ಬೆರಳಿನ ಉಗುರಿಗೂ, ವ್ಯಕ್ತಿತ್ವಕ್ಕೂ ಎತ್ತಿಂದೆತ್ತ ಸಂಬಂಧ?

By Manu

ಸಾಮಾನ್ಯವಾಗಿ ವೈದ್ಯರು ನಡೆಸುವ ಮೇಲ್ನೋಟದ ಪರೀಕ್ಷೆಯಲ್ಲಿ ಶರೀರದ ಬಿಸಿ, ಕಣ್ಣುಗಳ ಒಳಭಾಗ, ನಾಲಿಗೆ ಮತ್ತು ಉಗುರುಗಳು ಪ್ರಮುಖವಾಗಿವೆ. ಇವುಗಳಲ್ಲಿ ಬಹಳಷ್ಟು ಮಾಹಿತಿ ವೈದ್ಯರಿಗೆ ಸ್ಥೂಲವಾಗಿ ದೊರಕಿಬಿಡುತ್ತದೆ. ಅದರಲ್ಲೂ ಉಗುರುಗಳಲ್ಲಿ ಕೆಲವು ವ್ಯತ್ಯಾಸಗಳು ಗೋಚರಿಸಿದರೆ ಆ ವ್ಯತ್ಯಾಸ ಯಾವುದೋ ದೈಹಿಕ ತೊಂದರೆಯಿಂದ ಉಂಟಾಗಿರಬಹುದು. ಉಗುರು ಮಿರಿಮಿರಿ ಮಿನುಗುತ್ತಿದ್ದರೆ ಎಷ್ಟು ಚೆಂದ ಅಲ್ಲವೇ?

ಆರೋಗ್ಯವಂತರ ಉಗುರುಗಳು ಹೊಳಪುಳ್ಳದ್ದಾಗಿ ಅಡಿಭಾಗದಲ್ಲಿ ಯಾವುದೇ ಮೋಡ ಕವಿದಿರದಂತಿರುತ್ತದೆ. ಆದರೆ ಒಂದು ವೇಳೆ ನಿಮಗೆ ಗೊತ್ತಿಲ್ಲದೇ ಯಾವುದಾದರೂ ರೋಗ ಈಗಾಗಲೇ ಆವರಿಸಿಕೊಂಡಿದ್ದರೆ ಆ ಸೂಚನೆಯನ್ನು ಉಗುರುಗಳನ್ನು ಕೊಂಚ ಸೂಕ್ಷ್ಮವಾಗಿ ನೋಡುವ ಮೂಲಕ ವೈದ್ಯರು ಪತ್ತೇ ಹಚ್ಚುತ್ತಾರೆ.

ಹೌದು, ನಮಗೆಲ್ಲರಿಗು ತಿಳಿದಿರುವಂತೆ ನಮ್ಮ ಆರೋಗ್ಯವು ನಮ್ಮ ಉಗುರುಗಳಲ್ಲಿಯೂ ಸಹ ಪ್ರತಿಬಿಂಬಗೊಳ್ಳುತ್ತದೆ. ನಮ್ಮ ದೇಹದಲ್ಲಿನ ಪೋಷಕಾಂಶಗಳ ಕೊರತೆಯು ಮೊದಲು ಕಂಡು ಬರುವುದು ಉಗುರುಗಳಲ್ಲಿಯೇ. ಇದರ ಜೊತೆಗೆ ಇನ್ನಿತರ ಆರೋಗ್ಯದ ಸಮಸ್ಯೆಗಳು ಸಹ ಉಗುರುಗಳ ಮೂಲಕ ತಮ್ಮ ಇರುವಿಕೆಯನ್ನು ದೃಢಪಡಿಸಿದೆ. ಉಗುರಿನ ಹಳದಿ ಬಣ್ಣ ಹೋಗಲಾಡಿಸಲು ಟಿಪ್ಸ್

ಆದರೆ ನೀವು ನಂಬುತ್ತೀರೋ, ಬಿಡುತ್ತೀರೋ ಉಗುರಿನ ಮೂಲಕ ವ್ಯಕ್ತಿತ್ವವನ್ನೂ ಕೂಡ ತಿಳಿದುಕೊಳ್ಳಬಹುದಂತೆ..! ಇದು ತಮಾಷೆ ಅನ್ನಿಸುತ್ತೆದೆ ಅಲ್ಲವೇ?, ಅದರ ಬಗ್ಗೆ ನಮಗೆ ಎಳ್ಳಷ್ಟು ನಂಬಿಕೆಯಿಲ್ಲ ಎನ್ನುತ್ತೀರಲ್ಲವೆ? ಆದರೆ ನಾವಿಲ್ಲಿ ಈ ತಮಾಷೆಯ ವಿಶ್ಲೇಷಣೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಮುಂದೆ ಓದಿ....

ಉಗುರುಗಳು ಅಗಲವಾಗಿರುವ ಚಾಚಿಕೊಂಡಿದ್ದರೆ

ಉಗುರುಗಳು ಅಗಲವಾಗಿರುವ ಚಾಚಿಕೊಂಡಿದ್ದರೆ

ನೀವು ಮುಂಗೋಪಿ ಸ್ವಭಾವದ ತತ್ವಜ್ಞಾನಿ ಎಂಬುದನ್ನು ಸೂಚಿಸುತ್ತದೆ. ಇದು ನಿಮ್ಮ ಎಡ ಮೆದುಳು ತುಂಬಾ ಬೆಳವಣಿಗೆಯನ್ನು ಹೊಂದಿದೆ ಎಂಬುದನ್ನು ಕೂಡ ಸೂಚಿಸುತ್ತದೆ, ಮತ್ತು ನೀವು ಹೆಚ್ಚಿನ ಸ್ಪಷ್ಟತೆಯನ್ನು ಹೊಂದಿರುವ ವ್ಯಕ್ತಿಯೆಂದು ಇದರಿಂದ ತಿಳಿಯುತ್ತದೆ. ನೀವು ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಇತರ ಮುಂದೆ ಇಡುತ್ತೀರಿ. ಇದರಿಂದ ಜನರು ನೀವು ಒಬ್ಬ ನೇರ ನಡೆ-ನುಡಿ ಇರುವ ಮನುಷ್ಯ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಆದರೂ ಸಹ ನೀವು ತಾಳ್ಮೆಯಿಲ್ಲದಿರುವ ಮುಂಗೋಪವನ್ನು ಹೊಂದಿರುವ ವ್ಯಕ್ತಿಯಾಗಿರುತ್ತೀರಿ. ಅದಕ್ಕಾಗಿ ಸ್ವಲ್ಪ ಆತ್ಮ ಸಂಯಮವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಆದರೆ ನೀವು ಯಾವುದೇ ಕಾರಣಕ್ಕು ಬಲ ಮೆದುಳು ಬಲಶಾಲಿಯಾಗಿರುವವರಂತೆ, ಹೃದಯದ ಮಾತನ್ನು ಕೇಳುವ ಗುಣವನ್ನು ಹೊಂದಿರುವುದಿಲ್ಲ.

ಚೌಕಾಕಾರದ ಉಗುರುಗಳು

ಚೌಕಾಕಾರದ ಉಗುರುಗಳು

ನೀವು ಗಂಭೀರ ಮತ್ತು ಕಠಿಣ ನಿಲುವಿನ ವ್ಯಕ್ತಿ ಎಂಬುದನ್ನು ಸೂಚಿಸುತ್ತದೆ. ನೀವು ಧೈರ್ಯವನ್ನು ಹೊಂದಿರುವ ವ್ಯಕ್ತಿಯಾಗಿರುವಿರಿ: ಹಲವು ಜನ ಗಂಡಸರು ಈ ವಿಭಾಗದಡಿಯಲ್ಲಿ ಬರುತ್ತಾರೆ. ನಿಮ್ಮ ಗಂಭೀರ ನಿಲುವು ಮತ್ತೊಂದು ಒಳ್ಳೆಯ ಅಂಶವಾಗಿದೆ. ಆದರೆ ನಿಮ್ಮ ಕಠಿಣ ನಿಲುವು ಮತ್ತು ರಾಜಿಯಾಗದ ಗುಣಗಳು ಒಂದು ಅಮೂಲ್ಯವಾದ ಕಲ್ಲಿನ ಮೇಲೆ ಸೀಳು ಬಿಟ್ಟ ಹಾಗೆ ಕಾಣುತ್ತದೆ. ನಿಮ್ಮ ಹಠವಾದಿತನವನ್ನು ಮತ್ತು ರಾಜಿಯಾಗದ ಗುಣಗಳನ್ನು ತ್ಯಾಗಮಾಡಿದರೆ, ಎಲ್ಲ ಕೆಲಸಗಳು ನೀವು ನೆನೆಸಿದಂತೆ ಆಗುವುದರಲ್ಲಿ ಸಂಶಯವಿಲ್ಲ.

ತ್ರಿಭುಜಾಕಾರ ಅಥವಾ ತಲೆಕೆಳಗಾದ ತ್ರಿಭುಜ

ತ್ರಿಭುಜಾಕಾರ ಅಥವಾ ತಲೆಕೆಳಗಾದ ತ್ರಿಭುಜ

ನೀವೊಬ್ಬ ಭಾವುಕತನ್ನವನ್ನು ಹೊಂದಿರುವ ಅದ್ಭುತವಾದ ಪ್ರತಿಭೆ ಎಂಬುದನ್ನು ಸೂಚಿಸುತ್ತದೆ. ನೀವು ಹೊಸ ಆಲೋಚನೆಗಳನ್ನು ಒದಗಿಸುವವರು ಮತ್ತು ಇತರರು ನೋಡಲು ಸಾಧ್ಯವಾಗದ ಪ್ರತಿಯೊಂದು ಸೂಕ್ಷ್ಮವನ್ನು ಸದಾ ಗಮನಿಸುವವರು. ಅದರಲ್ಲಿಯೂ ತಲೆಕೆಳಗಾದ ತ್ರಿಭುಜವನ್ನು ಹೊಂದಿರುವವರು ಸ್ವಲ್ಪ ಮಹತ್ವಾಕಾಂಕ್ಷೆವುಳ್ಳ ವ್ಯಕ್ತಿಗಳಾಗಿರುತ್ತಾರೆ. ಇನ್ನೂ ತಲೆ ಎತ್ತಿ ನಿಂತಿರುವ ತ್ರಿಭುಜವನ್ನು ಹೊಂದಿರುವವರು ಸ್ವಲ್ಪ ಹೆಚ್ಚಿಗೆ ಭಾವುಕರಾಗಿದ್ದು, ತಮ್ಮ ಸುತ್ತ- ಮುತ್ತಲಿನ ಜನರಲ್ಲಿನ ಅವಿವೇಕವನ್ನು ಸಹಿಸಿಕೊಳ್ಳುವುದಿಲ್ಲ. ಇವರು ತಮ್ಮ ಕೆಲಸಗಳನ್ನು ತಮ್ಮದೇ ಆದ ವೇಗದಲ್ಲಿ ನಿರ್ವಹಿಸಿಕೊಂಡು ಹೋಗುವುದಕ್ಕಾಗಿ ಇತರರಿಂದ ಟೀಕೆಗೆ ಒಳಗಾಗುತ್ತಾರೆ.

ಬಾದಾಮಿ ಆಕಾರ

ಬಾದಾಮಿ ಆಕಾರ

ನೀವು ಪ್ರಾಮಾಣಿಕ ಮತ್ತು ನಂಬಿಕಸ್ಥರು ಎಂಬುದನ್ನು ಸೂಚಿಸುತ್ತದೆ. ನೀವು ಅದ್ಭುತ ಕಲ್ಪನಾ ಸಾಮರ್ಥ್ಯವನ್ನು ಹೊಂದಿರುವಿರಿ ಮತ್ತು ನಿಮ್ಮೊಂದಿಗೆ ವ್ಯವಹರಿಸುವವರೊಂದಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳುವಿರಿ. ನಿಮ್ಮಲ್ಲಿ ಕರುಣೆ ಮತ್ತು ವಿನಯ ತುಂಬಿರುತ್ತದೆ. ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಅದು ನೀವು ಸಹಿಸಲು ಸಾಧ್ಯವಾಗದಿದ್ದಾಗ, ನಿಮ್ಮಲ್ಲಿರುವ ಕಡಿಮೆ ಸಹಿಷ್ಣುತಾ ಗುಣವು ಮತ್ತು ಮುಂಗೋಪತನವು ನಿಮ್ಮನ್ನು ಕಾಡುತ್ತದೆ. ಹಾಗಾಗಿ ಒಂದು ಫೋಟೋ ತೆಗೆಯಲು ನಿಮ್ಮನ್ನು ಕರೆದಾಗ, ಸ್ವಲ್ಪ ಪಕ್ಕಕ್ಕೆ ಹೋಗಿ ಹಾಗು ನಿಮ್ಮ ಮನಸ್ಸನ್ನು ತಣ್ಣಗೆ ಮಾಡಿಕೊಂಡು ನಂತರ ಫೋಟೊಗೆ ಮುಖ ತೋರಿಸಿ.

ಕತ್ತಿ ಆಕಾರ

ಕತ್ತಿ ಆಕಾರ

ನೀವೊಬ್ಬ ಮಹತ್ವಾಕಾಂಕ್ಷಿ ಮತ್ತು ಆದರ್ಶವಾದಿ ಎಂಬುದನ್ನು ಸೂಚಿಸುತ್ತದೆ. ನೀವು ಯಾವುದೇ ಕಷ್ಟಪಟ್ಟು ಕೆಲಸ ಮಾಡಲು ಮತ್ತು ಗುರಿಗಳನ್ನು ಸಾಧಿಸಲು ಹಿಂದೇಟು ಹಾಕುವುದಿಲ್ಲ. ನಿಮ್ಮ ಗುರಿ ಮತ್ತು ಉದ್ದೇಶಗಳನ್ನು ಸಾಧಿಸಲು ಇದು ಎಲ್ಲಿಯವರೆಗು ಸಹಕರಿಸುತ್ತದೆಯೋ, ಅಲ್ಲಿಯವರೆಗು ಅದನ್ನು ನೀವು ಮಾಡುತ್ತೀರಿ. ಒಂದು ಪಕ್ಷ ಇದು ನಿಮಗೆ ಹಿಡಿಸದಿದ್ದರು ಸಹ ಅದನ್ನು ನೀವು ಮಾಡುತ್ತೀರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕತ್ತಿ ಆಕಾರ

ಕತ್ತಿ ಆಕಾರ

ಆದರೂ ನೀವು ಸಹಕರಿಸುವ ವಿಚಾರದಲ್ಲಿ ಸ್ವಲ್ಪ ಹಿಂದೆ ಬಿದ್ದಿರುತ್ತೀರಿ. ಅದರಲ್ಲೂ ತುಂಬಾ ಆರಾಮವಾಗಿ ಕೆಲಸ ಮಾಡುವ ಮತ್ತು ನಿಮ್ಮೊಂದಿಗೆ ಸಹಕರಿಸದ ಜನರೊಂದಿಗೆ ಕೆಲಸ ಮಾಡುವಾಗ ನೀವು ತಾಳ್ಮೆ ಕಳೆದುಕೊಳ್ಳುತ್ತೀರಿ. ಇತರರೊಂದಿಗೆ ಬೆರೆತು ಕೆಲಸ ಮಾಡುವ ಗುಣವನ್ನು ನೀವು ಬೆಳೆಸಿಕೊಂಡರೆ ನಿಮಗೇ ಒಳ್ಳೆಯದು.

English summary

Here's What Your Fingernails Reveal About Your Personality

Nail trends come and go, but often we stick to our go-to shape without a second thought. Read on to find out what our favoured nail shape says about us and which you should really be trying.
X
Desktop Bottom Promotion