Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೋಡಿ ಮಾಡುವ ಈ ಮಂಜುಗಡ್ಡೆಗಳು ನಿಸರ್ಗದ ಅದ್ಭುತಗಳು
ಬೇಸಿಗೆಯಲ್ಲಿ ದೇಹಕ್ಕೆ ತಂಪುಪಾನೀಯ ಮತ್ತು ಆಹಾರಗಳು ತಂಪು ನೀಡಿದರೆ ಮನಕ್ಕೆ ತಂಪು ನೀಡುವುದೇನು ಗೊತ್ತೇ? ತಂಪಾದ ನೋಟ. ಇದರಿಂದ ಮನ ಮುದಗೊಳ್ಳುತ್ತದೆ ಹಾಗೂ ಬಿಸಿಲಿನ ಬೇಗೆಯನ್ನು ಸಹಿಸಿಕೊಳ್ಳಲು ನೆರವಾಗುತ್ತದೆ. ಇದು ಹೇಗೆ ಸಾಧ್ಯವಾಗುತ್ತದೆ ಎಂದು ನಿಮಗೆ ಅಚ್ಚರಿಯಾಗಿದ್ದರೆ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳು ನಿಮ್ಮನ್ನು ಇನ್ನಷ್ಟು ಅಚ್ಚರಿಗೆ ತಳ್ಳುತ್ತವೆ.
ಇವೆಲ್ಲವೂ ಒಂದು ಅದ್ಭುತಗಳೇ ಆಗಿದ್ದು ಅಲ್ಲಿಗೇ ಹೋಗಿ ನಿರಾಳರಾಗಲು ಮನ ಬಯಸುತ್ತದೆ. ಇದು ಸಾಧ್ಯವಾಗದಿದ್ದರೆ ಈ ಸ್ಥಳಕ್ಕೆ ಈಗ ಹೋದರೆ ಎಷ್ಟು ತಂಪಾಗಿರಬಹುದು ಎಂಬ ಕಲ್ಪನೆಯೇ ಮನವನ್ನು ನಿರಾಳವಾಗಿಸಿ ತಂಪಾಗಿರುವ ಭಾವನೆ ಮೂಡಿಸುತ್ತದೆ. ಈ ಕಲ್ಪನೆ ಇನ್ನಷ್ಟು ಗರಿಗೆದರಿ ಮುಂದೆಂದಾದರೂ ಈ ಸ್ಥಳಕ್ಕೆ ನಿಜವಾಗಿಯೂ ಹೋಗಲು ಪ್ರೇರಣೆಯನ್ನೂ ಉಂಟುಮಾಡಬಹುದು, ಪರಿಣಾಮವಾಗಿ ಏರ್ಪಡುವ ಪ್ರವಾಸ ನಿಮ್ಮ ಜೀವನದ ಒಂದು ಸಂತೋಷಕರ ಅವಧಿಯೂ ಆಗಬಹುದು.
ಜಗತ್ತಿನಲ್ಲಿರುವ ಈ ಕುತೂಹಲಕರ ಸ್ಥಳಗಳು ಮಂಜಿನಿಂದಲೇ ತುಂಬಿದ್ದು ನಿಸರ್ಗವೇ ಮಂಜನ್ನೇ ಕತ್ತರಿಸಿ ತಯಾರಿಸಿದ ಕಲಾಕೃತಿಗಳು ನಿಮ್ಮನ್ನು ನಿಬ್ಬೆರಬೆರಗಾಗಿಸಬಹುದು. ಬನ್ನಿ ಇಂತಹ ಅದ್ಭುತ ಮಂಜುಗಳನ್ನು ಈಗ ನೋಡೋಣ...

ಪಟ್ಟೆಪಟ್ಟೆಯ ತೇಲುವ ಹಿಮಗುಡ್ಡೆ
ಹಿಮಗುಡ್ಡೆ ಅಥವಾ ಐಸ್ ಬರ್ಗ್ ಎಂದರೆ ಟೈಟಾನಿಕ್ ಚಿತ್ರ ಮೊದಲು ನೆನಪಿಗೆ ಬರುತ್ತದೆ. ಧೃವ ಪ್ರದೇಶದದ ಮಂಜುಪರ್ವತದ ಅಂಚಿನಲ್ಲಿರುವ ತುಂಡೊಂದು ಯಾವುದೋ ಕಾರಣಕ್ಕೆ ಮುಖ್ಯ ಗುಡ್ಡದಿಂದ ಬೇರ್ಪಟ್ಟು ನೀರಿನಲ್ಲಿ ತೇಲುತ್ತಾ ಸಮುದ್ರದಲ್ಲಿ ಚಲಿಸುತ್ತಾ ಇರುತ್ತದೆ. ಇಂತಹ ಒಂದು ಮಂಜುಗಡ್ಡೆ ಟೈಟಾನಿಕ್‌ಗೆ ಬಡಿದು ಅಪಘಾತ ಸಂಭವಿಸಿತ್ತು. ಸಾಮಾನ್ಯವಾಗಿ ಈ ಹಿಮಗಡ್ಡೆಗಳು ಪರಿಪೂರ್ಣವಾಗಿ ಬೆಳ್ಳಗಿರುತ್ತವೆ. ಆದರೆ ಅಪರೂಪದಲ್ಲಿ ಅಪರೂಪಕ್ಕೆ ಕಂಡುಬರುವ ಈ ಹಿಮಗಡ್ಡೆ ಪಟ್ಟೆಪಟ್ಟೆಯಾಗಿದ್ದು ಅತಿ ಸುಂದರ ಮತ್ತು ವರ್ಣಮಯವಾಗಿರುತ್ತವೆ. ದೂರದಿಂದ ನೋಡಿದಾಗ ಐಸ್ ಕ್ರೀಂ ಮೇಲೆ ಚಾಕಲೇಟು ಸಾಸ್ ಹಾಕಿದರೆ ಪಕ್ಕಕ್ಕೆ ಸುರಿದ ಬಳಿಕ ಕಾಣುವಂತೆ ಈ ಪಟ್ಟೆಗಳು ಕಾಣುತ್ತವೆ. ಇದು ಹೇಗೆ ಮೂಡಿತು ಎಂದರೆ ಈ ಗಡ್ಡೆ ಮುಖ್ಯಗುಡ್ಡಕ್ಕೆ ಅಂಟಿಕೊಂಡಿದ್ದಾಗ ವರ್ಷಗಳ ಹಿಂದೆ ಒಂದು ಕಾಲದಲ್ಲಿ ದಟ್ಟನೆ ಪಾಚಿ ಬೆಳೆದು ಮರುವರ್ಷ ಅದರ ಮೇಲೆ ಹೊಸ ಮಂಜುಗಡ್ಡೆ ಸುರಿದು ಕೆಳಗಿನ ಪಾಚಿ ಬಂದಿಯಾಗಿತ್ತು. ಹೀಗೇ ವರ್ಷಗಳ ಕಾಲ ಹೊಸ ಪಾಚಿ ಬೆಳೆಯುತ್ತಾ ಪಟ್ಟೆಪಟ್ಟೆಯ ರೂಪ ತಳೆಯಿತು. ಮುಖ್ಯಗುಡ್ಡದಂದ ಬೇರ್ಪಟ್ಟ ಬಳಿಕ ನೀರಿನಲ್ಲಿ ಅಡ್ಡಲಾಗುವ ಕಾರಣ ಇದು ನಮಗೆ ಈಗ ಭಿನ್ನವಾದ ಕೋನದ ಪಟ್ಟೆಗಳು ಕಾಣುತ್ತವೆ. Image courtesy-

ಹಿಮದ ದಿಮ್ಮಿಗಳು
ಯಾರೋ ಹಿಮದ ಚಾದರವೊಂದನ್ನು ಉರುಟಾಗಿ ಮಡಚಿಟ್ಟಂತೆ ತೋರುವ ಈ ಹಿಮದ ದಿಮ್ಮಿ ಅಥವಾ ಸ್ನೋ ರೋಲರ್ ಗಳು ಸಾಮಾನ್ಯವಾಗಿ ಬೆಟ್ಟಗಳ ಇಳಿಜಾರಿನ ಕೆಳತಪ್ಪಲಲ್ಲಿ ಕಂಡುಬರುತ್ತವೆ. ಇಲ್ಲೇ ಏಕೆ ಕಂಡುಬರುತ್ತವೆ ಎಂದರೆ ಗಾಳಿಗೆ ಅದುರಿದ ಒಂದು ಹಿಮದ ಕಣ ನಿಧಾನವಾಗಿ ತನ್ನೊಂದಿಗೆ ಅಕ್ಕಪಕ್ಕದ ಕಣಗಳನ್ನು ಅಂಟಿಸಿಕೊಳ್ಳುತ್ತಾ ಮುಂದೆ ಸಾಗುತ್ತಾ ಹೆಚ್ಚು ಹೆಚ್ಚು ಕಣಗಳನ್ನು ಅಂಟಿಸಿಕೊಳ್ಳುತ್ತಾ ಕ್ರಮೇಣ ಈ ರೂಪ ಪಡೆಯುತ್ತದೆ. Image courtesy

ಹಿಮಗುಹೆ
ಇದೊಂದು ನೈಸರ್ಗಿಕ ಗುಹೆಯಾಗಿದ್ದು ಇದರೊಳಗೆ ಮಿಲಿಯಾಂತರ ವರ್ಷಗಳಿಂದ ಹೊಸ ಹಿಮ ಸುರಿಯದೇ ಹಾಗೇ ಉಳಿದು ಬಂದಿದೆ. ದಿನದ ಹೊತ್ತಿನಲ್ಲಿ ಈ ಗುಹೆಯ ಒಳಭಾಗವನ್ನು ನೋಡುವುದೇ ಒಂದು ಅಸಾಮಾನ್ಯ ಅನುಭವವಾಗಿದೆ. ಈ ಸುಂದರ ಗುಹೆ ಅಲಾಸ್ಕಾ ದೇಶದಲ್ಲಿದೆ. Image courtesy

ನಿಸರ್ಗ ಕಡೆದ ಹಿಮಗಡ್ಡೆ
ಧೃವಪ್ರದೇಶಗಳಲ್ಲಿ ಹಿಮಮಾರುತಗಳ ಪ್ರಭಾವ ಹೆಚ್ಚು. ಈ ಮಾರುತಗಳು ಅತಿ ಶೀತಲವೂ ಅತಿ ಬಿರುಸಾಗಿಯೂ ಬೀಸುತ್ತವೆ. ಇವುಗಳ ತಾಪಮಾನ ಶೂನ್ಯಕ್ಕಿಂತಲೂ ಕಡಿಮೆ ಇರುತ್ತದೆ. ಈ ಗಾಳಿಯ ವೇಗ ಅಡ್ಡಬಂದ ಪರ್ವತ ಮತ್ತು ಹಿಮಗಡ್ಡೆಗಳನ್ನು ವಿಚಿತ್ರ ವಿನ್ಯಾಸದಲ್ಲಿ ಕತ್ತರಿಸಿ ವಿಭಿನ್ನ ಕಲಾಕೃತಿಗಳನ್ನಾಗಿಸುತ್ತದೆ. ಈ ವಿದ್ಯಮಾನವನ್ನು ಸಾಮಾನ್ಯವಾಗಿ ದಕ್ಷಿಣ ದೃವದ ಅಂಟಾರ್ಟ್ಕಿಕಾದಲ್ಲಿ ಮಾತ್ರ ನೋಡಬಹುದು.

ಮಂಜಿನ ವೃತ್ತ
ಐಸ್ ಸರ್ಕಲ್ ಎಂದೇ ಹೆಚ್ಚು ಜನಪ್ರಿಯವಾಗಿರುವ ಈ ವೃತ್ತಾಕಾರದ ಮಂಜಿನ ತಟ್ಟೆ ಅಥವಾ ಮಂಜಿನ ಡಿಸ್ಕ್ ನಿಧಾನವಾಗಿ ಚಲಿಸುವ ನೀರಿನ ಮೇಲೆ ತೇಲುವ ಮಂಜುಗಡ್ಡೆಯಿಂದಾಗಿ ಆಗಿದೆ. Image courtesy

ಮಂಜಿನ ಕಣಿವೆ
ಗ್ರೀನ್ ಲ್ಯಾಂಡ್ ವಿಶ್ವದ ಅತಿ ದೊಡ್ಡ ದ್ವೀಪವಾಗಿದ್ದು ಇದರ ಶೇ 80ಕ್ಕೂ ಹೆಚ್ಚು ಭಾಗ ಶಾಶ್ವತ ಮಂಜಿನ ಕಣಿವೆಗಳಿಂದ ಕೂಡಿದೆ. ಮಂಜಿನ ಪರ್ವತದ ಮೇಲೆ ಹರಿಯುವ ನೀರು ನಿಧಾನವಾಗಿ ಕೊರೆಯುತ್ತಾ ತಳದವರೆಗೆ ತಲುಪುವ ಮೂಲಕ ಈ ಕಣಿವೆ ಮೂಡುತ್ತದೆ. ಪ್ರತಿ ವರ್ಷದ ನೀರಿನ ಹರಿವು, ತಾಪಮಾನದ ಬದಲಾವಣೆಗಳ ಮೂಲಕ ಈ ಕರಗುವಿಕೆಯಲ್ಲಿಯೂ ಹೆಚ್ಚು ಕಡಿಮೆಯಾಗಿ ಎಲ್ಲ ಕಣಿವೆಗಳ ಗೋಡೆಗಳಲ್ಲಿ ನೂರಾರು ಸಾವಿರಾರು ಪದರಗಳಿದ್ದು ಅಧ್ಬುತ ನೋಟ ನೀಡುತ್ತವೆ. Image courtesy

ಮಂಜಿನ ಕಲಾಕೃತಿ
ಮಳೆಯ ಹನಿಯೊಂದು ಕೆಳಕ್ಕೆ ಬೀಳುತ್ತಿದ್ದಂತೆಯೇ ಮಂಜುಗಡ್ಡೆಯಾದಾಗ, ಮಂಜಿನ ಬಿರುಗಾಳಿ ಮತ್ತು ಇತರ ಕಾರಣಗಳಿಂದ ಮಂಜುಗಡ್ಡೆ ಭಿನ್ನಭಿನ್ನವಾದ ರೂಪ ಪಡೆಯುತ್ತದೆ. ಒಂದು ವೇಳೆ ಬಿರುಗಾಳಿ ಸಮುದ್ರ ತೀರದಲ್ಲಿ ಹಾಯುತ್ತಿದ್ದರೆ ಅಡ್ಡಬಂದ ಯಾವುದೇ ವಸ್ತುವಿಗೆ ಮಂಜಿನ ಕಣವೊಂದು ಅಂಟಿಕೊಂಡು ಅದಕ್ಕೆ ಇನ್ನೂ ಲಕ್ಷಾಂತರ ಕಣಗಳು ಅಂಟಿಕೊಳ್ಳುತ್ತವೆ. ಗಾಳಿಯ ಬಿರುಸಿಗೆ ಪ್ರತಿ ಕಣವೂ ಅತ್ತ ವಾಲಿ ಗಟ್ಟಿಯಾಗಿಬಿಡುತ್ತದೆ. ನೋಡುನೋಡುತ್ತಿದ್ದಂತೆಯೇ ಈ ಪ್ರಮಾಣ ಹೆಚ್ಚಾಗುತ್ತಾ ಮೂಲ ವಸ್ತುವನ್ನೇ ಆವರಿಸಿಕೊಂಡು ಬಿಡುತ್ತದೆ. ಈ ಚಿತ್ರದಲ್ಲಿರುವುದು ಐಸ್ ನ ಕಂಭವಲ್ಲ, ದ್ವೀಪದಲ್ಲಿರುವ ದೀಪಸ್ಥಂಭವೊಂದು ನಿಸರ್ಗದ ಈ ಪರಿಯನ್ನು ಎದುರಿಸಲಾಗದೇ ಹಿಮದ ಹೊದಿಕೆ ಹೊದ್ದು ನಿಂತಿದೆ. Image courtesy

ಹಿಮನದಿಯ ಕೆಳಗಿರುವ ಗುಹೆ
ಒಂದು ವೇಳೆ ಹರಿದು ಬರುತ್ತಿರುವ ನೀರು ಮಂಜುಗಡ್ಡೆಯಾದರೆ? ಇದೇ ಗ್ಲೇಸಿಯರ್ ಅಥವಾ ಹಿಮನದಿ. ಈ ನದಿ ಸಮುದ್ರ ಸೇರುವಲ್ಲಿ ನೀರಿನ ತಾಪಮಾನ ಹಿಮಕ್ಕಿಂತ ಕೊಂಚವೇ ಹೆಚ್ಚಿರುವ ಕಾರಣ ನೀರಿಗೆ ತಾಕಿದ ಮಂಜಿನ ಭಾಗ ಕರಗಿ ಒಂದು ಗುಹೆ ನಿರ್ಮಾಣವಾಗಿರುತ್ತದೆ. ಇದನ್ನೇ ಗ್ಲೇಸಿಯರ್ ಕೇವ್ ಎಂದು ಕರೆಯುತ್ತಾರೆ. ಈ ಗುಹೆ ಎಷ್ಟು ಆಕರ್ಷಕ ಎಂದರೆ ಈಗಲೇ ಇದರೊಳಗೆ ಹೋಗಿ ನೋಡೋಣ ಎಂದು ಮನಸ್ಸಾಗುತ್ತದೆ. ಆದರೆ ಈ ಗುಹೆಯೊಳಗೆ ಹಿಮನದಿಯ ನೀರು ಕರಗಿ ಹರಿಯುತ್ತಾ ಸಮುದ್ರದಲ್ಲಿ ಇಳಿಯುವ ಮೂಲಕ ಕೆಲವು ಸುಳಿಗಳು ಉಂಟಾಗಬಹುದಾಗಿದ್ದು ಅಪಾಯಕಾರಿಯಾಗಿವೆ. image courtesy

ನೀಲಿ ಮಂಜುಗಡ್ಡೆ
ಸಾಮಾನ್ಯವಾಗಿ ಮಂಜಿನ ಬಣ್ಣ ಬಿಳಿ. ಬೆಳಕಿನ ವಕ್ರೀಭವನದ ಕಾರಣ ಇದು ಕೊಂಚವೇ ನೀಲಿಬಣ್ಣಕ್ಕೆ ತಿರುಗಿದಂತೆ ಕಾಣುತ್ತದೆ. ಆದರೆ ಈ ಭಾರೀ ಮಂಜುಗಡ್ಡೆ ಅಪ್ಪಟ ನೀಲಿ ಬಣ್ಣ ಹೊಂದಿದ್ದು ಇದಕ್ಕೆ ಮಂಜುಗಡ್ಡೆಯ ಭಾರವೇ ಕಾರಣವಾಗಿದೆ. ಇದು ಹೇಗೆಂದರೆ ಈ ಮಂಜುಗಡ್ಡೆಯಲ್ಲಿ ಮಂಜಿನ ಗುಳ್ಳೆಗಳು ಸಿಲುಕಿಕೊಂಡು ಭಾರೀಗಾತ್ರದ ಕಾರಣ ಸಂಕುಚಿತಗೊಂಡಿರುತ್ತವೆ. ಈ ಸಂಕುಚಿತ ಕಣದ ಮೂಲಕ ಬೆಳಕು ಹಾದು ಹೋದಾಗ ಗರಿಷ್ಟ ವಕ್ರೀಭವನಗೊಳ್ಳುತ್ತದೆ. ಪರಿಣಾಮವಾಗಿ ಗಾಢನೀಲಿ ಬಣ್ಣ ಹೆಚ್ಚು ಪ್ರತಿಫಲಿಸಿ ಇಡಿಯ ಮಂಜುಗಡ್ಡೆ ನೀಲಿಬಣ್ಣದಂತೆ ಕಾಣುತ್ತದೆ. Image courtesy

ಮಂಜಿನ ಜ್ವಾಲಾಮುಖಿ
ಜ್ವಾಲಾಮುಖಿ ಎಂದರೆ ಬಿಸಿಯ ಜ್ವಾಲೆಗಳನ್ನು ಉಕ್ಕಿಸುವ ಪರ್ವತ. ಇಲ್ಲಿ ಮಂಜು ಎಲ್ಲಿಂದ ಬರಬೇಕು? ಆದರೆ ನಿಸರ್ಗದಲ್ಲಿ ಇಂತಹ ಒಂದು ಜ್ವಾಲಾಮುಖಿ ಇದೆ. ಇದಕ್ಕೆ ice fumaroles ಎಂದು ಕರೆಯುತ್ತಾರೆ. ನೆಲದ ಮೇಲೆ ಎಷ್ಟು ತಂಪಾಗಿದ್ದರೂ ನೆಲದಾಳದಲ್ಲಿರುವ ಬಿಸಿಯಾದ ಲಾವಾ ಯಾವುದೋ ಬಿರುಕಿನ ದಾರಿ ಹಿಡಿದು ಒಂದು ಸ್ಥಳದಲ್ಲಿ ಹೊರಹೋಗುತ್ತದೆ. ಆದರೆ ಈ ಕ್ಷಣದಲ್ಲಿ ಇದರ ಸಂಪರ್ಕಕ್ಕೆ ಬಂದ ಮಂಜಿನ ಕಣಗಳು ಕೊಂಚ ಕರಗಿ ಹೊಗೆಯಂತೆ ಗಾಳಿಯಲ್ಲಿ ಕೊಂಚ ದೂರ ಸಾಗುತ್ತದೆ. ಇದೇ ಮಂಜಿನ ಜ್ವಾಲಾಮುಖಿ. ವರ್ಷಗಟ್ಟಲೇ ಹೀಗೆ ಹೊರಹೊಮ್ಮುತ್ತಿರುವ ಕಾರಣ ಒಂದು ಹೊಗೆಕೊಳವೆಯಂತೆ ರೂಪುಗೊಂಡು ತುದಿಯಿಂದ ಮಂಜಿನ ಹೊಗೆ ಹೊಮ್ಮುತ್ತಾ ಇರುತ್ತದೆ. Image courtesy



Click it and Unblock the Notifications









