For Quick Alerts
ALLOW NOTIFICATIONS  
For Daily Alerts

  ಈ ಜೀವಿಗಳನ್ನು ಜೀವಂತ ಸೇವಿಸುವುದೇ ಇವರಿಗೆ ಇಷ್ಟ!

  By Arshad
  |

  ಮನುಷ್ಯರು ಮಿಶ್ರಾಹಾರಿಗಳು. ಅಂದರೆ ಅಪ್ಪಟ ಮಾಂಸಾಹಾರಿಗಳೂ ಅಲ್ಲ, ಅಪ್ಪಟ ಸಸ್ಯಾಹಾರಿಗಳೂ ಅಲ್ಲ. ಅಂತೆಯೇ ನಮಗೆ ಮಾಂಸಾಹಾರ ಬೇಯಿಸಿರಬೇಕು, ಹಾಗೂ ಹುಲ್ಲನ್ನು ನಾವು ಜೀರ್ಣಿಸಿಕೊಳ್ಳಲಾರೆವು, ತರಕಾರಿಯ ಮೃದು ಭಾಗವನ್ನು ಮಾತ್ರ ಬೇಯಿಸಿ ಸೇವಿಸಬಲ್ಲೆವು. ಅಂತೆಯೇ ನಮ್ಮ ಆಹಾರಗಳೆಲ್ಲಾ ಹೆಚ್ಚಾಗಿ ಬೇಯಿಸಿ, ಹುರಿದು, ಕರಿದು ಒಟ್ಟಾರೆ ಸುಲಭಗೊಳಿಸಿಯೇ ನಮ್ಮ ಹೊಟ್ಟೆ ಸೇರುತ್ತವೆ.    ಭಾರತದಲ್ಲಿಯೂ ವಿಚಿತ್ರವಾದ ಆಹಾರ ಪದ್ಧತಿ ಇದೆ!

  ಕೆಲವು ಅಪರೂಪದ ಸಂದರ್ಭದಲ್ಲಿ ಅನಿವಾರ್ಯವಾಗಿ ಜೀವಿಯೊಂದನ್ನು ಜೀವಂತವಾಗಿ ತಿನ್ನುವ ಪ್ರಸಂಗ ಬರಬಹುದು. ಉದಾಹರಣೆಗೆ ಹೈದರಾಬಾದಿನ ಅಸ್ತಮಾ ಚಿಕಿತ್ಸೆಯಲ್ಲಿ ಜೀವಂತ ಮೀನಿನ ಬಾಯಿಯಲ್ಲಿ ಔಷಧಿಯನ್ನಿಟ್ಟು ನುಂಗಿಸಲಾಗುತ್ತದೆ. (ಈ ವರ್ಷ ಜೂನ್ ಎಂಟಕ್ಕೆ ಮುಗಿದು ಹೋಗಿದೆ). ಎಲ್ಲೋ ಕೆಲವೆಡೆ ಮಂಗಗಳ ಹಸಿಮಾಂಸವನ್ನೂ ಔಷಧಿಯ ರೂಪದಲ್ಲಿ ತಿನ್ನಿಸಲಾಗುತ್ತದೆ. ಅದು ಬಿಟ್ಟರೆ ಸಾಹಸ ತೋರಲು ಹಸಿಮಾಂಸ, ಹಸಿಮೊಟ್ಟೆ ತಿನ್ನುವ ಚಿಕ್ಕಪುಟ್ಟ ಪ್ರಯತ್ನಗಳಾಗುತ್ತವೆ.    ಮೈಯಲ್ಲಿ ನಡುಕ ಹುಟ್ಟಿಸುವ ವಿಲಕ್ಷಣ ಆಹಾರ ಪದ್ಧತಿ

  ಆದರೆ ಈ ಜಗತ್ತಿನಲ್ಲಿ ಕೆಲವು ಜೀವಿಗಳನ್ನು ಇಷ್ಟಪಟ್ಟು ಜನರು ಹಸಿಯಾಗಿಯೇ ಸೇವಿಸುತ್ತಾರೆ. ಭಾರತದಲ್ಲಿ ಈ ಪ್ರಕ್ರಿಯೆ ಕಂಡುಬರುವುದಿಲ್ಲವಾದರೂ ಚೀನಾ, ಜಪಾನ್ ಮೊದಲಾದ ದೇಶಗಳಲ್ಲಿ ನಾವು ನೋಡಲಿಕ್ಕೂ ಹೇಸುವ ಕೀಟಗಳನ್ನು, ಕೆಲವು ಜೀವಿಗಳನ್ನು ಹಸಿಯಾಗಿಯೇ ಸೇವಿಸುತ್ತಾರೆ. ಇಂದಿನ ಲೇಖನದಲ್ಲಿ ಹೀಗೆ ಹಸಿಯಾಗಿ ತಿನ್ನಬಹುದಾದ ಜೀವಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಹಂಚಿಕೊಳ್ಳಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತಿದೆ. ತಮ್ಮ ಜೀವ ಉಳಿಸಿಕೊಳ್ಳಲು ಒದ್ದಾಡುವ ಈ ಜೀವಿಗಳು ಸೇವಿಸುವಾತನ ಬಾಯಿಯಲ್ಲಿ ಅಂತರ್ಧಾನವಾದಾಗ ಅಯ್ಯೋ ಎನಿಸದಿರುವುದಿಲ್ಲ.   ಇಂತಹ ಚಿತ್ರ ವಿಚಿತ್ರ ಐಷಾರಾಮಿ ಹೋಟೆಲ್‌ಗೆ ಬೆರಗಾಗಲೇಬೇಕು!

  ಸಿಗಡಿ ಮರಿಗಳು

  ಸಿಗಡಿ ಮರಿಗಳು

  ಸಿಗಡಿ ಒಂದು ಉತ್ತಮ ಸಾಗರೋತ್ಪನ್ನಗಾಗಿದೆ. ಆದರೆ ಇದನ್ನು ಸುಲಿದು, ಸ್ವಚ್ಛಗೊಳಿಸಿ ಬೇಯಿಸಿ ಅಥವಾ ಹುರಿದು ತಿಂದರೇ ರುಚಿ. ಆದರೆ ಕೆಲವು ಕಡೆಗಳಲ್ಲಿ ಸಿಗಡಿ ಮರಿಗಳನ್ನು, ಅವು ಕೈಕಾಲುಮೀಸೆಗಳನ್ನು ಆಡಿಸುತ್ತಿರುವಂತೆಯೇ ಇವುಗಳಿದ್ದ ನೀರಿನ ಸಹಿತ ಗುಟುಕರಿಸುವವರಿದ್ದಾರೆ. ಕೆಲವು ಖಾದ್ಯಗಳಲ್ಲಿ ಬಿಸಿಯಾದ ಸಾರು ಅಥವಾ ಗಸಿಯಲ್ಲಿ ಈ ಮರಿಗಳನ್ನು ಜೀವಂತವಿದ್ದಂತೆಯೇ ಸೇರಿಸಿ ತಕ್ಷಣ ಬಾಯಿಗಿಟ್ಟು ನುಂಗುವ ಕೆಲವು ಖಾದ್ಯಗಳೂ ಇವೆ..!!

  ಕೀಟಗಳ ಮರಿಗಳು

  ಕೀಟಗಳ ಮರಿಗಳು

  ಕೀಟಗಳು ಮೊಟ್ಟೆಯಿಟ್ಟು ಇದರಿಂದ ಚಿಕ್ಕ ಚಿಕ್ಕ ಮರಿಗಳು ಹೊರಬರುತ್ತವೆ. ಚಿಕ್ಕ ಗೆರೆಯಂತಿರುವ ಈ ಮರಿಗಳನ್ನು 'ಲಾರ್ವೇ' ಎಂದು ಕರೆಯುತ್ತಾರೆ. ತನ್ನ ತೂಕಕ್ಕೂ ಹೆಚ್ಚು ತಿನ್ನುವ ಈ ಬಕಾಸುರ ಮರಿಗಳು ತಾವು ತಿನ್ನುತ್ತಿರುವ ಆಹಾರದಲ್ಲಿಯೇ ಹೆಚ್ಚೂ ಕಡಿಮೆ ತಿಂದಷ್ಟೇ ಪ್ರಮಾಣದ ಉಚ್ಛಿಷ್ಟವನ್ನೂ ಉತ್ಪಾದಿಸುತ್ತವೆ. ಇದರಲ್ಲಿ ಭಾರೀ ಪ್ರಮಾಣದ ಬ್ಯಾಕ್ಟೀರಿಯಾಗಳಿದ್ದು ಆಹಾರವನ್ನು ಶೀಘ್ರವಾಗಿ ಕೊಳೆಸುತ್ತವೆ. ಇಟಲಿಯಲ್ಲಿ ಕಾಸು ಮರ್ಜು ("Casu Marzu") ಎಂಬ ಹಾಲಿನಿಂದ ತಯಾರಿಸಿದ ಚೀಸ್ ಸಿಗುತ್ತದೆ. ಮುಂದೆ ಓದಿ...

  ಕೀಟಗಳ ಮರಿಗಳು

  ಕೀಟಗಳ ಮರಿಗಳು

  ಅತ್ಯಂತ ಹುಳಿಯಾಗಿರುವ ಈ ಚೀಸ್ ಹುಳಿಯಾಗಲೆಂದೇ ಕೆಲವು ಕೀಟಗಳ ಮರಿಗಳನ್ನು ಇದರಲ್ಲಿ ಬಿಡಲಾಗುತ್ತದೆ. ಈ ಮರಿಗಳು ಚೀಸ್ ಅನ್ನು ತಿಂದು ಉಚ್ಚಿಷ್ಟದಿಂದ ಬೆರೆಸಿದ ಬಳಿಕ ಈ ಚೀಸ್ ನಯವಾಗಿ, ರಸ!ಭರಿತವಾಗಿರುತ್ತದೆ. ಇಟಲಿಯನ್ನರಿಗೆ ಈ ರಸ ಭಾರೀ ಇಷ್ಟ. ಇದನ್ನು ಬಡಿಸುವಾಗ ಇದರಲ್ಲಿರುವ ಕ್ರಿಮಿಗಳನ್ನು ಕೆಲವರು ನಾಜೂಕಿನಿಂದ ಬಿಡಿಸಿ ಉಳಿದ ಚೀಸ್ ಮಾತ್ರ ತಿಂದರೆ ಇತರರು ಮಾತ್ರ ಈ ಕೀಟಗಳ ಮರಿಗಳನ್ನೂ ಚೀಸ್ ನೊಂದಿಗೇ ಜೀವಂತವಾಗಿ ಸ್ವಾಹಾ ಮಾಡುತ್ತಾರೆ.

  ಹಾವುಗಳು

  ಹಾವುಗಳು

  ಮರುಭೂಮಿಯಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದು ಜೀವಂತವಾಗಿ ಮರಳಿದವರ ಕಥೆಯಲ್ಲಿ ಹಾವುಗಳೂ ಪ್ರಮುಖ ಸ್ಥಾನ ಪಡೆದಿವೆ. ಅದೆಂದರೆ ಇವರು ಮರುಭೂಮಿಯಲ್ಲಿ ಕಂಡುಬಂದ ಓತಿಕೇತ, ಹಾವುಗಳನ್ನು ತಿಂದು ಜೀವಂತರಿದ್ದರು. ಡಿಸ್ಕವರಿಯಲ್ಲಿ ತೋರಿಸುವ ಸರ್ವೈವಲ್ ಅಂದರೆ ಉಳಿವಿನ ಬಗ್ಗೆ ತೋರುವ ಧಾರಾವಹಿಯಲ್ಲಿಯೂ ಮರುಭೂಮಿಯಲ್ಲಿ ಹಾವುಗಳನ್ನು ತಿನ್ನಲೇಬೇಕಾದ ಪ್ರಸಂಗ ಬಂದರೆ ಹೇಗೆ ಹಿಡಿಯಬೇಕು ಮತ್ತು ತಿನ್ನಬೇಕು ಎಂದು ತರಬೇತಿಯನ್ನೂ ನೀಡಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  Image Courtesy

  ಹಾವುಗಳು

  ಹಾವುಗಳು

  ಆದರೆ ಇವೆಲ್ಲವೂ ಜೀವಂತ ಉಳಿಯುವ ಸಲುವಾಗಿ ಅನಿವಾರ್ಯವಾಗಿ ಸೇವಿಸುವುದಾದರೆ ಭಾರತದ ಸುತರಿ ನಾಯಕ್ ಎಂಬ ವ್ಯಕ್ತಿ ಕೆಲವು ಆಯ್ದ ಚಿಕ್ಕ ಹಾವುಗಳನ್ನು ಹಾಗೇ ಜೀವಂತವಾಗಿ ಹೊಟ್ಟೆಗಿಳಿಸುತ್ತಾರೆ. ಅಬ್ಬಾ! ಮುಂದಿನ ಸ್ಲೈಡ್ ನೋಡೋಣ...

  Image courtesy

  ಬಾವಲಿ

  ಬಾವಲಿ

  ಕೆಲವು ವಿಧದ ಬಾವಲಿಗಳು ಕೇವಲ ಹಣ್ಣುಗಳ ರಸವನ್ನು ಮಾತ್ರ ತಿಂದು ಜೀವಿಸುತ್ತವೆ. ಇವುಗಳ ಮಾಂಸ ಥೇಟ್ ಕೋಳಿಮಾಂಸದಂತೆಯೇ ರುಚಿಯಾಗಿರುತ್ತದೆ ಎಂದು ತಿಂದವರು ಹೇಳುತ್ತಾರೆ. ಸಂಶೋಧನೆಯ ಮೂಲಕ ಈ ಮಾಂಸದಲ್ಲಿ ನಿಜವಾಗಿಯೂ ಅತಿ ಕಡಿಮೆ ಕೊಬ್ಬು, ಅತಿ ಹೆಚ್ಚು ಪ್ರೋಟೀನ್ ಇರುವುದು ಕಂಡುಬಂದಿದೆ. ಈ ಬಾವಲಿಯನ್ನು ನೆಟ್ಟನೇರವಾಗಿ ಹಸಿಯಾಗಿ ತಿನ್ನುವ ಬದಲು ಇದರ ಹಸಿಮಾಂಸದ ಸೂಪ್, ಗ್ರಿಲ್ ಮೂಲಕ ಸೇವಿಸಲಾಗುತ್ತದೆ. ಇನ್ನುಳಿದಂತೆ ಬಾರ್ಬೆಕ್ಯೂ, ಹುರಿದು, ಬೇಯಿಸಿ ಅಥವಾ ಇತರ ಖಾದ್ಯಗಳೊಂದಿಗೆ ಬೇಯಿಸಿ ಸೇವಿಸಲಾಗುತ್ತದೆ.

  ಕಪ್ಪೆಗಳು

  ಕಪ್ಪೆಗಳು

  ನಮ್ಮ ಕರ್ನಾಟಕದಿಂದ ಡೊಂಗರು ಕಪ್ಪೆಗಳು ಮಾಯವಾಗಲಿಕ್ಕೆ ಇದರ ತೊಡೆಗಳ ಮಾಂಸಕ್ಕೆ ಕುದುರಿದ ಬೇಡಿಕೆಯೇ ಕಾರಣವಾಗಿದೆ. ಆದರೆ ಚೀನಾ, ವಿಯೆಟ್ನಾಂ, ಜಪಾನ್ ನಂತಹ ಏಶಯಾದ ರಾಷ್ಟ್ರಗಳಲ್ಲಿ ಕಪ್ಪೆ ಒಂದು ಅದ್ಭುತ ಆಹಾರವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  Image courtesy

  ಕಪ್ಪೆಗಳು

  ಕಪ್ಪೆಗಳು

  ಆದರೆ ಈ ದೇಶಗಳಲ್ಲಿ ದುಬಾರಿಯಾಗಿರುವ ಈ ಕಪ್ಪೆ ಊಟವನ್ನು ಆರ್ಡರ್ ಮಾಡಿದ ಬಳಿಕ ಜೀವಂತ ಕಪ್ಪೆಯನ್ನು ಗ್ರಾಹಕನ ಎದುರೇ ಜೀವಂತವಾಗಿ ತಂದು ತಟ್ಟೆಯಲ್ಲಿಯೇ ಕುಯ್ದು ಪ್ರಮುಖ ಭಾಗಗಳನ್ನು ತಕ್ಷಣ ತಿನ್ನಿಸಲಾಗುತ್ತದೆ. ಇದನ್ನು ಕಲ್ಪಿಸಿಕೊಳ್ಳಬೇಡಿ ಎಂದು ಹೇಳಿದರೂ ನಿಮ್ಮ ಮನದಲ್ಲಿ ಕಪ್ಪೆಯೊಂದು ಈಗ ತಾನೇ ಪ್ರಾಣ ಬಿಟ್ಟಿತಲ್ಲವೇ?

  Image courtesy

  ಈಲ್ ಮೀನುಗಳು

  ಈಲ್ ಮೀನುಗಳು

  ರೇಮಂಡ್ ಬ್ಲಾಂಕ್ ಎಂಬ ಫ್ರೆಂಚ್ ವ್ಯಕ್ತಿ ಖ್ಯಾತ ಬಾಣಸಿಗನಾಗಿದ್ದಾರೆ. ಇವರ ಖ್ಯಾತಿಗೆ ಇವರ ಅಡುಗೆಯ ಚಾಕಚಕ್ಯತೆ ಕಾರಣವಲ್ಲ. ಮತ್ತೆ? ಇವರು ತಿನ್ನುವ ಜೀವಂತ ಈಲ್ ಮೀನುಗಳಿಗಾಗಿ. ಹಿಂದೆ ಜಪಾನ್ ನಲ್ಲಿದ್ದಾಗ ಯಾರೋ ಅವರಿಗೆ ಈ ವಿಧಾನ ಪ್ರಯತ್ನಿಸಿ ಎಂದು ತಿಳಿಸಿದ್ದರಂತೆ. ಕುತೂಹಲಕ್ಕೆ ಕೊಂಚ ವಿನೆಗಾರ್ ಸೇರಿಸಿ ಚಿಕ್ಕ ಈಲ್ ಮೀನನ್ನು ಜೀವಂತವಾಗಿ ನುಂಗಿದ ಇವರಿಗೆ ಇದು ಭಾರೀ ರುಚಿಯಾಗಿ ಕಂಡಿತಂತೆ. ಬಳಿಕ ಇದನ್ನೇ ಅವರು ಒಂದು ಪ್ರವೃತ್ತಿಯಾಗಿ ನಿತ್ಯವೂ ತನ್ನ ಊಟ ಮತ್ತು ಊಟ!ಕ್ಕೆ ದಾರಿಯಾಗಿಸಿಕೊಂಡಿದ್ದಾರೆ.

  ಜಿರಳೆಗಳು

  ಜಿರಳೆಗಳು

  ಜಿರಳೆಯನ್ನು ನೋಡಲೂ ಅಸಹ್ಯಪಡುವವರ ನಡುವೆ ಈ ಮೂವತ್ತೆರಡು ವರ್ಷದ ಎಡ್ವರ್ಡ್ ಆರ್ಚಿಬಾಲ್ಡ್ ಎಂಬ ವ್ಯಕ್ತಿ ಅಚ್ಚರಿ ಮೂಡಿಸುತ್ತಾರೆ. ಏಕೆಂದರೆ ದಕ್ಷಿಣಾ ಫ್ಲೋರಿಡಾದಲ್ಲಿ ಜೀವಂತ ಜಿರಳೆಗಳನ್ನು ತಿನ್ನುವ ಸ್ಪರ್ಧೆಯಲ್ಲಿ ಈ ವ್ಯಕ್ತಿ ಸುಮಾರು ಅರವತ್ತು ಗ್ರಾಂನಷ್ಟು ಜಿರಳೆಗಳನ್ನು ಅಂದರೆ ಸುಮಾರು ಮೂವತ್ತೈದು ಜಿರಳೆಗಳನ್ನು ಅಗಿದು ನುಂಗಿದ್ದ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  Image courtesy

  ಜಿರಳೆಗಳು

  ಜಿರಳೆಗಳು

  ಆದರೆ ಇದರ ರಸ ನೊರೆಗಟ್ಟಿ ಉಸಿರುಗಟ್ಟಿ ಪ್ರಾಣಬಿಟ್ಟ. ಅಷ್ಟಕ್ಕೂ ಈ ವ್ಯಕ್ತಿ ಈ ಭಾರೀ ಪ್ರಮಾಣದ ವಿಷಕಾರಿ ಕೀಟವನ್ನು ತಿನ್ನಲು ಯತ್ನಿಸಿದ್ದೇಕೆ ಗೊತ್ತೇ? ತನ್ನ ಸ್ನೇಹಿತನಿಗಾಗಿ ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ಇರಿಸಿದ್ದ ಹೆಬ್ಬಾವನ್ನು ಗೆಲ್ಲಲು.

  Image courtesy

  English summary

  List Of Animals That Are Eaten Alive

  There are many other countries in which you would witness the practice of eating the most bizarre food available on the land. In this article, we are here to share the list of some of the animals that are eaten alive. These animals are mercilessly killed and are eaten while they are still alive and trying to fight back. So, find out more about these poor, innocent animals that are consumed alive!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more