ ಚಿಕ್ಕ ತುಂಡುಗಳನ್ನು ಬಳಸಿ ಹತ್ತು ವರ್ಷಕ್ಕೂ ಹೆಚ್ಚು ವರ್ಷ ಶ್ರಮವಹಿಸಿ ಮರುನಿರ್ಮಿಸಿದ್ದಾರೆ. Image courtesy

  ವಿಶ್ವದ ಅತಿದೊಡ್ಡ ಮರಳ ನೆಲಹಾಸು

  ವಿಶ್ವದ ಅತಿದೊಡ್ಡ ಮರಳ ನೆಲಹಾಸು

  ನಮ್ಮಲ್ಲಿ ರಂಗೋಲಿ ಹಾಕುವಂತೆ ಬಣ್ಣದ ಮರಳನ್ನು ಕಲಾವಂತಿಕೆಯಿಂದ ಹರಡಿ ಕಲಾಕೃತಿಯನ್ನು ನಿರ್ಮಿಸಿದರೆ ಇದಕ್ಕೆ ಮರಳ ನೆಲಹಾಸು ಅಥವಾ ಮರಳ ಹೊದಿಕೆ (Sand Carpet ) ಎಂದು ಕರೆಯಲಾಗುತ್ತದೆ. ಇರಾನ್ ದೇಶದ ಕಡಲ ತೀರವೊಂದರಲ್ಲಿ ಸುಮಾರು ಇಪ್ಪತ್ತೈದು ಕಲಾವಿದರು ಸ್ಥಳೀಯವಾಗಿ ಸಿಗುವ ಎಪ್ಪತ್ತಕ್ಕೂ ಹೆಚ್ಚು ವಿಧದ ಮರಳನ್ನು ಬಳಸಿ ಈ ಸುಂದರ ಮರಳ ಹೊದಿಕೆಯನ್ನು ನಿರ್ಮಿಸಿದ್ದಾರೆ. ದೂರದಿಂದ ನೋಡಿದರೆ ನಿಜವಾಗಿಯೂ ರತ್ನಗಂಬಳಿಯೊಂದನ್ನು ನೆಲದಲ್ಲಿ ಹಾಸಿರುವಂತೆ ಕಾಣುತ್ತದೆ. Image courtesy

   

  English summary

  List Of World's Largest Things

  Huge things drag everybody's attention towards them; and if these things are unique, then there are obvious reasons that they will seek a mighty attention. We've shared the list of the world's largest things around us, in this article. From the world's largest chocolate bar to the world's largest arthropod, you can find out more about some of the most amazing things that are really huge.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more