Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಅಚ್ಚರಿ: ಹಲ್ಲಿ ಮೈಮೇಲೆ ಬಿದ್ದರೆ ಏನಾಗುತ್ತದೆ ನೋಡಿ...
ನಂಬಿಕೆಗಳು ಮತ್ತು ಶಕುನಗಳು ಜಗತ್ತಿನಲ್ಲೆಡೆ ಚಾಲ್ತಿಯಲ್ಲಿವೆ. ಕೆಲವೊಂದು ನಂಬಿಕೆಗಳು ಅರ್ಥಪೂರ್ಣವಾಗಿರುತ್ತವೆ. ಇನ್ನೂ ಕೆಲವೊಂದು ನಂಬಿಕೆಗಳು ಮೂಡ ನಂಬಿಕೆಗಳಾಗಿರುತ್ತವೆ. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಹಲ್ಲಿಗಳು ಇರುತ್ತವೆ. ಇವು ಅಚಾನಕ್ ಆಗಿ ನಮ್ಮ ದೇಹದ ಮೇಲೆ ಬೀಳುತ್ತವೆ. ಆಗ ಬಿದ್ದಾಗ ಅದನ್ನು ಒಂದು ಶಕುನವಾಗಿ ಪರಿಗಣಿಸುವುದು ಹಿಂದೂ ಸಂಪ್ರದಾಯ. ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ ಅಪಶಕುನವೇ?
ಇದಕ್ಕಾಗಿಯೇ ಹಿಂದೆ ಪಾಕೆಟ್ ಕ್ಯಾಲೆಂಡರ್‌ಗಳಲ್ಲಿ (ಈಗಲೂ) ಹಲ್ಲಿ ಬಿದ್ದ ಫಲವನ್ನು ನಮೂದಿಸುತ್ತಿದ್ದರು, ಅದನ್ನು ಓದಿ ನಮ್ಮ ಮನೆಯ ಹಿರಿಯರು ನಮಗೆ ಭವಿಷ್ಯವನ್ನು ಹೇಳುತ್ತಿದ್ದರು. ಹಲ್ಲಿ ಮುಕ್ತ ಮನೆಯಾಗಿಸಲು ಇಲ್ಲಿದೆ ಟಿಪ್ಸ್
ಹಲ್ಲಿಗಳು ಸುಮ್ಮನೆ ನಮ್ಮ ದೇಹದ ಮೇಲೆ ಬೀಳುವುದು ಒಂದು ಮುನ್ಸೂಚನೆಯನ್ನು ಸೂಚಿಸುತ್ತದೆ ಎಂಬುದು ನಮ್ಮ ಶಾಸ್ತ್ರಗಳು ಹೇಳುವ ಮಾತು ಮತ್ತು ಜನರ ನಂಬಿಕೆಯಾಗಿರುತ್ತವೆ. ಬನ್ನಿ ಹಲ್ಲಿ ಯಾವ ದೇಹದ ಭಾಗಗಳ ಮೇಲೆ ಬಿದ್ದಾಗ ಯಾವ ಶಕುನಗಳನ್ನು ಸೂಚಿಸುತ್ತದೆ ಎಂಬುದನು ತಿಳಿದುಕೊಳ್ಳೋಣ ಬನ್ನಿ.....

ಹಲ್ಲಿಯು ನಿಮ್ಮ ಬಲಗಣ್ಣಿನ ಬಳಿ ಬಿದ್ದರೆ
ಒಂದು ವೇಳೆ, ಹೀಗೆ ನಡೆದರೆ ನಿಮಗೆ ಕಣ್ಣು ಮಂಜಾಗುತ್ತದೆ! ಭಯ ನೋವು ಎರಡೂ ಆಗಬಹುದು. ಆದರೆ ಹೆದರಬೇಡಿ, ಹೀಗಾದರೆ ನಿಮಗೆ ಅತಿ ಶೀಘ್ರದಲ್ಲಿಯೇ ಒಂದು ಶುಭ ಸುದ್ದಿ ಬರುತ್ತದೆಯಂತೆ!.

ಹಲ್ಲಿ ನಿಮ್ಮ ಎಡಗಣ್ಣಿನ ಮೇಲೆ ಬಿದ್ದರೆ
ಕಣ್ಣಿನ ಮೇಲೆ ಬಿದ್ದರೆ ಯಾರಿಗೆ ಭಯವಾಗುವುದಿಲ್ಲ. ಭಯದ ಜೊತೆಗೆ ಸಂತೋಷ ಸಹ ಪಡಿ, ಏಕೆಂದರೆ ಹಲ್ಲಿ ಎಡಗಣ್ಣಿನ ಮೇಲೆ ಬಿದ್ದರೆ ನೀವು ಶ್ರೀಮಂತರಾಗುತ್ತೀರಂತೆ!

ಹಲ್ಲಿ ಎಡ ಮಣಿಕಟ್ಟಿನ ಮೇಲೆ ಬಿದ್ದರೆ
ಇದು ತೀರಾ ತೀರಾ ಅಪರೂಪವಾದ ಘಟನೆಯಾಗುತ್ತದೆ. ಇದು ಭಾರೀ ಅದೃಷ್ಟವನ್ನು ನಿಮಗೆ ತಂದು ಕೊಡುತ್ತದೆಯಂತೆ.

ಹಲ್ಲಿ ನಿಮ್ಮ ಉಗುರನ್ನು ಸ್ಪರ್ಶಿಸಿದರೆ
ಯಾವುದೋ ಕಪ್‌ಬೋರ್ಡ್ ಇಲ್ಲವೇ ಫೋಟೋ ಹಿಂದೆ ಅವಿತಿರುವ ಒಂದು ಹಲ್ಲಿಯನ್ನು ನೀವು ಮುಟ್ಟಿದರು ಅಥವಾ ಹಲ್ಲಿಯೇ ನಿಮ್ಮನ್ನು ಮುಟ್ಟಿದಾಗ, ನಿಮ್ಮ ಉಗುರಿಗೆ ಹಲ್ಲಿ ಸೋಕಬಹುದು. ಆಗ ನಂಬಿಕೆಗಳ ಪ್ರಕಾರ ನೀವು ನಷ್ಟಕ್ಕೆ ಗುರಿಯಾಗುತ್ತೀರಂತೆ.

ಹಲ್ಲಿ ನಿಮ್ಮ ಬಲ ಹಣೆಗೆ ತಾಕಿದರೆ
ಹಲ್ಲಿ ಬಲ ಹಣೆಗೆ ತಾಕಿದಾಗ ಅದನ್ನು ಆಶಿರ್ವಾದ ಎಂದು ಪರಿಗಣಿಸಲಾಗುತ್ತದೆ. ಇದು ಸಂತೋಷವನ್ನು ತರುತ್ತದೆಯಂತೆ.

ಹಲ್ಲಿ ಎಡ ಹಣೆಗೆ ತಾಕಿದರೆ
ಹಲ್ಲಿ ಎಡ ಹಣೆಗೆ ತಾಕಿದರೆ ಅಪಾಯ ಎಂದುಕೊಳ್ಳಬೇಡಿ. ಇದು ನೀವು ಕೈಹಿಡಿದ ಕೆಲಸವನ್ನು ಯಶಸ್ವಿಯಾಗಿ ಪೂರೈಸುವಂತೆ ಮಾಡುತ್ತದೆಯಂತೆ.

ಹಲ್ಲಿ ಬಲ ಭುಜಕ್ಕೆ ತಾಕಿದರೆ
ಹೆದರ ಬೇಡಿ, ಬಲ ಭುಜಕ್ಕೆ ಹಲ್ಲಿ ತಾಕುವುದು ನಿಮಗೆ ಯಶಸ್ಸು ಸಿಕ್ಕುತ್ತದೆ ಎಂಬುದನ್ನು ಸೂಚಿಸುತ್ತದೆಯಂತೆ.

ಹಲ್ಲಿ ಎಡಭುಜಕ್ಕೆ ತಾಕಿದರೆ
ಸಾಮಾನ್ಯವಾಗಿ ಹಲ್ಲಿಗಳು ಭುಜಗಳ ಮೇಲೆಯೇ ಬೀಳುತ್ತದೆ. ಎಡ ಭುಜದ ಮೇಲೆ ಬಿದ್ದರೆ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆಯಂತೆ.

ಕುತ್ತಿಗೆ ಮೇಲೆ ಹಲ್ಲಿ ಬಿದ್ದರೆ
ಭಯದಿಂದ ನೀವು ಕಂಪಿಸಿ ಹೋಗುತ್ತೀರಲ್ಲವೇ. ಹೌದು, ಈ ಭಾಗದಲ್ಲಿ ಹಲ್ಲಿ ಬಿದ್ದರೆ ನಿಮಗೆ ಶತ್ರುಗಳು ಹೆಚ್ಚಾಗುತ್ತಾರಂತೆ.

ಹಲ್ಲಿ ನಿಮ್ಮ ದೇಹದ ಮೇಲೆ ಹರಿದಾಡಿದರೆ
ನೀವು ಮಲಗಿರುವಾಗ ಹಲ್ಲಿ ನಿಮ್ಮ ಮೇಲೆ ಹರಿದಾಡಿದರೆ? ಹೆದರುವ ಅಗತ್ಯವಿಲ್ಲ ಆತ ದೀರ್ಘಾಯುಷ್ಯಿಯಾಗುತ್ತಾನೆಂದು ಶಾಸ್ತ್ರಗಳು ಸಾರುತ್ತವೆ.

ಹಲ್ಲಿಯು ತಲೆಯ ಮೇಲೆ ಬಿದ್ದಾಗ
ತಲೆಯ ಮೇಲೆ ಹಲ್ಲಿ ಬಿದ್ದಾಗ ಜನ ಕಿರುಚಾಡಿ ಬಿಡುತ್ತಾರೆ. ಶಾಸ್ತ್ರಗಳ ಪ್ರಕಾರ ಹಲ್ಲಿಯು ತಲೆಯ ಮೇಲೆ ಬಿದ್ದಾಗ ಅದು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ.



Click it and Unblock the Notifications
