Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಸವಿ ಸವಿ ನೆನಪಿನ ಹಳೆಯ ಫೋಟೋಗಳತ್ತ ಒಂದು ಸುತ್ತು...
ಹಳೆಯ ಯಾವುದೇ ಫೋಟೋಗಳನ್ನು ನೋಡಿದರೂ ನಾವು ಅದರೊಳಗೆ ಮುಳುಗಿ ಹೋಗುತ್ತೇವೆ. ಅಂದಿನ ಎಲ್ಲಾ ನೆನಪುಗಳು ನಮ್ಮನ್ನು ಕಾಡಲು ಆರಂಭಿಸುತ್ತದೆ. ಮನೆಯವರೊಂದಿಗೆ ತೆಗೆಸಿಕೊಂಡು ಗ್ರೂಪ್ ಫೋಟೋ ಆಗಿರಲಿ, ಕಾಲೇಜು ದಿನಗಳ ಫೋಟೋ ಆಗಿರಲಿ ಅಥವಾ ಸ್ನೇಹಿತರ ಜತೆ ತಿರುಗಾಡಲು ಹೋದಾಗ ತೆಗೆಸಿಕೊಂಡ ಫೋಟೋಗಳೇ ಆಗಿರಲಿ. ನೆನಪುಗಳು ನಮ್ಮನ್ನು ಸದಾ ಕಾಡುತ್ತಾ ಇರುತ್ತದೆ.
ಅದರಲ್ಲೂ ನಿಮ್ಮ ಪ್ರೀತಿ ಈ ಫೋಟೋಗಳಲ್ಲಿ ಇದ್ದರೆ ಆಗ ಏನಾಗಬಹುದು. ಅದು ನಿಮ್ಮನ್ನು ಮತ್ತಷ್ಟು ಕಾಡುವುದರಲ್ಲಿ ಸಂಶಯವೇ ಇಲ್ಲ. ಇಂತಹ ಕೆಲವೊಂದು ಫೋಟೋಗಳನ್ನು ಇಟ್ಟುಕೊಂಡು ಬೋಲ್ಡ್ ಸ್ಕೈ ನಿಮ್ಮ ಪ್ರೀತಿ ಅಜರಾಮರ ಎನ್ನುವುದನ್ನು ಹೇಳಲಿದೆ. ಈ ಜೋಡಿಗೆ ಕೇವಲ ಮದುವೆಯಾಗಿ ಮೂರು ವರ್ಷವಾಗಿದ್ದಾಗ ತೆಗೆಸಿಕೊಂಡ ಫೋಟೋ.
ಅವರಿಬ್ಬರು 70 ವರ್ಷದಿಂದಲೂ ಜತೆಯಾಗಿಯೇ ಇದ್ದಾರೆ. ಇಂತಹದ್ದೇ ಕೆಲವೊಂದು ಅಪರೂಪದ ಫೋಟೋಗಳನ್ನು ನಿಮ್ಮ ಮುಂದಿಡಲಿದ್ದೇವೆ. ಇದರಿಂದ ನಿಮ್ಮ ಮನಸ್ಸು ಅರಳಲಿದೆ ಮತ್ತು ನಿಮ್ಮ ಜೀವನಸಂಗಾತಿ ಜತೆ ತೆಗೆಸಿಕೊಂಡು ಫೋಟೋ ಕೂಡ ಇದೇ ರೀತಿಯಲ್ಲಿ ಜೋಪಾನವಾಗಿಡಿ. ಪ್ರೀತಿ ಎಷ್ಟು ಅಮೂಲ್ಯ ಹಾಗೂ ಜೀವನ ನಾವಂದುಕೊಂಡಿರುವುದಕ್ಕಿಂತಲೂ ಸುಂದರ ಎಂದು ಈ ಫೋಟೊಗಳು ಹೇಳುತ್ತದೆ.

ಕೇಟ್ ಮತ್ತು ಜೋಸೆಫ್
ಈ ಜೋಡಿಯ ಫೋಟೋ ನೋಡಿ ನೀವು ಖಂಡಿತವಾಗಿಯೂ ಬೆಚ್ಚಿಬೀಳುತ್ತೀರಿ. ಯಾಕೆಂದರೆ ಪ್ರಾಥಮಿಕ ಶಾಲೆಯಲ್ಲೇ ಇವರಿಬ್ಬರು ಜತೆಯಾಗಿಯೇ ಇದ್ದರು. ಹಲವಾರು ವರ್ಷಗಳ ಬಳಿಕ ಇವರಿಬ್ಬರು ಮದುವೆಯಾದರು. ಆದರೆ ಇಂದಿಗೂ ಇವರಿಬ್ಬರು ತಮ್ಮ ಕಾಲೇಜು ದಿನಗಳ ಯೂನಿಫಾರಂನ್ನು ಜೋಪಾನವಾಗಿಟ್ಟಿದ್ದಾರೆ. Image courtesy

ಈ ಜೋಡಿ ಈಗಲೂ ಪ್ರೀತಿಯಲ್ಲಿ ಮುಳುಗಿದೆ
ಇವರಿಬ್ಬರು ಎಷ್ಟು ಪ್ರೀತಿಸುತ್ತಾರೆ ಹಾಗೂ ಎಷ್ಟೊಂದು ಕ್ರೇಜ್ ಇವರಲ್ಲಿದೆ ಎಂದು ಈ ಫೋಟೋ ಹೇಳುತ್ತದೆ. ಇವರಿಬ್ಬರು ಮದುವೆಯಾಗಿ ಹಲವಾರು ವರ್ಷಗಳು ಉರುಳಿದರೂ ಈಗಲೂ ಇವರಿಬ್ಬರ ಪ್ರೀತಿ ಮಾತ್ರ ಹಾಗೆ ಉಳಿದುಕೊಂಡಿದೆ. Image courtesy

ಮದುವೆಯಾಗಿ 70 ವರ್ಷ
1926ರಲ್ಲಿ ಈ ಜೋಡಿ ಮದುವೆಯಾಗಿತ್ತು. ಅಂದಿನಿಂದ 70 ವರ್ಷಗಳ ಕಾಲ ಇವರಿಬ್ಬರು ತುಂಬಾ ಪ್ರೀತಿಯಿಂದ ಕಳೆದಿದ್ದಾರೆ. ಪರಸ್ಪರ 70 ವರ್ಷಗಳ ಕಾಲ ಜತೆಯಾಗಿ ಇರುವುದು ಒಂದು ಸಾಹಸವೇ ಸರಿ ಅಲ್ಲವೇ? Image courtesy

ಆತನ ಪತ್ನಿ ಮಾಂತ್ರಿಕಳೇ?
ಮದುವೆಯಾಗಿ 20 ವರ್ಷದ ಬಳಿಕವೂ ಈ ಮಹಿಳೆಗೆ ತನ್ನ ಮದುವೆಯ ಉಡುಗೆ ಸರಿಯಾಗುತ್ತಿದೆಯೆಂದರೆ ನೀವು ಈ ಪ್ರಶ್ನೆಯನ್ನು ಕೇಳಲೇ ಬೇಕಾಗುತ್ತದೆ. Image courtesy

ಮದುವೆಯಾಗಿ 60 ವರ್ಷ ಕಳೆದರೂ ಕಿಸ್ಸಿಂಗ್ ಬಿಟ್ಟಿಲ್ಲ!
ಮದುವೆಯಾದ ಕೆಲವೇ ವರ್ಷಗಳಲ್ಲಿ ಕೆಲವರಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಆದರೆ ಈ ಜೋಡಿಗೆ ಮದುವೆಯಾಗಿ 60 ವರ್ಷ ಕಳೆದರೂ ಈಗಲೂ ಅವರಿಬ್ಬರ ನಡುವಿನ ಪ್ರೀತಿ ಹಾಗೆ ಇದೆ ಮತ್ತು ಈ ಫೋಟೋದಲ್ಲಿರುವಂತೆ ಅವರು ಈಗಲೂ ಕಿಸ್ ನೀಡುತ್ತಿರುತ್ತಾರೆ. Image courtesy

ರಾಣಿ ಎಲಿಜಬೆತ್ ಮತ್ತು ರಾಜಕುಮಾರ ಫಿಲಿಫ್
ಇವರಿಬ್ಬರು ರಾಜಮನೆತನದ ಹಾಗೂ ಜನಪ್ರಿಯ ಜೋಡಿ. ಇವರಿಬ್ಬರು ಹಲವಾರು ಸಲ ತಮ್ಮ ಫೋಟೊ ತೆಗೆಸಿಕೊಂಡಿದ್ದಾರೆ. ಈ ಫೋಟೋದಲ್ಲಿರುವಂತೆ ಅವರಿಬ್ಬರ ನಡುವಿನ ಪ್ರೀತಿ ಹಾಗೂ ನಗು ಈಗಲೂ ಹಾಗೆ ಉಳಿದುಕೊಂಡಿದೆ. Image coutesy

ಕರೋಸೆಲ್ ರೈಡ್
ಈ ಜೋಡಿ ಕರೋಸೆಲ್ ರೈಡ್‌ನಲ್ಲಿ ಕಳೆದಂತಹ ಅದ್ಭುತ ಕ್ಷಣಗಳನ್ನು ಫೋಟೊದ ಮೂಲಕ ನೆನಪಿಸಿಕೊಳ್ಳುತ್ತಿದೆ. ಮದುವೆಯ ದಿನ ಅವರಿಬ್ಬರು ಇದೇ ರೀತಿ ರೈಡ್ ಮಾಡಿ ಪ್ರತೀ ಕ್ಷಣವನ್ನು ಆನಂದಿಸಿದ್ದಾರೆ. Image courtesy



Click it and Unblock the Notifications











