Latest Updates
-
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ
ಆರನೆಯ ಇಂದ್ರಿಯದ ಶಕ್ತಿಯಲ್ಲಿ, ಏನೋ ಸುಳಿಮಿಂಚಿದೆ..
ಕೆಲವೊಮ್ಮೆ ಮನುಷ್ಯರ ಅತೀಂದ್ರಿಯ ಶಕ್ತಿಯ ಬಗ್ಗೆ ಹೇಳಹೊರಟರೆ ಒಂದು ಉದ್ಗ್ರಂಥವೇ ಆಗಬಹುದು. ಏಕೆಂದರೆ ಮನುಷ್ಯರಿಗಿರುವ ಕಣ್ಣು, ಮೂಗು, ನಾಲಿಗೆ, ಕಿವಿ ಮತ್ತು ಚರ್ಮ ಎಂಬ ಐದು ಇಂದ್ರಿಯಗಳು ಗ್ರಹಿಸಲಾರದ ಅನುಭೂತಿಯನ್ನು ಗ್ರಹಿಸುವ ಶಕ್ತಿ ಮನುಷ್ಯರ ಮೆದುಳಿಗೆ ಮಾತ್ರ ಇದ್ದು ಇದನ್ನು ಸಮರ್ಥಿಸಲು ಅಥವಾ ವಿವರಿಸಲು ಸಾಧ್ಯವಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಈ ಅನುಭೂತಿ ಕ್ಷಣಿಕವಾಗಿದ್ದು ಹೆಚ್ಚಿನ ಭಾಗ
ನೆನಪಿರುವುದಿಲ್ಲ. ಆದರೆ ಏನೋ ಆಗುತ್ತಿದೆ, ಏನೋ ಸಂಭವಿಸುತ್ತಿದೆ ಎಂಬ ಬಗ್ಗೆ ಅನುಭೂತಿ ಮಾತ್ರ ಆಗುತ್ತದೆ. ಇದು ಹೇಗೆ ಆಗುತ್ತದೆ ಎಂಬುದನ್ನು ಕಂಡುಕೊಳ್ಳಲು ಆಧುನಿಕ ವಿಜ್ಞಾನದ ಸಹಾಯದೊಂದಿಗೆ ಹಲವು ಪ್ರಯತ್ನಗಳನ್ನು ನಡೆಸಲಾಯಿತು. ಇದರಿಂದ ಕೆಲವು ಅತೀಂದ್ರಿಯ ಅನುಭವಗಳ ಇರುವಿಕೆಯನ್ನು ಪತ್ತೆಹಚ್ಚಲಾಯಿತು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಅನುಭವಗಳು ಹೆದರಿಕೆ ಹುಟ್ಟಿಸುವಂತಿರುತ್ತವೆ.
ಅಪರೂಪಕ್ಕೆ ಇವು ಸಂತೋಷ ನೀಡುವ ಅನುಭವಗಳೂ ಆಗಿರುತ್ತವೆ. ಈ ಅನುಭವಗಳು ನಮ್ಮ ದೇಹ ಮತ್ತು ಮನಸ್ಸಿನ ಅದ್ಭುತ ಸಾಮರ್ಥ್ಯಗಳನ್ನು ಅನಾವರಣಗೊಳಿಸುತ್ತದೆ. ಇಂದು ನಮ್ಮ ದೇಹದ ಮತ್ತು ವಿಶೇಷವಾಗಿ ಆರನೆಯ ಇಂದ್ರಿಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಅತೀಂದ್ರಿಯ ಶಕ್ತಿಗಳ ಅಬ್ಬರ, ಅನುಭವ ಮಾತ್ರ ಭೀಕರ
ಒಂದು ವೇಳೆ ನೀವು ಈ ಲೇಖನವನ್ನು ಆರಾಮವಾಗಿ ಕುಳಿತಿದ್ದು ಓದುತ್ತಿದ್ದರೆ ನಮ್ಮ ತ್ವಚೆಯನ್ನು ಸೂಕ್ಷ್ಮವಾಗಿ ಗಮನಿಸಿ. ವಾಸ್ತವವಾಗಿ ನಾವು ಮೂಗಿನಿಂದ ಉಸಿರಾಡುವಂತೆಯೇ ನಮ್ಮ ಚರ್ಮ ಸಹಾ ತನ್ನ ಅತಿ ಸೂಕ್ಷ್ಮರಂಧ್ರಗಳ ಮೂಲಕ ಉಸಿರಾಡುತ್ತಿದೆ. ಆದರೆ ಇದು ಅತಿ ಸೂಕ್ಷರೂಪದಲ್ಲಿ ಆಗುವ ಕಾರಣ ಇದು ನಮ್ಮ ಅನುಭವಕ್ಕೆ ಬರುವುದಿಲ್ಲ. ಬನ್ನಿ, ಈ ಅದ್ಭುತ ಅನುಭವಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ವಿಜ್ಞಾನ ಏನು ಹೇಳುತ್ತೆ,,?
ಇಂದು ವಿಜ್ಞಾನದ ಮೂಲಕ ಕಂಡುಕೊಂಡ ಮಾಹಿತಿ ಎಂದರೆ ನಮ್ಮ ಮೂಗಿನ ಒಳಗಿರುವಂತಹದ್ದೇ ಜೀವಕೋಶಗಳು ನಮ್ಮ ಚರ್ಮದಲ್ಲಿಯೂ ಇವೆ. ಆದರೆ ಕಡಿಮೆ ಪ್ರಮಾಣದಲ್ಲಿವೆ. ಇದೇ ಕಾರಣಕ್ಕೆ ಈ ಜೀವಕೋಶಗಳು ದೇಹದ ಇತರ ಭಾಗಗಳಿಗಿಂತ ಚೆನ್ನಾಗಿ ಮತ್ತು ಶೀಘ್ರವಾಗಿ ಮಾಗುವ ಗುಣವನ್ನು ಹೊಂದಿವೆ. ಅಂದರೆ ಚಿಕ್ಕ ಗಾಯವಾದರೆ ಚರ್ಮ ಅತಿ ಬೇಗನೇ ಕೂಡಿಕೊಳ್ಳುತ್ತದೆ. ಚರ್ಮದ ಉಸಿರಾಟ ಶರೀರವನ್ನು ಸ್ವಚ್ಛವಾಗಿಟ್ಟುಕೊಳ್ಳಲೂ ಸಹಕರಿಸುತ್ತದೆ. ಚರ್ಮದ ಈ ಅದ್ಭುತ ಶಕ್ತಿಯೇ ಅತೀಂದ್ರಿಯ ಶಕ್ತಿಗೂ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

ಕುರುಡರು ಕಂಡ ಸುಖಪುರುಷರು
ಒಂದು ಸಂಶೋಧನೆಯಲ್ಲಿ ಕೆಲವು ಕುರುಡರ ಎದುರು ನಗುತ್ತಿರುವ ಮತ್ತು ದುಃಖದಲ್ಲಿರುವ ವ್ಯಕ್ತಿಗಳ ಚಿತ್ರಗಳನ್ನಿರಿಸಲಾಯಿತು. ಬಳಿಕ ಈ ಚಿತ್ರಗಳ ಬಗ್ಗೆ ಹೇಳದೇ ನಿಮಗೆ ಯಾವ ಅನುಭವವಾಗಿದೆ ಎಂದು ಪ್ರಶ್ನೆ ಕೇಳಲಾಯಿತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕುರುಡರು ಕಂಡ ಸುಖಪುರುಷರು
ವಿಚಿತ್ರವೆಂದರೆ ಇವರು ಆ ಚಿತ್ರಗಳನ್ನು ನೋಡದೆಯೇ ಆ ಚಿತ್ರಗಳು ಬಿಂಬಿಸುತ್ತಿರುವ ಭಾವನೆಗಳನ್ನು ಗ್ರಹಿಸಿದ್ದರು. ಈ ಸಂಶೋಧನೆಯ ಮೂಲಕ ಕಣ್ಣುಗಳಿಲ್ಲದೇ, ಯಾವುದನ್ನೂ ಸ್ಪರ್ಷಿಸದೇ ಮುಂದಿನ ವ್ಯಕ್ತಿ ಅಥವಾ ವಸ್ತುವಿನ ಇರುವಿಕೆಯ ಬಗ್ಗೆ ಅಗೋಚರ ಅನುಭವವನ್ನು ಪಡೆಯುತ್ತಿರುವುದು ಸಾಬೀತಾಯಿತು.

ನೀರಿನಡಿಯ ಸದ್ದುಗಳು
ನೀರಿನಲ್ಲಿದ್ದಾಗ ಮನುಷ್ಯರ ಕಿವಿ ಕೇಳುವ ಸಾಮರ್ಥ್ಯ ಮೀನುಗಳಿಗಿಂತ ಉತ್ತಮವಾಗಿರುತ್ತದೆ ಎಂದು ಒಂದು ಸಂಶೋಧನೆ ತಿಳಿಸುತ್ತದೆ. ನಮ್ಮ ಕಿವಿಗಳು ಇಪ್ಪತ್ತರಿಂದ ಇಪ್ಪತ್ತು ಸಾವಿರ ಹರ್ಟ್ಸ್ ವರೆಗಿನ ಕಂಪನಗಳನ್ನು (ಪ್ರತಿ ಸೆಕೆಂಡಿಗೆ) ಮಾತ್ರ ಗ್ರಹಿಸಬಲ್ಲುದು. ಆದರೆ ನಮ್ಮ ಮೂಳೆಗಳು ಎರಡು ಲಕ್ಷ ಹರ್ಟ್ಸ್ ವರೆಗಿನ ಕಂಪನಗಳನ್ನು ಗ್ರಹಿಸಬಲ್ಲವು.

ನೀರಿನಡಿಯ ಸದ್ದುಗಳು
ಆದರೆ ಗಾಳಿಯಲ್ಲಿ ಈ ಗ್ರಹಿಕೆ ಅನುಭವಕ್ಕೆ ಸಿಗದ ಕಾರಣ ನಾವು ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಕಂಪನಗಳನ್ನು ಗ್ರಹಿಸಲಾರೆವು. ಅಚ್ಚರಿ ಎಂದರೆ ನೀರಿನಲ್ಲಿದ್ದಾಗ ಈ ಕಂಪನಗಳನ್ನು ಮೂಳೆಗಳು ಗ್ರಹಿಸಿ ಕಿವಿಯ ತಮಟೆಗೆ ಕಳುಹಿಸಬಲ್ಲವು. ಈ ಮೂಲಕ ನಾವು ಮೀನುಗಳಿಗಿಂತಲೂ ಚೆನ್ನಾಗಿ ನೀರಿನಡಿಯಲ್ಲಿ ಶಬ್ದಗಳನ್ನು ಕೇಳಬಲ್ಲೆವು.

ಹಾವಿನ ಇರುವನ್ನು ಗ್ರಹಿಸುವ ಮಹಿಳೆಯರು
ಕೆಲವೊಮ್ಮೆ ಸದ್ದಿಲ್ಲದೇ ಮನೆ ಸೇರಿದ ಹಾವನ್ನು ಮಹಿಳೆಯರು ನೋಡದೇ ಗ್ರಹಿಸಬಲ್ಲರು. ಮನೆ ಅಥವಾ ಬೇರೆಲ್ಲಾದರೂ ಅಕ್ಕಪಕ್ಕದಲ್ಲಿ ಹಾವಿದ್ದರೆ ಮಹಿಳೆಯರು ಅಪ್ರಯತ್ನವಾಗಿ ಭಯಭೀತರಾಗುತ್ತಾರೆ. ಏಕೆಂದರೆ ಮಹಿಳೆಯರ ಚರ್ಮ ಪುರುಷರಿಗಿಂತ ಹೆಚ್ಚು ಸೂಕ್ಷ್ಮಗ್ರಾಹಿಯಾಗಿದ್ದು ಅಕ್ಕಪಕ್ಕದ ಅಪಾಯಗಳನ್ನು ಪುರುಷರಿಗಿಂತ ಹೆಚ್ಚು ಸಮರ್ಥವಾಗಿ ಗ್ರಹಿಸಬಲ್ಲರು.

ವ್ಯಕ್ತಿತ್ವವನ್ನು ವಾಸನೆಯಿಂದ ಗ್ರಹಿಸುವ ಶಕ್ತಿ
ಪ್ರತಿ ವ್ಯಕ್ತಿಗೂ ತಮ್ಮದೇ ಆದ ವಾಸನೆ ಇರುತ್ತದೆ. ಇದು ನಾಯಿಗಳು ಥಟ್ಟನೇ ಗಮನಿಸಬಲ್ಲವು. ಆದ್ದರಿಂದಲೇ ಮನೆಯವರು ಯಾರೇ ಇದ್ದರೂ ಸುಮ್ಮನಿರುವ ನಾಯಿ ಹೊರಗಿನವರಾರಾದರೂ ಬಂದರೆ ಸ್ವಾಮಿನಿಷ್ಠೆ ತೋರಿಸಲು ಬೊಗಳುವುದನ್ನು ಕಾಣಬಹುದು. ಮುಂದೆ ಓದಿ

ವ್ಯಕ್ತಿತ್ವವನ್ನು ವಾಸನೆಯಿಂದ ಗ್ರಹಿಸುವ ಶಕ್ತಿ
ಈ ಸಾಮರ್ಥ್ಯ ನಮ್ಮಲ್ಲಿ ಕಡಿಮೆ ಇದ್ದರೂ ಎದುರಿನ ವ್ಯಕ್ತಿಯ ಬಗ್ಗೆ ಅಭಿಪ್ರಾಯ ಪಡೆಯಲು ಸಾಕಾಗುವಷ್ಟಿದೆ. ವಿಶೇಷವಾಗಿ ಬಹಿರ್ಮುಖಿ ಮತ್ತು ಸದಾ ಸಂತೋಷದಲ್ಲಿರುವ ವ್ಯಕ್ತಿಗಳು ವಿಶಿಷ್ಟವಾದ ವಾಸನೆಯನ್ನು ಹೊಂದಿದ್ದು ಅವರು ಅಕ್ಕಪಕ್ಕದಲ್ಲಿದ್ದರೆ ಅವರ ಇರುವಿಕೆಯನ್ನು ಅವರನ್ನು ನೋಡದೆಯೇ ಗ್ರಹಿಸಬಹುದು.

ನೀರಿನ ಹರಿವನ್ನು ಆಲಿಸಿ ನೀರು ಬಿಸಿ ಇದೆಯೋ ಇಲ್ಲವೋ ಹೇಳುವ ಶಕ್ತಿ
ನೀರಿನ ಕಣಗಳ ವರ್ತನೆ ಅದರ ತಾಪಮಾನವನ್ನು ಅವಲಂಬಿಸಿದೆ. ತಣ್ಣಗಿದ್ದಾಗ ಪರಸ್ಪರ ಹತ್ತಿರವಿರುವ ಕಣಗಳು ಬಿಸಿಯಾಗುತ್ತಿದ್ದಂತೇ ದೂರ ದೂರವಾಗುತ್ತವೆ. ಇದು ನೀರಿನ ಹರಿವಿನ ಸದ್ದು ಬದಲಿಸಲು ಕಾರಣವಾಗುತ್ತದೆ. ಅಂದರೆ ಬಿಸಿನೀರು ಬೀಳುತ್ತಿದ್ದಾಗ ಬರುವ ಸದ್ದು ಅಷ್ಟೇ ಎತ್ತರದಿಂದ ಬೀಳುತ್ತಿರುವ ತಣ್ಣೀರಿಗಿಂತ ಭಿನ್ನವಾಗಿರುತ್ತದೆ.

ನೀರಿನ ಹರಿವನ್ನು ಆಲಿಸಿ ನೀರು ಬಿಸಿ ಇದೆಯೋ ಇಲ್ಲವೋ ಹೇಳುವ ಶಕ್ತಿ
ಈ ವ್ಯತ್ಯಾಸವನ್ನು ನಾವು ಗಮನಿಸಬಲ್ಲೆವಾದುದರಿಂದ ಬೀಳುತ್ತಿರುವ ಅಥವಾ ಹರಿಯುತ್ತಿರುವ ನೀರು ಬಿಸಿ ಇದೆಯೋ ತಣ್ಣಗಿದೆಯೋ ಎಂದು ಹೇಳಬಲ್ಲೆವು. ಇದಕ್ಕೆ ನೀರಿನ ಹರಿವನ್ನು ನೋಡುವ ಅಥವಾ ಮುಟ್ಟುವ ಅವಶ್ಯಕತೆಯೇ ಇಲ್ಲ.

ಮಹಿಳೆಯರಲ್ಲಿ ಅಂಡಾಣು ಬಿಡುಗಡೆಯಾಗುವುದನ್ನು ಗ್ರಹಿಸುವ ಪುರುಷರು
ಕೆಲವು ಸಮಯದಲ್ಲಿ ತಮ್ಮ ಪತ್ನಿಯರು ಅತೀವ ಸುಂದರಿಯಾಗಿ ಕಾಣುತ್ತಾರೆ ಎಂದು ಅವರ ಪತಿಯರು ತಿಳಿಸುತ್ತಾರೆ. ಈ ಬಗ್ಗೆ ನಡೆಸಿದ ಸಂಶೋಧನೆಗಳಿಂದ ಕಂಡುಬಂದ ಅಂಶವೆಂದರೆ ಆ ಸಮಯ ಅವರ ಪತ್ನಿಯರ ದೇಹದಲ್ಲಿ ಅಂಡಾಣು ಬಿಡುಗಡೆಯಾಗುವ ಸಮಯವಾಗಿತ್ತು.

ಮಹಿಳೆಯರಲ್ಲಿ ಅಂಡಾಣು ಬಿಡುಗಡೆಯಾಗುವುದನ್ನು ಗ್ರಹಿಸುವ ಪುರುಷರು
ಆ ಸಮಯದಲ್ಲಿ ಬದಲಾಗುವ ಅವರ ಧ್ವನಿ, ಇನ್ನಷ್ಟು ವಿಸ್ತಾರಗೊಳ್ಳುವ ಪ್ರಷ್ಠಭಾಗವನ್ನು ಗಮನಿಸಿದ ಪುರುಷರಿಗೆ ಅವರ ಪತ್ನಿಯರು ಇನ್ನಷ್ಟು ಸುಂದರರಾಗಿ ಕಾಣುತ್ತಾರೆ.



Click it and Unblock the Notifications











