For Quick Alerts
ALLOW NOTIFICATIONS  
For Daily Alerts

ಕೆಲವರಿಗೆ ಇಂತಹ ಅಸಹ್ಯಕರ ಕೆಲಸ ಮಾಡದೇ ವಿಧಿಯಿಲ್ಲ!

By Hemanth
|

ಉದ್ಯೋಗಂ ಪುರುಷ ಲಕ್ಷಣಂ' ಎನ್ನುವ ಮಾತಿದೆ. ಪುರುಷರು ಯಾವಾಗಲೂ ಕೆಲಸ ಮಾಡುತ್ತಿರಬೇಕು. ಮಹಿಳೆಯರು ಮನೆ ನೋಡಿಕೊಂಡಿಬೇಕು ಎನ್ನುವುದು ಇದರ ಅರ್ಥ. ಆದರೆ ಇಂದಿನ ದಿನಗಳಲ್ಲಿ ಮಹಿಳೆಯರು ಕೂಡ ಉದ್ಯೋಗವನ್ನು ಮಾಡುತ್ತಿರುವ ಕಾರಣ ಹಿಂದಿನ ಮಾತು ಈಗ ನಿಜವಾಗುವುದಿಲ್ಲ.

ಅದರಲ್ಲೂ ಪುರುಷರು ಮಾಡುವಂತಹ ಕೆಲವೊಂದು ಕೆಲಸಗಳ ಬಗ್ಗೆ ಹೇಳಿದರೆ ಅದು ನಿಮಗೆ ಹೇಸಿಗೆ ಹುಟ್ಟಿಸಬಹುದು ಮತ್ತು ನೀವು ನಿಬ್ಬೆರಗಾಗುತ್ತೀರಿ. ಇಂತಹ ಕೆಲವೊಂದು ಅಸಹ್ಯಕರ ಕೆಲಸಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಶೌಚಾಲಯದ ಗುಂಡಿ ಸ್ವಚ್ಛಗೊಳಿಸುವುದರಿಂದ ಹಿಡಿದು ಒರಾಗುಂಟನ ಮಲಮೂತ್ರವನ್ನು ಶೇಖರಣೆ ಮಾಡುವ ಕೆಲಸ ಇತ್ಯಾದಿಗಳು ಇದರಲ್ಲಿದೆ.

ಈ ಕೆಲಸಗಳು ಈಗಲೂ ಇದೆಯಾ ಎನ್ನುವುದು ನಿಮ್ಮ ಪ್ರಶ್ನೆಯಾಗಿರಬಹುದು. ಆದರೆ ಇಂತಹ ಕೆಲಸಗಳು ಇಲ್ಲದೆ ಇರುತ್ತಿದ್ದರೆ ವಿಶ್ವದಲ್ಲಿ ಏನಾಗುತ್ತಿತ್ತು ಎಂದು ಯೋಚಿಸಲು ಸಾಧ್ಯವಿಲ್ಲ. ಈ ಕೆಲಸಗಳನ್ನು ಮಾಡುವಂತಹ ಕಾರ್ಮಿಕರು ನಮ್ಮ ಜೀವನವನ್ನು ಸುಗಮವಾಗಿಸಿದ್ದಾರೆ ಮತ್ತು ಅವರಿಗೆ ನಾವು ಧನ್ಯವಾದ ಹೇಳಲೇಬೇಕು. ಅತ್ಯಂತ ವಿಚಿತ್ರ ಹಾಗೂ ಅಸಹ್ಯಕರ ಕೆಲಸಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿಕೊಳ್ಳಿ...

ಶೌಚಾಲಯದ ಗುಂಡಿ ಸ್ವಚ್ಛಗೊಳಿಸುವುದು

ಶೌಚಾಲಯದ ಗುಂಡಿ ಸ್ವಚ್ಛಗೊಳಿಸುವುದು

ಇಂತಹ ಕೆಲಸ ಮಾಡುವ ಕಾರ್ಮಿಕರನ್ನು ನಾವು ಗೌರವಿಸಲೇಬೇಕು. ಯಾಕೆಂದರೆ ಇವರಿಲ್ಲದೆ ನಮ್ಮ ನಿತ್ಯ ಜೀವನ ಸರಾಗವಾಗಿ ಸಾಗಲು ಸಾಧ್ಯವೇ ಇಲ್ಲ. ಇವರಿಗೆ ತಾವು ಮಾಡುವಂತಹ ಕೆಲಸದ ಬಗ್ಗೆ ಹೇಸಿಗೆಯಿಲ್ಲ. ಆದರೆ ಇವರ ಪರಿಶ್ರಮಕ್ಕೆ ಸರಿಯಾದ ಫಲ ಮಾತ್ರ ಸಿಗುತ್ತಿಲ್ಲ. Image courtesy

ಮಲ ಪರೀಕ್ಷೆ ಮಾಡುವವರು

ಮಲ ಪರೀಕ್ಷೆ ಮಾಡುವವರು

ಇನ್ನೊಬ್ಬರ ಮಲವನ್ನು ಕೈಯಲ್ಲಿ ಹಿಡಿದುಕೊಂಡು ಅದರಲ್ಲಿ ಸಂಶೋಧನೆ ಮಾಡಿ ಅವರಿಗೆ ಯಾವ ರೀತಿಯ ರೋಗವಿದೆ ಎನ್ನುವುದನ್ನು ಪತ್ತೆ ಹಚ್ಚುವುದು ಇದೆಯಲ್ಲಾ ಅದು ತುಂಬಾ ಅಸಹ್ಯಕರ ಅನಿಸಬಹುದಾದರೂ ವೈದ್ಯಕೀಯ ದೃಷ್ಟಿಯಿಂದ ಇದು ಒಳ್ಳೆಯ ಕೆಲಸ. ಇವರಿಗೆ ಗೌರವ ಸೂಚಿಸಲೇಬೇಕು. Image courtesy

ಒರಾಂಗುಟನ್‌ನ ಮಲ-ಮೂತ್ರ ಸಂಗ್ರಹಣೆ

ಒರಾಂಗುಟನ್‌ನ ಮಲ-ಮೂತ್ರ ಸಂಗ್ರಹಣೆ

ತಮ್ಮ ಕೆಳಗೆ ನಿಂತಿರುವ ಮನುಷ್ಯರ ಮೇಲೆ ಮಲ ಮತ್ತು ಮೂತ್ರ ವಿಸರ್ಜನೆ ಮಾಡುವುದೆಂದರೆ ಈ ಒರಾಂಗುಟನ್ ಗಳಿಗೆ ಅದೇನೋ ಖುಷಿ. ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಇವುಗಳ ಮಲಮೂತ್ರ ಸಂಗ್ರಹಣೆಗೆ ಕೆಲವರನ್ನು ನೇಮಿಸಲಾಗಿದೆ.

Image courtesy

ವಿಧಿವಿಜ್ಞಾನ ತಜ್ಞರು

ವಿಧಿವಿಜ್ಞಾನ ತಜ್ಞರು

ಕೊಲೆಯಾದ ಒಂದು ಜಾಗಕ್ಕೆ ನೀವು ಹೋಗಿದ್ದರೆ ಅಲ್ಲಿ ಹೆಣವನ್ನು ನೋಡಿ ನೀವು ಬೆಚ್ಚಿ ಬೀಳುತ್ತೀರಿ. ಅದು ಕೂಡ ಕೊಲೆಯಾಗಿ ಕೆಲವು ದಿನಗಳೇ ಕಳೆದು ಹೋದಂತಹ ಶವ. ಇಂತಹ ಪರಿಸ್ಥಿತಿಯಲ್ಲೂ ವಿಧಿವಿಜ್ಞಾನ ತಜ್ಞರು ಕೆಲಸ ಮಾಡುತ್ತಾರೆ. ಇದಕ್ಕೆ ಅವರಿಗೆ ಧನ್ಯವಾದ ಹೇಳಲೇಬೇಕಲ್ಲವೇ? Image courtesy

ವಧಗ್ರಹದ ಕಾರ್ಮಿಕರು

ವಧಗ್ರಹದ ಕಾರ್ಮಿಕರು

ಇವರು ಪ್ರಾಣಿಗಳನ್ನು ಕೊಂದು ಅವುಗಳನ್ನು ತುಂಡುತುಂಡು ಮಾಡುವುದು ಮಾತ್ರವಲ್ಲದೆ, ಕೆಲವೊಂದು ಪ್ರಾಣಿಗಳ ಅಂಗಾಂಗಳನ್ನು ಕೂಡ ತುಂಡರಿಸುತ್ತಾರೆ. ಕೆಲವೊಂದು ಅಧ್ಯಯನಗಳ ಪ್ರಕಾರ ವಧಗ್ರಹದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರು ಸಮಯ ಕಳೆದಂತೆ ಸಸ್ಯಾಹಾರಿಗಳಾಗುತ್ತಾರಂತೆ. Image courtesy

ಅಪಘಾತಕ್ಕೊಳಗಾದವರನ್ನು ತೆಗೆಯುವುದು

ಅಪಘಾತಕ್ಕೊಳಗಾದವರನ್ನು ತೆಗೆಯುವುದು

ರಸ್ತೆಯಲ್ಲಿ ಯಾವಾಗಲೂ ಅಪಘಾತಗಳು ಸಂಭವಿಸುತ್ತಾ ಇರುತ್ತದೆ. ಮನುಷ್ಯನಾದರೆ ಅವನನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಆದರೆ ಪ್ರಾಣಿಗಳಾದರೆ ಅಲ್ಲಿಯೇ ಬಿಟ್ಟುಬಿಡುತ್ತಾರೆ. ಇಂತಹ ಪ್ರಾಣಿಗಳನ್ನು ತೆಗೆಯಲು ಕೆಲವು ಕಾರ್ಮಿಕರನ್ನು ನಿಯೋಜಿಸಲಾಗುತ್ತದೆ. ವಾಹನಗಳು ಅತ್ಯಂತ ಕ್ರೂರವಾಗಿ ಪ್ರಾಣಿಗಳಿಗೆ ಡಿಕ್ಕಿ ಹೊಡೆದಿರುವುದನ್ನು ಇವರು ನೋಡಿರುತ್ತಾರೆ. ಆದರೂ ತಮ್ಮ ಕೆಲಸ ಮಾತ್ರ ಮುಂದುವರಿಸಿಕೊಂಡು ಹೋಗುತ್ತಾರೆ. Image courtesy

ಪೋರ್ನ್ ಸ್ಟುಡಿಯೋದಲ್ಲಿ ದ್ವಾರಪಾಲಕ

ಪೋರ್ನ್ ಸ್ಟುಡಿಯೋದಲ್ಲಿ ದ್ವಾರಪಾಲಕ

ಇದು ಅತೀ ಹೆಚ್ಚು ರೇಜಿಗೆ ಹಾಗೂ ಅಸಹ್ಯ ಮೂಡಿಸುವಂತಹ ಕೆಲಸವಾಗಿದೆ. ನೆಲದ ಮೇಲೆ ಬಿದ್ದಿರುವಂತಹ ವೀರ್ಯವನ್ನು ಸ್ವಚ್ಛಗೊಳಿಸಬೇಕಾಗಿದೆ. ಮುಂದಿನ ಶೋ ಶುರುವಾಗುವ ಮೊದಲು ದ್ವಾರಪಾಲಕರು ನೆಲವನ್ನು ಸ್ವಚ್ಛಗೊಳಿಸಬೇಕಾಗಿದೆ. Image courtesy

ವಾಯು ವಿಶ್ಲೇಷಕ

ವಾಯು ವಿಶ್ಲೇಷಕ

ಇದು ತುಂಬಾ ವಿಚಿತ್ರ ಕೆಲಸ. ಇದರಲ್ಲಿ ರೋಗಿಗಳು ಹೂಸು ಬಿಡುವ ವಾಸನೆಯನ್ನು ಪತ್ತೆ ಹಚ್ಚಿ ರೋಗವನ್ನು ಪತ್ತೆಹಚ್ಚಲು ನೆರವಾಗಬೇಕು. ಇದನ್ನು ಊಹಿಸಿದಾಗ ನಿಮಗೆ ಹೇಗನಿಸುವುದು? Image courtesy

English summary

List Of The Most Disgusting Jobs

If you are not happy with your job, then we bring to you the list of jobs that people do which are beyond imagination; and we're sure, you would be grateful for what job you have and do!! In this article, we bring to you the list of the most disgusting jobs that you have ever heard of. The list of jobs includes anything from cleaning the septic tank to collecting an orangutan pee, to any other damn thing!
X
Desktop Bottom Promotion