Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಒಲಿಂಪಿಕ್ಸ್ ಚಿನ್ನದ ಪದಕದಲ್ಲೂ ನಡೆಯುತ್ತಿದೆ ಗೋಲ್‌ಮಾಲ್!
ರಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಮಹತ್ವಾಕಾಂಕ್ಷೆಯ ಗುರಿ. ಇದನ್ನು ಸಾಧಿಸಲು ವರ್ಷಗಳಲ್ಲ, ಜೀವಮಾನವನ್ನೇ ಮುಡಿಪಾಗಿರಿಸಿ ಸತತ ಸಾಧನೆ, ಪರಿಶ್ರಮ ಪಡುವವರ ಸಂಖ್ಯೆಯೂ ದೊಡ್ಡದೇ. ಈ ಶ್ರಮದ ಫಲವಾಗಿ ಒಲಿಂಪಿಕ್ ಪದಕವನ್ನು ಗೆದ್ದು ತಂದಾಗ ತಮ್ಮ ಶ್ರಮ ಸಾರ್ಥಕವಾದ ಭಾವನೆಗಿಂತಲೂ ಪದಕ ಗೆದ್ದ ದೇಶದ ನಾಗರಿಕರು ತೋರುವ ಅಭಿಮಾನವೇ ಜೀವನ ಸಾರ್ಥಕವಾದ ಭಾವನೆ ಮೂಡಿಸುತ್ತದೆ.

ಪದಕಗಳ ಬಗ್ಗೆ ನಾವೆಲ್ಲರೂ ಚರ್ಚಿಸುತ್ತೇವಾದರೂ ಈ ಪದಕಗಳನ್ನು ಯಾವ ಲೋಹದಿಂದ ಮಾಡಲಾಗಿದೆ ಎಂಬ ಮಾಹಿತಿಯನ್ನು ಮಾತ್ರ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಸಾಮಾನ್ಯವಾದ ನಂಬಿಕೆಯ ಪ್ರಕಾರ ಚಿನ್ನದ ಪದಕ ಎಂದರೆ ಇಡಿಯ ಪದಕವನ್ನೇ ಚಿನ್ನದಿಂದ ಮಾಡಲಾಗಿದೆ ಎಂಬ ನಂಬಿಕೆಯನ್ನೇ ನಾವೆಲ್ಲಾ ಹೊಂದಿದ್ದೇವೆ. ವಾಸ್ತವವಾಗಿ ಇಡಿಯ ಪದಕವೇ ಚಿನ್ನದ್ದೇ, ಅಥವಾ ಇದು ಕೇವಲ ಲೇಪನವೇ? ಕುತೂಹಲ ಮೂಡಿತೇ, ಮುಂದೆ ಓದಿ.... ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ...

ವಾಸ್ತವವಾಗಿ ಚಿನ್ನದ ಪದಕ ಎಂದರೆ 494 ಗ್ರಾಂ ಬೆಳ್ಳಿಯ ಪದಕವಾಗಿದ್ದು ಇದರ ಮೇಲೆ 6 ಗ್ರಾಂ ಚಿನ್ನವನ್ನು ಲೇಪಿಸಿರುತ್ತಾರೆ. ಒಟ್ಟು ತೂಕ ಐನೂರು ಗ್ರಾಂ. ಹಿಂದೆ, ಅಂದರೆ 1912ರವರೆಗೂ ಚಿನ್ನದ ಪದಕ ಎಂದರೆ ಪೂರ್ಣ ಐನೂರು ಗ್ರಾಂ ಚಿನ್ನದ್ದೇ ಆಗಿದ್ದ ಪಕದವನ್ನೇ ನೀಡಲಾಗುತ್ತಿತ್ತು. ಆದರೆ ಕ್ರಮೇಣ ಬೆಳ್ಳಿಯ ಪದಕದ ಮೇಲೆ ಚಿನ್ನದ ಲೇಪನ ಮಾಡಿದ ಪದಕವನ್ನೇ ಚಿನ್ನದ ಪದಕ ಎಂದು ಕರೆಯಲಾಗುತ್ತಿದೆ.
ರಿಯೋ ಒಲಿಂಪಿಕ್ ನಡೆಯುವ ಹಿಂದಿನ ವಾರದ ಚಿನ್ನದ ಬೆಲೆಯ ಪ್ರಕಾರ ಈ ಪದಕ 564 ಡಾಲರು (ಸುಮಾರು 3772೦ ರೂಪಾಯಿ). 2012ರ ಲಂಡನ್ ಒಲಿಂಪಿಕ್ಸ್ ಸಮಯದಲ್ಲಿ ಚಿನ್ನದ ಬೆಲೆ ಉತ್ತುಂಗಕ್ಕೇರಿದ್ದಾಗ ಪ್ರತಿ ಪದಕ 708 ಡಾಲರುಗಳಿಗೇರಿತ್ತು.
ಒಲಿಂಪಿಕ್ಸ್ ಕ್ರೀಡೆಗಳನ್ನು ನಡೆಸಲು ಅನುಮತಿ ಪಡೆಯುವ ರಾಷ್ಟ್ರಕ್ಕೆ ಕ್ರೀಡೆಗಳನ್ನು ನಡೆಸುವ ಹೊರತಾಗಿ ಇತರ ಜವಾಬ್ದಾರಿಗಳೂ ಮತ್ತು ಪದಕಗಳನ್ನು ವಿನ್ಯಾಸಗೊಳಿಸುವ ಅವಕಾಶವೂ ಒದಗಿಬರುತ್ತದೆ. ಆದರೆ ಈ ವಿನ್ಯಾಸ ಒಲಿಂಪಿಕ್ ಕ್ರೀಡಾ ನಿಯಮಗಳನ್ನು ಪಾಲಿಸಲೇಬೇಕು. ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ...

ಇದರಲ್ಲಿ ಪ್ರಮುಖವಾದ ನಿಯಮ ಎಂದರೆ ಪ್ರತಿ ಪದಕ ಕನಿಷ್ಠ ಮೂರು ಮಿಮೀ ದಪ್ಪ ಹಾಗೂ ಕನಿಷ್ಠ ಅರವತ್ತು ಮಿಮೀ ವ್ಯಾಸವನ್ನು ಹೊಂದಿರಲೇಬೇಕು. ಚಿನ್ನದ ಪದಕದಲ್ಲಿ ಕನಿಷ್ಠ ಆರು ಗ್ರಾಂ ಚಿನ್ನದ ಲೇಪನ ಇರಲೇಬೇಕು. ಪ್ರತಿ ಪದಕದಲ್ಲಿ ಒಲಿಂಪಿಕ್ ಚಿಹ್ನೆ ಕನಿಷ್ಠ ಒಂದು ಕಡೇ ಮುದ್ರಿತವಾಗುವುದೂ ಕಡ್ದಾಯ. ಇನ್ನುಳಿದಂತೆ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಐನೂರು ಗ್ರಾಂ ಅಪ್ಪಟ ಲೋಹದಿಂದಲೇ ತಯಾರಿಸಲಾಗುತ್ತದೆ.



Click it and Unblock the Notifications

