Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ವಿಶ್ವವನ್ನೇ ನಡುಗಿಸಿದ ಮಹಿಳಾ ಸೈಕೋ ಹಂತಕಿಯರು!
"ಸರಣಿ ಹಂತಕ(ಕಿ)" ಎಂದ ಒಡನೆ ನಿಮಗೆ ನಮ್ಮ ರಾಜ್ಯದ ಹಲವಾರು ಕುಖ್ಯಾತ ಹಂತಕ ಮತ್ತು ಹಂತಕಿಯರ ಚಿತ್ರ ಕಣ್ಣ ಮುಂದೆ ಸಾಗಬಹುದು. ಮಹಿಳೆಯರ ಒಳ ಉಡುಪನ್ನೆ ಧರಿಸುವ, ಮತ್ತು ಅವರನ್ನು ನಿರ್ಮಾನುಷವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿ ಈಗ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿರುವ ಆ ವ್ಯಕ್ತಿ, ಗುಂಪಾಗಿ ಹೋಗಿ ದರೋಡೆ ಮಾಡಿ, ಮಹಿಳೆಯರು ಸಿಕ್ಕರೆ ಅತ್ಯಾಚಾರ ಮಾಡುತ್ತಿದ್ದಾ ಆ ಗ್ಯಾಂಗ್!, ಸೈನೈಡ್ ಅನ್ನು ಪ್ರಸಾದ ರೂಪದಲ್ಲಿ ನೀಡಿ ಕೊಲೆ ಮಾಡುತ್ತಿದ್ದ ಆ ಮಹಾನುಭವಳು ಎಲ್ಲರೂ ನಿಮಗೆ ಇದ್ದಕ್ಕಿದ್ದಂತೆ ನೆನಪಾಗಿರಬೇಕಲ್ಲವೇ?
ಹೌದು ಸರಣಿ ಹಂತಕರಲ್ಲಿ ಗಂಡಸರು ಹೆಚ್ಚಾಗಿ ಕಾಣಿಸಿಕೊಂಡರು ಮಹಿಳೆಯರು ಸಹ ಈ ಪಟ್ಟಿಯಲ್ಲಿ ಸಮಾನತೆಯನ್ನು ಕೋರಿದ್ದಾರೆ ಎಂಬುದೇ ವಿಷಾದನೀಯ. ಇದು ನಿಮಗೆ ವಿಚಿತ್ರವಾದರು ಸತ್ಯವಾದ ಸಂಗತಿ. ಈ ಲೇಖನದಲ್ಲಿ ನಿಮಗೆ ವಿಶ್ವವನ್ನು ನಡುಗಿಸಿದ ಅತ್ಯಂತ ಕುಖ್ಯಾತ ಸೈಕೋ ಹಂತಕಿಯರ ಪಟ್ಟಿಯನ್ನು ನೀಡುತ್ತಿದ್ದೇವೆ. ಸರಣಿ ಹಂತಕಿಯರು ಮತ್ತು ಸೈಕೋ ಕಿಲ್ಲರ್‌ಗಳು ಎಂಬ ಪದಕ್ಕೆ ಇವರು ನೀಡಿದ ಅರ್ಥಕ್ಕೆ ವಿಶ್ವವೇ ತಲ್ಲಣಗೊಂಡಿತು ಎಂಬುದು ಇತಿಹಾಸ.
ಮಮತೆಯ ಪ್ರತಿರೂಪವಾದ ಮಹಿಳೆಯರು, ತಮ್ಮ ದಯೆ ಮತ್ತು ದಾಕ್ಷಿಣ್ಯವನ್ನು ಪಕ್ಕಕ್ಕಿಟ್ಟು ಮಾಡಿದ ಕ್ರೂರ ಕೊಲೆಗಳಿಗೆ ಕಲ್ಲೆದೆಯವರು ಸಹ ನಡುಗಿ ಹೋಗಿದ್ದರು. ದ್ವೇಷದ ಹೆಸರಿನಲ್ಲಿ ಇವರು ತೀರಿಸಿಕೊಂಡ ಆ ಮುಯ್ಯಿಗೆ ಮುಗ್ಧರು ಸಹ ಬಲಿಯಾಗಿ ಬಿಟ್ಟರು. ಮೈನಡುಗಿಸುವ ಕಥೆಗಳು ಇವರು ಮಾಡಿದ ಕೊಲೆಗಳ ಹಿಂದೆ ಇದ್ದವು. ಬನ್ನಿ ಆ ಹಂತಕಿಯರ ಪರಿಚಯವನ್ನು ನಿಮಗೂ ಸಹ ಮಾಡಿಸುತ್ತೇವೆ.

ಕಿಲ ಕಿಲ ನಗುವ ಕಿಲ್ಲರ್ ಮುದುಕಿ
ಈಕೆಯನ್ನು ಗಿಗ್ಲಿಂಗ್ ಗ್ರ್ಯಾನಿ ಎಂದು ಕರೆಯುತ್ತಾರೆ. ಸದಾ ಕಿಲ ಕಿಲ ಎಂದು ನಗುತ್ತಿದ್ದ ಈ ಮುದುಕಿಯನ್ನು ನ್ಯಾನಿ ಡೊಸ್ ಆಫ್ ತುಲ್ಸ ಎಂದು ಕರೆಯುತ್ತಾರೆ. ಈಕೆ ನೆಲೆಸಿದ್ದು, ಒಕ್ಲಹೊಮಾದಲ್ಲಿ. ನೆರೆಹೊರೆಯವರ ಜೊತೆಗೆ ಸದಾ ನಗು ನಗುತ್ತಾ ಇರುತ್ತಿದ್ದ ಈಕೆ, ಒಳ್ಳೆಯ ಹೆಂಡತಿ, ಪೋಷಕಿ, ಮತ್ತು ಉತ್ತಮ ನೆರೆಹೊರೆಯ ಅಜ್ಜಿ ಎಂದು ಹೆಸರಾಗಿದ್ದಳು. ಆದರೆ ಒಂದು ದಿನ ಒಬ್ಬಳೇ ತನ್ನ ಕುಟುಂಬದ 11 ಜನರನ್ನು ಕೊಂದ ಈಕೆಯ ಕೃತ್ಯಕ್ಕೆ ಅಕ್ಕ-ಪಕ್ಕದ ಮನೆಯವರಿರಲಿ, ಇಡೀ ವಿಶ್ವವೇ ನಡುಗಿ ಹೋಯಿತು. ಅರ್ಸೆನಿಕ್ ಅನ್ನು ಬಳಸಿ ತನ್ನ ಐದು ಜನ ಗಂಡಂದಿರನ್ನು ಮತ್ತು ಮಕ್ಕಳು ಹಾಗು ಮೊಮ್ಮಕ್ಕಳನ್ನು ಈಕೆ ಕೊಂದು ಹಾಕಿದಳು. Image courtesy

ಐಲೀನ್ ವುರ್ನೋಸ್
ಈಕೆ ತನ್ನ ತಂದೆಯು ತನ್ನ ತಾಯಿಯಿಂದ ಕೊಲೆಯಾಗುವುದನ್ನು ನೋಡಿದವಳು. ನಿರಂತರವಾಗಿ ತನ್ನ ಅಜ್ಜನಿಂದ ಅತ್ಯಾಚಾರಕ್ಕೆ ಗುರಿಯಾದವಳು. ಜೊತೆಗೆ ಆತ ತನ್ನ ಸ್ನೇಹಿತರು ಹಾಗು ಈಕೆಯ ಅಣ್ಣನಿಂದ ಸಹ ಅತ್ಯಾಚಾರ ಮಾಡಿಸಿದ್ದನು. ಆಮೇಲೆ ಈಕೆ ಲೈಂಗಿಕ ಸುಖ ನೀಡುವ ಆಮೀಷ ತೋರಿಸಿ 9 ಜನರನ್ನು ಕೊಂದು ಹಾಕಿದ್ದಳು ಮತ್ತು ಹಲವರನ್ನು ದರೋಡೆ ಸಹ ಮಾಡಿದಳು. Image courtesy

ಡ್ರೊಥಿಯ ಪ್ಯುಯೆಂಟೆ
ಈಕೆ ಕ್ಯಾಲಿಫೋರ್ನಿಯಾದಲ್ಲಿ ಒಂದು ಬೋರ್ಡಿಂಗ್ ಮನೆಯನ್ನು ಇಟ್ಟುಕೊಂಡಿದ್ದಳು. ಮಾನಸಿಕ ಅಸ್ವಸ್ಥರು ಮತ್ತು ವಿಕಲ ಚೇತನರಾಗಿದ್ದ ಹಿರಿಯ ನಾಗರಿಕನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಳು. ಈ ನಾಗರಿಕರ ಹಣವನ್ನು ಲಪಟಾಯಿಸಿ, ಅವರನ್ನು ತನ್ನ ಮನೆಯ ನೆಲ ಮಹಡಿಯಲ್ಲಿ ಹೂತು ಹಾಕುತ್ತಿದ್ದಳು. ಇದಕ್ಕೆ ಈಕೆಗೆ ಒಬ್ಬಾತ ಸಹಾಯ ಮಾಡುತ್ತಿದ್ದನು. ಒಂದು ದಿನ ಆತನು ಸಹ ಮಾಯವಾದನು! Image courtesy

ರೋಸ್‌ಮೇರಿ ವೆಸ್ಟ್
ಜೈಲನ್ನು ಸಹ ಸ್ವರ್ಗವೆಂದು ಭಾವಿಸುವ ಈಕೆ, ಅಲ್ಲಿಯೇ ಸಾಯಲು ತೀರ್ಮಾನಿಸಿದ್ದಾಳೆ. ಒಟ್ಟು 10 ಮಹಿಳೆಯರನ್ನು ಕೊಲೆಗೈದ ಆರೋಪ ಹೊತ್ತಿರುವ ಈಕೆಯು ಅವರ ಜೊತೆಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದಳು. ಇಂದಿಗೂ ಆಕೆ ಏಕೆ ಅವರನ್ನು ಕೊಂದೆ ಎಂದು ಹೇಳುತ್ತಿಲ್ಲ. ಹೆಣಗಳಿಗೆ ಏನು ಮಾಡಿದಳು ಎಂಬುದು ಸಹ ಗೊತ್ತಿಲ್ಲ! Image courtesy

ಬೆಲ್ಲೆ ಸೊರ್ಸೆನೆನ್ಸನ್ ಗುನ್ನೆಸ್
ಈಕೆ ವಿಶ್ವದ ಅತ್ಯಂತ ಕುಖ್ಯಾತ ಹಂತಕಿ. ಗಂಡಸರನ್ನು ಆಕೆ ತನ್ನ ಮನೆಯಲ್ಲಿ ತುಂಡು ತುಂಡಾಗಿ ಕತ್ತರಿಸಿ ಹಾಕಿದ ಆರೋಪವನ್ನು ಹೊತ್ತಿದ್ದಾಳೆ. ಸೂಕ್ತ ವರ ಬೇಕಾಗಿದ್ದಾನೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿ ಸುಮಾರು 48 ಜನರನ್ನು ಮನೆಗೆ ಕರೆಸಿಕೊಂಡೆ ಹತ್ಯೆ ಮಾಡಿದ ಯಮಧೂತೆ ಈಕೆ. ಪೋಲಿಸರ ಈಕೆಯ ಮನೆಗೆ ಬಂದಾಗ ರುಂಡವಿಲ್ಲದ ಸುಟ್ಟ ಮುಂಡ ದೊರೆಯಿತು! ಅಕ್ಕ-ಪಕ್ಕದ ಮನೆಯವರು ಅದು ಈಕೆಯದೆ ಎಂದರು! Image courtesy

ಮೇರಿ ಅನ್ನ್ ಕಾಟನ್
ತನ್ನ ಮುಂದೆ ಯಾರಾದರು ಸತ್ತರೆ ನನಗೆ ಸಂತೋಷವಾಗುತ್ತದೆ ಎಂದು ನಿರ್ಭಿಡೆಯಿಂದ ಹೇಳಿದ ಈಕೆ ಕೊಂದದ್ದು 21 ಜನರನ್ನು. ಈ ಪಟ್ಟಿಯಲಿ ಆಕೆಯ 12 ಮಕ್ಕಳು, 4 ಗಂಡಂದಿರು ಮತ್ತು ಒಬ್ಬ ಗುಪ್ತ ಪ್ರೇಮಿ ಸಹ ಇದ್ದರು. ಈಕೆ ಈ ಕೊಲೆಗಳನ್ನು ಮಾಡಿದ್ದು, ವಿಮಾ ಹಣವನ್ನು ಲಪಟಾಯಿಸಲು. Image courtesy



Click it and Unblock the Notifications