ಸೆಲ್ಫಿ ಹುಚ್ಚಿಗೆ ಬಲಿಯಾದ ಪ್ರಾಣಿಗಳು, ಅಮೂಲ್ಯ ಸ್ಮಾರಕಗಳು!

By Super

ನಮ್ಮ ಕರ್ನಾಟಕದ ಸಮುದ್ರತಟದ ಸುಂದರ ಪಟ್ಟಣವಾದ ಮುರ್ಡೇಶ್ವರದಲ್ಲಿ ಆಗಾಗ ಸೆಲ್ಫಿ ಬಗ್ಗೆ ಕೆಲವು ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಅದೆಂದರೆ ಸೆಲ್ಫಿ ತೆಗೆಯಲು ಹೋಗಿ ಸಮುದ್ರದಲ್ಲಿ ಪ್ರಾಣ ಕಳೆದುಕೊಂಡವರ ಸುದ್ದಿ. ಈ ಪ್ರದೇಶ ಅಪಾಯಕಾರಿ, ಹತ್ತಿರ ಹೋಗಬೇಡಿ ಎಂದು ದೇವಾಲಯದ ಫಲಕ ಎಚ್ಚರಿಸಿ ತಡೆಗೋಡೆ, ಬೇಲಿ ಎಲ್ಲವನ್ನೂ ಕಟ್ಟಿದ್ದರೂ ಕೆಲವರು ಇವನ್ನು ಮೀರಿ ಸೆಲ್ಫಿ ತೆಗೆಯುವ ಹುಚ್ಚಿನಲ್ಲಿ ಪ್ರಾಣಕ್ಕೇ ಅಪಾಯ ತಂದುಕೊಳ್ಳುತ್ತಾರೆ.

ಸೆಲ್ಫಿ ಹುಚ್ಚು ಕೇವಲ ಮುರ್ಡೇಶ್ವರಕ್ಕೆ ಸೀಮಿತವಾಗಿಲ್ಲ, ಇಡಿಯ ವಿಶ್ವಕ್ಕೇ ಆವರಿಸಿದೆ. ಕೆಲವರು ಈ ಹುಚ್ಚಿನಲ್ಲಿ ತಮಗೆ ಮಾತ್ರವಲ್ಲ, ಪರ್ಯಾವರಣಕ್ಕೂ, ಪ್ರಾಣಿಗಳಿಗೂ ಅಮೂಲ್ಯ ಸ್ಮಾರಕಗಳಿಗೂ ಅಪಾಯ ತಂದಿಡುತ್ತಿದ್ದಾರೆ. ಇಂತಹ ಕೆಲವು ಸೆಲ್ಫಿ ಹುಚ್ಚಿನ ಪರಿಣಾಮಗಳನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾಗಿದೆ.

ಇವುಗಳಲ್ಲಿ ಪ್ರಮುಖವಾಗಿ ಮುಗ್ಧ ಪ್ರಾಣಿಗಳಿಗೆ ಹೆಚ್ಚು ತೊಂದರೆಯಾಗಿದೆ. ಕೆಲವು ಪ್ರಾಣಿಗಳಿಗೆ ಹಿಂಸೆ, ಕೆಲವಕ್ಕೆ ಪ್ರಾಣಾಪಾಯವೂ ಎದುರಾಗಿದೆ. ಕೆಲವು ಐತಿಹಾಸಿಕ ಸ್ಮಾರಕಗಳೂ ಧರೆಗುರುಳಿವೆ. ಇಂತಹ ಯಾವುದೇ ಹುಚ್ಚಾಟವನ್ನು ಕಂಡರೆ ಇದರ ಹಿಂದೆ ಇರುವ ಜನರನ್ನು ತಡೆದು ನಯವಾಗಿ ಬುದ್ಧಿ ಹೇಳಿ ಸರಿದಾರಿಗೆ ತರುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯವೂ ಆಗಿದೆ.

ಪ್ರವಾಸಿಗರ ಸೆಲ್ಫಿ ಉಪಟಳದಿಂದ ಆಮೆಗಳು ಮೊಟ್ಟೆಯೇ ಇಡುತ್ತಿಲ್ಲ

ಪ್ರವಾಸಿಗರ ಸೆಲ್ಫಿ ಉಪಟಳದಿಂದ ಆಮೆಗಳು ಮೊಟ್ಟೆಯೇ ಇಡುತ್ತಿಲ್ಲ

ಕಡಲಾಮೆಗಳಲ್ಲಿ ಒಂದು ವಿಶೇಷತೆ ಇದೆ. ಅಂದರೆ ಆಮೆ ತಾನು ಯಾವ ಸ್ಥಳದಲ್ಲಿ ಮೊಟ್ಟೆಯೊಡೆದು ಮರಿಯಾಗಿತ್ತೋ ಅಲ್ಲೇ ಮತ್ತೊಮ್ಮೆ ಮೊಟ್ಟೆಇಡಲು ಬರುತ್ತದೆ. ಇದಕ್ಕಾಗಿ ಇದು ಸಾವಿರಾರು ಕಿ.ಮೀ ಈಜಿ ಬಂದಿರುತ್ತದೆ. ಬೇರೆ ಸ್ಥಳದಲ್ಲಿ ಮೊಟ್ಟೆಯಿಡಲು ಅವುಗಳಿಗೆ ಸಾಧ್ಯವಿಲ್ಲ. ಇಂತಹ ಒಂದು ಸ್ಥಳ ಕೊಸ್ಟಾರಿಕಾ ದೇಶದ ಸಮುದ್ರತೀರವಾಗಿದೆ. ಆದರೆ ಈ ತೀರದಲ್ಲಿ ಆಗಮಿಸುವ ಪ್ರವಾಸಿಗರು ಮೊಟ್ಟೆಯಿಡಲು ಆಗಮಿಸುವ ಆಮೆಯೊಂದಿಗೆ ಸೆಲ್ಫೀ ತೆಗೆಯುವ ಕಾರಣ ಇವು ತೀರಕ್ಕೆ ಬರುವುದೇ ಇಲ್ಲ. ಪರಿಣಾಮವಾಗಿ ಆಮೆ ಸಂತತಿಯೇ ನಾಶವಾಗುವ ಹಂತ ಎದುರಾಗಬಹುದು. Image courtesy

ಡಾಲ್ಫಿನ್ ನೊಂದಿಗೆ ಪೋಸ್ ನೀಡಿದ ದಂಪತಿ

ಡಾಲ್ಫಿನ್ ನೊಂದಿಗೆ ಪೋಸ್ ನೀಡಿದ ದಂಪತಿ

ಕೆಲವೊಮ್ಮೆ ಡಾಲ್ಫಿನ್ನುಗಳು ದಾರಿತಪ್ಪಿ ತೀರಕ್ಕೆ ಬಂದುಬಿಡುತ್ತವೆ. ನೀರಿನ ಹೊರಗೆ ಇವು ತೀರಾ ಅಸಾಹಯಕವಾಗುವುದರಿಂದ ತಕ್ಷಣವೇ ಇವುಗಳನ್ನು ಮತ್ತೆ ನೀರಿಗೆ ನೂಕದೇ ಇದ್ದರೆ ಡಾಲ್ಫಿನ್ ಸಾಯುವ ಅಪಾಯವಿರುತ್ತದೆ. ಜಗತ್ತಿನ ಯಾವುದೇ ಮೀನುಗಾರರು ಡಾಲ್ಪಿನ್ನುಗಳನ್ನು ಬೇಟೆಯಾಡುವುದಿಲ್ಲ. ಆದರೆ ತಿಳಿಗೇಡಿಯಾದ ಈ ದಂಪತಿಗಳು ಇಂತಹ ಡಾಲ್ಪಿನ್ ಕಂಡ ಕೂಡಲೇ ನೀರಿಗೆ ನೂಕುವುದನ್ನು ಬಿಟ್ಟು ಸೆಲ್ಫಿ ತೆಗೆದುಕೊಳ್ಳಲು ಪ್ರಾರಂಭಿಸಿದ್ದರು. ಆ ಡಾಲ್ಫಿನ್ನಿನ ನಸೀಬು ಚೆನ್ನಾಗಿತ್ತೇನೋ, ಮಾನವೀಯ ಕಾಳಜಿ ಹೊಂದಿದ್ದ ಇನ್ನೊಂದು ದಂಪತಿ ತಕ್ಷಣ ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದವರಿಗೆ ಹಿಡಿಶಾಪ ಹಾಕಿ ಡಾಲ್ಫಿನ್ನನ್ನು ನೀರಿಗೆ ನೂಕಿ ಜೀವ ಉಳಿಸಿದರು. Image courtesy

ನೀರಿನ ಹೊರಗಿದ್ದ ಶಾರ್ಕ್ ನೊಡನೆ ಸೆಲ್ಫಿಯೊಂದಿಗೆ ಚೆಲ್ಲಾಟ

ನೀರಿನ ಹೊರಗಿದ್ದ ಶಾರ್ಕ್ ನೊಡನೆ ಸೆಲ್ಫಿಯೊಂದಿಗೆ ಚೆಲ್ಲಾಟ

ಡಾಲ್ಫಿನ್ ಗಳಂತೆಯೇ ಶಾರ್ಕ್ ಮೀನುಗಳೂ ಕೆಲವೊಮ್ಮೆ ದಡಕ್ಕೆ ಬಂದು ಬೀಳುತ್ತವೆ. ಈ ವ್ಯಕ್ತಿ ತನ್ನ ಸೆಲ್ಫಿಯ ಹುಚ್ಚು ತೀರುವವರೆಗೂ ಫೋಟೋ ತೆಗೆಯುತ್ತಿದ್ದನೇ ವಿನಃ ಶಾರ್ಕ್ ನನ್ನು ಬದುಕಿಸುವ ಗೋಜಿಗೇ ಹೋಗಿರಲಿಲ್ಲ. ಆಮೇಲೆ ಏನಾಯಿತು ಎಂದು ಗೊತ್ತಾಗಿಲ್ಲ. ಆದರೆ ಅಷ್ಟೂ ಹೊತ್ತು ಆ ಶಾರ್ಕ್ ಏನು ಯೋಚಿಸುತ್ತಿತ್ತು ಎಂದು ಅಂದಾಜಿಸಬಲ್ಲಿರಾ? Image courtesy

ಸೆಲ್ಫಿ ಹುಚ್ಚಿಗೆ ಬಲಿಯಾದ 126ವರ್ಷ ಹಳೆಯ ಸ್ಮಾರಕ

ಸೆಲ್ಫಿ ಹುಚ್ಚಿಗೆ ಬಲಿಯಾದ 126ವರ್ಷ ಹಳೆಯ ಸ್ಮಾರಕ

ಈ ವಿಗ್ರಹ ಸುಮಾರು 126 ವರ್ಷ ಹಳೆಯದಾಗಿದ್ದು ಇದು ಇರುವ ಪ್ರಾಂತಕ್ಕೆ ಒಂದು ಗುರುತಾಗಿತ್ತು. ಆದರೆ ಇದರ ಅಂತ್ಯ ಒಂದು ಸೆಲ್ಫೀಯ ಮೂಲಕ ಆಗುತ್ತದೆ ಎಂದು ಇದನ್ನು ನಿರ್ಮಿಸಿದವರು ಕನಸಿನಲ್ಲಿಯೂ ಎಣಿಸಿರಲಿಕ್ಕಿಲ್ಲ. ಏಕೆಂದರೆ ತೀರಾ ದುರ್ಬಲವಾಗಿದ್ದ ಇದರ ತುದಿಯನ್ನು ಏರಿಯೇ ಸೆಲ್ಫಿ ತೆಗೆದುಕೊಳ್ಳಬೇಕೆಂದು ಬಯಸಿದ್ದ ತಿಳಿಗೇಡಿಯ ಅವಿವೇಕತನದಿಂದ ಈ ಸ್ಮಾರಕ ಕುಸಿಯಿತು. ತಕ್ಷಣವೇ ಅಲ್ಲಿಂದ ಓಡಿ ಪ್ರಾಣ ಉಳಿಸಿಕೊಂಡರೂ ನಂತರ ಈ ಸ್ಮಾರಕವನ್ನು ಹಾಳುಗೆಡವಿದ ಆರೋಪ ಇವನ ಮೇಲೆ ಎದುರಾಗಿದ್ದು ಸೆಲ್ಫೀ ತೆಗೆದ ಪಾಪಕ್ಕೆ ನ್ಯಾಯಾಲಯ ಏನು ಶಿಕ್ಷೆ ನೀಡುತ್ತದೆ ಎಂದು ಕಾದು ನೋಡಬೇಕು. Image courtesy

ಹತ್ತೊಂಭತ್ತನೆ ಶತಮಾನದ ವಿಗ್ರಹಕ್ಕೂ ಬಂತು ಕುತ್ತು

ಹತ್ತೊಂಭತ್ತನೆ ಶತಮಾನದ ವಿಗ್ರಹಕ್ಕೂ ಬಂತು ಕುತ್ತು

ಇಟಲಿಯ ಮಿಲಾನ್ ನಗರದಲ್ಲಿರುವ ಬ್ರೇರಾ ಎಂಬ ಸ್ಥಳದಲ್ಲಿರುವ ಅಕ್ಯಾಡೆಮಿ ಆಫ್ ಫೈನ್ ಆರ್ಟ್ ಎಂಬ ಸ್ಥಳದಲ್ಲಿ ಹತ್ತೊಂಭತ್ತನೆಯ ಶತಮಾನದ ವಿಗ್ರಹವೊಂದಿತ್ತು. ಇದರ ಮೊಣಕಾಲ ಮೇಲೆ ಕುಳಿತೇ ಸೆಲ್ಫಿ ತೆಗೆದುಕೊಳ್ಳಬೇಕೆಂದು ತಿಳಿಗೇಡಿ ವಿದ್ಯಾರ್ಥಿಯೊಬ್ಬ ಬಯಸಿದ ಪರಿಣಾಮವಾಗಿ ಈ ವಿಗ್ರಹ ಮುರಿದುಬಿತ್ತು. ಸುಮಾರು ನಾನೂರು ವರ್ಷಗಳ ಹಿಂದೆ ಪತ್ತೆಯಾಗಿದ್ದ ವಿಗ್ರಹ ಒಂದು ಅಮೂಲ್ಯ ಸ್ಮಾರಕವಾಗಿದ್ದು ಈಗ ಆತನ ಮೇಲೆ ಈ ಸ್ಮಾರಕವನ್ನು ಧ್ವಂಸಗೊಳಿಸಿದ ಆರೋಪ ಹೊರಿಸಲಾಗಿದೆ. Image courtesy

ಸೆಲ್ಫೀಗಾಗಿ ನೀರಿನಲ್ಲಿ ಈಜುತ್ತಿದ್ದ ಹಂಸವನ್ನೇ ಹೊರಗೆಳೆದ ಮಹಿಳೆ

ಸೆಲ್ಫೀಗಾಗಿ ನೀರಿನಲ್ಲಿ ಈಜುತ್ತಿದ್ದ ಹಂಸವನ್ನೇ ಹೊರಗೆಳೆದ ಮಹಿಳೆ

ಸೆಲ್ಫಿ ಹುಚ್ಚು ಎಲ್ಲರನ್ನೂ ಆವರಿಸಿದೆ. ಆದರೆ ಈ ಮಹಿಳೆಗೆ ಕೊಂಚ ಹೆಚ್ಚೇ ಆವರಿಸಿದ್ದಿರಬಹುದು. ಏಕೆಂದರೆ ಕೆರೆಯಲ್ಲಿ ಆರಾಮವಾಗಿ ಈಜುತ್ತಿದ್ದ ಹಂಸವನ್ನೇ ಆಕೆ ಕುತ್ತಿಗೆ ಹಿಡಿದು ಎತ್ತಿ ತನಗೆ ಬೇಕಾದಂತೆ ವಿವಿಧ ಭಂಗಿಗಳಲ್ಲಿ ಸೆಲ್ಫೀ ತೆಗೆದುಕೊಂಡಿದ್ದಾಳೆ. ಕುತ್ತಿಗೆಯ ಮೇಲೆ ಬಿದ್ದ ಒತ್ತಡದ ಪರಿಣಾಮವಾಗಿ ಆ ಹಂಸ ಕೊಂಚ ಕಾಲ ಒದ್ದಾಡಿ ಬಳಿಕ ಸತ್ತೇ ಹೋಗಿದೆ. Image courtesy

ಡಾಲ್ಫಿನ್ ಮರಿಯನ್ನು ಕೊಂದ ಸೆಲ್ಫೀ ಬಯಕೆ

ಡಾಲ್ಫಿನ್ ಮರಿಯನ್ನು ಕೊಂದ ಸೆಲ್ಫೀ ಬಯಕೆ

ಮಕ್ಕಳಿಗೆ ಎಲ್ಲಿ ಹೇಗೆ ಓಡಬೇಕೆಂದು ತಿಳಿಯುವುದಿಲ್ಲವೋ ಅಂತೆಯೇ ಡಾಲ್ಫಿನ್ ಮರಿಗಳಿಗೂ ಸಹಾ. ಸಾಂಟಾ ಟೆರೆಸಿಟಾ ಎಂಬಲ್ಲಿ La Plata ಎಂಬ ತಳಿಗೆ ಸೇರಿದ ಅಪರೂಪದ ಡಾಲ್ಫಿನ್ ಮರಿಯೊಂದು ಹೀಗೇ ದಾರಿ ತಪ್ಪಿ ತೀರಕ್ಕೆ ಬಂದುಬಿಟ್ಟಿತ್ತು. ಅದನ್ನು ಗಮನಿಸಿದ ಸೆಲ್ಫಿ ಪ್ರಿಯರು ನಾಮುಂದು ತಾಮುಂದು ಎಂದು ಡಾಲ್ಫಿನ್ ಮರಿಯ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದೇ ತೆಗೆಸಿಕೊಂಡಿದ್ದು. ಆದರೆ ನೀರಿನಿಂದ ಅಷ್ಟು ಹೊತ್ತು ಹೊರಗಿದ್ದ ಆ ಪುಟ್ಟ ಮರಿಗೆ ಆಮ್ಲಜನಕ ಸಿಗದೇ ಸತ್ತೇ ಹೋಗಿತ್ತು. ಬಳಿಕ ನಡೆದ ವಿಚಾರಣೆಯಲ್ಲಿ ಸೆಲ್ಫೀ ತೆಗೆದುಕೊಂಡವರೆಲ್ಲಾ ತಮ್ಮ ಕೈಗೆ ಆ ಮರಿ ಬರುವ ಮುನ್ನವೇ ಸತ್ತು ಹೋಗಿತ್ತು ಎಂದು ಕುಂಟುನೆಪ ಹೇಳುತ್ತಿದ್ದಾರೆ. Image courtesy

English summary

List Of Animals And Objects Harmed For The Sake Of Selfies

Selfie is the in thing, these days. We see and hear about so many different incidents where people have lost their lives or have done an unrepairable damage to themselves in the name of "Selfies". Here, in this article, we shall share the list of animals and objects that are harmed for the sake of selfies.
X
Desktop Bottom Promotion