For Quick Alerts
ALLOW NOTIFICATIONS  
For Daily Alerts

ಭಾರತೀಯ 'ಸರಣಿ ಹಂತಕರ' ಕಂಪ್ಲೀಟ್ ಬಯೋಡೇಟಾ

By Super
|

ಹುಲಿ ಒಮ್ಮೆ ಮನುಷ್ಯರ ಮಾಂಸದ ರುಚಿ ಕಂಡರೆ ಬೇರೆ ಪ್ರಾಣಿಯತ್ತ ನೋಡುವುದೇ ಇಲ್ಲ. ಇದಕ್ಕೆ ನರಭಕ್ಷಕ ಎನ್ನಲಾಗುತ್ತದೆ. ಇದನ್ನು ಕೊಲ್ಲುವುದು ಅನಿವಾರ್ಯವಾಗುತ್ತದೆ. ಏಕೆಂದರೆ ಹುಲಿಯ ಮನಸ್ಸು ಮನುಷ್ಯ ಎಂಬ ಅಸಾಹಾಯಕ ಪ್ರಾಣಿಯ ಮಾಂಸದ ರುಚಿಗೆ ಒಗ್ಗಿ ಬಿಟ್ಟಿರುತ್ತದೆ. ಇದೇ ರೀತಿ ಕೆಲವು ವಿಕೃತ ಮನಸ್ಸಿನ ಜನರು ಮೊದಲೊಂದು ಕೊಲೆ ಮಾಡಿ ತಪ್ಪಿಸಿಕೊಂಡ ಬಳಿಕ ಇದೇ ರೀತಿಯಾಗಿ ಕೊಲೆಗಳನ್ನು ಮಾಡುತ್ತಾ ಹೋಗುವ ಮನಃಸ್ಥಿತಿಗೆ ತಲುಪುತ್ತಾರೆ.

ಇವರನ್ನು ಸರಣಿಹಂತಕರೆಂದು ಕರೆಯುತ್ತಾರೆ. ಇವರು ಸಮಾಜದಲ್ಲಿದ್ದಷ್ಟೂ ಹೊತ್ತು ಸಮಾಜಕಂಟಕರಾಗಿದ್ದು ಒಂದೇ ರೀತಿಯಲ್ಲಿ ಕೊಲೆಗಳನ್ನು ಮಾಡುತ್ತಾ ಹೋಗುತ್ತಾರೆ. ಈ ರೀತಿಗೆ modus operandi ಎಂದು ಕರೆಯುತ್ತಾರೆ. ಮನಃಶಾಸ್ತ್ರಜ್ಜರು, ಅದರಲ್ಲೂ ಅಪರಾಧ ಮನಃಶಾಸ್ತ್ರಜ್ಞರು ಈ modus operandi ಯ ಬಗ್ಗೆ ಆಳವಾಗಿ ಮತ್ತು ಸೂಕ್ಷ್ಮವಾಗಿ ಅಭ್ಯಸಿಸಿ ಕೊಲೆಗಾರನ ಮುಂದಿನ ನಡೆ ಏನೆಂದು ಊಹಿಸುತ್ತಾರೆ. ಬಹುತೇಕ ಸರಣಿ ಹಂತಕರು ಈ ಊಹೆಗೆ ಅನುಗುಣವಾಗಿಯೇ ಮುಂದಿನ ನಡೆ ನಡೆಸಿ ಸಿಕ್ಕಿಬಿದ್ದಿದ್ದಾರೆ.

ಈ ಸರಣಿಹಂತಕರ ಪ್ರಸಂಗಗಳು ಇಂದು ನಿನ್ನೆಯಲ್ಲ, ನೂರಾರು ವರ್ಷಗಳಿಂದಲೂ ನಡೆದು ಬಂದಿದೆ. ಆದರೆ ಲಭಿಸಿದ ಮಾಹಿತಿಗಳ ಪ್ರಕಾರ 1969ರಲ್ಲಿ ಅಮೇರಿಕಾದ ಲಾಸ್ ಎಂಜಲೀಸ್ ನಲ್ಲಿ ಚಾರ್ಲ್ಸ್ ಮ್ಯಾನ್ಸನ್ ಎಂಬ ಸರಣಿಹಂತಕ ಏಳು ಜನರನ್ನು ಮತ್ತು ಒಂದು ಇನ್ನೂ ಹುಟ್ಟಿರದ ಕೂಸನ್ನು ಕೊಲೆ ಮಾಡಿದ್ದ. ಈತನ ಬಂಧನ ಬಳಿಕ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು ಎಂಭತ್ತು ವರ್ಷದ ಮುದುಕನಾದ ಬಳಿಕ ಈತನನ್ನು ಸೆರೆಯಲ್ಲಿ ಸಿಗಲು ಬರುತ್ತಿದ್ದ ಇಪ್ಪತ್ತಾರು ವರ್ಷದ ಆಫ್ಟನ್ ಎಲೈನ್ ಬರ್ಟನ್ ಎಂಬ ಯುವತಿಯನ್ನು ವಿವಾಹವಾಗಲು ನ್ಯಾಯಾಲಯ ಅನುಮತಿ ನೀಡಿದ್ದುದು ಅಚ್ಚರಿಯ ಮೇಲೆ ಇನ್ನೊಂದು ಅಚ್ಚರಿಯ ಸಂಗತಿಯಾಗಿದೆ. ಈ ಸರಣಿಹಂತಕರು ಅಮೇರಿಕಾದಲ್ಲಿ ಮಾತ್ರವಲ್ಲ, ಇಡಿಯ ಜಗತ್ತಿನಲ್ಲಿ ಅಲ್ಲಲ್ಲಿ ಇದ್ದಾರೆ. ನಮ್ಮ ಭಾರತದಲ್ಲಿಯೂ ಇದ್ದಾರೆ. ಬನ್ನಿ, ಇವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ..

Indian Serial Killers stories, which should shock you

Image courtesy-
indianexpress.com

ಸುರಿಂದರ್ ಕೋಲಿ
ಉತ್ತರ ಪ್ರದೇಶದ ನೋಯ್ಡಾ ನಗರದಲ್ಲಿರುವ ವರ್ತಕ ಮಣೀಂದರ್ ಸಿಂಗ್ ಪಾಂಧರ್ ಎಂಬುವರ ಮನೆಯಲ್ಲಿ ಕೆಲಸಕ್ಕಿದ್ದ ಸುರಿಂದರ್ ಕೋಲಿ ಎಂಬ ಯುವಕ ಇಬ್ಬರನ್ನೂ 2006ರಲ್ಲಿ ಬಂಧಿಸಲಾಯಿತು. ಇದರ ಹಿನ್ನೆಲೆ ಕೆದಕಿದಾದ ಕಂಡು ಬಂದ ವಿಷಯವೆಂದರೆ ನೋಯ್ಡಾದಿಂದ ಕೊಂಚ ದೂರದಲ್ಲಿರುವ ನಿಥಾರಿ ಎಂಬ ಗ್ರಾಮದಲ್ಲಿ ಒಂದು ಬಾವಿಯಲ್ಲಿ ಹಲವಾರು ಮಕ್ಕಳ ತಲೆಬುರುಡೆಗಳು ಕಂಡುಬಂದಿದ್ದು ಇವೆಲ್ಲಾ ನೋಯ್ಡಾ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಕಾಣೆಯಾಗಿದ್ದ ಮಕ್ಕಳಿಗೆ ಸೇರಿದ್ದವಾಗಿದ್ದವು. ಇವುಗಳ ತನಿಖೆಯ ಜಾಡು ಹಿಡಿದು ಹಿಂಬಾಲಿಸಿದ ಪೋಲೀಸರಿಗೆ ಕಡೆಗೂ ಈ ಇಬ್ಬರ ಬಗ್ಗೆ ಹಲವು ಮಾಹಿತಿಗಳು ಕಂಡುಬಂದು ಬಳಿಕ ಪೋಲೀಸ್ ಠಾಣೆಯಲ್ಲಿ ಕೊಂಚ ಬಿಸಿ ತಟ್ಟಿಸಿದ ಕೂಡಲೇ ಆಘಾತಕಾರಿ ವಿಷಯಗಳು ಒಂದೊಂದಾಗಿ ಹೊರಬರತೊಡಗಿದವು.


Image courtesy- oaprendizverde.com
ಇದರಲ್ಲಿ ಮಕ್ಕಳ ಅಪಹರಣ, ಅತ್ಯಾಚಾರ, ನರಭಕ್ಷಣೆ, ಕಾಮವಾಂಛೆ, ಅಂಗಗಳ ವಿಲೇವಾರಿ ಮತ್ತು ಮಾರಾಟ ಮೊದಲಾದ ಪ್ರಕರಣಗಳು ಒಂದೊಂದಾಗಿ ಹೊರಬರತೊಡಗಿದವು. ಸುರಿಂದರ್ ಐವರ ಮಕ್ಕಳ ಕೊಲೆಗಳನ್ನು ಒಪ್ಪಿಕೊಂಡಿದ್ದರೆ ಪಾಂಧರ್ ನ ತಲೆಯ ಮೇಲೆ ಇನ್ನೂ ಹನ್ನೊಂದು ಮಕ್ಕಳ ಕೊಲೆಯ ಅಪರಾಧವಿದ್ದು ಇನ್ನೂ ಬಗೆಹರಿಯದ ಸಮಸ್ಯೆಯಾಗಿದೆ.

ಆಟೋ ಶಂಕರ್
1988ರಲ್ಲಿ ಸುಮಾರು ಆರು ತಿಂಗಳುಗಳ ಅವಧಿಯಲ್ಲಿ ಚೆನ್ನೈ ನಗರದ (ಆಗಿನ ಮದ್ರಾಸ್) ತಿರುವನ್ಮಿಯೂರ್ ಪ್ರದೇಶದಿಂದ ಒಟ್ಟು ಒಂಭತ್ತು ಬಾಲಕಿಯರು ಕಾಣೆಯಾಗಿದ್ದರು. ಇವರೆಲ್ಲಾ ಬಡವರಾಗಿದ್ದು ನಡೆದೇ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದರು. ಏಕಾಏಕಿ ಕಾಣೆಯಾದ ಇವರನ್ನು ಅವರ ಪಾಲಕರೇ ವರದಕ್ಷಿಣೆಯ ಭಾರ ಹೊರಲಾರದೇ ವೇಶ್ಯಾವಾಟಿಕೆಗಳಿಗೆ ಮಾರಿರಬೇಕು ಎಂದೇ ಜನರು ಅಂದುಕೊಂಡಿದ್ದರೆ. ಆ ಸಮಯದಲ್ಲಿ ಇದು ಭಾರತದಲ್ಲಿ ಅತಿ ಹೆಚ್ಚು ಸಾಮಾನ್ಯವಾಗಿತ್ತು. ಆದರೆ ತಮ್ಮ ಮಕ್ಕಳನ್ನು ಕಳೆದುಕೊಂಡವರು ಈ ಮಕ್ಕಳು ನಿಜವಾಗಿಯೂ ಕಾಣೆಯಾಗಿದ್ದಾರೆ ಎಂದು ಪೋಲೀಸರಲ್ಲಿ ದೂರು ಕೊಟ್ಟ ಕಾರಣ ಪೋಲೀಸ್ ಇಲಾಖೆ ಪ್ರಕರಣಗಳ ಬಗ್ಗೆ ತೀವ್ರ ತನಿಖೆ ಪ್ರಾರಂಭಿಸಿತು. ಇದೇ ವರ್ಷದ ಡಿಸೆಂಬರ್ ನಲ್ಲಿ ಪೋಲೀಸರಿಗೆ ಒಂದು ಅಮೂಲ್ಯವಾದ ಸುಳಿವು ದೊರಕಿತು.

ಸುಬ್ಬಲಕ್ಷ್ಮಿ ಎಂಬ ಶಾಲಾಬಾಲಕಿ ಆಟೋ ಡ್ರೈವರ್ ಒಬ್ಬ ಶರಾಬು ಅಂಗಡಿಯ ಮುಂದೆ ತನ್ನನ್ನು ಪುಸಲಾಯಿಸಿ ಅಪಹರಿಸಲು ಯತ್ನಿಸಿದ ಎಂದು ಹಿರಿಯರಲ್ಲಿ ದೂರು ನೀಡಿದರು. ಈ ಬಗ್ಗೆ ಹಿರಿಯರು ಪೋಲೀಸರಿಗೆ ತಿಳಿಸಿದಾಗ ತಡಮಾಡದೇ ಈ ಸುಳಿವಿನ ಹಿಂದೆ ಸಾಗಿದ ಪೋಲೀಸರು ಆ ಶರಾಬು ಅಂಗಡಿಯಲ್ಲಿಯೇ ಕೆಲಸಗಾರರಂತೆ ವೇಷ ಧರಿಸಿ ಹಂತಕನಿಗಾಗಿ ಕಾಯತೊಡಗಿದರು. ಕಡೆಗೊಂದು ದಿನ ಬಾಲಕಿ ನೀಡಿದ್ದ ಚಹರೆಯ ವ್ಯಕ್ತಿಯ ಆಗಮನವಾಯಿತು. ಇವನೇ ಶಂಕರ್. ನಾಲ್ಕು ತದುಕಿ ಬಾಯಿ ಬಿಡಿಸಿದಾಗ ಆತನ ಹೇಳಿಕೆಗಳಿಂದ ಇಡಿಯ ನಗರವೇ ದಿಗ್ಭ್ರಾಂತಿಗೊಳಗಾಯಿತು. ಈತ ಒಬ್ಬಂಟಿಯಾಗಿ ಸಿಗುತ್ತಿದ್ದ ಬಾಲಕಿಯರನ್ನು ರಿಕ್ಷಾದಲ್ಲಿ ಮನೆಗೆ ಬಿಡುವ ಆಸೆ ತೋರಿಸಿ ಆಟೋದಲ್ಲಿ ಹತ್ತಿಸಿಕೊಂಡು ಬೇರೆಲ್ಲೋ ಕರೆದುಕೊಂಡು ಹೋಗಿ ಕೊಂದು, ಸುಟ್ಟು ಬೂದಿಯನ್ನು ಬಂಗಾಳಕೊಲ್ಲಿಯಲ್ಲಿ ವಿಸರ್ಜಿಸಿ ಮತ್ತೆ ಮರಳುತ್ತಿದ್ದ. ಕೊಲೆಗಾಗಿ ಆಟೋವನ್ನೇ ಗಾಳವಾಗಿ ಬಳಸಿದ ಕಾರಣ ಆತನಿಗೆ ಆಟೋ ಶಂಕರ್ ಎಂಬ ಅನ್ವರ್ಥನಾಮ ಬಂದಿದೆ.

ಚಾರ್ಲ್ಸ್ ಶೋಭರಾಜ್
ವಿಯೆಟ್ನಾಂ ನ ಸಾಯ್ಗಾನ್ ಎಂಬ ನಗರದಲ್ಲಿ ಜನಿಸಿದ ಈತ ಭಾರತದ ಕುಖ್ಯಾತ ಸರಣಿಹಂತಕ. ನೋಡಲು ಅತ್ಯಂತ ಸ್ಪುರದ್ರೂಪಿ ಮತ್ತು ಮಾತಿನಲ್ಲಿ ಯಾವುದೇ ಮಹಿಳೆಯನ್ನು ಮೋಡಿ ಮಾಡಿ ತನ್ನ ತೆಕ್ಕೆಗೆತೆಗೆದುಕೊಳ್ಳುವ ಚಾಣಾಕ್ಷನಾಗಿದ್ದ ಈತನಿಗೆ ಬಿಕಿನಿ ಕಿಲ್ಲರ್, 'ವಿಷಸರ್ಪ' ಅಥವಾ 'The Serpent' ಎಂಬ ಅಡ್ಡ ಹೆಸರೂ ಇ ತ್ತು. ತನ್ನ ರೂಪ ಮತ್ತು ಮಾತನ್ನೇ ಬಂಡವಾಳವಾಗಿಸಿ ಅಮೂಲ್ಯ ಹರಳುಗಳ ಮಾರಾಟಗಾರನ ವೇಷ ಧರಿಸಿ ಈತ ಹನ್ನೆರಡರಿಂದ ಇಪ್ಪತ್ತನಾಲ್ಕು ವರ್ಷಗಳ ನಡುವಣ ಪಾಶ್ಚಾತ್ಯ ಯುವತಿಯರನ್ನು ಆಕರ್ಷಿಸಿ ಅವರಿಗರಿವಿಲ್ಲದಂತೆಯೇ ಪಾನೀಯದಲ್ಲಿ ಮಾದಕ ದ್ರವ್ಯ ಕುಡಿಸಿ ಪ್ರಜ್ಞೆಯಿಲ್ಲದಂತಾದಾಗ ಕೊಲೆ ಮಾಡುತ್ತಿದ್ದ. ಈತನ ಮೊದಲ ಬಲಿಯಾದ ವಿಟಾಲಿ ಹಕೀಂ ಎಂಬ ಯವಕನ ಶವ ಪಟ್ಟಾಯಾ ನಗರದ ಹೋಟೆಲ್ ಒಂದರ ಹೊರಭಾಗದಲ್ಲಿ ಸುಟ್ಟ ರೂಪದಲ್ಲಿ ಸಿಕ್ಕಿತ್ತು. ಬಳಿಕ ಡಚ್‌ ವಿದ್ಯಾರ್ಥಿ ಹೆಂಕ್ ಬಿಂತಾನ್ಯಾ ಮತ್ತು ಆತನ ಜೀವನಸಂಗಾತಿಯಾಗುವವಳಿದ್ದ ಕಾರ್ನೀಲಿಯಾ ಹೆಮ್ಕರ್ ರನ್ನು ಹಾಂಕಾಂಗ್ ನಲ್ಲಿ ಭೇಟಿಯಾಗಿ ಬಳಿಕ ಥಾಯ್ಲಾಂಡಿಗೆ ಬರಹೇಳಿದ್ದ.


Image courtesy- www.hindustantimes.com

ಇಲ್ಲಿ ಇಬ್ಬರಿಗೂ ವಿಷಕುಡಿಸಿ ಸಾಯಿಸಿದ್ದ. ವಿಟಾಲಿ ಹಕೀಂ ನ ಪ್ರೇಯಸಿ ಚಾರ್ಮೇನೇ ಚಾರೌ ಎಂಬ ಯುವತಿ ತನ್ನ ಪ್ರಿಯಕರ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ ಬಳಿಕ ಥಾಯ್ಲೆಂಡ್ ಪೋಲೀಸರು ಕೊಲೆಗಾರನಿಗಾಗಿ ಬಲೆ ಬೀಸತೊಡಗಿದರು. ಈ ಬಗ್ಗೆ ತಿಳಿದ ಚಾರ್ಲ್ಚ್ ಕೂಡಲೇ ಎಚ್ಚರಿಕೆ ವಹಿಸಿ ತನ್ನ ಸ್ನೇಹಿತನಾದ ಅಜಯ್ ಚೌಧುರಿ ಎಂಬವ ಸಹಾಯದೊಂದಿಗೆ ಡಚ್ ದಂಪತಿಗಳ ಕೊಲೆ ಮಾಡಿದ. ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ ಈ ದಂಪತಿಗಳ ಶವಗಳು 16ರ ಡಿಸೆಂಬರ್ 1975 ರಂದು ಪತ್ತೆಯಾಗಿದ್ದವು. ಬಳಿಕ ಚಾರೌ ಸಹಾ ಬಿಕಿನಿ ತೊಟ್ಟಿದ್ದ ಅವಸ್ಥೆಯಲ್ಲಿಯೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಕಂಡುಬಂದಿತ್ತು.

ಇದಕ್ಕೂ ಮುನ್ನ ತೆರೆಸಾ ನೋವಲ್ಟನ್ ಎಂಬ ಯುವತಿಯೂ ಬಿಕಿನಿ ತೊಟ್ಟ ಸ್ಥಿತಿಯಲ್ಲಿಯೇ ಕೊಲೆಗೀಡಾಗಿದ್ದಳು. ಇದೇ ಕಾರಣಕ್ಕೆ ಆತನಿಗೆ ಬಿಕಿನಿ ಕಿಲ್ಲರ್ ಎಂಬ ಹೆಸರು ಬಂದಿದೆ. 1976ರಲ್ಲಿ ನವದೆಹಲಿಯಲ್ಲಿ ಫ್ರೆಂಚ್‌ ವಿದ್ಯಾರ್ಥಿಗಳಿಗೆ ಅಮಶಂಕೆಗೆ ಔಷಧ ಎಂದು ವಿಷ ನೀಡಲು ಯತ್ನಿಸಿದಾಗ ಮೂವರಿಗೆ ಈತನೇ ಬಿಕಿನಿ ಕಿಲ್ಲರ್ ಇರಬಹುದು ಎಂಬ ಗುಮಾನಿ ಮೂಡಿ ಆ ಔಷಧಿಯನ್ನು ಆತನಿಗೇ ಕುಡಿಸಿ ಬಳಿಕ ಪೋಲೀಸರಿಗೆ ಒಪ್ಪಿಸಿದ್ದರು. ಇಷ್ಟೊಂದು ಕೊಲೆ ಮಾಡಿದ್ದ ಈ ಸರಣಿಹಂತಕನ ಬಾಯಿ ಬಿಡಿಸಲು ಪೋಲೀಸರಿಗೆ ಹೆಚ್ಚು ಕಷ್ಟಪಡುವ ಅಗತ್ಯವೇ ಬೀಳಲಿಲ್ಲ. ಬರೆಯ ಹೊಡೆತದ ಸನ್ನೆ ಮಾಡಿದಕೂಡಲೇ ಹೆದರಿ ತನ್ನ ಎಲ್ಲಾ ಅಪರಾಧಗಳನ್ನು ಒಪ್ಪಿಕೊಂಡ ಇಲಿಯಬುದ್ದಿಯವನಾಗಿದ್ದ. ಈತನ ಕತೆಯನ್ನು ಆಧರಿಸಿ 'Main Aur Charles' ಎಂಬ ಹಿಂದಿ ಚಿತ್ರವೊಂದು ತಯಾರಾಗುತ್ತಿದ್ದು ರಣದೀಪ್ ಹೂಡಾ ಈ ಪಾತ್ರವನ್ನು ನಿಭಾಯಿಸಲಿದ್ದಾರೆ.

ಸಯನೈಡ್ ಮೋಹನ್
ಐದು ವರ್ಷಗಳ ಅವಧಿಯಲ್ಲಿ ಸುಮಾರು ಇಪ್ಪತ್ತು ಮಹಿಳೆಯರನ್ನು ಕೊಂದಿದ್ದಾನೆ ಎಂದು ಪೋಲೀಸರು ತಿಳಿಸುವ ಆನಂದ್ ಕುಲಾಲ್ ಅಲಿಯಾಸ್ ಮೋಹನ್ ಕುಮಾರ್ ಮಂಗಳೂರಿನ ಬಳಿಯ ಗ್ರಾಮವೊಂದರ ಪ್ರಾಥಮಿಕ ಶಾಲೆಯೊಂದರಲ್ಲಿ ವಿಜ್ಞಾನದ ಶಿಕ್ಷಕನಾಗಿದ್ದ. ಬಸ್ ನಿಲ್ದಾಣಗಳಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಬಡ ಅಥವಾ ಮಧ್ಯಮ ವರ್ಗದ ಮಹಿಳೆಯರನ್ನು ತನ್ನ ಮಾತಿನ ಮೋಡಿಯಲ್ಲಿ ಸಿಲುಕಿಸಿ ಅವರೊಂದಿಗೆ ಸಲಿಗೆ ಬೆಳೆಸಿಕೊಳ್ಳುತ್ತಿದ್ದ. ನಿಧಾನವಾಗಿ ಈ ಸಲುಗೆಯನ್ನು ವಿವಾಹದವರೆಗೂ ಮುಂದುವರೆಸಿ ಜನರಹಿತ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ನಡೆಸಿ ಬಳಿಕ ಕೊಲೆ ಮಾಡುತ್ತಿದ್ದ. ಈತನೊಂದಿಗೆ ಓಡಿಹೋಗಲು ಈ ಮಹಿಳೆಯರು ತಯಾರಾಗುತ್ತಿದ್ದುದೂ ಒಂದು ಸ್ವಾರಸ್ಯ.


Image courtesy-
mangalorean.com

ಆ ಸಮಯದಲ್ಲಿ ವರದಕ್ಷಿಣೆಯ ರೂಪದಲ್ಲಿ ದೊಡ್ಡ ಮೊತ್ತದ ಹಣ ನೀಡಲು ಸಾಧ್ಯವಿಲ್ಲದ ಇವರು ವರದಕ್ಷಿಣೆ ಬೇಡ ಎಂದ ಪುರುಷನನ್ನು ದೇವರ ರೂಪದಲ್ಲಿ ಕಾಣುತ್ತಿದ್ದರು. ಇಲ್ಲಿಂದ ಓಡಿ ಅಜ್ಞಾತ ಸ್ಥಳವೊಂದಕ್ಕೆ ತಲುಪಿ ನಾಳೆಯೇ ಮದುವೆ ಎಂದು ನಂಬಿಸಿ ಆ ರಾತ್ರಿ ಸರಸವಾಡಿ ಬೆಳಿಗ್ಗೆ ಗರ್ಭನಿರೋಧಕ ಗುಳಿಗೆ ಎಂದು ಸಯನೈಡ್ ಗುಳಿಗೆ ನುಂಗಿಸಿ ಆಕೆಯ ಚಿನ್ನ, ಹಣದೊಂದಿಗೆ ಪರಾರಿಯಾಗುತ್ತಿದ್ದ. ಬರೆಯ ಕೊಲೆ ಮಾತ್ರವಲ್ಲ, ಹಲವು ಬ್ಯಾಂಕಿನಲ್ಲಿ ನಕಲಿ ದಾಖಲೆ ತೋರಿಸಿ ಸಾಲ ಪಡೆದುಕೊಂಡು ಪರಾರಿಯಾದ ಆರೋಪವೂ ಇದೆ. ಆರೋಪಗಳು ಸಾಬೀತಾದ ಬಳಿಕ 2013ರ ಡಿಸೆಂಬರ್ ನಂದು ನ್ಯಾಯಾಲಯ ಈ ನರಹಂತಕ ಭೂಮಿ ಮೇಲೆ ಇರಕೂಡದು ಎಂದು ಗಲ್ಲುಶಿಕ್ಷೆ ವಿಧಿಸಿತು. ಈತನ ಆರೋಪಗಳು ಸಾಬೀತಾಗುವವರೆಗೂ ಈತನೊಬ್ಬ ಸಭ್ಯವ್ಯಕ್ತಿ ಎಂದು ಆತನ ನೆರೆಹೊರೆಯವರೆಲ್ಲಾ ತಿಳಿದುಕೊಂಡಿದ್ದು ಈತನ ನಿಜರೂಪ ಕಂಡ ಬಳಿಕ ದಿಗ್ಬ್ರಾಂತರಾಗಿದ್ದರು.

English summary

Indian Serial Killers stories, which should shock you

We have heard a lot about many serial killers like Charles Sobhraj or Jack The Ripper or even Ted Bundy who sexually assaulted and killed his victims before keeping their severed heads in his apartment as trophies. These stories still do give a chill every time we hear about these merciless killers who enjoyed the screams of innocent victims and went barbarian in killing several lives.
X
Desktop Bottom Promotion