For Quick Alerts
ALLOW NOTIFICATIONS  
For Daily Alerts

ಪ್ರತಿ ಮಹಿಳೆಯರೂ ತಿಳಿದಿರಲೇಬೇಕಾದ ಕಾನೂನು ಬದ್ಧ ಹಕ್ಕುಗಳು

ಭಾರತದ ಸಂವಿಧಾನವು ಮಹಿಳೆಯ ಬೆಂಬಲಕ್ಕೆ ಯಾವಾಗಲು ನಿಂತಿರುತ್ತದೆ. ಆಕೆಯನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಲೈಂಗಿಕವಾಗಿ ದೌರ್ಜನ್ಯ ಮಾಡದಂತೆ, ಆಕೆಯನ್ನು ಲಿಂಗ ತಾರತಮ್ಯವೆಂಬ ತಕ್ಕಡಿಯಲ್ಲಿ ತೂಗದಂತೆ ಅದು ಒತ್ತಿ ಒತ್ತಿ ಹೇಳಿದೆ....

By Hemanth
|

ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಸಿಕ್ಕಿದಷ್ಟು ಸ್ವಾತಂತ್ರ್ಯ ಬೇರೆ ಯಾವ ದೇಶದಲ್ಲೂ ಸಿಗಲಿಕ್ಕಿಲ್ಲ. ಇಲ್ಲಿ ಹಲವಾರು ಧರ್ಮ, ಜಾತಿಗಳಿದ್ದರೂ ಎಲ್ಲರೂ ಒಟ್ಟಾಗಿ ಹೊಂದಿಕೊಂಡು ಸಹಬಾಳ್ವೆಯನ್ನು ನಡೆಸುತ್ತಾರೆ. ಭಾರತೀಯರಾಗಿರುವ ನಮಗೆ ನಮ್ಮ ಸಂವಿಧಾನದ ಬಗ್ಗೆ ತಿಳಿದಿರಬೇಕು. ನಮ್ಮ ಸಂವಿಧಾನದಲ್ಲಿ ಇರುವಂತಹ ಕೆಲವೊಂದು ಸಾಮಾನ್ಯ ಕಾನೂನುಗಳ ಬಗ್ಗೆ ತಿಳಿದುಕೊಂಡಿದ್ದರೆ ಒಳ್ಳೆಯದು.

ಅದರಲ್ಲೂ ಮಹಿಳೆಯರಿಗಾಗಿ ಕೆಲವೊಂದು ಕಾನೂನಿನ ಹಕ್ಕುಗಳಿವೆ. ಈ ಬಗ್ಗೆ ಪ್ರತಿಯೊಬ್ಬ ಮಹಿಳೆಯರು ತಿಳಿದಿರಬೇಕು. ಹೆಚ್ಚಿನ ಮಹಿಳೆಯರಿಗೆ ಇಂತಹ ಕಾನೂನಿನ ಬಗ್ಗೆ ತಿಳಿದೇ ಇಲ್ಲ. ಸಾಮಾನ್ಯ ಕಾನೂನು ಹಕ್ಕುಗಳ ಬಗ್ಗೆ ಮಹಿಳೆಯರು ತಿಳಿದುಕೊಂಡರೆ ಮುಂದೆ ಕಠಿಣ ಸಮಯದಲ್ಲಿ ಇದು ನೆರವಿಗೆ ಬರುವುದು. ವಿಚಿತ್ರ, ಹುಚ್ಚು ಹುಚ್ಚಾದ, ತಲೆಚಿಟ್ಟು ಹಿಡಿಸುವ ಕಾನೂನು!

ಭಾರತೀಯ ನಾಗರಿಕರಾಗಿರುವ ಪ್ರತಿಯೊಬ್ಬ ಮಹಿಳೆ ಕೂಡ ಸಂವಿಧಾನದಲ್ಲಿರುವ ಮಹಿಳೆಯರ ಕಾನೂನು ಹಕ್ಕುಗಳ ಬಗ್ಗೆ ತಿಳಿಯಬೇಕು. ಈ ಲೇಖನದಲ್ಲಿ ಮಹಿಳೆಯರಿಗಾಗಿ ಮಾಡಲ್ಪಟ್ಟಿರುವ ಕೆಲವೊಂದು ಕಾನೂನು ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವ....

ಭಾರತೀಯ ದಂಡಸಂಹಿತೆ 160ರ ಪ್ರಕಾರ

ಭಾರತೀಯ ದಂಡಸಂಹಿತೆ 160ರ ಪ್ರಕಾರ

ಭಾರತೀಯ ದಂಡಸಂಹಿತೆ 160ರ ಪ್ರಕಾರ ಅಪರಾಧ ನಡವಳಿ ಸಂಹಿತೆಯಂತೆ ಮಹಿಳೆಯೊಬ್ಬಳನ್ನು ವಿಚಾರಣೆಗೆಗಾಗಿ ಪೊಲೀಸ್ ಠಾಣೆಗೆ ಕರೆಸುವಂತಿಲ್ಲ. ಪೊಲೀಸರು ಮಹಿಳೆಯನ್ನು ಮಹಿಳಾ ಕಾನ್ಸ್ ಸ್ಟೇಬಲ್, ಕುಟುಂಬದವರು ಅಥವಾ ಸ್ನೇಹಿತರ ಸಮ್ಮುಖದಲ್ಲಿ ವಿಚಾರಣೆ ಮಾಡಬಹುದು.

ಸುಪ್ರೀಂ ಕೋರ್ಟ್ ನ ಆದೇಶದ ಪ್ರಕಾರ

ಸುಪ್ರೀಂ ಕೋರ್ಟ್ ನ ಆದೇಶದ ಪ್ರಕಾರ

ಸುಪ್ರೀಂ ಕೋರ್ಟ್ ನ ಆದೇಶದ ಪ್ರಕಾರ ಯಾವುದೇ ಮಹಿಳೆಯನ್ನು ಸೂರ್ಯಾಸ್ತದ ಬಳಿಕ ಮತ್ತು ಸೂರ್ಯೋದಯದ ಮೊದಲು ಬಂಧಿಸುವಂತಿಲ್ಲ. ವಿಶೇಷ ಸಂದರ್ಭಗಳಲ್ಲಿ ಮೆಜಿಸ್ಟ್ರೇಟ್ ಅನುಮತಿಯನ್ನು ಪಡೆದುಕೊಂಡು ಮಹಿಳೆಯನ್ನು ಬಂಧಿಸಬಹುದು.

ಎಫ್ ಐಆರ್....

ಎಫ್ ಐಆರ್....

ಯಾವುದೇ ಠಾಣೆಯಲ್ಲಿ ಬೇಕಾದರೂ ಝೀರೋ ಎಫ್ ಐಆರ್ ದಾಖಲಿಸಿಕೊಳ್ಳಬಹುದು. ಝೀರೋ ಎಫ್ ಐಆರ್ ಎಂದರೆ ಠಾಣೆಯ ಸರಹದ್ದಿಗೆ ಸಂಬಂಧಿಸಿದ ಪ್ರಕರಣವಲ್ಲದಿದ್ದರೂ ಸಹ ಆ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಬೇಕು.

ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳ

ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳ

ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳ ನಡೆದು ತುಂಬಾ ಸಮಯವಾಗಿದ್ದರೂ ಮಹಿಳೆ

ನೀಡುವಂತಹ ದೂರನ್ನು ಪೊಲೀಸರು ದಾಖಲಿಸಿಕೊಳ್ಳಲು ನಿರಾಕರಿಸಬಾರದು. ಇದರಿಂದ ಮಹಿಳೆಯರು ದೂರು ದಾಖಲಿಸಲು ವಿಳಂಬವಾಯಿತೆಂದು ಯಾವತ್ತೂ ಭಾವಿಸಬಾರದು.

ಖಾಸಗಿತನವನ್ನು ಕಾಪಾಡಿಕೊಳ್ಳುವ ಹಕ್ಕನ್ನು....

ಖಾಸಗಿತನವನ್ನು ಕಾಪಾಡಿಕೊಳ್ಳುವ ಹಕ್ಕನ್ನು....

ಹೇಳಿಕೆಯನ್ನು ನೀಡುವಾಗ ಮಹಿಳೆಯು ತನ್ನ ಖಾಸಗಿತನವನ್ನು ಕಾಪಾಡಿಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ. ಭಾರತೀಯ ದಂಡಸಂಹಿತೆ 164ರ ಪ್ರಕಾರ ಅಪರಾಧ ನಡವಳಿ ಸಂಹಿತೆಯಂತೆ ಈ ಹಕ್ಕನ್ನು ನೀಡಲಾಗಿದೆ. ಮಹಿಳೆಯು ಯಾರ ಮುಂದೆಯೂ ಹೇಳಿಕೆ ನೀಡುವ ಅಗತ್ಯವಿಲ್ಲ ಮತ್ತು ಹೀಗೆ ಮಾಡಿದರೆ ಆಕೆಯ ಖಾಸಗಿತನಕ್ಕೆ ಧಕ್ಕೆಯಾಗಬಾರದು.

ಗೃಹ ಹಿಂಸೆಯ ವಿರುದ್ಧ ಹಕ್ಕು

ಗೃಹ ಹಿಂಸೆಯ ವಿರುದ್ಧ ಹಕ್ಕು

ಇದು ಸಾಮಾನ್ಯವಾಗಿ ಸೊಸೆಯಾಗಿ ಅಥವಾ ಒಬ್ಬರ ಮಡದಿಯಾಗಿ ಅಥವಾ ಸಂಗಾತಿಯಾಗಿ ಇನ್ನೊಂದು ಮನೆಗೆ ಕಾಲಿರಿಸಿದ ಹೆಂಗಸರಿಗಾಗಿ ಇರುತ್ತದೆ. ತನ್ನ ಮನೆಯಲ್ಲಿರುವ ಹೆಂಗಸರನ್ನು ಹಿಂಸಿಸಿದವರಿಗೆ ಶಿಕ್ಷೆ ನೀಡುವ ಕಾನೂನು ಇದಾಗಿದೆ. ಈ ಹಿಂಸೆಯ ವಿರುದ್ಧ ದನಿ ಎತ್ತುವ ಮತ್ತು ನ್ಯಾಯಾಂಗದ ಸಹಾಯ ಪಡೆಯುವ ಹಕ್ಕು ಮಹಿಳೆಯರಿಗೆ ಇರುತ್ತದೆ.

ಹೆಣ್ಣು ಭ್ರೂಣ ಹತ್ಯೆಯ ವಿರುದ್ಧದ ಹಕ್ಕು

ಹೆಣ್ಣು ಭ್ರೂಣ ಹತ್ಯೆಯ ವಿರುದ್ಧದ ಹಕ್ಕು

ಪ್ರತಿಯೊಬ್ಬ ಭಾರತೀಯನಿಗೂ ಸಹ ಈ ಹಕ್ಕು ಇರುತ್ತದೆ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ಸಲುವಾಗಿ ಭ್ರೂಣ ಲಿಂಗ ಪತ್ತೆಯನ್ನೆ ನಿರ್ಮೂಲನೆ ಮಾಡುವ ಶಾಸನವನ್ನು ಜಾರಿಗೆ ತರಲಾಗಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ಖಂಡಿಸಿ, ಅದಕ್ಕಾಗಿ ಕಾನೂನು ನೆರವು ಪಡೆಯುವ ಹಕ್ಕನ್ನು ಇವರಿಗಾಗಿ ನೀಡಲಾಗಿದೆ.

ಘನತೆ ಮತ್ತು ಸಭ್ಯತೆಯ ಹಕ್ಕು

ಘನತೆ ಮತ್ತು ಸಭ್ಯತೆಯ ಹಕ್ಕು

ಒಂದು ವೇಳೆ ಒಬ್ಬ ಮಹಿಳೆಯನ್ನು ಆರೋಪಿ ಎಂದು ಪರಿಗಣಿಸಿ, ಆಕೆಯನ್ನು ಕೆಲವೊಂದು ವೈದ್ಯಕೀಯ ತಪಾಸಣೆಗಳಿಗೆ ಒಳಪಡಿಸಬೇಕಾದಾಗ, ಆಕೆಯ ಘನತೆ ಮತ್ತು ಸಭ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಅದನ್ನು ಮಹಿಳೆಯರಿಂದಲೆ ಮಾಡಿಸಬೇಕು ಅಥವಾ ಅಲ್ಲಿ ಮತ್ತೊಬ್ಬ ಮಹಿಳೆಯನ್ನು ಇರಿಸಿಕೊಳ್ಳಬೇಕಾಗುತ್ತದೆ. ಅಯ್ಯೋ ದೇವ್ರೆ ಈ ರೀತಿಯ ಕಾನೂನು ಬೇಡಪ್ಪಾ ಬೇಡ!

English summary

Legal Rights Every Indian Woman Should Know

These are the rights that most of the women are not even aware of. Learning about these rights can help the women in crucial times. With the current state of affairs, it is extremely essential for us to be ever vigilant and aware of these rights and duties that the constituency has specially framed for the women.Check them out and make sure you remember them...
X
Desktop Bottom Promotion