Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇವು ನೈಸರ್ಗಿಕ ಈಜುಕೊಳಗಳು-ಆದರೆ ಈಜಲು ಧೈರ್ಯ ಬೇಕಷ್ಟೇ!
ಜಲಪಾತಗಳು, ವನಸಿರಿ, ಪ್ರಾಣಿಗಳು, ಪಕ್ಷಿಗಳು ಅವುಗಳ ಕೂಗು...ಹೀಗೆ ಪ್ರಕೃತಿಯೆಂದರೆ ಅದೊಂದು ಮುಗಿಯದೆ ಇರುವಂತಹ ಪ್ರವಾಸ. ಪ್ರಕೃತಿಯ ಸೊಬಗನ್ನು ನೋಡದ ಕಣ್ಣುಗಳಿಗೆ ಅದೃಷ್ಟವೇ ಇಲ್ಲವೆನ್ನಬಹುದು. ಅದರಲ್ಲೂ ಮಳೆಗಾಲದಲ್ಲಿ ಕಾಡಿನಲ್ಲಿ ಸಿಗುವಂತಹ ಹಲವಾರು ಜಲಸಿರಿಗಳನ್ನು ನೋಡುವುದೇ ಕಣ್ಣಿಗೊಂದು ಅಂದ. ಜೋಗದ ಜಲಪಾತವನ್ನು ನೋಡದೇ ಇದ್ದರೆ ಜೀವನ ಜೀವನವೇ ಅಲ್ಲ ಎನ್ನುತ್ತಾರೆ. ಪ್ರಕೃತಿಯ ಸೌಂದರ್ಯವನ್ನು ಅನುಭವಿಸಿದವರಿಗೆ ಗೊತ್ತು.
ಪ್ರತಿಯೊಬ್ಬರಿಗೂ ಪ್ರಕೃತಿಯ ಸೌಂದರ್ಯವನ್ನು ಅನುಭವಿಸುವಂತಹ ಭಾಗ್ಯ ಸಿಗುವುದಿಲ್ಲ. ಪ್ರವಾಸಕ್ಕೆ ಹೋಗುವ ಮೊದಲು ಎಲ್ಲಿಗೆ ಹೋಗಬೇಕೆಂಬ ಗೊಂದಲವೂ ಮೂಡುತ್ತದೆ. ಪ್ರವಾಸದ ವೇಳೆ ನೀವು ತುಂಬಾ ಖುಷಿ ಪಡಬಲ್ಲ ಕೆಲವೊಂದು ನೈಸರ್ಗಿಕ ಈಜುಕೊಳಗಳ ಬಗ್ಗೆ ಈ ಲೇಖನದಲ್ಲಿ ಪಟ್ಟಿ ಮಾಡಲಾಗಿದೆ. ಇಲ್ಲಿ ಕೊಟ್ಟಿರುವ ಪಟ್ಟಿಯಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಮುಂದೆ ನೀವು ಪ್ರವಾಸ ಕೈಗೊಳ್ಳಬಹುದು. ಇದರ ಬಗ್ಗೆ ಮುಂದಕ್ಕೆ ಓದುತ್ತಾ ತಿಳಿಯಿರಿ....

ಟು ಸುಯಾ(ಸಮೊಯಾ)
ಈ ಸುಂದರವಾದ ತಾಣವು ಲೊಟೊಫಗಾದಲ್ಲಿ ಎಂಬಲ್ಲಿದೆ. ನೈಸರ್ಗಿಕವಾಗಿರುವ ಈಜುಕೊಳದಲ್ಲಿ ದೈತ್ಯಕಾರದ ಏಣಿ ಮತ್ತು ಸಣ್ಣದಾಗಿರುವ ಹಡಗುಕಟ್ಟೆಯಿದೆ. ಈ ಈಜು ಕೊಳದಲ್ಲಿ ಈಜಲು ಬಯಸಿದರೆ ಅದಕ್ಕೆ ಸ್ವಲ್ಪವೇ ಹಣ ತೆರಬೇಕಾಗುತ್ತದೆಯಂತೆ, ಆದರೆ ತಾನು ಈಜಬಲ್ಲೆ ಎಂಬ ಧೈರ್ಯವಿರಬೇಕು ಅಷ್ಟೇ...!

ಡೀನ್ಸ್ ಬ್ಲೂ ಹೋಲ್(ಬಹಾಮಾಸ್)
663 ಅಡಿ ಆಳವಿರುವ ಇದು ವಿಶ್ವದ ಅತ್ಯಂತ ಆಳವಾಗಿರುವ ಸಮುದ್ರ ಕುಳಿಯಾಗಿದೆ. ಈ ಕುಳಿಯು ಕೆರಿಬಿಯನ್ ಸಾಗರದಲ್ಲಿರುವ ಇತರ ನೀಳಿ ಕುಳಿಗಳಿಗಿಂತ ದುಪ್ಪಟ್ಟು ಆಳವಾಗಿದೆ. 20 ಮೀಟರ್ ಕೆಳಗಿಳಿದ ಬಳಿಕ ಈ ಕುಳಿಯು ಅಗಲಗೊಂಡು ಗುಹೆಯಾಗುತ್ತದೆ. ಇದರಿಂದಾಗಿ ಇದು ನೋಡಲು ಮತ್ತಷ್ಟು ಸುಂದರವಾಗಿ ಕಾಣುತ್ತದೆ.

ಮರಿಯೆಟಾ ದ್ವೀಪ(ಮೆಕ್ಸಿಕೋ)
ದೊಡ್ಡ ಮಟ್ಟದ ಸ್ಪೋಟದಿಂದಾಗಿ ಉಂಟಾಗಿ ವಿಶೇಷವಾಗಿ ಅಡಗಿರುವ ದ್ವೀಪವಾಗಿದೆ. ಭೂಮಿ ಮೇಲಿರುವ ಸ್ವರ್ಗವಾಗಿರುವ ಈ ಬೀಚ್ ನಲ್ಲಿ ತುಂಬಾ ಸ್ವಚ್ಛವಾಗಿರುವಂತಹ ಬಿಸಿ ನೀರು ಬರುತ್ತದೆ. ಇಲ್ಲಿಗೆ ಭೇಟಿ ನೀಡಿದರೆ ಜೀವನದಲ್ಲಿ ಎಂದೂ ಮರೆಯದ ಅನುಭವ ಪಡೆಯುವುದು ಖಚಿತ.

ಜೆಲ್ಲಿಫಿಶ್ ಲೇಕ್(ಪಲಾಯು)
ಪಲಾಯುದ ಕೊರಾರ್ ತೀರದಲ್ಲಿರುವ ಈ ಕಲ್ಲಿನ ದ್ವೀಪವು ವಿಭಿನ್ನವಾಗಿದೆ. ಇಲ್ಲಿ ನೂರಾರು ವಿಧದ ಜೆಲ್ಲಿಫಿಶ್ ಗಳು ಈಗಲೂ ಇದೆ. ಇಲ್ಲಿ ಈಜುವುದು ತುಂಬಾ ಸುರಕ್ಷಿತವೆನ್ನಲಾಗಿದೆ.

ಝಕ್ಟನ್ ಸಿಂಕ್ ಹೋಲ್(ಮೆಕ್ಸಿಕೋ)
ಇದು ವಿಶ್ವದಲ್ಲಿರುವ ಅತ್ಯಂತ ಆಳವಾದ ಈಜುಗುಂಡಿಯಾಗಿದೆ. ಇದರ ಆಳ ಸುಮಾರು 339 ಮೀಟರ್. ತೇಲಾಡುವ ಹುಲ್ಲಿನ ದ್ವೀಪವಿರುವ ಇದನ್ನು ಝಕಟೆ ಡ್ರಿಫ್ಟ್ ಎಂದು ಕರೆಯಲಾಗುತ್ತದೆ. Image Courtesy

ಲಾಗುನಾ ಸೆಜಾರ(ಅಟಕಾಮ ಮರುಭೂಮಿ, ಚಿಲಿ)
ಸಲಾರ್ ಡೆ ಅಟಕಾಮಾದಲ್ಲಿ ಈ ಈಜುಗುಂಡಿಯಿದೆ. ಇದು ಚಿಲಿಯಲ್ಲಿರುವ ಅತ್ಯಂತ ದೊಡ್ಡ ಉಪ್ಪಿನ ಸಮತಲವಾಗಿದೆ. ಸತ್ತ ಸಮುದ್ರದಲ್ಲಿ ಕಾಣುವಂತಹ ತೇಲಾಡುವ ಅನುಭವು ಇಲ್ಲಿ ನಿಮಗೆ ಆಗುವುದು ತುಂಬಾ ವಿಶೇಷ.

ಬಿಗ್ ಹೋಲ್(ಕಿಂಬರ್ಲಿ, ದಕ್ಷಿಣ ಆಫ್ರಿಕಾ)
ದಕ್ಷಿಣ ಆಫ್ರಿಕಾದ ಉತ್ತರ ಭಾಗದಲ್ಲಿ ಕೈಯಿಂದ ಮಾಡಲ್ಪಟ್ಟಿರುವ ಅತೀದೊಡ್ಡ ಕುಳಿಯಿದೆ. ತೆರೆದ ಗುಂಡಿಯಾಗಿರುವ ಇದು ವಜ್ರದ ಗಣಿಯಾಗಿದೆ. ಇಲ್ಲಿಂದ ಈಗಾಗಲೇ 2,720 ಕೆಜಿ ವಜ್ರ ತೆಗೆಯಲಾಗಿದೆ.



Click it and Unblock the Notifications
