ಊರಿಗೆ ಬಂದವರು ಫೇಸ್‌ಬುಕ್‌ಗೆ ಬರದೇ ಇರುತ್ತಾರೆಯೇ..!!

By Deepak

ಇಂದು ಜನ ನೀರು ನೆರಳಿಲ್ಲದೆ ಬದುಕಬಲ್ಲರು, ಆದರೆ ಸಾಮಾಜಿಕ ಜಾಲತಾಣಗಳನ್ನು ಬಿಟ್ಟು ಇರಲಾರರು. ಅದಕ್ಕಾಗಿಯೇ ಹೊಸ ಗಾದೆಗಳು ಜನ್ಮ ತಾಳುತ್ತಿವೆ. ಊರಿಗೆ ಬಂದವರು ಫೇಸ್‌ಬುಕ್‌ಗೆ ಬರದೆ ಇರುತ್ತಾರಾ? ಎಂದು ತಮಾಷೆಯ ಮಾತು ಹರಿದಾಡುತ್ತಿದೆ...ಹೌದು ಹಲವಾರು ಜನ ಫೇಸ್‍ಬುಕ್, ಟ್ವಿಟರ್ ಇತ್ಯಾದಿಗಳನ್ನು ಇಷ್ಟಪಡುತ್ತಾರೆ. ಇವುಗಳು ನಮ್ಮ ಜೀವನದಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳನ್ನು ತಂದಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ನಿಮ್ಮ ನೆಚ್ಚಿನ ನಟ ದಿನ ನಿತ್ಯ ಏನು ಮಾಡುತ್ತಾರೆ, ಎಲ್ಲೆಲ್ಲಿ ಹೋಗಿದ್ದರು ಎಂದು ತಿಳಿಯುವುದು ಕಷ್ಟವಲ್ಲ. ಸುಮ್ಮನೆ ಅವರನ್ನು ಹಿಂಬಾಲಿಸಿದರೆ ಸಾಕು, ಯಾವುದೋ ಒಂದು ಸಾಮಾಜಿಕ ಪಿಡುಗು ಅಥವಾ ಸಮಸ್ಯೆಯ ಬಗ್ಗೆ ಕೆಲಸಕ್ಕೆ ರಜೆ ಹಾಕಿ ಹೋಗಿ ಹೋರಾಟ ಮಾಡಬೇಕೆಂದಿಲ್ಲ. ಮನೆಯಲ್ಲಿಯೇ ಕುಳಿತು ಆಂಧೋಲನವನ್ನು ರಚಿಸಿ ಆ ಕೆಲಸವನ್ನು ಫೇಸ್‌ಬುಕ್‌ನಲ್ಲಿ ಮಾಡಬಹುದು. ಇಲ್ಲವಾದಲ್ಲಿ ನಿಮ್ಮ ಅನಿಸಿಕೆಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಬಹುದು.

ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಸಹ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಬಹುದು. ಅದು ಅತ್ಯಂತ ಸುಲಭ ಮತ್ತು ಆಕರ್ಷಕ ವಿಧಾನವಾಗಿ ಇಂದು ಜಾರಿಯಲ್ಲಿದೆ. ಅಲ್ಲದೆ ಕಾರ್ಯಕ್ರಮಕ್ಕೆ, ಮದುವೆಗೆ ಕರೆಯಲು ಸಹ ಫೇಸ್‌ಬುಕ್ ಅನ್ನು ಬಳಸಿಕೊಳ್ಳಲಾಗುತ್ತದೆ. ನಿಮಗೆ ಫೇಸ್‌ಬುಕ್‌ ಮಾಡಿರುವ ಒಳ್ಳೆಯ ಕೆಲಸವೇನು? ಅದು ನಿಮ್ಮ ಹಿಂದಿನ ಸ್ನೇಹಿತರನ್ನು ಮತ್ತೆ ಸಂಪರ್ಕಿಸುವ ಸಂಪರ್ಕ ಸೇತುವೆಯಾಗಿದೆ. ಅಲ್ಲದೆ ಇದು ನಿಮ್ಮದೇ ಮನೋಭಾವದ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಅವಕಾಶ ನೀಡುತ್ತದೆ. ನಿಮ್ಮ ಬ್ಯುಸಿನೆಸ್‌ ಬಗ್ಗೆ ಪ್ರಚಾರ ಮಾಡಲು ಸಹ ಇದು ನೆರವಾಗುತ್ತದೆ. ಹೀಗೆ ಫೇಸ್‌ಬುಕ್‌ನಿಂದ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಹೀಗೆ ಪ್ರಯೋಜನದ ಮಾರ್ಗ ಹುಡುಕಿಕೊಂಡು ಬರುವ ಜನ ಈ ಫೇಸ್‌ಬುಕ್‌ ಚಟಕ್ಕೆ ಅಂಟಿಕೊಂಡು ಬಿಡುತ್ತಾರೆ. ಪ್ರಯೋಜನಗಳು ಎಷ್ಟೇ ಇರಲಿ, ಇರುವ ಕೆಲಸಗಳನ್ನು ಬಿಟ್ಟು ಸದಾಕಾಲ ಇದರಲ್ಲಿ ಮುಳುಗಿದರೆ ಹೇಗೆ..? ಅಲ್ಲವೇ

ಫೇಸ್‌ಬುಕ್‌ ಎಂಬುದು ಜನರನ್ನು ಸಂಪರ್ಕಿಸುವ ಒಂದು ಅದ್ಭುತ ಮಾಧ್ಯಮ. ಆದರೆ ಜನರು ತಮ್ಮ ದೈನಂದಿನ ಚಟುವಟಿಕೆಗಳನ್ನು ಇತರರಿಗೆ ತಿಳಿಸಲು ಇದನ್ನು ಬಳಸಿಕೊಳ್ಳುತ್ತಿರುವುದು ದುರಂತ. ನೀವು ಇಂದು ಯಾವ ಬಟ್ಟೆ ಧರಿಸಿದಿರಿ, ಏನು ತಿಂದಿರಿ, ಎಲ್ಲಿ ಕುಳಿತಿರಿ ಎಂದು ತಿಳಿದುಕೊಂಡು ಜನಗಳಿಗೆ ಏನು ಆಗಬೇಕು?ಅಧ್ಯಯನಗಳ ಪ್ರಕಾರ ಫೇಸ್‌ಬುಕ್‌ನಲ್ಲಿ ಅಧಿಕವಾಗಿ ಶೇರ್ ಮಾಡಿಕೊಳ್ಳುವ ಗುಣವು ಒಂಟಿತನದ ಫಲಿತಾಂಶವಂತೆ. ತನಗೆ ಬರುವ ಲೈಕ್ ಮತ್ತು ಅಭಿಪ್ರಾಯಗಳನ್ನು ಸಹ ಪದೇ ಪದೇ ಪರಿಶೀಲಿಸುವುದು ಸಹ ಸ್ವಯಂ-ಗೀಳನ್ನು ಸೂಚಿಸುತ್ತದೆಯಂತೆ. ಇದಲ್ಲದೆ ಫೇಸ್‌ಬುಕ್‌ಗೆ ಅಂಟಿಕೊಳ್ಳಲು ಹಲವಾರು ಗಂಭೀರ ಕಾರಣಗಳು ಸಹ ಇವೆಯಂತೆ ಬನ್ನಿ ಅವುಗಳು ಯಾವುವು ಎಂದು ತಿಳುದುಕೊಂಡು ಬರೋಣ...

'ಲೈಕ್‍ಗಳು’ ಜನಪ್ರಿಯತೆಯನ್ನು ನಿರ್ಧರಿಸುತ್ತವೆ

'ಲೈಕ್‍ಗಳು’ ಜನಪ್ರಿಯತೆಯನ್ನು ನಿರ್ಧರಿಸುತ್ತವೆ

ಜನ ಏಕೆ ಫೇಸ್‌ಬುಕ್‌ಗೆ ಅಂಟಿಕೊಂಡಿರುತ್ತಾರೆ ಎಂದರೆ, ಅದರ ಹಿಂದೆ ಜನಪ್ರಿಯವಾಗುವ ಹಂಬಲ ಇರುತ್ತದೆ. ತಮ್ಮ ಪೋಸ್ಟ್ ಮತ್ತು ಫೋಟೋಗಳಿಗೆ ಜನ ಎಷ್ಟು ಲೈಕ್ ನೀಡಿದ್ದಾರೆ ಎಂಬುದನ್ನು ಇವರು ಪರಿಗಣಿಸುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

'ಲೈಕ್‍ಗಳು’ ಜನಪ್ರಿಯತೆಯನ್ನು ನಿರ್ಧರಿಸುತ್ತವೆ

'ಲೈಕ್‍ಗಳು’ ಜನಪ್ರಿಯತೆಯನ್ನು ನಿರ್ಧರಿಸುತ್ತವೆ

ಒಂದು ವೇಳೆ ತಮ್ಮ ಫೋಟೋಗೆ 5 ಲೈಕ್ ಮತ್ತು ತಮ್ಮ ಸ್ನೇಹಿತನ ಫೋಟೋಗೆ 50 ಲೈಕ್ ಬಂದಿದ್ದಲ್ಲಿ, ಅವರು ತಮಗಿಂತ ಜನಪ್ರಿಯರು ಎಂದು ಇವರು ಭಾವಿಸುತ್ತಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಂಡಿರುವವರ ಸಾಮಾನ್ಯ ಲಕ್ಷಣವಾಗಿರುತ್ತದೆ.

ಗೇಮ್‍ಗಳ ಚಟ

ಗೇಮ್‍ಗಳ ಚಟ

ನಿಮಗೆ ನಿಜವಾಗಿಯೂ ಆಟವಾಡಬೇಕು ಎಂದೆನಿಸಿದಲ್ಲಿ, ಹೊರಗೆ ಹೋಗಿ ಆಟವಾಡಿ. ಆದರೆ ಜನ ಹಾಗೆ ಮಾಡುವುದಿಲ್ಲ. ಕ್ಯಾಂಡಿ ಕ್ರಷ್ ಮುಂತಾದ ಗೇಮ್‌ಗಳ ರಿಕ್ವೆಸ್ಟ್ ನಿಮ್ಮನ್ನು ಪ್ರತಿದಿನ ಸ್ವಾಗತಿಸುವಂತೆ ಮಾಡುತ್ತದೆ. ಇದೀಗ ಫಾರ್ಮ್‌ವಿಲ್ಲೆ ಅಥವಾ ಕಿಚನ್ ಸ್ಕ್ರ್ಯಾಂಬಲ್ ಆಡುತ್ತಾ ತಮ್ಮ ದಿನವನ್ನು ಕಳೆಯುತ್ತಾರೆ ಮತ್ತು ಇತರರಿಗೆ ಅದನ್ನು ಆಡುವಂತೆ ಮನವಿ ಮಾಡುವ ಮೂಲಕ ಕಿರಿಕಿರಿಯನ್ನುಂಟು ಮಾಡುತ್ತಿರುತ್ತಾರೆ. ಈ ಅಡುಗೆ ಮಾಡುವ ಆಟಗಳಲ್ಲಿ ನೀವು ಮಾಡುವ ಅಡುಗೆಯನ್ನು ನಿಜ ಜೀವನದಲ್ಲಿ ಮಾಡಿದರೆ ಯಾರಿಗೆ ಗೊತ್ತು, ನೀವೇ ಒಬ್ಬ ದೊಡ್ಡ ಶೆಫ್ ಆಗಬಹುದು.

ಅಧಿಕ ಜನಗಳಿಗೆ ಹಂಚಿಕೊಳ್ಳುವುದು

ಅಧಿಕ ಜನಗಳಿಗೆ ಹಂಚಿಕೊಳ್ಳುವುದು

"ನಾನು ಮಧ್ಯಾಹ್ನ ಎರಡು ರೋಟಿ ಮತ್ತು ಪಲ್ಯವನ್ನು ತಿಂದೆ" ನಿಜವೇ? ಅಲ್ಲಿ ಬರ್ಗರ್ ತಿಂದೆ, ಇಲ್ಲಿ ಪಿಜ್ಜಾ ತಿಂದೆ ಎಂದು ಪೋಸ್ಟ್ ಮಾಡುತ್ತಾ ಇರುತ್ತಾರೆ. ಏನೂ ಇಲ್ಲ ಎಂದರು ಬಿಟ್ಟ ಕಣ್ಣು ಬಿಟ್ಟಂತೆ, ಮೂತಿ ಸೊಟ್ಟಗೆ ಮಾಡಿಯಾದರು ಒಂದು ಫೋಟೋವನ್ನು ಅಪ್‌ಲೋಡ್ ಮಾಡುತ್ತಾರೆ. ಇಲ್ಲವೇ ಒಂದು ಪೋಸ್ಟ್ ಮಾಡುತ್ತಾರೆ. ಇದರಿಂದ ಯಾರಿಗೆ ಏನಾದರೂ ಪ್ರಯೋಜನ ಇರುತ್ತದೆ ಎಂದು ಕೇಳಿದರೆ, ಅಸಲಿಗೆ ಅವರಿಗೆ ಸಹ ಇರುವುದಿಲ್ಲ. ಇದು ಫೇಸ್‌ಬುಕ್‌ಗೆ ಅಂಟಿಕೊಂಡಿರುವವರ, ಅದನ್ನು ಚಟವಾಗಿ ಮಾಡಿಕೊಂಡಿರುವವರ ಒಂದು ಉದಾಹರಣೆಯಷ್ಟೇ!

ನಿಷ್ಪ್ರಯೋಜಕ ಸಂಗತಿಗಳನ್ನು ಶೇರ್ ಮಾಡಿಕೊಳ್ಳುವುದು

ನಿಷ್ಪ್ರಯೋಜಕ ಸಂಗತಿಗಳನ್ನು ಶೇರ್ ಮಾಡಿಕೊಳ್ಳುವುದು

ಒಂದು ದಿನ ಇದ್ದಕ್ಕಿದ್ದಂತೆ "ನನ್ನ ಎದೆ ಒಡೆದು ಹೋದಂತಾಗಿದೆ" ಎಂದು ಪೋಸ್ಟ್ ಮಾಡುತ್ತಾರೆ. ಆಗ ನೋಡಿ ಅಭಿಮಾನಿ ದೇವರು/ದೇವತೆಗಳು ಏಕೆ? ಏನಾಯಿತು? ಎಂದು ಪ್ರಶ್ನಿಸುತ್ತಾರೆ. ಕೊನೆಗೆ ಇವರು "ಏನಿಲ್ಲ", "ಆಮೇಲೆ ಹೇಳ್ತೀನಿ" ಎಂದು ವಿಷಯವನ್ನು ತಣ್ಣಗೆ ಮಾಡುತ್ತಾರೆ. ಕೆಲಸಕ್ಕೆ ಬಾರದಂತಹ ವಿಚಾರಗಳನ್ನು ಎತ್ತಿಕೊಂಡು ಅದರ ಬಗ್ಗೆ ಮಾತನಾಡುವ ಚಾಳಿ ಇವರಿಗೆ. ಈಗ ಅರ್ಥವಾಯಿತ? ಜನ ಏಕೆ ಫೇಸ್‍ಬುಕ್ ಗೀಳನ್ನು ಇಟ್ಟುಕೊಂಡಿರುತ್ತಾರೆ ಎಂದು?

ನಗು ಉಕ್ಕಿಸುವಂತಹ ಫೋಟೋಗಳು

ನಗು ಉಕ್ಕಿಸುವಂತಹ ಫೋಟೋಗಳು

ನೀವು ಫೇಸ್‌ಬುಕ್‌ನಲ್ಲಿ ಹುಡುಕಿದಾಗ ನಿಮಗೆ ನಗು ಉಕ್ಕಿಸುವಂತಹ ಹಲವಾರು ಫೋಟೋಗಳು ದೊರೆಯುತ್ತವೆ. ನಾನು ಅಲ್ಲಿ, ನಾನು ಇಲ್ಲಿ,,, ಎಂದು ತೋರಿಸಿಕೊಳ್ಳುವಂತಹ ಫೋಟೋಗಳು. ನಮ್ಮ ಸ್ಟಾರ್‌ಗೆ ಒಂದು ಲೈಕ್ ಕೊಡಿ, ಈ ಸ್ವಾಮಿಗೆ ಒಂದು ಲೈಕ್ ಕೊಡಿ. ಯಾರು ನಂ 1, ಇದರ ಕೆಳಗೆ ಲೈಕ್ ಮಾಡಿ 6 ಟೈಪ್ ಮಾಡಿ, ನಂತರ ನೀವೇ ಅಚ್ಚರಿಗೊಳ್ಳುತ್ತೀರಿ. ಹೀಗೆ ಒಂದೇ, ಎರಡೇ? ಅದಕ್ಕಿಂತ ತಮಾಷೆಯ ವಿಷಯ ಎಂದರೆ ತಮ್ಮ ಫೋಟೋವನ್ನೆ ಮತ್ತೆ ಮತ್ತೆ ಅಪ್‌ಲೋಡ್ ಮಾಡಿಕೊಂಡು ಜನರ ಅಭಿಪ್ರಾಯ ಕೇಳುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಗು ಉಕ್ಕಿಸುವಂತಹ ಫೋಟೋಗಳು

ನಗು ಉಕ್ಕಿಸುವಂತಹ ಫೋಟೋಗಳು

ಕುಳಿತು, ನಿಂತು, ಮಲಗಿ, ಧುಮಿಕಿ ಹೀಗೆ ನಾನಾ ಅವತಾರದ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಾರೆ. ಜನ ನಗುತ್ತಾರೆ ಎಂದು ಸಹ ಇವರು ತಿಳಿಯುವುದಿಲ್ಲ. ಆದರೂ ತಮ್ಮನ್ನು ತಾವು ಫೇಸ್‌ಬುಕ್ ಸ್ಟಾರ್ ಮಾಡಿಕೊಳ್ಳಬೇಕು ಎಂಬ ಮಟ್ಟದಲ್ಲಿ ತೋರಿಸಿಕೊಳ್ಳುತ್ತಾರೆ. ಆ ಮಟ್ಟಕ್ಕೆ ಈ ಚಟವನ್ನು ಅಂಟಿಸಿಕೊಂಡಿರುತ್ತಾರೆ. ಆ ಮಟ್ಟಿಗೆ ಇತರರು ತಮ್ಮನ್ನು ಗುರುತಿಸಬೇಕು ಎಂದು ಬಯಸುತ್ತಾರೆ.

Story first published: Friday, January 1, 2016, 12:12 [IST]
X
Desktop Bottom Promotion