Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮೈಕಟ್ಟು ದಪ್ಪಗಿದ್ದರೂ, ಮುದ್ದಾಗಿ ಕಾಣುವ ಪುರುಷ ಮಾಡೆಲ್...
ರೂಪದರ್ಶಿ ಎಂದಾಗ ಇವರು ಒಂದು ಮಾದರಿಯಾಗಿರಬೇಕು ಎಂದೇ ನಾವೆಲ್ಲಾ ಬಯಸುತ್ತೇವೆ. ಆದರೆ ಇದು ವಾಸ್ತವವಲ್ಲ ಎಂದು ನಮಗೆ ಚೆನ್ನಾಗಿ ಗೊತ್ತಿದೆ. ಲಕ್ಸ್ ಸೋಪ್ ಬಳಸಿ ಎಂದು ಹೇಳುವ ಶಾರುಖ್ ಖಾನ್ ನಿಜವಾಗಿಯೂ ಲಕ್ಸ್ ಸೋಪು ಬಳಸುತ್ತಾರೋ ಇಲ್ಲವೋ ಗೊತ್ತಿಲ್ಲ! ಆದರೆ ಆ ಜಾಹೀರಾತು ಬಂದ ಬಳಿಕ ಮಾತ್ರ ಲಕ್ಸ್ ಸೋಪಿನ ಮಾರಾಟ ಉತ್ತುಂಗಕ್ಕೇರಿದ್ದು ಮಾತ್ರ ಸುಳ್ಳಲ್ಲ.
ಈ ಸಂದರ್ಭದಲ್ಲಿ ಲಕ್ಸ್ ಸೋಪಿನ ನಿಜವಾದ ಗುಣಕ್ಕಿಂತಲೂ ಶಾರುಖ್ ರವರ ತಾರಾ ಮೌಲ್ಯ ಅಂದರೆ ಸ್ಟಾರ್ ವ್ಯಾಲ್ಯೂವಿಗೇ ಹೆಚ್ಚಿನ ಆದ್ಯತೆ ದೊರಕುತ್ತದೆ. ಅಂತೆಯೇ ಕೆಲವು ರೂಪದರ್ಶಿಗಳು ಸ್ಥೂಲಕಾಯ ಹೊಂದಿದ್ದರೂ ಇವರಲ್ಲಿ ಏನೋ ಸೆಳೆತ ಕಂಡ ಗ್ರಾಹಕ ಇವರತ್ತ ನೋಟ ಬೀರದೇ ಇರಲಾರ. ವಿಶ್ವದ ಫ್ಯಾಷನ್ ಜಗತ್ತಿನಲ್ಲಿ ಈ ಸ್ಥೂಲದೇಹಿಗಳಿಗೆ ವಿಶಿಷ್ಟ ಸ್ಥಾನವಿದೆ.

ಪ್ಲಸ್ ಸೈಜ್ ಮಾಡೆಲ್ ಎಂದೇ ಕರೆಯಲಾಗುವ ಇವರು ವಿಶ್ವದಲ್ಲಿ ಹೆಚ್ಚಾಗಿರುವ ಸ್ಥೂಲದೇಹಿಗಳನ್ನು ಪ್ರತಿನಿಧಿಸುತ್ತಾರೆ. ಒಂದರ್ಥದಲ್ಲಿ ಕೇವಲ ಬಳುಕುವ ರೂಪದರ್ಶಿಗಳನ್ನೇ ಬಳಸಲಾಗುತ್ತಿರುವ ಮಾಡೆಲಿಂಗ್ ಜಗತ್ತಿನಲ್ಲಿ ಇದಕ್ಕೆ ವಿರುದ್ದವಾಗಿ ಸ್ಥೂಲದೇಹಿಗಳ ಮೂಲಕ ಇನ್ನಷ್ಟು ಹೆಚ್ಚು ಜನರತ್ತ ಬರುವ ಪ್ರಯತ್ನವಾಗಿದೆ. ಬನ್ನಿ, ಇಂಥ ಕೆಲವು ಸ್ಥೂಲವಾದರೂ ಮುದ್ದಾಗಿರುವ ಪುರುಷ ರೂಪದರ್ಶಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ:
ಜಾನ್ ಆಸ್ಟ್ರೋವ್ಸ್ಕಿ
"The Fat Jewish" ಅಥವಾ 'ಸ್ಥೂಲಕಾಯದ ಜ್ಯೂ' ಎಂದೇ ಹೆಚ್ಚು ಜನಮನ್ನಣೆ ಗಳಿಸಿರುವ ಇವರಿಗೆ ಐವತ್ತು ಲಕ್ಷ ಜನರು ಇನ್ಸ್ಟಾಗ್ರಾಂ ನಲ್ಲಿ ಹಿಂಬಾಲಕರಿದ್ದಾರೆ. ಪ್ರಸ್ತುತ ಇವರು ತಮ್ಮ ನೆಟ್ಟಗೆ ನಿಂತಿರುವ ಜುಟ್ಟಿನ ಮೂಲಕ ಮೊಬೈಲ್ ನಿಂದ ಹಿಡಿದು ಇಂಟರ್ನೆಟ್ ನಲ್ಲಿ ಮಾರಾಟ ಮಾಡುವ ಮಳಿಗೆಗಳ (bona fide modelling) ರೂಪದರ್ಶಿಯಾಗಿ ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ.
ಜ್ಯಾಕ್ ಮಿಕೋ
ಟೆರ್ರಿ ಹೋಲ್ಯಾಂಡ್ಸ್
ಜರ್ಮಿಯನ್ ಹೋಲ್ಮನ್
ಆರುವರೆ ಅಡಿ ಎತ್ತರವಿದ್ದು ಸೊಂಟದಲ್ಲಿ ಮೂವತ್ತಾರು ಇಂಚಿನ ಗಾತ್ರ ಹೊಂದಿದ್ದರೂ ಇವರನ್ನು ಸ್ಥೂಲದೇಹದ ರೂಪದರ್ಶಿ ಎಂದು ಪರಿಗಣಿಸಲಾಗಿದೆ. ಒಂದರ್ಥದಲ್ಲಿ ಈ ಮೈಕಟ್ಟು ತಮಗೆ ಬಂದರೆ ಹೇಗೆ ಎಂದು ಯೋಚಿಸುವ ಪುರುಷರಿಗೆ ಒಂದು ಮಾದರಿಯಾಗಿದ್ದು ಇದೇ ಚಿಂತನೆಯ ಮೂಲಕ ಇವರು ಪ್ರಸಿದ್ಧಿ ಪಡೆದಿದ್ದಾರೆ.
ಕ್ಲಾಸ್ ಫ್ಲೇಸ್ನರ್
ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿ ಇವರು ಕಂಟೆಂಟ್ ಮ್ಯಾನೇಜರ್ ಅಥವಾ ರೂಪದರ್ಶಿಗಳು ಮಾತನಾಡಬೇಕಾದ ವಾಕ್ಯಗಳನ್ನು ಬರೆಯುವ, ತಿದ್ದುವ ಮೊದಲಾದ ಕೆಲಸವನ್ನು ಮಾಡುತ್ತಿದ್ದರು. ಒಮ್ಮೆ ಬರೆಯ ಮಹಿಳಾ ರೂಪದರ್ಶಿಗಳೇ ಇರುವ ಜಾಹೀರಾತೊಂದರಲ್ಲಿ ಅಕಾಸ್ಮಾತ್ತಾಗಿ ಇವರನ್ನು ಸೇರಿಸಿಕೊಳ್ಳಲಾಯಿತು. ಈ ಜಾಹೀರಾತಿನಲ್ಲಿ ಮಹಿಳೆಯರ ಸೌಂದರ್ಯಕ್ಕಿಂತಲೂ ಇವರ ಸ್ಥೂಲದೇಹವೇ ಜನರಿಗೆ ಹೆಚ್ಚು ಇಷ್ಟವಾಗಿತ್ತು. ಅಂತೆಯೇ ಪ್ರಸಿದ್ಧಿಯೂ ಇವರ ಕಾಲಬುಡಕ್ಕೆ ಬಂದು ಬಿದ್ದಿತ್ತು.



Click it and Unblock the Notifications




