Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಪೊಲೀಸರನ್ನು ಯಾಮಾರಿಸಲು, ಕಳ್ಳರು ಮಾಡಿದ ಟ್ರಿಕ್ಸ್ ನೋಡಿ...
ಮಾನವ ಕಳ್ಳಸಾಗಣೆಯ ಬಗ್ಗೆ ಮಾಧ್ಯಮಗಳಲ್ಲಿ ನೂರಾರು ಸುದ್ದಿಗಳು ಪ್ರತಿದಿನ ಬರುತ್ತಲೇ ಇರುತ್ತವೆ. ಇವುಗಳಲ್ಲಿ ಹೆಚ್ಚಿನವು ದುಷ್ಕೃತ್ಯದ ಸಮಾನ ಉದ್ದೇಶದಿಂದ ಕಾರ್ಯನಿರ್ವಹಿಸುವ ತಂಡದ ಕಾರ್ಯಾಚರಣೆಯ ಅಂಗವಾದರೆ ಉಳಿದವು ಸ್ವತಃ ತಮ್ಮನ್ನು ತಾವೇ ಬೇರೆ ದೇಶಕ್ಕೆ ಕಳ್ಳತನದಿಂದ ಸಾಗಿಸಲ್ಪಡಲು ಅನುಸರಿಸುವ ವಿಧಾನವಾಗಿದೆ.
ನಮ್ಮ ರಾಜ್ಯದಲ್ಲಿಯೇ ಗಂಧದ ಕಳ್ಳಸಾಗಣೆದಾರರು ಪ್ರತಿಬಾರಿ ಅನುಸರಿಸುವ ನೂತನ ಮತ್ತು ಊಹಿಸಲೂ ಅಸಾಧ್ಯವಾದ ವಿಧಾನಗಳಂತೆಯೇ ಮಾನವ ಕಳ್ಳಸಾಗಣೆದಾರರು ಪ್ರತಿಬಾರಿ ವಿನೂತನ ಮತ್ತು ಹಿಂದೆ ಯಾರೂ ಅನುಸರಿಸದ ವಿಧಾನಗಳನ್ನು ಅನುಸರಿಸುತ್ತಾರೆ. ಇವುಗಳಲ್ಲಿ ಕೆಲವು ವಿಧಾನಗಳಂತೂ ನಗುಬರಿಸುವಂತಹದ್ದೂ, ಪೆದ್ದುತನದಿಂದ ಕೂಡಿದ್ದೂ ಆಗಿರುತ್ತದೆ. ಇವನ್ನು ಕಂಡುಹಿಡಿದ ಪೋಲೀಸರಿಗಂತೂ ಅವರ ಚಿಟ್ಟುಹಿಡಿಯುವ ಕೆಲಸದಲ್ಲಿ ನೀಡುವ ವಿನೋದಗಳೂ ಆಗಿವೆ.
ಉದಾಹರಣೆಗೆ ಸೂಟ್ ಕೇಸಿನಲ್ಲಿ ವ್ಯಕ್ತಿಯನ್ನು ಮುದುರಿ ಪ್ಯಾಕ್ ಮಾಡಿ ಕಾರಿನ ಮೇಲಿಟ್ಟು ಗಡಿ ದಾಟಲು ಯತ್ನಿಸುವುದು, ದೊಡ್ಡ ಚಾಟರಿಬಿಲ್ಲಿನ ಮೂಲಕ ತನ್ನನ್ನು ತಾವೇ ಕವೆಗೆ ಸಿಕ್ಕಿಸಿಕೊಂಡು ಒಂದು ದೇಶದ ಗಡಿಯಿಂದ ಇನ್ನೊಂದು ಗಡಿಗೆ ನುಸುಳಲು ಯತ್ನಿಸುವುದು ಇತ್ಯಾದಿ. ಈ ಪ್ರಯತ್ನಗಳೆಲ್ಲಾ ಬಹುತೇಕ ವಿಫಲಗೊಂಡು ಈ ಪರಿಯನ್ನು ಯತ್ನಿಸಿದವರು ಕಂಬಿಗಳ ಹಿಂದೆ ಈಗ ಸುಧಾರಿಸಿಕೊಳ್ಳುತ್ತಿದ್ದಾರೆ. ಬನ್ನಿ, ಇಂತಹ ಕೆಲವು ಪ್ರಸಂಗಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ:

ಕಾರಿನ ಸೀಟಿನ ಅವತಾರವೆತ್ತಿದ ವ್ಯಕ್ತಿ
ಇದು ಬಾಲಿವುಡ್ ಚಿತ್ರವೊಂದರ ಸನ್ನಿವೇಶ ಎಂದು ನೀವು ತಿಳಿದರೆ ಅಪ್ಪಟ ತಪ್ಪಾಗುತ್ತದೆ. ಏಕೆಂದರೆ ಇಂತಹದ್ದೊಂದು ಕಿಡಿಗೇಡಿತನದ ಪ್ರಯತ್ನವೊಂದನ್ನು ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬ ನಿಜವಾಗಿಯೂ ಅನುಸರಿಸಿದ್ದಾನೆ. "Enrique Aquilar Canchola" ಎಂಬ ಹೆಸರಿನ ಈ ವ್ಯಕ್ತಿ ಕಾರಿನ ಸೀಟಿನೊಳಗೇ ತೂರಿ ಇವನ ತೊಡೆಯ ಮೇಲೆ ಚಾಲಕನನ್ನು ಕೂರಿಸಿ ಪೋಲೀಸರು ನಿಜವಾಗಿಯೂ ಸೀಟಿನ ಮೇಲೇ ಕುಳಿತಿದ್ದಾನೆ ಎಂಬ ಭ್ರಮೆ ಹುಟ್ಟಿಸುವಂತೆ ಮಾಡಿದ್ದ. ಆದರೆ ಕ್ಯಾಲಿಫೋರ್ನಿಯಾ ಬಳಿಕ ಸಾನ್ ಸಿಡ್ರೋ (San Ysidro) ಎಂಬ ವಿಶ್ವದಲ್ಲಿಯೇ ಅತಿ ಜನನಿಬಿಡ ಮತ್ತು ಗೌಜಿಯಿರುವ ಗಡಿಯಲ್ಲಿ ಈ ಪ್ರಯತ್ನ ಮಾಡಿದ್ದವನನ್ನು ಪೋಲೀಸರ ಸೂಕ್ಷ್ಮ ಗಮನ ಕಂಡುಹಿಡಿದಿತ್ತು.

ಸೂಟ್ ಕೇಸಿನಲ್ಲಿ ಜೀವಂತ ಮಹಿಳೆ
Pornkamol Mongkolsermsak ಎಂಬ ಹೆಸರಿನ ಥಾಯ್ಲೆಂಡ್ ಮಹಿಳೆಯೊಬ್ಬರು ತನ್ನನ್ನು ತಾನೇ ಸೂಟ್ ಕೇಸ್ ಒಂದರಲ್ಲಿ ಪ್ಯಾಕ್ ಮಾಡಿಸಿಕೊಂಡು ಮೆಕ್ಸಿಕೋ ದೇಶದ ಗಡಿಯ ಮೂಲಕ ಯು.ಎಸ್.ಎ ಗೆ ಕಳ್ಳತನದಿಂದ ಪ್ರವೇಶ ಪಡೆಯಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. Image courtesy

ಕೈದಿ ಪ್ರಿಯಕರನನ್ನು ಸೂಟ್ ಕೇಸಿನಲ್ಲಿ ಕದ್ದೊಯ್ದ ಪ್ರೇಯಸಿ
ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಇಲ್ಲಿ ಪ್ರೀತಿಗೆ ನ್ಯಾಯವೂ ಇಲ್ಲ ಎಂಬುದನ್ನು ಓರ್‍ವ ಯುವತಿ ಸಾಬೀತು ಪಡಿಸಿದ್ದಾಳೆ. 2007ರಲ್ಲಿ ಅಕ್ರಮ ಮಾರಕಾಸ್ತ್ರ ಹೊಂದಿರುವ ಆಪಾದನೆ ನಿರೂಪಿತಗೊಂಡ ಬಳಿಕ ಇಪ್ಪತ್ತು ವರ್ಷಗಳ ಸಜೆ ಅನುಭವಿಸಲು ಮೆಕ್ಸಿಕೋದ ಚೆಟುಮಾಲ್ ನಗರದ ಜೈಲಿನಿಲ್ಲದ್ದ Juan Ramirez Tijerina ಎಂಬ ಹೆಸರಿನ ಪ್ರಿಯಕರನನ್ನು ಹೊರತೆಗೆಯಲು del Mar Arjona ಎಂಭಾಕೆ ವಿಭಿನ್ನ ವಿಧಾನ ಅನುಸರಿಸಿದ್ದಳು. 2011 ರಲ್ಲಿ ಪ್ರಿಯಕರನನ್ನು ಭೇಟಿಯಾಗಲು ದೊಡ್ಡ ಸೂಟ್ ಕೇಸಿನೊಂದಿಗೆ ಜೈಲಿಗೆ ಆಗಮಿಸಿ ತನ್ನ ಪ್ರಿಯಕರನನ್ನು ಮುದುಡಿದ ಸ್ಥಿತಿಯಲ್ಲಿ ಸೂಟ್ ಕೇಸಿನಲ್ಲಿ ತುಂಬಿ ಹೊರನಡೆಯುವಾಗ ಅನುಮಾನಗೊಂಡ ರಕ್ಷಣಾಪಡೆಯ ತಪಾಸಣೆಯಲ್ಲಿ ಸಿಕ್ಕಿಬಿದ್ದ. ಈಗ ಇಪ್ಪತ್ತು ವರ್ಷಗಳ ಹೊರತಾಗಿ ಜೈಲು ಪಾರಾಗುವ ಯತ್ನದ ಶಿಕ್ಷೆಯನ್ನೂ ಆತ ಅನುಭವಿಸಬೇಕು. Image courtesy

ಬೆನ್ನಿನ ಚೀಲದಲ್ಲಿ ಮಗುವನ್ನು ಸಾಗಿಸಲು ಯತ್ನಿಸಿದ ಅಮ್ಮ!
ಪಾಪುವಾ ನಿ ಗಿನೀ ದೇಶಕ್ಕೆ ಅಕ್ರಮವಾಗಿ ಪ್ರವೇಶ ಪಡೆಯಲು ಯತ್ನಿಸಿದ ಈ ಮಹಾತಾಯಿ ತನ್ನ ಎರಡು ತಿಂಗಳ ಮಗುವನ್ನು ಕಾಗದ ಪತ್ರಗಳಿಲ್ಲದ ಕಾರಣ ತನ್ನ ಬೆನ್ನಿನ ಬ್ಯಾಕ್ ಪ್ಯಾಕ್ ಚೀಲದಲ್ಲಿ ಅಡಗಿಸಿಟ್ಟು ಕಳ್ಳಸಾಗಣೆ ಮಾಡುವ ಸಮಯದಲ್ಲಿ ಸಿಕ್ಕಿಬಿದ್ದಿದ್ದಾರೆ. Image courtesy

ಸೂಟ್ ಕೇಸಿನಲ್ಲಿ ಎಂಟು ವರ್ಷದ ಬಾಲಕ ಅಬೂ
2015ರಲ್ಲಿ ಸ್ಪೇನಿನ ವಿಮಾನ ನಿಲ್ದಾಣವೊಂದರಲ್ಲಿ ರಕ್ಷಣಾ ಪೋಲೀಸರು ಅನುಮಾನಾಸ್ಪದವಾಗಿ ಕಾಣುತ್ತಿದ್ದ ಸೂಟ್ ಕೇಸ್ ಒಂದನ್ನು ಬಿಚ್ಚಿ ಪರೀಕ್ಷಿಸಿದಾಗ ಅವರಿಗೆ ಅಚ್ಚರಿ ಕಾದಿತ್ತು. ಈ ಸೂಟ್ ಕೇಸ್ ತೆರೆದಾಗ ನಗುತ್ತಿದ್ದ ಹತ್ತೊಂಭತ್ತು ವರ್ಷದ ಯುವಕ "ಹಲೋ, ನನ್ನ ಹೆಸರು ಅಬೂ" ಎಂಬು ಪೋಲೀಸರನ್ನು ಸ್ವಾಗತಿಸಿದ. ತನ್ನದಲ್ಲದ ಈ ಸೂಟ್ ಕೇಸ್ ಒಂದನ್ನು ಓರ್ವ ಮಹಿಳೆ ಸಾಗಿಸಲು ಕೊಂಚ ಹಣದ ಆಮಿಷಕ್ಕಾಗಿ ಒಪ್ಪಿಕೊಂಡಿದ್ದರು. ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. Image courtesy

ವ್ಯಕ್ತಿಯಿಂದಲೇ ವ್ಯಕ್ತಿಯ ಕಳ್ಳಸಾಗಣೆ
2015ರಲ್ಲಿ ಪೆರು ದೇಶದ ಲಿಮಾ ನಗರದ ಜಾರ್ಜ್ ಚಾವೆಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಯಿತು. ಇವರಲ್ಲಿ ಒಬ್ಬ ಇನ್ನೊಬ್ಬನನ್ನು ದೊಡ್ಡ ಸೂಟ್ ಕೇಸ್ ಒಂದರಲ್ಲಿ ತುಂಬಿ ದೇಶದಿಂದ ಪರಾರಿಯಾಗಲು ಯತ್ನಿಸುತ್ತಿದ್ದರು. Image courtesy

ಯೂರೋಪಿನಿಂದ ಉಚಿತವಾಗಿ ಪತ್ನಿಯನ್ನು ಕರೆದೊಯ್ಯಲು ಯತ್ನಿಸಿದ ಪತಿ
ಅರವತ್ತು ವರ್ಷದ ಹಿರಿಯ ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಬಳಿ ಪಾಸ್ ಪೋರ್ಟ್ ಇಲ್ಲದ ಕಾರಣ ಯೂರೋಪ್ ಯೂನಿಯನ್ ನ ಒಂದು ಪ್ರಾಂತಕ್ಕೆ ಆಕೆಯನ್ನು ಕರೆದೊಯ್ಯಲು ಸೂಟ್ ಕೇಸ್ ನಲ್ಲಿ ತುಂಬಿ ಲಗ್ಗೇಜ್ ನಂತೆ ಕೊಂಡೊಯ್ಯಲು ಯತ್ನಿಸಿದ್ದಾಗ ಸಿಕ್ಕಿಬಿದ್ದರು. ಆದರೆ ಇವರ ಪೆದ್ದುತನಕ್ಕೆ ಪೋಲೀಸರು ಮರುಕ ತೋರಿದ್ದರು, ಏಕೆಂದರೆ ಇವರು ಹೋಗಲಿರುವ Schengen ಪ್ರಾಂತಕ್ಕೆ ಹೋಗಲು ಪಾಸ್ ಪೋರ್ಟ್ ನ ಅಗತ್ಯವೇ ಇರಲಿಲ್ಲ. Image courtesy



Click it and Unblock the Notifications











