Latest Updates
-
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ?
ಶೌಚಾಲಯದ ಬಗ್ಗೆ ನೀವು ತಿಳಿದಿರದ ಅಚ್ಚರಿಯ ಸಂಗತಿಗಳು
ನಮ್ಮ ಸುತ್ತ ಮುತ್ತ ಇರುವ, ನಿತ್ಯಬಳಕೆಯ ವಸ್ತುಗಳ ಬಗ್ಗೆಯೂ ಹಲವಾರು ಅಚ್ಚರಿಗಳಿರುತ್ತವೆ. ಆದರೆ ನಾವು ಇವನ್ನು ಗಮನಿಸಲು ಉತ್ಸುಕತೆ ತೋರುವುದಿಲ್ಲ. ನಮ್ಮ ನಿತ್ಯದ ಅಗತ್ಯದ ಶೌಚಾಲಯದ ಬಗ್ಗೆಯೂ ಕೆಲವಾರು ಅಚ್ಚರಿಯ ಮಾಹಿತಿಗಳಿವೆ. ಶೌಚಾಲಯದ ಬಗ್ಗೆ ನೀವು ತಿಳಿಯದೆ ಇರುವ ಸತ್ಯಾಸತ್ಯತೆ
ಕೊಂಕಣಿಯಲ್ಲಿ ಗಾದೆಯೊಂದಿದೆ. ಇದರ ಪ್ರಕಾರ ಬಹಿರ್ದೆಶೆಗೆ ಅವಸರವಾದ ಬಳಿಕ ಶೌಚಾಲಯವನ್ನು ಹುಡುಕಿಕೊಂಡು ಹೋದರಂತೆ. ಬನ್ನಿ, ಶೌಚಾಲಯದ ಬಗ್ಗೆ ಕೆಲವು ಮಾಹಿತಿಗಳನ್ನು ಈಗ ನೋಡೋಣ...

ಮಾಹಿತಿ #1
ಶೌಚಾಲಯದ ಎಲ್ಲಾ ವಸ್ತುಗಳಲ್ಲಿ ಅತಿ ಕಡಿಮೆ ಕೀಟಾಣು ಇರುವ ಸ್ಥಳವೆಂದರೆ ಟಾಯ್ಲೆಟ್ ಸೀಟ್, ಅಥವಾ ಕುಳಿತುಕೊಳ್ಳುವ ಭಾಗ. ಆದರೆ ವ್ಯತಿರಿಕ್ತವಾಗಿ ನಾವು ಈ ಭಾಗವನ್ನೇ ಅತಿ ಹೆಚ್ಚಾಗಿ ಸ್ವಚ್ಛಗೊಳಿಸಿ ಬಳಕೆಗೆ ಮುಂದಾಗುತ್ತೇವೆ. ಉಳಿದ ಭಾಗಗಳು? ಸಾರ್ವಜನಿಕ ಶೌಚಾಲಯ ಬಳಸುವಾಗ ಜಾಗರೂಕರಾಗಿರಿ!

ಮಾಹಿತಿ #2
ಒಂದು ಸಮೀಕ್ಷೆಯ ಪ್ರಕಾರ ಕಾಯಿಲೆ ತರಿಸುವ Staphylococcus ಎಂಬ ಬ್ಯಾಕ್ಟೀರಿಯಾಗಳ ಸಂಖ್ಯೆ ನಮ್ಮ ಶೌಚಾಲಯದ ಯಾವುದೇ ಭಾಗದಲ್ಲಿ ಗರಿಷ್ಠ 20ರಷ್ಟು ಇರುತ್ತವೆ. ಆದರೆ ಇದೇ ಬ್ಯಾಕ್ಟೀರಿಯಾ ನಮ್ಮ ಸ್ಮಾರ್ಟ್ ಫೋನ್‌ನ ಸ್ವಚ್ಛಗೊಳಿಸಲು ಕಷ್ಟಕರವಾದ ಸಂದುಗಳಲ್ಲಿ ಕನಿಷ್ಠ 600ರಷ್ಟಿವೆ!

ಮಾಹಿತಿ #3
ಇನ್ನೊಂದು ಮಾಹಿತಿಯ ಪ್ರಕಾರ ಶೌಚಾಲಯ ಬಳಸಿ ಹೊರಬರುವವರಲ್ಲಿ 77% ಪುರುಷರು ಮಾತ್ರ ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಾರೆ. ಅದೇ ಮಹಿಳೆಯರ ವಿಷಯದಲ್ಲಿ ಈ ಪ್ರಮಾಣ 93%ರಷ್ಟಿದೆ. ಪುರುಷರೊಂದಿಗೆ ಕೈ ಕುಲುಕುವ ವಿಷಯ ಬಂದಾಗ ಕೈ ಮುಗಿಯುವುದನ್ನು ಅಭ್ಯಾಸ ಮಾಡಿಕೊಂಡಿರುವುದು ಇದೇ ಕಾರಣಕ್ಕಿರಬಹುದು.

ಮಾಹಿತಿ #4
ಒಂದು ಅಂದಾಜಿನ ಪ್ರಕಾರ ಪ್ರತಿ ಬಾರಿ ಶೌಚಾಲಯವನ್ನು ಫ್ಲಶ್ ಮಾಡಿದಾದ ಸುಮಾರು ಆರು ಲೀಟರ್ ನೀರು ಬಳಕೆಯಾಗುತ್ತದೆ.

ಮಾಹಿತಿ #5
1739ರಲ್ಲಿ ವಿಶ್ವದಲ್ಲಿಯೇ ಪ್ರಥಮ ಬಾರಿ ಪ್ಯಾರಿಸ್ ನಗರದಲ್ಲಿ ನಡೆದ ಬಾಲ್ ಡಾನ್ಸ್ ಎಂಬ ನೃತ್ಯಸಮಾರಂಭದಲ್ಲಿ ಉನ್ನತ ದರ್ಜೆಯ ವ್ಯಕ್ತಿಗಳಿಗಾಗಿ ಎಂದೇ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯಗಳು ಬಳಕೆಗೆ ಬಂದವು.

ಮಾಹಿತಿ #6
ಇನ್ನೊಂದು ಸಮೀಕ್ಷೆಯ ಪ್ರಕಾರ ಶೌಚಾಲಯದಲ್ಲಿ ಪುರುಷರು ಮಹಿಳೆಯರಿಗಿಂತಲೂ ಹೆಚ್ಚು ಸಮಯ ಕಳೆಯುತ್ತಾರೆ. ವಿಶೇಷವೇನಿಲ್ಲ, ಇಲ್ಲಿ ಉಳಿಸಿದ್ದಕ್ಕಿಂತಲೂ ಎಷ್ಟೋ ಹೆಚ್ಚು ಸಮಯವನ್ನು ಮಹಿಳೆಯರು ಮೇಕಪ್ ರೂಮಿನಲ್ಲಿ ಪೋಲು ಮಾಡುವುದನ್ನು ಮಾತ್ರ ಸಮೀಕ್ಷೆ ತಿಳಿಸಿಲ್ಲ.

ಮಾಹಿತಿ #7
ನಾವು ಸೇವಿಸುವ ಔಷಧಿಯ 90%ಕ್ಕೂ ಹೆಚ್ಚು ಭಾಗ ತ್ಯಾಜ್ಯಗಳ ಮೂಲಕ ಹರಿದು ಹೋಗುತ್ತದೆ. ವಿಶೇಷವಾಗಿ ಮೂತ್ರದ ಮೂಲಕ. ಅಂದರೆ ಶೌಚಾಲಯದ ತ್ಯಾಜ್ಯ ಎಂದರೆ ಔಷಧಿಗಳ ಆಗರ ಎಂದು ಯಾರಾದರೂ ಅರ್ಥೈಸಿಕೊಳ್ಳುವ ಅಪಾಯವಿದೆ.



Click it and Unblock the Notifications
