ವಿಚಿತ್ರ ಕಾಯಿಲೆಗಳು-ನೆನೆಸಿಕೊಂಡರೇ ಭಯವಾಗುತ್ತದೆ..!

By Manu

ಬೆಳೆಯುತ್ತಿರುವ ಆಧುನಿಕ ಯುಗದಲ್ಲಿ ಹಲವಾರು ರೀತಿಯ ಸಂಶೋಧನೆಗಳು ನಡೆಯುತ್ತದೆ. ಕೆಲವೊಂದು ಯಶಸ್ವಿಯಾದರೆ ಮತ್ತೆ ಕೆಲವು ವಿಫಲವಾಗುತ್ತದೆ. ಆದರೆ ವಿಫಲವಾಗುವಂತಹ ಸಂದರ್ಭಗಳಲ್ಲಿ ಉಂಟಾಗುವಂತಹ ದುಷ್ಪರಿಣಾಮಗಳ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ. ಅದರಲ್ಲಿ ಒಂದು ತಳಿ ರೂಪಾಂತರ. ಈ ಸಂಶೋಧನೆಯು ಎಷ್ಟು ಮಟ್ಟಿಗೆ ಒಳ್ಳೆಯದನ್ನು ಉಂಟುಮಾಡಿದೆಯಾ ಅಷ್ಟೇ ಕೆಡುಕನ್ನು ಮಾಡಿದೆ. ಒಂದೇ ವರ್ಣತಂತು ವ್ಯಕ್ತಿಯನ್ನು ಒಳ್ಳೆಯವನಾಗಿ ಅಥವಾ ಕೆಟ್ಟವನನ್ನಾಗಿ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ.

ತಳಿ ರೂಪಾಂತರದಿಂದ ಉಂಟಾದ ಕೆಲವೊಂದು ಆಘಾತಕಾರಿ ಘಟನೆಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ. ತಳಿ ಪರಿವರ್ತನೆಯಿಂದ ಉಂಟಾದ ದುಷ್ಪರಿಣಾಮದಿಂದಾಗಿ ಕೆಲವರು ಈಗಲೂ ಹೆಣಗಾಡುತ್ತಿದ್ದರೆ, ಮತ್ತೆ ಕೆಲವರು ತಮ್ಮ ಬದುಕನ್ನೇ ಅಂತ್ಯಗೊಳಿಸಿದ್ದಾರೆ. ಇನ್ನು ಕೆಲವೊಬ್ಬರು ಧೈರ್ಯದಿಂದ ತಮ್ಮ ಬದುಕನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬನ್ನಿ ಇಂತಹ ಕೆಲವೊಂದು ಅಚ್ಚರಿದಾಯಕ ಸಂಗತಿಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ ಮುಂದೆ ಓದಿ...

ಪಾಲ್ಯಡಾಕ್ಟವ್ಲ್ಯ

ಪಾಲ್ಯಡಾಕ್ಟವ್ಲ್ಯ

ಈ ಕಾಯಿಲೆಯಲ್ಲಿ ವ್ಯಕ್ತಿಯಲ್ಲಿ ಹೆಚ್ಚುವರಿ ಬೆರಳುಗಳು ಬೆಳೆಯುತ್ತದೆ. ಕೆಲವೊಂದು ಕಾರ್ಯವೆಸಗಿದರೆ ಮತ್ತೆ ಕೆಲವು ಲೆಕ್ಕಕೆಂಬಂತೆ ಇರುತ್ತದೆ. ಸಾವಿರದಲ್ಲಿ ಒಂದು ಮಗುವಿನಲ್ಲಿ ಇದು ಕಾಣಿಸಿಕೊಳ್ಳುತ್ತದೆ. Image courtesy

ಎಪಿರ್ಡೆಮೊಡ್ಯಪ್ಲಾಸಿಯಾ

ಎಪಿರ್ಡೆಮೊಡ್ಯಪ್ಲಾಸಿಯಾ

ಇದು ಪ್ಯಾಪಿಲೋಮವೈರಸ್ ಪೀಡಿತ ಜನರಲ್ಲಿ ಕಾಣಿಸಿಕೊಳ್ಳುವಂತಹ ಅತ್ಯಂತ ಅಪರೂಪದ ಕಾಯಿಲೆ. ಇದು ದೇಹದಲ್ಲಿ ಚಿಪ್ಪುಗಳ್ಳುಳ್ಳ ಸ್ನಾಯುಗಳಿಗೆ ಕಾರಣವಾಗುತ್ತದೆ. ಇದು ಕೈ, ಕಾಲು, ಹಾಗೂ ಮುಖದ ಮೇಲೆ ಬೆಳವಣಿಗೆಯಾಗಬಹುದು. Image courtesy

ದೈತ್ಯ ಜನ್ಮದತ್ತ ಗಡ್ಡೆ

ದೈತ್ಯ ಜನ್ಮದತ್ತ ಗಡ್ಡೆ

ಇದು ದೇಹದ ಹಣೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಬೆಳೆಯುತ್ತಲೇ ಇರುತ್ತದೆ, ಅಲ್ಲದೆ ಹುಟ್ಟಿನಿಂದಲೇ ಬರುವಂತಹ ಒಂದು ಕಾಯಿಲೆ. ಇದನ್ನು ನೋಡಿದಾಗ ಕೂದಲು ಹೆಚ್ಚಾಗಿ ಬೆಳೆದಿರುವಂತೆ ಕಾಣಿಸುತ್ತದೆ. ದೋಷಯುಕ್ತ ವರ್ಣದ್ರವ್ಯ ಜೀವಕೋಶಗಳು ಇದಕ್ಕೆ ಕಾರಣವಾಗಿದೆ. Image courtesy

ಎಸ್ ಸಿಐಡಿ(ತೀವ್ರ ಸಂಯೋಜಿತ ಪ್ರತಿರಕ್ಷಣಾ ರೋಗ)

ಎಸ್ ಸಿಐಡಿ(ತೀವ್ರ ಸಂಯೋಜಿತ ಪ್ರತಿರಕ್ಷಣಾ ರೋಗ)

ಈ ಸೋಂಕು ಮಕ್ಕಳನ್ನು ತುಂಬಾ ಅಪಾಯಕಾರಿ ಮಟ್ಟಕ್ಕೆ ತಲುಪಿಸಬಹುದು. ಈ ಪರಿಸ್ಥಿತಿಯಲ್ಲಿ ಹುಡುಗನೊಬ್ಬ 12 ವರ್ಷಗಳ ಕಾಲ ಬದುಕುಳಿದಿದ್ದಾನೆ. Image courtesy

ಪ್ರೋಟಿಯಸ್ ಸಿಂಡ್ರೋಮ್

ಪ್ರೋಟಿಯಸ್ ಸಿಂಡ್ರೋಮ್

ಇದನ್ನು ವೈಡೈಮನ್ ಸಿಂಡ್ರೋಮ್ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಚರ್ಮ, ಮೂಳೆಗಳು ವಿಕಾರವಾಗಿ ಬೆಳೆದು ಅದು ದೇಹದ ಅರ್ಧಭಾಗದಲ್ಲಿ ಗಡ್ಡೆಗಳನ್ನು ಉಂಟುಮಾಡುತ್ತದೆ. ಇದು ಹುಟ್ಟುವಾಗಲೇ ಕಾಣಿಸಿಕೊಳ್ಳುವ ಕಾಯಿಲೆ. Image courtesy

ಟ್ರೆಚರ್ ಕೊಲಿನ್ ಸಿಂಡ್ರೋಮ್

ಟ್ರೆಚರ್ ಕೊಲಿನ್ ಸಿಂಡ್ರೋಮ್

ಈ ಕಾಯಿಲೆಯಲ್ಲಿ ಮುಖದ ಮೂಳೆ ಹಾಗೂ ಅಂಗಾಂಶಗಳು ಹೆಚ್ಚುವರಿಯಾಗಿ ಬೆಳವಣಿಗೆಯಾಗುತ್ತದೆ. ಈ ವಿಚಿತ್ರ ಕಾಯಿಲೆಯು 50 ಸಾವಿರ ಜನರಲ್ಲಿ ಒಬ್ಬರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. Image courtesy

ಎಕ್ಟ್ರೋಡಾಕ್ಟ್ಯಲಿ

ಎಕ್ಟ್ರೋಡಾಕ್ಟ್ಯಲಿ

ಎರಡು ಬೆರಳುಗಳ ಮಧ್ಯೆ ಅಂತವಾಗಿ ವಿಕಾರವಾಗಿ ಕಾಣಿಸುವುದನ್ನು `ಏಡಿಯ ಉಗುರಿನ ಕೈ' ಎಂದು ಕರೆಯಲಾಗುತ್ತದೆ. ಇದು ಕೈ ಹಾಗೂ ಕಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಇಂದಿನ ದಿನಗಳಲ್ಲಿ ಪ್ರಾಸ್ಥೆಟಿಕ್ಶ ಸ್ತ್ರಚಿಕಿತ್ಸೆ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. Image courtesy

ಹೈಪರ್ಟ್ರಿಕೋಸಿಸ್

ಹೈಪರ್ಟ್ರಿಕೋಸಿಸ್

ಈ ತಳಿ ಪರಿವರ್ತನೆ ಹೃದಯಕ್ಕೆ ಅತ್ಯಂತ ಘಾಸಿ ಉಂಟುಮಾಡುತ್ತದೆ. ಯಾಕೆಂದರೆ ಇದರಲ್ಲಿ ಮಾನವನ ದೇಹ ಪೂರ್ತಿ ಕೂದಲು ಬೆಳೆಯುತ್ತದೆ. ಇದನ್ನು `ತೋಳ ಮಾನವ' ಎಂದೂ ಕರೆಯಲಾಗುತ್ತದೆ. Image courtesy

English summary

Genetic Mutations That Have Gone Wrong

Genetic mutations is something that cannot be changed or even tried to rectify as the results will be terrifying and scary. Even a single chromosome can change the life of a person in a good or a bad way. In this article, we are here to share some cases of genetic mutations that have heart-breaking effects. These are the cases about how a single gene or chromosome can change the life of an individual.
Story first published: Friday, April 15, 2016, 12:01 [IST]
X
Desktop Bottom Promotion