For Quick Alerts
ALLOW NOTIFICATIONS  
For Daily Alerts

ನಮ್ಮ 'ದೇಶಿಯ ಆಹಾರಗಳ' ಇಂಟರೆಸ್ಟಿಂಗ್ ಸ್ಟೋರಿ!

ನೀವು ಭಾರತದ್ದು ಅಂದುಕೊಂಡಿರುವ ಕೆಲವೊಂದು ಆಹಾರಗಳು ನಮ್ಮ ದೇಶದ್ದಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು! ಅಚ್ಚರಿವಾಯಿತೇ ಹಾಗಾದರೆ ಲೇಖನ ಓದಿ....

By Jaya Subramanya
|

ಭಾರತೀಯ ಆಹಾರಗಳು ಯಾವುದೇ ರೂಪದಲ್ಲಿದ್ದರೂ ತನ್ನ ರುಚಿ ಮತ್ತು ಬಳಸಿರುವ ಅದ್ಭುತ ಸಾಮಾಗ್ರಿಗಳಿಂದ ಬಾಯಿಗೆ ಹೊಸ ಸವಿಯನ್ನು ನೀಡುತ್ತದೆ. ನೀವು ಸೇವಿಸುವ ಆಹಾರ ಖಾರವಾಗಿರಲಿ ಇಲ್ಲವೇ ಸಪ್ಪಯೇ ಆಗಿರಲಿ ವಿಶಿಷ್ಟ ಅನುಭೂತಿಯನ್ನು ನೀವು ಆನಂದಿಸುವುದಂತೂ ಖಂಡಿತ. ಮಸಾಲೆ ಪದಾರ್ಥಗಳಲ್ಲಿ ಎತ್ತಿದ ಕೈ - ನಮ್ಮ ಭಾರತ

ನೀವು ಎಲ್ಲೇ ಹೋಗಿರಿ ಭಾರತದ ತಿಂಡಿತಿನಿಸುಗಳ ಸವಿಗೆ ಮಾರುಹೋಗದೇ ಇರುವವರನ್ನು ನೀವು ನೋಡದೇ ಇರಲು ಸಾಧ್ಯವೇ ಇಲ್ಲ. ಬೀದಿಬದಿಯ ತಿಂಡಿಯೇ ಆಗಿರಬಹುದು ಫೈವ್ ಸ್ಟಾರ್ ಹೋಟೆಲ್‎ನ ತಿಂಡಿಯೇ ಆಗಿರಬಹುದು ರುಚಿ ಮಾತ್ರ ಅನೂಹ್ಯವಾಗಿರುತ್ತದೆ. ಭಾರತದ ಯಾವ ಯಾವ ಸಿಟಿ ಯಾವ ಫುಡ್ ಗೆ ಫೇಮಸ್?

ಆದರೆ ಇಂದಿನ ಲೇಖನದಲ್ಲಿ ನೀವು ಭಾರತದ್ದು ಅಂದುಕೊಂಡಿರುವ ಕೆಲವೊಂದು ಆಹಾರಗಳು ನಮ್ಮ ದೇಶದ್ದಲ್ಲ ಎಂಬುದನ್ನು ತಿಳಿಸಲಿದ್ದೇವೆ. ಹಾಗಿದ್ದರೆ ಇದು ಭಾರತಕ್ಕೆ ಬಂದಿದ್ದು ಹೇಗೆ ಮತ್ತು ಇದು ಖ್ಯಾತಿಯನ್ನು ಪಡೆದುಕೊಂಡಿದ್ದು ಯಾವ ರೀತಿಯಲ್ಲಿ ಎಂಬುದನ್ನು ಕಂಡುಕೊಳ್ಳೋಣ.

ಚಹಾ

ಚಹಾ

ಎಲ್ಲರೂ ತಿಳಿದುಕೊಂಡಿರುವುದು ಚಹಾ ಭಾರತದ್ದು ಎಂದಾಗಿದೆ. ಇದರ ಮೂಲ ಚೀನಾ ಆಗಿದ್ದು ಬ್ರಿಟೀಷರು ಇದನ್ನು ಭಾರತಕ್ಕೆ ಪರಿಚಯಿಸಿದ್ದಾರೆ. ಚಹಾ ಪ್ರೇಮಿಗಳು ಬ್ರಿಟೀಷರಿಗೆ ಈ ವಿಷಯದಲ್ಲಿ ಧನ್ಯವಾದವನ್ನು ಅರ್ಪಿಸಲೇಬೇಕು

ದಾಲ್ ಚಾವಲ್

ದಾಲ್ ಚಾವಲ್

ಇದು ಕೂಡ ಭಾರತೀಯ ಆಹಾರವೇ ಎಂಬುದಾಗಿ ನಾವು ಭಾವಿಸಿದ್ದೇವೆ, ಆದರೆ ಇದರ ಮೂಲ ನೇಪಾಳವಾಗಿದೆ. ಉತ್ತರ ಭಾರತೀಯ ಪ್ರಭಾವದಿಂದಾಗಿ ಇದು ಭಾರತಕ್ಕೆ ಪರಿಚಯವಾಯಿತು.

ಸಮೋಸ

ಸಮೋಸ

ಭಾರತದ ಯಾವುದೇ ಭಾಗದಲ್ಲಿ ಆಗಲಿ ಸಮೋಸಾ ಹೆಚ್ಚು ಖ್ಯಾತಿಯದ್ದಾಗಿದೆ. ಮಧ್ಯ ಈಸ್ಟ್‎ನ ವ್ಯಾಪಾರಿಗಳು 13 ಮತ್ತು 14 ನೇ ಶತಮಾನದಲ್ಲಿ ಭಾರತಕ್ಕೆ ಸಮೋಸಾದ ಪರಿಚಯ ಮಾಡಿಸಿದರು. ಇದರ ಮೂಲ ಹೆಸರು "ಸಂಬೋಸಾ" ಎಂದಾಗಿದೆ. ಅಂದ ಹಾಗೆ ಎಷ್ಟು ಬಗೆಯ ಸಮೋಸ ಟೇಸ್ಟ್ ಮಾಡಿದ್ದೀರಾ?

ಗುಲಾಬ್ ಜಾಮೂನು

ಗುಲಾಬ್ ಜಾಮೂನು

ರುಚಿಕರವಾಗಿರುವ ಕ್ಯಾಲೋರಿ ಶ್ರೀಮಂತ ಗುಲಾಬ್ ಜಾಮೂನು ಬಾಯಲ್ಲಿ ಕರಗಿದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಿರುತ್ತದೆ. ಮೆಡಿಟರೇನಿಯನ್ನರು ಮತ್ತು ಪರ್ಷಿಯಾ ಪ್ರದೇಶದವರು ಇದನ್ನು ಪ್ರಸ್ತುತಪಡಿಸಿದ್ದು "ಲಕ್‎ಮತ್ ಅಲ್ ಖಾದಿ" ಎಂಬುದಾಗಿದೆ ಇದರ ಹೆಸರು. ಅದಾಗ್ಯೂ ನಾವು ಅದನ್ನು ಗುಲಾಬ್ ಜಾಮೂನು ಎಂದೇ ಕರೆಯುವುದು ಒಳ್ಳೆಯದು.

ರಾಜ್ಮಾ

ರಾಜ್ಮಾ

ಇದು ಕೂಡ ಭಾರತದ ಆಹಾರವಲ್ಲ. ಮಧ್ಯ ಮೆಕ್ಸಿಕೋ ಮತ್ತು ಗ್ವಾಟೆಮಾಲಾದ ಆಹಾರ ಇದಾಗಿದೆ. ಮೆಕ್ಸಿಕನ್ ಚಾಟ್ ಮತ್ತು ಮೆಕ್ಸಿಕನ್ ಆಹಾರಗಳಲ್ಲಿ ಇದು ಸಾಮಾನ್ಯವಾಗಿದೆ.

ಜಿಲೇಬಿ

ಜಿಲೇಬಿ

ಮಧ್ಯ ಪೂರ್ವ ಈ ಸಿಹಿಯ ಮೂಲವಾಗಿದ್ದು ಪರ್ಷಿಯನ್ ಆಕ್ರಮಣಕಾರರು ಇದನ್ನು ಭಾರತಕ್ಕೆ ಪರಿಚಯಿಸಿದ್ದಾರೆ. ಇದರ ಮೂಲ ಹೆಸರು "ಜಲಾಬಿಯಾ" ಎಂದಾಗಿದೆ.

ಫಿಲ್ಟರ್ ಕಾಫಿ

ಫಿಲ್ಟರ್ ಕಾಫಿ

ದಕ್ಷಿಣ ಭಾರತೀಯರೇ ಸ್ವಲ್ಪ ನಿಲ್ಲಿ, ಕಾಫಿ ದಕ್ಷಿಣದಲ್ಲಿ ಖ್ಯಾತಿಗಳಿಸಿದೆ ಎಂಬುದಾಗಿ ನೀವು ಹೇಳುವ ಮುನ್ನ, ಇದರ ಮೂಲವನ್ನು ತಿಳಿದುಕೊಳ್ಳಿ. ಬಾಬಾ ಬುಡನ್ ಮೆಕ್ಕಾಗೆ ತೀರ್ಥಯಾತ್ರೆ ಕೈಗೊಂಡ ಸಂದರ್ಭದಲ್ಲಿ ಭಾರತದಕ್ಕೆ ಕಳ್ಳಸಾಗಣೆ ಮಾಡಲಾಯಿತು.

English summary

Indian Foods That Are Adopted!

From Samosa to Chai, know the actual place of origin from where most of these Indian foods have been adopted. We're sure these foods might not be that popular in their birth place when compared to India. So, check out the list of these famous foods of India...
Story first published: Thursday, November 17, 2016, 19:54 [IST]
X
Desktop Bottom Promotion